pratilipi-logo ಪ್ರತಿಲಿಪಿ
ಕನ್ನಡ

‘ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯ ‘ಪ್ರತಿಭಾವಂತ ಉದಯೋನ್ಮುಖ ಲೇಖಕ'ರಿಗೆ ಅಭಿನಂದನೆಗಳು!

09 ಏಪ್ರಿಲ್ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಪ್ರತಿಲಿಪಿಯ ಪ್ರತಿಭಾವಂತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು, ‘ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯಲ್ಲಿ ‘ಪ್ರತಿಭಾವಂತ ಉದಯೋನ್ಮುಖ ಲೇಖಕ ಪ್ರಶಸ್ತಿ’- ವಿಭಾಗವನ್ನು ಪರಿಚಯಿಸಲಾಗಿತ್ತು. ಸ್ಪರ್ಧೆಗೆ ಬರಹಗಾರರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೃತಿಯ ಮೂಲಕ ಲಕ್ಷಾಂತರ ಓದುಗರನ್ನು ತಲುಪುವ ಅವಕಾಶವನ್ನು ಈ ಎಲ್ಲಾ ಬರಹಗಾರರು ಪಡೆದುಕೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತದೆ. 

 

ಪ್ರತಿಲಿಪಿ ಆಯೋಜಿಸಿದ್ದ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯಲ್ಲಿ ಭಾಗವಹಿಸಿ 60 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ಸಹಜವಾಗಿ ಕತೆ ಬರೆಯುವಾಗ ಸಮಯದ ಮಿತಿ ಇರಲಾರದು; ಆಗ ಬರಹಗಾರರಿಗೆ ಸಮಯದ ಸ್ವಾತಂತ್ರ್ಯ ಅಧಿಕವಿರುವುದರಿಂದ ಹೆಚ್ಚು ಒತ್ತಡವಿರದಂತೆ ತಮ್ಮ ಬರವಣಿಗೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಸ್ಪರ್ಧೆ ಎಂದಾಕ್ಷಣ ಇರುವ ಮನೋಭಾವವೇ ಬೇರೆಯಾಗುತ್ತದೆ. ಕಾಲಾವಕಾಶದಿಂದ ಹಿಡಿದು ಅದಕ್ಕೆ ಓದುಗರು ಸ್ಪಂದಿಸುವ ರೀತಿಯವರೆಗೆ ಎಲ್ಲವನ್ನು ಮಸ್ತಿಷ್ಕದಲ್ಲಿಟ್ಟುಕೊಂಡು ತಮ್ಮ ಮೂಲ ಆಲೋಚನೆಗೆ ಧಕ್ಕೆ ಬರದಂತೆ ಕೃತಿಯನ್ನು ರಚಿಸುವುದು ಒಂದು ಯಜ್ಞವೆಂದೇ ಹೇಳಬಹುದು. ಹಾಗಾಗಿ ಸ್ಪರ್ಧೆಯ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು.



 ಪ್ರತಿಭಾವಂತ ಉದಯೋನ್ಮುಖ ಲೇಖಕರ ಪಟ್ಟಿ-

 

ಕ್ರ. ಸಂ.

ಕೃತಿ

ಕರ್ತೃ

1

ಜಡ್ಜ್ ಮೆಂಟ್(ಪ್ರೀತಿ ಕುರುಡಲ್ಲ.....)

ರಶ್ಮಿ ಮಂಜುನಾಥ್

2

ಒಡೆದ ಕನ್ನಡಿ

ಲತಾ ರವಿ

3

ಗಿಗೋಳೋ (ಗಂಡು ವೇಶ್ಯೆ)

ಸಂಜಯ್ ಪಾಟೀಲ್

4

ಸಿಂಹ ಪುರಿಯ ರಹಸ್ಯ

ಮಾಧವಿ ಹೆಬ್ಬಾರ್

5

ಘರ್ಷಣೆ

ರಾಘವ್ ವಿಶ್ವಾಸಿ

6

ಶ್ವೇತ ವರ್ಣ

ಕಮಲಾಕ್ಷಿ ಶೆಟ್ಟಿಗಾರ್

7

ನಿನಗಾಗಿ ನಾನಿಲ್ಲವೇ?

ನಿರ್ಮಲಾ ವಿಘ್ನೇಶ್ ಕೋಟ್ಯಾನ್

8

ನಿಗೂಢ

ಶಿಲ್ಪ ಎಸ್.

9

ಸುಗುಣ

ಸುವರ್ಣಾ ಭಟ್

10

ಮಹಿರ

ಪುಷ್ಪಲತಾ ಹರೀಶ್

11

ಸೌಪರ್ಣಿಕ

ಆದರ್ಶ ಪಟೇಲ್



ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಎಲ್ಲಾ ಲೇಖಕರಿಗೂ ಅಭಿನಂದನೆಗಳು.

 

- ಪ್ರತಿಲಿಪಿ ಕನ್ನಡ