pratilipi-logo ಪ್ರತಿಲಿಪಿ
ಕನ್ನಡ

'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ

29 ಮಾರ್ಚ್ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ಪ್ರೀತಿ, ಪ್ರೇಮ, ಸಂಬಂಧಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುವ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಿರು ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು.

 

ಪ್ರತಿಲಿಪಿಯ ಹೊಸ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಕಿರು ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕೆ ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ.

 

‘ಒಲವ ಇಬ್ಬನಿ’ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವ ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ.

 

ವಿಜೇತ ಕೃತಿಗಳ ವಿವರ

 

ಪ್ರಥಮ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಇಂದು ಅವರ ಹೇಳದೆ ಉಳಿದ ಮಾತುಗಳು ನೂರು

 

ಕತೆಯ ಕುರಿತು: ವಿಭಿನ್ನ ಕಥಾಹಂದರದೊಂದಿಗೆ ಪ್ರೇಮವನ್ನು ತೆರೆದಿಡುವ ಪ್ರಯತ್ನ, ಬಹಳ ಉತ್ತಮವಾಗಿ ಮೂಡಿಬಂದಿದೆ. ಪ್ರೀತಿಗೆ ಸಾವಿಲ್ಲ ಎನ್ನುವ ಮಾತನ್ನು ಹೇಳಿದ ರೀತಿ ಚೆನ್ನಾಗಿದೆ.

 

ದ್ವಿತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಶ್ರೀನಾಥ್ ಫೇಸ್ಬುಕ್ ಅವರ ಒಲವು ಮೂಡಿದಾಗ

 

ಕತೆಯ ಕುರಿತು: ಮೊದಲ ನೋಟದಲ್ಲಿ ಉಂಟಾದ ಪ್ರೀತಿ ಇದ್ದ ತಡೆಗಳನ್ನೆಲ್ಲ ದಾಟಿಕೊಂಡು ಹೇಗೆ ಸಫಲವಾಯಿತು ಎಂಬುದನ್ನು ಲೇಖಕರು ಈ ಕತೆಯಲ್ಲಿ ಅಚ್ಚುಕಟ್ಟಾಗಿ ಹೇಳಿದ್ದಾರೆ.

 

ತೃತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಆಶ್ರಿತ ಕಿರಣ್ ಅವರ ಒಲಿದ ಜೀವ

 

ಕತೆಯ ಕುರಿತು: ಉತ್ತಮ ಕಥಾಹಂದರದ ಆಯ್ಕೆ, ಮತ್ತು ನಿರೂಪಣೆಯೂ ಹೊಂದಿಕೊಂಡು ಕತೆ ಚೆನ್ನಾಗಿ ಮೂಡಿಬಂದಿದೆ. ಪ್ರೀತಿಯ ದಾಂಪತ್ಯ ಗೀತೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ.

 

ನಾಲ್ಕನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಮಂಗಲಾ ಬಾಡನಟ್ಟಿ ಅವರ ಒಲವೇ ಮಂದಾರ

 

ಐದನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ಸುನೀತ ಶೆಟ್ಟಿ ಅವರ ಸನಿಹ ರೋಮಾಂಚನ

 

ಆರನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ

 

ರೇಖಾ ರಘು ಅವರ ಒಮ್ಮೊಮ್ಮೆ ಹೀಗೂ ಆಗುವುದು



ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು



ಕ್ರ. ಸಂ

ಕರ್ತೃ

ಕೃತಿ

1

ಸುಮಾ ಬೆಳಗೆರೆ

ನೀನೆ ನನ್ನ ಜೀವ

2

ಅಶೋಕ್ ಕುಮಾರ್ ಜಿ. ಎಸ್

ಬಾಳಿನೊಲುಮೆ

3

ಪ್ರಶ್ನಾ ನಾರಾಯಣ ರೈ

ನಿನಗೂ ಒಲವಾಗುವವರೆಗೆ ಕಾಯುವೆ...

4

ಶಿವಗೀತಾ

ಹೃದಯದ ಸಪ್ತಸ್ವರ

5

ಪ್ರಪಂಚ

ಪ್ರಣಯದ ದಾರಿಯಲ್ಲಿ ಮಿಹಿಕ ಸಿಂಚನ

6

ತನುಶ್ರೀ ಸಿ ನಾಗರಾಜ್

ಬಾಳನೌಕೆ

7

ಎಸ್

ಬದುಕಿನ ಬಣ್ಣವೇ ಶೃತಿಯಾದಾಗ

8

ರಕ್ಷಿತಾ ರಚ್ಚು

ಅಚ್ಚು ರಚ್ಚು

9

ಮೌನ

ಒಲವ ಇಬ್ಬನಿ

10

ಪಾರಿಜಾತ

ಕರುಳ ಬಂಧ



ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಬರವಣಿಗೆ ಒಂದು ಕಲಾ ಸಾಧನೆ. ಅದರಲ್ಲಿ ಧಾರಾವಾಹಿಗಳ ರಚನೆ ಬಹಳ ಸಮಯ, ಅಧ್ಯಯನ ಬೇಡುವ ಕೌಶಲ್ಯಗಳಲ್ಲಿ ಒಂದು ಎಂದರೆ ತಪ್ಪಲ್ಲ. ಒಳ್ಳೆಯ ಕಥಾಹಂದರ, ಅಚ್ಚುಕಟ್ಟು ನಿರೂಪಣೆ ಮತ್ತು ಓದುಗರ ಮನಸ್ಸು ಮುಟ್ಟುವ ಸಂಭಾಷಣೆ, ಕುತೂಹತ ಕೆರಳಿಸುವ ಅಂಶಗಳನ್ನು ಸರಿಯಾದ ಹದಕ್ಕೆ ತರುವುದು ಬರಹಗಾರನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅದು ಅಚ್ಚೊತ್ತಬಲ್ಲದು. ಹಾಗಾಗಿ ‘ಒಲವ ಇಬ್ಬನಿ’ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರು ಧಾರಾವಾಹಿಗಳನ್ನು ರಚಿಸಿರುವ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು; ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.

 

ಉಳಿದಂತೆ ಉತ್ತಮ ಕತೆಗಳು ರಚಿಸಲ್ಪಟ್ಟಿದ್ದವು. ಕೆಲವು ಕತೆಗಳ ವಿಷಯಗಳಲ್ಲಿ ಹೋಲಿಕೆಯೆನಿಸಿದರೂ ನಿರೂಪಣೆಯಲ್ಲಿ ಭಿನ್ನವಾಗಿದ್ದವು. ಒಂದೆರಡು ಕತೆಗಳು ಮಾನವರ ನಡುವಿನ ವಿಭಿನ್ನ, ವಿವಿಧ ಬಂಧಗಳನ್ನು ಬಹಳ ಉತ್ತಮ ರೀತಿಯಲ್ಲಿ ತೆರೆದಿಡುವ ಪ್ರಯತ್ನ ಮಾಡಿವೆ. ಕಥಾ ರಚನೆಯ ಮೂಲಕ ಪ್ರೀತಿ, ಪ್ರೇಮ, ಸಂಬಂಧಗಳ ಸವಿಯನ್ನು ಸಂಭ್ರಮಿಸುವ ಸ್ಪರ್ಧೆಯ ಉದ್ದೇಶ ಸಫಲವಾಗಿದೆ ಎಂದರೆ ತಪ್ಪಿಲ್ಲ. 

 

ಆದರೂ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಓದು, ಅಧ್ಯಯನಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುವಂತಾಗಲಿ, ಕಥಾವಸ್ತು ‘ಪ್ರೀತಿ-ಪ್ರೇಮ’ ಎಂದಾದರೂ ಕಥಾಹಂದರದಲ್ಲಿ ಇತರ ಹಲವು ವಿಷಯಗಳಿಂದ ಪ್ರೇರಣೆ ಪಡೆದು ಕತೆಗಳಲ್ಲಿ ಬಳಸಿಕೊಳ್ಳುವಂತಾಗಲಿ ಎಂಬುದು ನಮ್ಮ ಆಶಯ. 

 

ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ.

 

- ಪ್ರತಿಲಿಪಿ ಕನ್ನಡ