pratilipi-logo ಪ್ರತಿಲಿಪಿ
ಕನ್ನಡ

'ಗೋಲ್ಡನ್ ಪೆನ್ ಅವಾರ್ಡ್' ಸ್ಪರ್ಧೆಯ ಫಲಿತಾಂಶ

16 ಆಗಸ್ಟ್ 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಬಹು ನಿರೀಕ್ಷಿತ ‘ಗೋಲ್ಡನ್ ಪೆನ್ ಅವಾರ್ಡ್’ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! 

 

ಪ್ರತಿಲಿಪಿಯ ನವ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕಷ್ಟು ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಈ ಸ್ಪರ್ಧೆಗೆ ಎಲ್ಲಾ ಭಾಷೆಗಳಲ್ಲಿ ಭಾಗವಹಿಸುತ್ತಿದ್ದ ಬರಹಗಾರರಲ್ಲಿ ಒಟ್ಟಾರೆ 176 ಬರಹಗಾರರು ಪ್ರತಿಲಿಪಿಯಲ್ಲಿ ತಮ್ಮ ಪ್ರೊಫೈಲ್ನಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆದಿದ್ದಾರೆ, ಆ ಎಲ್ಲಾ ಬರಹಗಾರರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. 

 

ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ತಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಅವರು ಹೊಸ ಧಾರಾವಾಹಿಯನ್ನು ಪ್ರಕಟಿಸುವಾಗ 16ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗುತ್ತವೆ ಮತ್ತು ಆ ಧಾರಾವಾಹಿ ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ಆ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ. ಗೋಲ್ಡನ್ ಬ್ಯಾಡ್ಜ್ ಪಡೆದಿರುವ ಬರಹಗಾರರಿಗೆ, ಪ್ರತಿಲಿಪಿಯಲ್ಲಿ ದೀರ್ಘ ಧಾರಾವಾಹಿಗಳನ್ನು ರಚಿಸಿ, ಅವುಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಮೂಲಕ ತಿಂಗಳಿಗೆ ಐದು-ಹತ್ತು ಸಾವಿರ ರೂಪಾಯಿಗಳ ಆದಾಯ ಗಳಿಸುವ ಪ್ರತಿಲಿಪಿ ಲೇಖಕರ ಸಾಲಿಗೆ ಸೇರುವ ಅವಕಾಶ ಸಿಗಲಿದೆ. 

 

ಇದಲ್ಲದೆ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ‘ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಆಕರ್ಷಕ ನಗದು ಬಹುಮಾನ, ಭೌತಿಕ ಪ್ರಮಾಣಪತ್ರ ಮತ್ತಿತರ ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗಲಿದೆ. 

 

‘ಗೋಲ್ಡನ್ ಪೆನ್ ಅವಾರ್ಡ್’ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವಿಕೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. 

 

‘ಗೋಲ್ಡನ್ ಪೆನ್ ಅವಾರ್ಡ್’ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ.



ವಿಜೇತ ಕೃತಿಗಳ ವಿವರ: 

 

ಪ್ರಥಮ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸುಮಾ ಬೆಳಗೆರೆ ಅವರ ಚಿತ್ತದೊಳಗಿನ ಚಿತ್ರ

 

ಕತೆಯ ಕುರಿತು: ಇಳಿವಯಸ್ಸಿನವರಿಗೆ ಕಾಡುವ ಖಾಯಿಲೆಗಳಲ್ಲೊಂದಾದ ಅಲ್ಜೀಮರ್ ವೃದ್ಧ ದಂಪತಿಗಳನ್ನು ಹೇಗೆ ಕಾಡುತ್ತದೆ? ಆ ದಂಪತಿಗಳ ಜೀವನ, ಪ್ರೀತಿ, ಬಾಂಧವ್ಯ ಎಲ್ಲವನ್ನೂ ಭಾವನಾತ್ಮಕವಾಗಿ ತೆರೆದಿಡುವ ಕತೆ ಇದು.



ದ್ವಿತೀಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ರೇಖಾ ಹೆಗಡೆ ಅವರ ಒಲವಿನ ಪಲ್ಲವಿ

 

ಕತೆಯ ಕುರಿತು: ಹಳ್ಳಿಯಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಯುವಕರ ಮದುವೆಯ ಸಮಸ್ಯೆಯನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಮೂಡಿಬಂದ ಉತ್ತಮ ಪ್ರೇಮಕತೆ ‘ಒಲವಿನ ಪಲ್ಲವಿ’. ಉತ್ತಮ ನಿರೂಪಣೆ ಮತ್ತು ಪಾತ್ರಪೋಷಣೆಯಿಂದ ಮನಮುಟ್ಟುವಂತಿದೆ.



ತೃತೀಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ವರ್ಷಾ ಕಡಸೂರು ಅವರ ದೇವಯಾನಿ

 

ಕತೆಯ ಕುರಿತು: ರಾಜಾಡಳಿತದ ಪರಿಕಲ್ಪನೆಯನ್ನಿಟ್ಟುಕೊಂಡು ರಚಿತವಾದ ಮಹಿಳಾ ಪ್ರಧಾನ ಕತೆಯಿದು. ಆಯ್ಕೆ ಮಾಡಿಕೊಂಡಿರುವ ಕಥಾವಸ್ತು, ಪಾತ್ರ ಚಿತ್ರಣ, ನಿರೂಪಣಾ ಶೈಲಿಗಳಿಂದ ಓದುಗರ ಗಮನ ಸೆಳೆಯುವಲ್ಲಿ ಈ ಕತೆ ಸಫಲವಾಗುತ್ತದೆ.



ನಾಲ್ಕನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಶೋಭಾ ಮೂರ್ತಿ ಅವರ ಭೂಮಿಗೀತ



ಐದನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಆರ್. ಕೆ ಅವರ ಲಿಚ್ಚಿ



ಆರನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಭಾನು ಶ್ರೀಪಾದ್ ಅವರ ದೇವಗಂಗಾ



ಏಳನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಸ್ವರಾ ಅವರ ಆಲಿಸೊಮ್ಮೆ ಅಂತರಾಳವಾ



ಎಂಟನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಅಶೋಕ್ ಕುಮಾರ್ ಜಿ. ಎಸ್ ಅವರ ಪರಿಶೋಧನೆ



ಒಂಬತ್ತನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪ್ರಶ್ನಾ ನಾರಾಯಣ ರೈ ಅವರ ಕೊಂಚ ಅನುಸರಿಸಿಕೋ ಹೆಣ್ಣೇ…



ಹತ್ತನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

 

ಪ್ರಜ್ಞಾ ಅವರ ಬಾನ ಚಂದಿರ



ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು

 

ಕ್ರ. ಸಂ.

ಕೃತಿ

ಕರ್ತೃ

1

ನಿಯತಿಯ ಸಾಕ್ಷಿ

ಅಂಬಿಕ

2

ವಾತ್ಸಲ್ಯ(ಚಿಗುರೊಡೆಯುವುದೇ ಒಡಲು?)

ಮಾಲಾ ಭಟ್

3

ಗರುಡ ರೇಖೆ

ರಾಧಾ ಕೃಷ್ಣನ ಅರಸಿ 

4

ಹೃದಯವಾ ಸೆಳೆದಳು ತುಂಬುತ್ತಾ ಅನುರಾಗ

ಜಾನ್ವಿಕ

5

ಅಂತ್ಯವಿಲ್ಲದ ಆರಂಭ

ಪ್ರೀತಿ ಶಾನಭಾಗ್

6

ರಾಗಕೆ ಸ್ವರವಾಗಿ

ರೇಖಾ ರಘು

7

ಹೇಳಿ ಹೋಗು ನೀ ಕಾರಣ

ಮನಸ್ವಿ ನಾಯಕ್

8

ಅಭಿಮನ್ಯು(ಒಂದು ಆಶಾಕಿರಣ)

ಸವಿತಾ

9

ಸುವರ್ಣಗಿರಿ ರಹಸ್ಯ

ಭಾನು ಪ್ರಿಯಾ

10

ಪುನರ್ನವ(ವಿಧಿ ಬೆಸೆದ ಬಂಧವಿದು)

ಮಧುಸೂರ್ಯ ಭಟ್

11

ಮರಳಿ ಬಂದುಬಿಡು ನನ್ನೊಲವೆ

ಅವನ್ಯಾ

12

ಜೀವನ ಸಂಘರ್ಷ

ದೀಕ್ಷಾ

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಗೋಲ್ಡನ್ ಪೆನ್ ಅವಾರ್ಡ್' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 20 ಅಧ್ಯಾಯಗಳ ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ.

 

ಸಾಮಾಜಿಕ, ಕೌಟುಂಬಿಕ, ಪತ್ತೇದಾರಿ, ಪ್ರೀತಿ, ಮಹಿಳೆ, ಕಾಲ್ಪನಿಕ, ವೈಜ್ಞಾನಿಕ ಹೀಗೆ ಅನೇಕ ಪ್ರಭೇದಗಳ ಅಡಿಯಲ್ಲಿ ವಿಭಿನ್ನವಾದ ಕತೆಗಳು ಸಲ್ಲಿಸಲ್ಪಟ್ಟಿದ್ದವು. ಹಲವು ಕತೆಗಳು ಸಮಾಜದ, ಮನುಷ್ಯರ ಒಳಿತು-ಕೆಡಕುಗಳನ್ನು ಬಿಂಬಿಸುತ್ತ ಸಾಗಿದರೆ, ಮತ್ತಷ್ಟು ಕತೆಗಳು ಭಾವನಾತ್ಮಕವಾಗಿ ಹೆಣೆಯಲ್ಪಟ್ಟಿದ್ದವು. ನವ ಬರಹಗಾರರು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರಹಗಾರರು ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇವೆ.

 

ಗೋಲ್ಡನ್ ಬ್ಯಾಡ್ಜ್ ಹೊಂದಿರದ ಹಲವಾರು ಲೇಖಕ/ಲೇಖಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬ್ಯಾಡ್ಜ್ ಹೊಂದುವಂತಾಗಿ, ತಮ್ಮ ಮುಂಬರುವ ಧಾರಾವಾಹಿಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿದ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು.

 

- ಪ್ರತಿಲಿಪಿ ಕನ್ನಡ