pratilipi-logo ಪ್ರತಿಲಿಪಿ
ಕನ್ನಡ

'10 ಅಧ್ಯಾಯಗಳ ಕಥಾಸರಣಿ ಸವಾಲು' ಸ್ಪರ್ಧೆಯ ಫಲಿತಾಂಶ

10 ಮೇ 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ '10 ಅಧ್ಯಾಯಗಳ ಕಥಾಸರಣಿ ಸವಾಲು' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. 

ಸಾಮಾಜಿಕ, ಕೌಟುಂಬಿಕ, ಪತ್ತೇದಾರಿ, ಪ್ರೀತಿ, ಮಹಿಳೆ, ಕಾಲ್ಪನಿಕ, ವೈಜ್ಞಾನಿಕ, ಭಯಾನಕ ಹೀಗೆ ಅನೇಕ ಪ್ರಭೇದಗಳ ಅಡಿಯಲ್ಲಿ ವಿಭಿನ್ನವಾದ ಕತೆಗಳು ಸಲ್ಲಿಸಲ್ಪಟ್ಟಿದ್ದವು. ಹಲವು ಕತೆಗಳು ಸಮಾಜದ, ಮನುಷ್ಯರ ಒಳಿತು-ಕೆಡಕುಗಳನ್ನು ಬಿಂಬಿಸುತ್ತ ಸಾಗಿದರೆ, ಮತ್ತಷ್ಟು ಕತೆಗಳು ಭಾವನಾತ್ಮಕವಾಗಿ ಹೆಣೆಯಲ್ಪಟ್ಟಿದ್ದವು. ವಿಭಿನ್ನ ಕಥಾವಸ್ತುಗಳ ಮೇಲೆ ರಚಿತವಾದ ಇನ್ನೂರಕ್ಕೂ ಅಧಿಕ ಕತೆಗಳು ಸ್ಪರ್ಧೆಯ ಉದ್ದೇಶವನ್ನು ಸಫಲವಾಗಿಸಿವೆ ಎಂದರೆ ತಪ್ಪಾಗಲಾರದು! 

ಗೋಲ್ಡನ್ ಬ್ಯಾಡ್ಜ್ ಹೊಂದಿರದ ಹಲವಾರು ಲೇಖಕ/ಲೇಖಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬ್ಯಾಡ್ಜ್ ಹೊಂದುವಂತಾಗಿ, ತಮ್ಮ ಮುಂಬರುವ ಧಾರಾವಾಹಿಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಆಯ್ಕೆಯನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿದ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. 

 

ವಿಜೇತ ಕೃತಿಗಳ ವಿವರ:

 

ಪ್ರಥಮ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಜಿ ಕೆ ಅವರ ಚಿತ್ತವೆಂಬ ಹುತ್ತದಲ್ಲಿ..

 

ಕತೆಯ ಕುರಿತು: ಮನೋವೈಜ್ಞಾನಿಕ ಕಥಾಹಂದರವುಳ್ಳ ಕತೆಯಿದು. ಅಧ್ಯಾತ್ಮ/ ದೇವರ ಮೇಲಿನ ನಂಬಿಕೆಯ ಬಗ್ಗೆ ಕುತೂಹಲಿಗನಾದ ಮನಸ್ಶಾಸ್ತ್ರಜ್ಞನೊಬ್ಬ ನಡೆಸುವ ಪ್ರಯೋಗಗಳು, ಅದರ ಪರಿಣಾಮ, ಅದಕ್ಕೆ ಕಾರಣ ಹೀಗೆ ಕತೆ ಮನೋವಿಜ್ಞಾನದ ಸುತ್ತ ಸುತ್ತುತ್ತದೆ. ಕೆಲವು ಮನೋವೈಜ್ಞಾನಿಕ ಮಾಹಿತಿಗಳನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ.

 

ದ್ವಿತೀಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಆರ್ಕೆ ಅವರ ಹೆರ

 

ಕತೆಯ ಕುರಿತು: ಆಯ್ಕೆಗಳು ಮತ್ತು ಸಾಧ್ಯತೆಗಳ ಆಧಾರಿತ ಕಥಾಹಂದರವನ್ನೊಳಗೊಂಡ ಕಾಲ್ಪನಿಕ ಕತೆ. ಒಂದು ವ್ಯಕ್ತಿಯ ಸಾವು ಮತ್ತು ಸಾಧ್ಯತೆಗಳು ವಿಭಿನ್ನ ರೂಪದಲ್ಲಿ ಎದುರಾಗುವ ವಿಶಿಷ್ಟ ಕಥಾವಸ್ತು. ವಿಭಿನ್ನ ಮತ್ತು ಕುತೂಹಲಕಾರಿಯಾದ ನಿರೂಪಣೆಯೊಂದಿಗೆ ಓದುಗರ ಗಮನ ಸೆಳೆಯುತ್ತದೆ.

 

ತೃತೀಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಅಪರ್ಣ "ಲಹರಿ" ಅವರ ಆ ನೀಲಿ ಹೂ 

 

ಕತೆಯ ಕುರಿತು: ಒಂದು ಕೊಲೆಯ ಜಾಡನ್ನು ಹಿಡಿದು ಸಾಗುವ ಪತ್ತೇದಾರಿ ಕತೆ. ನೀಲಿ ಹೂ ಆ ಕೊಲೆಗಾರರನ್ನು ಸೆರೆ ಹಿಡಿಯಲು ಸಹಾಯ ಮಾಡುವುದಾ ಎನ್ನುವ ಕಥಾಹಂದರ, ಪ್ರತಿ ಅಧ್ಯಾಯದಲ್ಲಿ ಕೌತುಕವನ್ನು ಹುಟ್ಟಿಸುತ್ತ ಓದುಗರನ್ನು ಹಿಡಿದಿಡುತ್ತದೆ.

 

ನಾಲ್ಕನೆಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ವರ್ಷಾ ಕಡಸೂರು ಅವರ ಅಸ್ಮಿತೆ

 

ಐದನೆಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಅಮೋಘ ವರ್ಷ ಅವರ ಹೀಗೊಂದು ಸತ್ಯ ಕಥೆ

 

ಆರನೆಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ವಿಜಯಲಕ್ಷ್ಮಿ ಮಳಿಯೆ ಅವರ ಅಹಮ್ಮಿನ ಕೋಟೆಯಲಿ

 

ಏಳನೆಯ ಬಹುಮಾನ: ಒಂದು ಸಾವಿರ ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ವಿಕಾಸ್ ಇಶಿನ್ ಅವರ ಪಿಜ್ಜಾ ... (ಡೆಲಿವರಿ ಮಾಡಲಾಗಿದೆ)

 

ಎಂಟನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ನಿರಾಪೇಕ್ಷ ಅವರ ಲ್ಯೂಸೀಫರ್ 

 

ಒಂಬತ್ತನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಉಮಾಶ್ರೀ ಎಂ ಅವರ ಚಂದ್ರಗ್ರಹಣ 

 

ಹತ್ತನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಅಶ್ವಿನಿ ಕುಲ್ಕರ್ಣಿ ಅವರ ಯಾವ ಮೋಹನ ಮುರಳಿ ಕರೆಯಿತು 

 

ಹನ್ನೊಂದನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಶಿವಶಂಕರ್ ಎಸ್.ಜಿ ಅವರ ಮುದ್ದಿನ ಸೊಸೆ! 

 

ಹನ್ನೆರಡನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಸೌಮ್ಯ ಕುಂದಾಪುರ ಅವರ ಜಗತ್ ಮಿಥ್ಯಾ 

 

ಹದಿಮೂರನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಶ್ವೇತಾ ಹೆಗಡೆ ಅವರ ಕನಸೊಂದ ಅರಸಿ... 

 

ಹದಿನಾಲ್ಕನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಚೈತ್ರ ಭಟ್ ಅವರ ಋಣ ಮುಕ್ತಳೇ ನಾ?? 

 

ಹದಿನೈದನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಪ್ರಖ್ಯಾ ಅವರ ನಮಗೂ ಹಕ್ಕಿದೆ 

 

ಹದಿನಾರನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಮಂದಾರ ಕೃಷ್ಣ ಅವರ ಕಾರ್ಮೋಡ...! 

 

ಹದಿನೇಳನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಮೈತ್ರಿ ಎಸ್. ಅವರ ಗಾಳಿಪಟ  

 

ಹದಿನೆಂಟನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಪ್ರಸನ್ನಾ ಚೆಕ್ಕೆಮನೆ ಅವರ ಸಂಪಿಗೆಮರದ ಹಸಿರೆಲೆ ನಡುವೆ 

 

ಹತ್ತೊಂಬತ್ತನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ಉಮಾ ಪ್ರಕಾಶ್ ಅವರ ಹಕ್ಲೆ ರಾಮ

 

ಇಪ್ಪತ್ತನೆಯ ಬಹುಮಾನ: ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ

ವಸುಂಧರಾ ಹೆಗಡೆ ಅವರ ವಿಸ್ಫೋಟ 



ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು: 

(ಈ ಕೃತಿಗಳ ಕರ್ತೃಗಳಿಗೆ ಡಿಜಿಟಲ್ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು)



ಕೃತಿ

ಕರ್ತೃ

ಅಪೂರ್ಣದ ಪರಿಪೂರ್ಣ

ಅ’ಪ್ರಮಾ’

ನೆರಳುಗಳ ಬೆನ್ನು ಹತ್ತಿ

ಪೂಜಾ ಕೌಶಿಕ್

ಪರಿಭ್ರಮಣ

ಶೋಭಾ ಮೂರ್ತಿ

ಅಮ್ಮಾ ನಿನ್ನ ತೋಳಿನಲ್ಲಿ

ಮಾಧವಿ ಹೆಬ್ಬಾರ್

ಪ್ಯಾರಸೈಟ್ 

ವಿಭಾ ವಿಶ್ವನಾಥ್

ಕೇಳಿಸಿತೇ ನನ್ನ ಧ್ವನಿ?

ಅಚಲಾ ಬಾಪಟ್

ಆಕ್ಸಿಡೆಂಟಲ್ ಪ್ರೇಮಕಥೆ

ಸರಯೂ ದೊಡ್ಮನೆ 

ಕ್ಷೋಭೆ 

ರೂಪಾ ರೈ

ಆಕೃತಿ

ಸಂಧ್ಯಾ ಭಟ್

ಗಗನ ಕುಸುಮವ ಅರಸಿ..

ವಿಮಲಾ ಎನ್.

ವಿಷಕನ್ಯೆ

ರತ್ನಾ ಪಟ್ವರ್ಧನ್

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ರಮಶ್ರೀ ನಾಡಿಗೇರ್

"ಮನ್ವಂತರ"

ನಂದಿನಿ

ಗೋಬ್ಳಿಮರ ಕ್ರಾಸ್ 

ವಸುಧಾ ರೋಹಿತ್

ಕಾಡದಿರು ನೀ ಹೀಗೆ ಒಲವೆ!

ಶ್ವೇತಾ

ಮೂಲ ನಕ್ಷತ್ರ 

ಸೌಮ್ಯಶಿವರಾಜು

ಕಪ್ಪು ಬಣ್ಣದವಳು... 

ಸ್ವಾತಿ ನಾಯ್ಕ ಮಂದಾರ್ತಿ

ಕಥೆಯಾದ ಕವಿತೆ!

ಶಮ್ನಾ

ಅಪಹರಣ

ಲಹರಿ

ಕಸ್ತೂರಿ ಮಹಲ್

ರವಿ ಬೂಕನಬೆಟ್ಟ

ಕುರ್ಚಿ ಕದನ 

ಪವಿತ್ರಾ ಹೆಗಡೆ

ವೂಡೂ

ವಿದ್ಯಾ "ದೀಪ್ತಿ"

ಬಾಳ ಸಂಕೋಲೆ

ವೇದಾ ಮಂಜುನಾಥ್

ರೆಸ್ಟ್ ಇನ್ ಹೆಲ್... 

ಕಸ್ತೂರಿ ಕಮರವೆ 

ಸಪ್ತಪದಿ

ವಿಜಯಾ ಭಾರತಿ

ಕಾದಿರುವೆ ನಿನಗಾಗಿ

ಲಕ್ಷ್ಮಿ ಎಸ್. ಭಟ್

ಕಾರ್ಮೋಡ ಸರಿದು....

ತಾರಾ ಸಂತೋಷ್

ಅನುರಾಗ ದ್ವಂದ್ವ

ಶ್ರವಣ್ ಪತ್ತಾರ್

ಕೊಲೆಗಾರ!

ಸುಷ್ಮಿತಾ ಕೆ. ಎನ್

ಈ ಪ್ರೀತಿ ಒಂಥರಾ...

ಅಂಬಿಕ

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ:

 

ಧಾರಾವಾಹಿಗಳ ರಚನೆ ಸೂಕ್ಷ್ಮವಾದ, ಸರಳವೆನಿಸಿದರೂ ಬಹಳ ಶ್ರಮ ಬೇಡುವ ಕಾಯಕ. ಕಥಾಹಂದರ ಆಯ್ಕೆ, ಅಚ್ಚುಕಟ್ಟು ನಿರೂಪಣೆ ಮತ್ತು ಅಧ್ಯಯನ ಬೇಡುವ ಈ ಕೌಶಲ್ಯ; ಮೌಲ್ಯಯುತ ಸಂದೇಶಗಳನ್ನು ನೀಡುತ್ತ, ಸಮಾಜದ ವಸ್ತುಸ್ಥಿತಿಯನ್ನು ತೆರೆದಿಡುತ್ತ ಓದುಗರಿಗೆ ಮನೋರಂಜನೆಯ ರಸದೌತಣ ನೀಡಬೇಕು. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಬಲ್ಲದು. 

'10 ಅಧ್ಯಾಯಗಳ ಕಥಾಸರಣಿ ಸವಾಲು' ಸ್ಪರ್ಧೆಯಲ್ಲಿ ಎಂದಿನಂತೆ ವಿವಿಧ ಕಥಾವಸ್ತು, ಕಥಾಹಂದರಗಳುಳ್ಳ ಧಾರಾವಾಹಿಗಳು ಸಲ್ಲಿಸಲ್ಪಟ್ಟಿದ್ದವು. ಭಾಗವಹಿಸಿದ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು; ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಆದರೆ ಬಹಳಷ್ಟು ಕತೆಗಳು ಸ್ಪರ್ಧೆಯ ನಿಯಮಗಳನ್ನು ಪಾಲಿಸಿರಲಿಲ್ಲ; ಹಲವು ಕತೆಗಳು ಪೂರ್ಣಗೊಂಡಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ.

ಕಥಾವಸ್ತು ವಿಭಿನ್ನವಾಗಿದ್ದರೂ ನಿರೂಪಣೆ ಹಾಗೂ ಚಿಹ್ನೆ, ವ್ಯಾಕರಣ ಬಳಕೆಯಲ್ಲಿ ಸಾಕಷ್ಟು ಸುಧಾರಣೆ ಬೇಕೆನಿಸಿತು. ಕೆಲವೊಮ್ಮೆ ಕಣ್ತಪ್ಪಿನಿಂದ ದೋಷಗಳಾಗುವುದುಂಟು, ಆದರೆ ಚಿಹ್ನೆಗಳ ಬಳಕೆಗಳಲ್ಲಿ ಸಾಕಷ್ಟು ಜಾಗೃತೆ ವಹಿಸುವುದು ಅಗತ್ಯ. ಕನಿಷ್ಠ ಹತ್ತು ಅಧ್ಯಾಯಗಳನ್ನು ಪ್ರಕಟಿಸಬೇಕು ಮತ್ತು ಪ್ರತಿ ಅಧ್ಯಾಯ ಕನಿಷ್ಠ 600 ಪದಗಳನ್ನು ಹೊಂದಿರಬೇಕು ಎಂಬ ನಿಯಮಗಳನ್ನು ಪಾಲಿಸದ ಅನೇಕ ಕತೆಗಳು ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದವು. ನಿಯಮಗಳನ್ನು ಪಾಲಿಸದ ಕೃತಿಗಳನ್ನು ಸ್ಪರ್ಧೆಯಿಂದ ಹೊರಗುಳಿಸಲಾಗಿದೆ. 

ಸಾಹಿತ್ಯ ಕ್ಷೇತ್ರದಲ್ಲಿ ಸ್ಪರ್ಧೆಗಳ ತೀರ್ಪುಗಳನ್ನು ನೀಡುವುದು ಸವಾಲಿನ ಸಂಗತಿಯೇ ಸರಿ. ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ, ಸೃಜನಶೀಲತೆ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈಗ ವಿಜೇತ ಕೃತಿಗಳ ಪಟ್ಟಿಯಲ್ಲಿ ಆಯ್ಕೆಯಾಗಿರುವ ಕೃತಿಗಳು ಮಾತ್ರ ಶ್ರೇಷ್ಠ ಕೃತಿಗಳು ಎಂದು ಅರ್ಥವಲ್ಲ! ಅಂತೆಯೇ ಗೆಲ್ಲುವುದಕ್ಕೆ ಸ್ಪರ್ಧಿಸುವುದು ಅಥವಾ ಪ್ರಯತ್ನಿಸುವುದೇ ಮೊದಲ ಮೆಟ್ಟಿಲು. ಹಾಗಾಗಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. 

ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ.

- ಪ್ರತಿಲಿಪಿ ಕನ್ನಡ