pratilipi-logo ಪ್ರತಿಲಿಪಿ
ಕನ್ನಡ

ಪ್ರತಿಲಿಪಿಯು ಕೃತಿಗಳ ಹಕ್ಕುಸ್ವಾಮ್ಯವನ್ನು ಹೇಗೆ ರಕ್ಷಿಸುತ್ತದೆ

09 ಜನವರಿ 2024

ಆತ್ಮೀಯ ಸಾಹಿತಿಗಳೇ,

ವೈಯಕ್ತಿಕವಾಗಿ ಸಂದೇಶ ಕಳುಹಿಸುವ ಮೂಲಕ ಕೆಲವು ವೇದಿಕೆಗಳು, ಆ್ಯಪ್ ಗಳು ಮತ್ತು ವ್ಯಕ್ತಿಗಳು ನಮ್ಮ ಅನೇಕ ಲೇಖಕ ಲೇಖಕಿಯರನ್ನುಸಂಪರ್ಕಿಸಿದ ಕುರಿತು ದೂರುಗಳು ಬಂದಿರುತ್ತವೆ. ಈ ಕುರಿತಂತೆ ಪ್ರತಿಲಿಪಿಕನ್ನಡದ ಸಾಹಿತಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಅಂಶಗಳನ್ನು ನಿಮಗೆ ಈ ಮೂಲಕ ತಿಳಿಸಲು ಬಯಸುತ್ತೇವೆ : 

  1. ನಿಮ್ಮ ಬರಹಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸಿ ಬರೆಯಲು ವಿನಂತಿಸುವ ಯಾವುದೇ ಪ್ಲಾಟ್‌ಫಾರ್ಮ್ ಅಥವಾ ವ್ಯಕ್ತಿಗಳಿಂದ ಸದಾಕಾಲ ದೂರವಿರಿ. ಈ ರೀತಿಯ ಒಪ್ಪಂದಗಳು ನಿಮ್ಮ ಕೃತಿಗಳ ಹಕ್ಕುಸ್ವಾಮ್ಯವನ್ನು ಆಜೀವಪರ್ಯಂತ ಕಳೆದುಕೊಳ್ಳಲು ಕಾರಣವಾಗುತ್ತವೆ. ಸಂದೇಶ ವಿಭಾಗದಲ್ಲಿ ಈ ರೀತಿಯ ವ್ಯಕ್ತಿ ಅಥವಾ ಸಂಸ್ಥೆಗಳ ತಾತ್ಕಾಲಿಕ ಆಕರ್ಷಕ ಕೊಡುಗೆಗಳ ವಂಚನೆಗೆ ದಯವಿಟ್ಟು ಬಲಿಯಾಗಬೇಡಿ. ಅವರ ಮಾಹಿತಿ ನಮಗೆ ನೀಡಿ ಅಥವಾ ಅವರನ್ನು ಬ್ಲಾಕ್ ಮಾಡಿ. 

  2. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪ್ರತಿಲಿಪಿಯಲ್ಲಿ ಅಥವಾ ಇತರೆ ಯಾವುದೇ ವೇದಿಕೆಯಲ್ಲಿ ಪ್ರಕಟಿಸಿದ ನಿಮ್ಮ ಬರಹವನ್ನು ಅಪ್ರಕಟಿತಗೊಳಿಸಲು ಸೂಚಿಸಿದಲ್ಲಿ, ನೀವು ನಿಮ್ಮ ಕೃತಿಗಳ ಹಕ್ಕು ಸ್ವಾಮ್ಯವನ್ನು ಕಳೆದುಕೊಳ್ಳುತ್ತಿರುವುದರ ಲಕ್ಷಣ ಎಂದು ಭಾವಿಸಬಹುದು.

  3. ಪ್ರತಿಲಿಪಿಯಲ್ಲಿ, ನಾವು ಯಾವುದೇ ಗುಪ್ತ/ರಹಸ್ಯ ಒಪ್ಪಂದಗಳ ಮೂಲಕ ಲೇಖಕ/ಲೇಖಕಿಯಿಂದ ಸಂಪೂರ್ಣ ಬರಹಗಳ ಹಕ್ಕನ್ನು ಪಡೆದಿರುವುದಿಲ್ಲ. ನಮ್ಮ ತಂಡವು ವಿವಿಧ ಮಾನದಂಡಗಳಿಗನುಗುಣವಾಗಿ ಯಾವುದೇ ಕೃತಿಯ ಹಕ್ಕನ್ನು ಪಡೆಯಲು ಇಚ್ಛಿಸಿದಲ್ಲಿ ನಮ್ಮ ನೀತಿ ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ವಿವರಿಸಿ, ಅವು ಆಯಾ ಕೃತಿಗಳ ಕರ್ತೃಗಳಿಗೆ ಒಪ್ಪಿತವಾದಲ್ಲಿ ಮಾತ್ರ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಹಕ್ಕುಗಳನ್ನು ಪಡೆದುಕೊಳ್ಳುತ್ತೇವೆ. ನಮ್ಮ ಎಲ್ಲ ಸಂವಹನಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರುವಂತೆ ಮತ್ತು ಲೇಖಕ/ಲೇಖಕಿಯರಿಗೆ ಯಾವುದೇ ಗೊಂದಲವಾಗದಂತೆ ನಾವು ಸದಾ ಎಚ್ಚರಿಕೆ ವಹಿಸುತ್ತೇವೆ. 

  4. ಪ್ರತಿಲಿಪಿಯ ಲೇಖಕ/ಲೇಖಕಿಯರು ಇತರರಿಗೆ ಕಾನೂನಾತ್ಮಕವಾಗಿ ನೀಡಬಹುದಾದ ತಮ್ಮ ಬರಹಗಳ ವಿವಿಧ ಹಕ್ಕು ಮತ್ತು ಅಧಿಕಾರಗಳ ಕುರಿತು ಮಾಹಿತಿ ನೀಡುತ್ತೇವೆ. ಉದಾಹರಣೆಗೆ : ಪ್ರತಿಲಿಪಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು  ನಾವು ನಿರ್ದಿಷ್ಟ ಅವಧಿಗೆ ಇತರೆ  (ಕಾಮಿಕ್ಸ್, ವೆಬ್ ಸೀರೀಸ್, ಮುದ್ರಿತ ಪುಸ್ತಕಗಳು, ಧ್ವನಿಮುದ್ರಿತ ರೂಪ ಇತ್ಯಾದಿ) ರೂಪದಲ್ಲಿ ಮಾರ್ಪಡಿಸುವ ಹಕ್ಕುಗಳನ್ನು ಆಯಾ ಸಾಹಿತಿಗಳಿಗೆ ಸಂಪೂರ್ಣವಾಗಿ ವಿವರಿಸಿಯೇ ಪಡೆಯುತ್ತೇವೆ. ಸಂಪೂರ್ಣ ಹಕ್ಕು ಪಡೆಯಲು ನಾವು ಇಚ್ಛಿಸಿದಲ್ಲಿ ಆ ಕುರಿತೂ ಸಹ ಮಾಹಿತಿ ನೀಡಿಯೇ ಮುಂದುವರೆಯುತ್ತೇವೆ.  

  5. ಯಾವುದೇ ಸಾಹಿತಿ ತಮ್ಮ ಕೃತಿಗಳ ಸಂಪೂರ್ಣ ಹಕ್ಕುಸ್ವಾಮ್ಯವನ್ನು ಬಿಟ್ಟುಕೊಡಬಾರದು. ಅದು ಪ್ರತಿಲಿಪಿಯ ಲೇಖಕರ ಮೂಲಭೂತ ಹಕ್ಕು ಎಂದು ನಂಬುತ್ತೇವೆ. ಹೆಚ್ಚುವರಿಯಾಗಿ, ಅನೇಕ ಬರಹಗಾರರು ಭವಿಷ್ಯದ ಅಚ್ಚರಿದಾಯಕ ಬದಲಾವಣೆಗಳನ್ನು ನಮ್ಮಲ್ಲಿ ನಿರೀಕ್ಷಿಸದಿರಬಹುದು. ಕೃತಕ ಬುದ್ಧಿಮತ್ತೆಯ ವಿಕಸನದೊಂದಿಗೆ, ಪ್ರತಿಲಿಪಿಯಂತಹ ವೇದಿಕೆಗಳಲ್ಲಿ ಕಥೆಗಳನ್ನು ಶೀಘ್ರದಲ್ಲೇ 20 ಭಾಷೆಗಳಿಗೆ ಅನುವಾದಿಸಬಹುದು, ಪ್ರತಿ ಭಾಷೆಯಿಂದ ಲೇಖಕರು ಗಳಿಸಲು ಸಾಧ್ಯವಾಗಬಹುದು. ಆಡಿಯೋ, ಫಿಲ್ಮ್ ಮತ್ತು ಕಾಮಿಕ್ಸ್‌ನಂತಹ ಹಕ್ಕುಗಳನ್ನು ಪ್ರತ್ಯೇಕವಾಗಿ ನೀಡಬಹುದು, ಇದು ಲೇಖಕರು ವೈವಿಧ್ಯಮಯ ಸ್ಟ್ರೀಮ್‌ಗಳಿಂದ ಗಳಿಸಲು ಅನುವು ಮಾಡಿಕೊಡುತ್ತದೆ.

  6. ಯಾವುದೇ ಕೃತಿಯ ಹಕ್ಕುಸ್ವಾಮ್ಯದ ಕುರಿತು ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಮುಂದುವರೆಯಲು ಆಯಾ ಒಪ್ಪಂದಗಳ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯಬಹುದು. ಅಥವಾ [email protected] ಗೆ ಇಮೇಲ್ ಕಳುಹಿಸುವ ಮೂಲಕ ನಮ್ಮ ಕಾನೂನು ತಜ್ಞರ ಸಲಹೆ ಪಡೆಯಬಹುದು.