pratilipi-logo ಪ್ರತಿಲಿಪಿ
ಕನ್ನಡ

ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ ಸ್ಪರ್ಧೆಯ ಫಲಿತಾಂಶ

12 ಜನವರಿ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಿರು ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು.

 

ಪ್ರತಿಲಿಪಿಯ ಹೊಸ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಕಿರು ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕೆ ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. 

 

‘ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ’ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವ ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. 

 

ವಿಜೇತ ಕೃತಿಗಳ ವಿವರ:

 

ಪ್ರಥಮ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಅಚಲ ಬಿ. ಹೆನ್ಲಿ ಅವರ ವಂಶಿ

 

ಕತೆಯ ಕುರಿತು: ಒಂದು ಶಿಕ್ಷಕಿಯ ಜೀವನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಮತ್ತು ಭಾವಪೂರ್ವಕವಾಗಿ ಈ ಕತೆಯಲ್ಲಿ ಬಿಂಬಿಸಲಾಗಿದೆ. ಒಬ್ಬ ಗುರುವಿನ ಒಂದು ಸಣ್ಣ ಕಾಳಜಿ, ಮಾರ್ಗದರ್ಶನ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಬಹುದು ಎನ್ನುವುದನ್ನು ಉತ್ತಮವಾಗಿ ಹೇಳಲಾಗಿದೆ.

 

ದ್ವಿತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಚೈತನ್ಯ ಬಿ ಅವರ ಹೊಸ ಬೆಳಕು...

 

ಕತೆಯ ಕುರಿತು: ಒಂದೊಳ್ಳೆಯ ಕೌಟುಂಬಿಕ ಪ್ರೇಮಕತೆ. ಸಾಮಾನ್ಯ ಕಥಾಹಂದರವೆನಿಸಿದರೂ ನಿರೂಪಣಾ ಶೈಲಿಯ ಮೂಲಕ ಕತೆ ಓದುಗರನ್ನು ಆಕರ್ಷಿಸುತ್ತದೆ. 

 

ತೃತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಮಾಯಾ ಕವನ ಅವರ ದೇವರ ಕೆರೆ

 

ಕತೆಯ ಕುರಿತು: ಒಂದು ಊರಿನ ಕೆರೆ ಮತ್ತು ಆ ಊರಿನವರ ಸುತ್ತ ಸುತ್ತುವ ಕತೆ ಸಾಮಾಜಿಕ, ಕೌಟುಂಬಿಕ, ರಾಜಕೀಯ ವಿಚಾರಗಳನ್ನು ಒಳಗೊಂಡು ಉತ್ತಮವಾಗಿ ಮೂಡಿಬಂದಿದೆ. ಒಂದು ಘಟನೆಯನ್ನು ಪ್ರಮುಖವಾಗಿ ತೆಗೆದುಕೊಂಡು ಅದರ ಸುತ್ತ ಕತೆಯ ಎಳೆಯನ್ನು ಹೆಣೆದ ರೀತಿ ಚೆನ್ನಾಗಿದೆ.

 

ನಾಲ್ಕನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಸುಮಾ ಬೆಳಗೆರೆ ಅವರ ಆಶ್ಲೇಷ

 

ಐದನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಅಶೋಕ್ ಕುಮಾರ್ ಜಿ. ಎಸ್ ಅವರ ದಿಗಂತದಲ್ಲಿ ಗೋಚರಿಸಿದ ಸೂರ್ಯ

 

ಆರನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಪ್ರಶ್ನಾ ನಾರಾಯಣ ರೈ ಅವರ ಅಪರಾಧಿ ನಾನಲ್ಲವಾದರೂ .....ಅಪವಾದವೇಕೆ?

 

 

ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು

 

ಕ್ರ. ಸಂ

ಕರ್ತೃ

ಕೃತಿ

1

ಆಶ್ರಿತಾ ಕಿರಣ್

ಮೌನವೇ ಪ್ರೀತಿಯೋ ಪ್ರೀತಿಯೇ ಮೌನವೋ

2

ಸುನೀತಾ ಶೆಟ್ಟಿ

ಕಣ್ಣಲ್ಲಿ ಮೂಡಿದ ಕಾಮನಬಿಲ್ಲು

3

ಕವಿತಾ ಟಿ. ಎಸ್

ಅಭೀಜ್ಞಾ

4

ಕೀರ್ತಿರಾ

ಭಾರವಿ

5

ಪ್ರಪಂಚ

ಸಮಾನಾಂತರ ಹಾದಿಯಲ್ಲಿ ಪ್ರೀತಿಯ ಪಯಣ

6

ಅಕ್ಷಿತಾ ಶೆಟ್ಟಿ

ನೀನಾದೆ ನನ್ನ ಬದುಕಿನ ದೀಪ

7

ಭಾನು ಶ್ರೀಪಾದ್

ಅಗಣಿತ ತಾರಾ ಗಣಗಳ ನಡುವೆ

8

ಶಿವಾನಿ

ಶ್ರೀ ನಿವಾಸ ಕಲ್ಯಾಣ

9

ಚೈತ್ರಾ

ಪ್ರೀತಿಯ ಹೆಸರೇ ನೀನು

10

ಸುಹಾನಿ ನಾಯ್ಕ್

ನಾನೆಂದಿಗೂ ನಿನ್ನವನಾಗಿರುವೆ

11

ನವ್ಯ

ಪ್ರೀತಿಯೇ ನನ್ನುಸಿರು

12

ಧರಣಿ

ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ!!

 

ಸ್ಪರ್ಧೆಯಲ್ಲಿ ಭಾಗವಹಿಸುವುದರ ಗೋಲ್ಡನ್ ಬ್ಯಾಡ್ಜ್ ಪಡೆದುಕೊಂಡಿರುವ ಲೇಖಕರು:

 

 

ಗೋಲ್ಡನ್ ಬ್ಯಾಡ್ಜ್ ಹೊಂದಿರದ ಹಲವಾರು ಲೇಖಕ/ಲೇಖಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬ್ಯಾಡ್ಜ್ ಹೊಂದುವಂತಾಗಿ, ತಮ್ಮ ಮುಂಬರುವ ಧಾರಾವಾಹಿಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಗೋಲ್ಡನ್ ಬ್ಯಾಡ್ಜ್ ಪಡೆದುಕೊಂಡಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು.

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಧಾರಾವಾಹಿಗಳ ರಚನೆ ಸೂಕ್ಷ್ಮವಾದ, ಸರಳವೆನಿಸಿದರೂ ಬಹಳ ಶ್ರಮ ಬೇಡುವ ಕಾಯಕ. ಕಥಾಹಂದರ ಆಯ್ಕೆ, ಅಚ್ಚುಕಟ್ಟು ನಿರೂಪಣೆ ಮತ್ತು ಅಧ್ಯಯನ ಬೇಡುವ ಈ ಕೌಶಲ್ಯ; ಮೌಲ್ಯಯುತ ಸಂದೇಶಗಳನ್ನು ನೀಡುತ್ತ, ಸಮಾಜದ ವಸ್ತುಸ್ಥಿತಿಯನ್ನು ತೆರೆದಿಡುತ್ತ ಓದುಗರಿಗೆ ಮನೋರಂಜನೆಯ ರಸದೌತಣ ನೀಡಬೇಕು. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಬಲ್ಲದು.

 

'ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ' ಸ್ಪರ್ಧೆಯಲ್ಲಿ ವಿವಿಧ ಕಥಾವಸ್ತು, ಕಥಾಹಂದರಗಳುಳ್ಳ ಧಾರಾವಾಹಿಗಳು ಸಲ್ಲಿಸಲ್ಪಟ್ಟಿದ್ದವು. ಭಾಗವಹಿಸಿದ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು. 

ಕಥಾವಸ್ತು ವಿಭಿನ್ನವಾಗಿದ್ದರೂ ನಿರೂಪಣೆ ಹಾಗೂ ವ್ಯಾಕರಣ ಬಳಕೆಯತ್ತ ಗಮನ ಹರಿಸುವುದು ಮುಖ್ಯ ಎಂದೆನಿಸಿತು. ಕೆಲವೊಮ್ಮೆ ಕಣ್ತಪ್ಪಿನಿಂದ ದೋಷಗಳಾಗುವುದುಂಟು, ಆದರೆ ಚಿಹ್ನೆಗಳ ಬಳಕೆಗಳಲ್ಲಿ ಸಾಕಷ್ಟು ಜಾಗೃತೆ ವಹಿಸುವುದು ಅಗತ್ಯ. ಜೊತೆಗೆ ಕೆಲವು ಕತೆಗಳು ಸ್ಪರ್ಧೆಯ ನಿಯಮಗಳನ್ನು ಪಾಲಿಸಿರಲಿಲ್ಲ; ಹಲವು ಕತೆಗಳು ಪೂರ್ಣಗೊಂಡಿರಲಿಲ್ಲ. ನಿಯಮಗಳನ್ನು ಪಾಲಿಸದ ಕೃತಿಗಳನ್ನು ಸ್ಪರ್ಧೆಯಿಂದ ಹೊರಗುಳಿಸಲಾಗಿದೆ.

 

ಸಾಹಿತ್ಯ ಕ್ಷೇತ್ರದಲ್ಲಿ ಸ್ಪರ್ಧೆಗಳ ತೀರ್ಪುಗಳನ್ನು ನೀಡುವುದು ಸವಾಲಿನ ಸಂಗತಿಯೇ ಸರಿ. ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ, ಸೃಜನಶೀಲತೆ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈಗ ವಿಜೇತ ಕೃತಿಗಳ ಪಟ್ಟಿಯಲ್ಲಿ ಆಯ್ಕೆಯಾಗಿರುವ ಕೃತಿಗಳು ಮಾತ್ರ ಶ್ರೇಷ್ಠ ಕೃತಿಗಳು ಎಂದು ಅರ್ಥವಲ್ಲ! ಸ್ಪರ್ಧೆಯ ಮಾನದಂಡಗಳ ಅನುಸಾರ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಹಲವು ಕಥಾಹಂದರಗಳು ಇನ್ನಷ್ಟು ಅಧ್ಯಯನದ ಮೂಲಕ ಉತ್ತಮವಾದ ನಿರೂಪಣೆಯಲ್ಲಿ ಮೂಡಿಬಂದರೆ ಅತ್ಯುತ್ತಮ ಕೃತಿಗಳಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. 

 

ಬರವಣಿಗೆಯ ಕುರಿತು ಆಸಕ್ತಿ, ಬದ್ಧತೆ ಮತ್ತು ಉತ್ಸಾಹ; ಜೊತೆಗೊಂದಷ್ಟು ಅಧ್ಯಯನ ಉತ್ತಮ ಕೃತಿಗಳನ್ನು ರಚಿಸುವುದಕ್ಕೆ ಸಹಕಾರಿ. ಗೆಲ್ಲುವುದಕ್ಕೆ ಸ್ಪರ್ಧಿಸುವುದು ಅಥವಾ ಪ್ರಯತ್ನಿಸುವುದೇ ಮೊದಲ ಮೆಟ್ಟಿಲು. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ.

 

- ಪ್ರತಿಲಿಪಿ ಕನ್ನಡ