pratilipi-logo ಪ್ರತಿಲಿಪಿ
ಕನ್ನಡ

ಪ್ರತಿಲಿಪಿಯಲ್ಲಿ ನಿಮ್ಮ ಗಳಿಕೆ ಸುಸ್ಥಿರವಾಗಿರಲು ಅನುಸರಿಸಬೇಕಾದ ಪ್ರಮುಖ ೧೦ ವಿಧಾನಗಳು :

09 ಜನವರಿ 2024

 

ಪ್ರತಿಲಿಪಿಯಲ್ಲಿ ನಿಮ್ಮ ಗಳಿಕೆ ಸುಸ್ಥಿರವಾಗಿರಲು ಅನುಸರಿಸಬೇಕಾದ ಪ್ರಮುಖ ೧೦ ವಿಧಾನಗಳು:  

  1. ಓದುಗರೊಂದಿಗೆ ಸದಾ ಸಂಪರ್ಕದಲ್ಲಿರಿ: ಪ್ರತಿಲಿಪಿಯಲ್ಲಿ ಸದಾ ಸಕ್ರಿಯವಾಗಿರಿ ಮತ್ತು ಕನಿಷ್ಟ ಒಂದಾದರೂ ಧಾರಾವಾಹಿ ಮುಂದುವರೆಯುತ್ತಲೇ ಇರುವಂತೆ ನೋಡಿಕೊಳ್ಳಿ. ನಮ್ಮಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಆಕರ್ಷಕ ಕಥಾಹಂದರ ಹೊಂದಿರುವ, ಕನಿಷ್ಠ 1000 ಪದಗಳನ್ನು ಪ್ರತಿ ಅಧ್ಯಾಯದಲ್ಲಿ ಹೊಂದಿದ ನೂರಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳು ಓದುಗರಿಂದ ಸತತವಾಗಿ ಓದಲ್ಪಡುತ್ತವೆ. ಪ್ರತಿನಿತ್ಯ ಈ ರೀತಿಯ ಕಾದಂಬರಿಗಳ ಅಧ್ಯಾಯಗಳನ್ನು ರಚಿಸಿ ಪ್ರಕಟಿಸುವ ಮೂಲಕ ಓದುಗರೊಂದಿಗೆ ಸತತವಾಗಿ ಸಂಪರ್ಕದಲ್ಲಿರಬಹುದು. 

  2. ಸಕ್ರಿಯರಾಗಿ ಪೋಸ್ಟ್ ಮಾಡುತ್ತಿರಿ: ಹೊಸದಾಗಿ ಪ್ರಾರಂಭವಾದ ನಿಮ್ಮ ಕೃತಿಗಳ ಕುರಿತ ಕುತೂಹಲಭರಿತ ಮಾಹಿತಿ, ಕೃತಿಯಲ್ಲಿ ವಿವರಿಸುವ ಸ್ಥಳ, ಘಟನೆ, ಕಾಲಘಟ್ಟ, ಮಹಾನ್ ವ್ಯಕ್ತಿಗಳು, ಇನ್ನಿತರೇ ಅಂಶಗಳ ಕುರಿತು ಪೋಸ್ಟ್ ಮಾಡುವ ಮೂಲಕ ಓದುಗರಲ್ಲಿ ನಿಮ್ಮ ಮುಂಬರುವ ಧಾರಾವಾಹಿಯ ಕುರಿತು ಕುತೂಹಲ ಸೃಷ್ಟಿಸಿ. ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಲು ಪ್ರಾರಂಭಿಸಿದ ಬಳಿಕ, ಪ್ರತಿ ಅಧ್ಯಾಯ ಪ್ರಕಟಗೊಂಡಾಗ ಆಯಾ ಅಧ್ಯಾಯದಲ್ಲಿ ನೆಡೆಯುವ ಕಥೆಯ ಕುರಿತು, ಪಾತ್ರ, ಸನ್ನಿವೇಶ, ಘಟನೆ ಮುಂತಾದವುಗಳ ಕುರಿತು ಮಾಹಿತಿ ನೀಡಿ. ಇದು ಓದುಗರನ್ನು ಸದಾ ಹಿಡಿದಿಡಲು ಸಹಕಾರಿಯಾಗುತ್ತದೆ. ವಾರದಲ್ಲಿ ಕನಿಷ್ಟ ಮೂರು ಅಧ್ಯಾಯವನ್ನಾದರೂ ಪ್ರಕಟಿಸಲು ನಿರ್ಧರಿಸಿ. 

  3. ಹವ್ಯಾಸ ಬೆಳೆಸಿಕೊಳ್ಳಿ: ಪ್ರತಿನಿತ್ಯ ಕನಿಷ್ಟ 30-45 ನಿಮಿಷಗಳನ್ನು ಬರವಣಿಗೆಗಾಗಿಯೇ ಮೀಸಲಿಡುತ್ತೇನೆಂದು ನಿರ್ಧರಿಸಿ. ಪ್ರತಿನಿತ್ಯ ಕನಿಷ್ಠ 800-1000 ಪದಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಲ್ಲಿ ಕ್ರಮೇಣ ಬರಹದ ಮೇಲೆ ಹಿಡಿತ ಸಾಧಿಸಿ, ಸುಲಭವಾಗಿ ದಿನವೂ ಒಂದೆರೆಡು ಅಧ್ಯಾಯಗಳನ್ನು ರಚಿಸಿ ಪ್ರಕಟಿಸಬಹುದು. 

  4. ಓದುಗರ ಮೆಚ್ಚಿನ ವಿಷಯ ಆಯ್ಕೆ ಮಾಡಿಕೊಳ್ಳಿ: ಪ್ರಸ್ತುತ ಪ್ರತಿಲಿಪಿಯ ಓದುಗರು ಪ್ರೀತಿ ಪ್ರೇಮ, ನಿಗೂಢ ರೋಚಕ, ಪತ್ತೇದಾರಿ, ಕೌಟುಂಬಿಕ ಮತ್ತು ಮಹಿಳಾ ಕೇಂದ್ರಿತ ವಿಷಯಗಳನ್ನು ಹೊಂದಿರುವ ಕೃತಿಗಳನ್ನು ಓದಲು ಇಚ್ಛಿಸುತ್ತಾರೆ. ಪ್ರಾರಂಭದಲ್ಲಿ ನೀವು ಕಥೆ ಹೆಣೆಯಲು ಸುಲಭವಾಗುವ ಈ ವಿಷಯವಸ್ತುಗಳನ್ನಿಟ್ಟುಕೊಂಡು ಕೃತಿ ರಚಿಸಿ. ಓದುಗರು ಮತ್ತು ಹಿಂಬಾಲಕರ ಸಂಖ್ಯೆ ಹೆಚ್ಚಾದಂತೆ, ನಿಮ್ಮ ಕೃತಿಗಳ ಕುರಿತ ವಿಮರ್ಶೆ, ಅಭಿಪ್ರಾಯಗಳ ಸಂಖ್ಯೆಯೂ ಹೆಚ್ಚುತ್ತದೆ. ಇದು ಬರೆಯುವಲ್ಲಿ ನಿಮಗೆ ಹೊಸ ಆತ್ಮವಿಶ್ವಾಸ ನೀಡುತ್ತದೆ. ಕ್ರಮೇಣ ವೈವಿಧ್ಯಮಯ ವಿಷಯಗಳ ಕುರಿತು ಅಥವಾ ನಿಮ್ಮಿಷ್ಟದ ಪ್ರಭೇದದಲ್ಲಿ ಬರಹವನ್ನು ರಚಿಸಿ ಓದುಗರನ್ನು ಓದಲು ಪ್ರೇರೇಪಿಸಬಹುದು. 

  5. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆಗಳಲ್ಲಿ ಸದಾ ಭಾಗವಹಿಸಿ: ನಿಮ್ಮ ಗಳಿಕೆ, ಓದಿನ ಸಂಖ್ಯೆ, ಅಭಿಪ್ರಾಯ/ವಿಮರ್ಶೆಗಳ ಸಂಖ್ಯೆ, ಹಿಂಬಾಲಕರ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಲು ಪ್ರತಿಲಿಪಿ ನೆಡೆಸುವ ಎಲ್ಲ ಸ್ಪರ್ಧೆಗಳಲ್ಲಿ ಸದಾಕಾಲ ಭಾಗವಹಿಸಿ. ಇದು ನಿಗದಿತ ಸಮಯದಲ್ಲಿ ನಿರ್ದಿಷ್ಟ ಪದಸಂಖ್ಯೆ ಮತ್ತು ಅಧ್ಯಾಯಗಳನ್ನು ಹೊಂದಿರುವ ಕೃತಿಗಳನ್ನು ಪ್ರಕಟಿಸಲು ಪ್ರೇರೇಪಿಸುವುದರಿಂದ ನಿಮಗೆ ಸತತವಾಗಿ ಅಷ್ಟೇ ಅಲ್ಲದೇ ವೇಗವಾಗಿ ಬರೆಯುವ ಅಭ್ಯಾಸ ಮೈಗೂಡಿಸುತ್ತದೆ. 

  6. ಅಧ್ಯಾಯಗಳ ಗಾತ್ರ ಮತ್ತು ಕೊಂಡಿಗಳು: ಪ್ರತಿ ಅಧ್ಯಾಯವೂ ಮುಂದಿನ ಅಧ್ಯಾಯದ ಕಥಾಹಂದರಕ್ಕೆ ಆಕರ್ಷಕ ಕೊಂಡಿ ನೀಡಿದಲ್ಲಿ, ಓದುಗರು ನಿಮ್ಮ ಧಾರಾವಾಹಿಗಳ ಹೊಸ ಅಧ್ಯಾಯವನ್ನು ಓದಲು ಕಾತರರಾಗಿರುವಂತೆ ಮಾಡುತ್ತದೆ. ಪ್ರತಿ ಅಧ್ಯಾಯವೂ ಅತ್ಯುತ್ತಮ ಕಥಾಹಂದರ ಮತ್ತು ಕಥೆಗೆ ಸೂಕ್ತವೆನಿಸಿದ ಅಂಶಗಳನ್ನು ಹೊಂದಿದ್ದಲ್ಲಿ, ಅವುಗಳನ್ನು ನಾಣ್ಯಗಳ ಮೂಲಕ ಅನ್ಲಾಕ್ ಮಾಡಿ ಓದುವವರ ಸಂಖ್ಯೆ ಹೆಚ್ಚುತ್ತದೆ. 

  7. ಸಬ್ಸ್ಕ್ರೈಬ್ ಮಾಡಲು ಉತ್ತೇಜಿಸಿ: ನಿಮ್ಮ ಕೃತಿಗಳನ್ನು ತಡೆ ರಹಿತವಾಗಿ ಮತ್ತು ಜಾಹಿರಾತು ರಹಿತವಾಗಿ ಓದಲು ಸಬ್ಸ್ಕ್ರಿಪ್ಷನ್ ಖರೀದಿಸುವಂತೆ ಓದುಗರ ಮನವೊಲಿಸಿ. ಸುದೀರ್ಘ ಕಥಾನಕಗಳನ್ನು ಪ್ರಕಟಿಸಲು ನೀವು ವ್ಯಯಿಸಿರುವ ಸಮಯ ಮತ್ತು ಕಲ್ಪನೆಗೆ ಪ್ರತಿಯಾಗಿ ಓದುಗರ ಪ್ರೀತಿ ಅಭಿಮಾನ ಮೆಚ್ಚುಗೆ ವಿಮರ್ಶೆ ಅಭಿಪ್ರಾಯಗಳ ಜೊತೆಗೆ ಹಣವೂ ಸಂಪಾದನೆಯಾದಲ್ಲಿ ನಿಮ್ಮ ಸಮಯ ಮತ್ತು ಬರಹ ಕೌಶಲ್ಯದ ಹೂಡಿಕೆಗೆ ಸೂಕ್ತ ಬೆಲೆ ಲಭ್ಯವಾದಂತಾಗುತ್ತದೆ. ಯಾವುದೇ ಕಾದಂಬರಿಯನ್ನು ಬರೆಯುವ ಮುನ್ನ ಮತ್ತು ಕೊನೆಯ ಅಧ್ಯಾಯದ ಪ್ರಕಟಣೆಯ ಬಳಿಕ ಧಾರಾವಾಹಿಗಾಗಿ ನೀವು ಪಟ್ಟ ಕಷ್ಟ, ಸಂಶೋಧನೆಯ ವಿವರಗಳು, ಭೇಟಿಯಾದ ವ್ಯಕ್ತಿ ಮತ್ತು ಸ್ಥಳಗಳು ಮುಂತಾದ ವಿವರ ನೀಡಿದಲ್ಲಿ, ನಿಮ್ಮ ಪ್ರತಿಲಿಪಿ ಖಾತೆ ಓದುಗರ ಮನಗೆಲ್ಲುವಲ್ಲಿ ಯಾವುದೇ ಸಂಶಯವಿಲ್ಲ. 

  8. ಪ್ರಚಾರಕ್ಕೂ ಪ್ರಾಮುಖ್ಯತೆ ನೀಡಿ: ಯಾವುದೇ ಉತ್ಪನ್ನ ಅಥವಾ ಸೇವೆ ಅತ್ಯುತ್ತಮವಾಗಿದೆ ಎಂಬ ಮಾಹಿತಿ ಪ್ರಚಾರದ ಮೂಲಕ ಹೆಚ್ಚು ಗ್ರಾಹಕ/ಬಳಕೆದಾರರನ್ನು ತಲುಪುತ್ತದೆ. ಇದು ಪ್ರತಿಲಿಪಿಯ ನಿಮ್ಮ ಬರಹಗಳಿಗೂ ಅನ್ವಯಿಸುತ್ತದೆ. ಓದುಗರೊಂದಿಗೆ ಹಂಚಬಹುದಾದ ನಿಮ್ಮ ಬದುಕಿನ ಘಟನೆಗಳು, ಸಾಧನೆಗಳು, ಕೃತಿಯ ಮಾಹಿತಿ, ಸ್ಥಳ/ವ್ಯಕ್ತಿ ಪರಿಚಯ, ನಿಮ್ಮ ಭಾವನಾತ್ಮಕ ಅಂಶಗಳು ಮುಂತಾದವುಗಳನ್ನು ಪ್ರತಿಲಿಪಿಯಲ್ಲಿ ಪೋಸ್ಟ್ ಮಾಡಿ. ನಿಮ್ಮ ಪ್ರತಿಲಿಪಿಯ ಕೃತಿಗಳ ಪರಿಚಯ, ಓದುಗರ ಅಭಿಪ್ರಾಯಗಳು, ಅವರ ಭಾವನಾತ್ಮಕ ಸ್ಪಂದನೆ, ಪ್ರತಿಯೊಂದು ಕೃತಿಯ ವಿಶೇಷ, ಪ್ರತಿ ಅಧ್ಯಾಯದ ಕುತೂಹಲಭರಿತ ಮಾಹಿತಿ ಇತ್ಯಾದಿಗಳನ್ನು ನೀವು ಸಕ್ರಿಯರಿರುವ ಮತ್ತು ಅವಕಾಶವಿರುವ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ. ಜೊತೆಗೆ ನಿಮ್ಮ ಪ್ರತಿಲಿಪಿಯ ಪ್ರೊಫೈಲ್ ಮತ್ತು ಬರಹದ ಲಿಂಕ್ ಹಂಚಿ. ಇದು ಹೊಸ ಓದುಗರಿಗೆ ನಿಮ್ಮ ಪ್ರತಿಲಿಪಿ ಕೃತಿಗಳ ಮಾಹಿತಿ ನೀಡಿ ಅವರನ್ನು ನಿಮ್ಮ ಖಾಯಂ ಓದುಗರಾಗಲು ಪ್ರೇರೇಪಿಸುತ್ತದೆ. 

  9. ಓದುಗರೊಂದಿಗೆ ಸಂವಾದ: ನಿಮ್ಮ ಕೃತಿಗಳನ್ನು ಓದಿ ವಿಮರ್ಶಿಸಿದ ಅಭಿಪ್ರಾಯ ತಿಳಿಸಿದ ಓದುಗರಿಗೆ ಪ್ರತಿಕ್ರಿಯಿಸಿ. ಕೃತಿಯ ಕಥಾಹಂದರ, ಪಾತ್ರಗಳು, ಸ್ಥಳಗಳು, ಸಂಭಾಷಣೆ, ಘಟನೆಗಳು, ಸನ್ನಿವೇಶಗಳು, ಕಾಲಘಟ್ಟ ಮುಂತಾದ ವಿಷಯಗಳ ಕುರಿತು ನೀವು ಸಂವಹನದಲ್ಲಿ ಮಾಹಿತಿ ನೀಡಿ ಓದುಗರು ನಿಮ್ಮ ಕೃತಿಗಳ ಕುರಿತು ಇನ್ನಷ್ಟು ಆಕರ್ಷಿತರಾಗುವಂತೆ ಮಾಡಬಹುದು. 

  10. ಹೊಸ ಸೀಸನ್'ಗಳು: ಓದುಗರಿಂದ ಮೆಚ್ಚಲ್ಪಟ್ಟ ಧಾರಾವಾಹಿಗಳ ಮುಂದಿನ ಸೀಸನ್ ರಚಿಸಿ. ಅದು ಪ್ರಸ್ತುತ ಪ್ರಕಟಿಸಿ ಮುಗಿದಿರುವ ಕಥೆಯ ಪೂರ್ವಭಾಗವಿರಬಹುದು ಅಥವಾ ಉತ್ತರಭಾಗವಿರಬಹುದು. ನೀವು ಈಗಾಗಲೇ ಪ್ರಕಟಿಸಿದ ಕಾದಂಬರಿಯಲ್ಲಿನ ಜನಪ್ರಿಯ ಪಾತ್ರಗಳ ಮರುಪ್ರವೇಶದ ಮೂಲಕ ಕಥೆಯೊಂದಿಗೆ ಭಾವನಾತ್ಮಕವಾಗಿ ಬೆಸೆದಿರುವ ಓದುಗರನ್ನು ಪುನಃ ಅದೇ ರೀತಿಯ ಭಾವನಾಲೋಕಕ್ಕೆ ಕರೆದೊಯ್ಯಬಹುದು!

 

ಈ ಕೆಳಗೆ ನೀಡಲಾಗಿರುವ ಲಿಂಕ್’ಗಳ ಮೂಲಕ ಸುದೀರ್ಘ ಕೃತಿಗಳನ್ನು ರಚಿಸಲು ಹಂತಗಳನ್ನು ಸುಲಭವಾಗಿ ಅರಿಯಿರಿ:

1. ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ?

2. ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ?

3. ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ?

4. ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ?

5. ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು?

6. ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ?

7. ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ?

8. ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ?

9. ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ

10. ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ

11. ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ

12. ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ?

13. ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ

14. ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು

15. ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ?

16. ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ

17. ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು

 

ಪ್ರತಿಲಿಪಿ ತಂಡ ಹಂಚಿಕೊಂಡಿರುವ ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ! ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಈ ಮೂಲಕ ಬಹು ಅಧ್ಯಾಯಗಳ ಸುದೀರ್ಘ ಧಾರಾವಾಹಿಯನ್ನು ಸುಲಭವಾಗಿ ಪೂರ್ಣಗೊಳಿಸುವಿರಿ ಎಂದು ನಾವು ನಂಬುತ್ತೇವೆ.

 

ಇಂದಿನಿಂದಲೇ ಬರೆಯಲು ಆರಂಭಿಸಿ!