pratilipi-logo ಪ್ರತಿಲಿಪಿ
ಕನ್ನಡ

ಸೂಪರ್ ಸಾಹಿತಿ ಅವಾರ್ಡ್ಸ್- 6 ರಲ್ಲಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು!

28 ಮಾರ್ಚ್ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ಫಲಿತಾಂಶ ಕೆಲವು ದಿನಗಳ ಹಿಂದೆ ಘೋಷಣೆಯಾಗಿದೆ! ಇದು ಭಾರತದ ಅತಿದೊಡ್ಡ ಆನ್ಲೈನ್ ಕಥಾ ಸ್ಪರ್ಧೆಯಾಗಿದ್ದು ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸುವ ಬರಹಗಾರರಿಗೆ ಪ್ರತಿಲಿಪಿ ಕಡೆಯಿಂದ ಖಚಿತ ಬಹುಮಾನ ನೀಡುವುದಾಗಿ ತಿಳಿಸಲಾಗಿತ್ತು.

 

ನಿಗದಿತ ಕಾಲಾವಧಿಯಲ್ಲಿ 80+ ಅಧ್ಯಾಯಗಳನ್ನು ಹೊಂದಿರುವ ಧಾರಾವಾಹಿ ರಚಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಬರಹಗಾರರು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿ ತಮ್ಮ ಕೌಶಲ್ಯಕ್ಕೆ ರೂಪ ನೀಡಿರುತ್ತಾರೆ. ಶಿಸ್ತುಬದ್ಧ ಮತ್ತು ಯೋಜನಾಬದ್ಧವಾಗಿ ಕೃತಿಯನ್ನು ರಚಿಸಿರುತ್ತಾರೆ. ಸಾಹಿತ್ಯ ಮತ್ತು ಬರವಣಿಗೆಯ ಕುರಿತು ಆಸಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ.

 

ನಿಜವಾಗಿಯೂ, ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು ಈ ಸವಾಲನ್ನು ಸ್ವೀಕರಿಸಿ 80, 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ.

 

ಇಂತಹ ಪ್ರತಿಭಾವಂತ ಬರಹಗಾರರನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿಯ ಬದ್ಧತೆ ಮತ್ತು ಪರಿಶ್ರಮದಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಉತ್ತಮವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿಸಿದ್ದಕ್ಕೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಾಹಿತ್ಯದ ಕುರಿತು ನಿಮಗಿರುವ ಆಸಕ್ತಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿದೆ.

 

ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಕನ್ನಡದ ಬೃಹತ್ ಧಾರಾವಾಹಿ

 

ಚೈತ್ರಾ ಯೋಗೇಶ್ ಅವರ 216 ಅಧ್ಯಾಯಗಳ ನಿನ್ನೇ ಪ್ರೀತಿಸುವೆ ಎಂದೂ



80+ ಅಧ್ಯಾಯಗಳ ಧಾರಾವಾಹಿ ರಚಿಸಿದವರ ವಿವರ-



ಕ್ರ. ಸಂ

ಕರ್ತೃ

ಕೃತಿ

1

ಸಂಧ್ಯಾ ಭಟ್ 

ಸೂಕ್ಷ್ಮ

2

ಹಿತ್ಯ

ನಾ ನಿನ್ನಾ ಬಿಡಲಾರೆ

3

ಸುಷ್ಮಿತಾ ಕೆ. ಎನ್ 

ಒಲವಿನ ಅಭಿಸಾರಿಕೆ

4

ಓಂಪ್ರಕಾಶ್ ನಾಯಕ್ 

ಕೆಂಪು ಜೀಪು

5

ಗೋಪಾಲ

ಬಂಗಾರದ ಹುಲಿ

6

ಮಾಲಾ ನಾರಾಯಣ

ಕವಲೊಡೆದ ಬದುಕು ನನ್ನದು

7

ಸವಿತಾ

ಪ್ರೀತಿಯ ಪಯಣ

8

ಉಮಾ ರಾವ್ ಎಸ್ ಭಟ್ 

ಯೂಫೋರಿಯಾ

9

ವಿದ್ಯಾ ಮೂರ್ತಿ

ನಿನ್ನೊಲವಿನಾಸರೆ

10

ಗಜಲಕ್ಷ್ಮಿ ಗೋವಿಂದ ರಾಜು

ಬೆದರಿದ ಅರಗಿಣಿ

11

ಭಾನು ಹೆಚ್. ಎಫ್

ಭಾವ ಶರಧಿ

12

ಭಾರತಿ ಕೃತಿಕಾ

ನೀನಿಲ್ಲದೆ

13

ಪ್ರಸನ್ನಾ ವಿ ಚೆಕ್ಕೆಮನೆ 

ಈ ಹೃದಯ ನಿನಗೇ ಮೀಸಲು

14

ಮನುಪ್ರಿಯ

ಒಲವಿನ ಹೂವೇ...

15

ತೀರ್ಥ ಶಿವು 

ಸದ್ದಿಲ್ಲದೆ ಮೂಡಿದೆ ಪ್ರೇಮ...

16

ವೀಣಾ ವಿನಾಯಕ

ಇಷ್ಟೇ ಸಾಕು ಈ‌ ಜನ್ಮಕೆ

17

ಸುಜಲ ಘೋರ್ಪಡೆ

ಜೀವನ ಸಂಜೀವನ

18

ಲಕ್ಷ್ಮಿ ಗೌಡ

ಕಾರ್ಮೋಡ

19

ಚೈತ್ರಾ ಯೋಗೇಶ್ 

ನಿನ್ನೇ ಪ್ರೀತಿಸುವೆ ಎಂದೂ

20

ಆರತಿಗುರು

ನಿರೀಕ್ಷೆಯ ಜೀವನ

21

ಚೈತ್ರ ಭಟ್ಟ

ಸೀತೆಯಂತೆ ಕಾಯುವೆ, ನೀ ರಾಮನಾದರೆ..

22

ಶಿಲ್ಪ ಎಸ್.

ನಿಗೂಢ

23

ಶುಭಾ ಶ್ರೀನಾಥ್

ಕನ್ನಡಿಯಲ್ಲಿ ಕಂಡ ಪ್ರತಿಬಿಂಬ

24

ತುಳಸಿ ಚೈತ್ರಾ ದಯಾನಂದ್ ಕಾ ಬೋರಪ್ಪ

ಚೆಲುವೆ ಮೊಗದಿ ಗೆಲುವು ಕಂಡಿತು

25

ಮಾಲಾ ಭಟ್

ಯುಗ್ಮ

26

ವಿಜಯ ಭಾರತಿ 

ತಲ್ಲಣಿಸದಿರು

27

ಶ್ರೀನಿವಾಸ ಸಂಡೂರು 

ಎ ಜಾಕಲ್ಸ್ ಡೇ

28

ಕೌಸಲ್ಯ ಕಾರಂತ್ 

ಬದುಕು ಜಟಕಾಬಂಡಿ



ನಮ್ಮ ದೃಷ್ಟಿಯಲ್ಲಿ ನೀವೆಲ್ಲರೂ ಸೂಪರ್ ಸಾಹಿತಿಗಳು!

 

ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.

 

ನೀವು ‘ಸೂಪರ್ ಸಾಹಿತಿ ಅವಾರ್ಡ್ಸ್ : ಸೂಪರ್ 7 ಸೀಸನ್’ ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ಮೇ 7 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/03likagbaw



ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ!

 

- ಪ್ರತಿಲಿಪಿ ಕನ್ನಡ