pratilipi-logo ಪ್ರತಿಲಿಪಿ
ಕನ್ನಡ

ನದಿ..ತೀರ..

5
6

ಮನಸ್ಯಿನ ನೋವು.. ಮರೆಯಲು..ಒಂಟಿತನವೇ..ಸಾಕು.. ನಿಸರ್ಗದ ಜೋತೆಗೂಡಿದಾಗ.. ನೋವನ್ನು ಮರೆಯಲು ಸಾದ್ಯ.. ಜುಳು..ಜುಳು..ನಾದದ ಸುಂದರ ರಮಣೀಯ.. ನದಿಯ ತೀರದಿ..ಏಕಾಂಗಿ ಸಂಚಾರಿ ನಾನು.. ಅಲ್ಲಿನ ನಿಸರ್ಗ ಪಕ್ಷಿಗಳ ಕಲರವ ದೊಂದಿಗೆ.. ಕಿವಿಗೆ ...

ಓದಿರಿ
ಲೇಖಕರ ಕುರಿತು
author
Ravindrasa A Bakale

*ಪರಿಚಯ* ರವಿಂದ್ರ ಅ, ಬಾಕಳೆ ಸಾ ಕುಷ್ಟಗಿ ಜಿಕೊಪ್ಪಳ 9449688467 *ಪತ್ರಿಕಾರಂಗದ* ಸೇವೆ : 1993 ರಿಂದ ಕುಷ್ಟಗಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ನವೋದಯ ದಿನಪತ್ರಿಕೆಯ ವರದಿಗಾರನಾಗಿ ಸುಮಾರು 18 ವರ್ಷ ಸೇವೆ ಸಲ್ಲಿಸಿದ್ದೇನೆ, ಕೊಪ್ಪಳ ಜಿಲ್ಲಾ ಪತ್ರಕರ್ತರ ವೇದಿಕೆಯ ಉಪಾಧ್ಯಕ್ಷನಾಗಿ ಸೇವೆ, ತಾಲೂಕಿನ ಅಭಿವೃದ್ಧಿಪರ ಲೇಖನಗಳನ್ನು ಮತ್ತು ಎಲೆಮರೆಯ ಕಾಯಿಯಂತಿರುವ ಪ್ರತಿಭಾನ್ವಿತರನ್ನು ಗುರುತಿಸಿ ಪತ್ರಿಕೆಯ ಮೂಲಕ ಹಲವಾರು ಕಲಾವಿದರ, ಕ್ರೀಡಾಪಟುಗಳನ್ನು ಯೋಗ ಸಾಧಕರನ್ನು ಸಮಾಜಕ್ಕೆ ಪರಿಚಯಸಿದ್ದೇನೆ. ಸಹಕಾರ ರಂಗ ಕುಷ್ಟಗಿ ಪಟ್ಟಣದ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷನಾಗಿ ಸೇವೆಯನ್ನು ಸಲ್ಲಿಸಿದ್ದು, ಈ ಅವದಿಯಲ್ಲಿ “ಉತ್ತಮ ಸಹಕಾರಿ ಸಂಸ್ಥೆ ಎಂಬ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆಯಲು ಎಲ್ಲಾ ನಿರ್ದೇಶಕರ ಸಹಕಾರದಿಂದ ಸಾದ್ಯವಾಯಿತು. ಸುಮಾರು 10 ವರ್ಷಗಳ ಕಾಲ ಕುಷ್ಟಗಿ ಪಟ್ಟಣದ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಾಹಿತ್ಯಸೇವೆ: ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕಾ ಘಟಕಕ್ಕೆ 2 ಅವಧಿಗೆ ಕಾರ್ಯದರ್ಶಿಯಾಗಿ 1. ಅವಧಿಗೆ ಕ.ಸಾ.ಪ.ಕುಷ್ಟಗಿ ತಾಲೂಕು ಅಧ್ಯಕ್ಷನಾಗಿ ಸೇವೆಯನ್ನು ಸಲ್ಲಿಸಿದ್ದು ನಾಲ್ಕು ತಾಲೂಕಾ ಸಾಹಿತ್ಯ ಸಮ್ಮೇಳನಗಳನ್ನು 2. ಜಿಲ್ಲಾ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಿರ್ವಸಿದ್ದೇನೆ ಈ ಸಂದರ್ಭದಲ್ಲಿ “ *ಕಪೀಲತೀರ್ಥ* , “ *ತಾವರಕೆರೆ* ", " *ಹನಮಸಿರಿ* " ಸ್ಮರಣ ಸಂಚಿಕೆಯನ್ನು ನನ್ನ ಸಂಪಾದಕತ್ವದಲ್ಲಿ ಹಾಗೂ “ತಾಲೂಕ *ಕಲಾವಿದರ* ಪರಿಚಯ” ಪುಸ್ತಕ ಕೂಡಾ ಸಂಪಾದನೆ ಮಾಡಿ ಬಿಡುಗಡೆ ಗೊಳಿಸಿದ್ದೇನೆ. ಈ ಅವಧಿಯಲ್ಲಿ ಹೆಚ್ಚಿನ ದತ್ತಿ ನಿಧಿಗಳನ್ನು ಸಂಗ್ರಹಿಸಿದ್ದೇನೆ ವಿವಿಧ ಅಕಾಡೆಮಿಗಳಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಕವಿಗೋಷ್ಟಿಗಳನ್ನು ಎರ್ಪಡಿಸಿ ಸಾಹಿತ್ಯ ಪರಿಷತ್‌ಗೆ ಅಜೀವ ಸದಸ್ಯರನ್ನು ಹೆಚ್ಚು ಮಾಡಿದ್ದು ಕನ್ನಡ ನಾಡು, ನುಡಿಗೆ ದಕ್ಕೆ ಯಾದ ಸಂದರ್ಭದಲ್ಲಿ ಪ್ರತಿಭಟಿಸುವ ಕಾರ್ಯಕ್ರಮ ಹಾಕಿಕೊಂಡು ಕನ್ನಡಪರ ಧ್ವನಿ ಎತ್ತಿದ್ದೇನೆ ಕನ್ನಡಪರ ಚಳುವಳಿ: ಪ್ರೋ. ಚಂದ್ರಶೇಖರ ಪಾಟೀಲರವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯದ ಅಧ್ಯಕ್ಷರಾಗಿದ್ದಾಗ ನನಗೆ ಕನ್ನಡ ಜಾಗೃತಿ ಸಮಿತಿಗೆ ಸದಸ್ಯನಾಗಿ ನೇಮಕ ಮಾಡಿದ್ದು ಅವರೋಂದಿಗೆ ಸರಕಾರಿ ಕಛೇರಿಯಲ್ಲಿ ಕನ್ನಡ ಆಡಳಿತ ಭಾಷೆಯ ಕುರಿತಂತೆ ಮಾಹಿತಿ ನೀಡುವುದು ಮತ್ತು ಕಛೇರಿಯಲ್ಲಿದ್ದ “ಇಂಗ್ಲೀಷ್ ರಬ್ಬರ ಸ್ಟಾಂಪ್‌ಗಳನ್ನು ವಶಪಡಿಸಿಕೊಂಡು ಕನ್ನಡ ವಾತಾವರಣ ಸೃಷ್ಟಿಸಿ ಸಹಕರಿಸಿದ್ದೇನೆ. ಪ್ರಥಮ ಭಾಷೆ ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೆ ಇರುವ ಅಂಗಡಿ ಮುಗ್ಗಟ್ಟುಗಳ ಇಂಗ್ಲೀಷ್ ಫಲಕಕ್ಕೆ ಕಪ್ಪು ಬಣ್ಣ ಬಡಿದು ಪ್ರತಿಭಟನೆ ಮಾಡಿದ್ದೇನೆ. ಕನ್ನಡದಲ್ಲಿ ನಾಮಫಲಕ ಹಾಕಿಸುವಂತೆ ತಾಲೂಕಿನಾದ್ಯಾಂತ ಜಾಗೃತಿ ಮೂಡಿಸಿ ಆಂಗ್ಲದಲ್ಲಿದ್ದ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಪ್ರತಿಭಟಿಸಿದ್ದೇನೆ. ಹಾಗೂ ತಿರುಳ್ಗನ್ನಡ ಕ್ರಿಯಾ ಸಮಿತಿ ತಾಲೂಕಿನ ಅಧ್ಯಕ್ಷನಾಗಿ ಕನ್ನಡ ವಿರೋಧಿ ಚಟವಟಿಕೆಗಳ ವಿರುದ್ಧ ಹೋರಾಟ ರೂಪಿಸಿದ್ದೇನೆ. ಪ್ರಶಸ್ತಿ ಪುರಸ್ತಾರಗಳು, ಭಾರತದ ಸರಕಾರದ ನೆಹರು ಯುವ ಕೇಂದ್ರದ ವತಿಯಿಂದ 1993 ರಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಅಶೋಕ ದಳವಾಯವರು ಜಿಲ್ಲಾ ಯುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿಯಾಗಿದ್ದ ಶ್ರೀಮತಿ ಕುಮದಾ ನಾಯಕರವರು “ಶ್ರಮಧಾನ ಸಾರಥಿ”ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. (ರಾಯಚೂರ ಕೋಟೆಯಲ್ಲಿ ಶ್ರಮಧಾನ) ಸ್ವರ ಸಂಗೀತ ಅಕಾಡಮಿ ಹೊಸಪೇಟೆಯವರು “ಶ್ರೀ ಕೃಷ್ಣದೇವರಾಯ ಪ್ರಶಸ್ತಿ" ನೀಡಿದ್ದಾರೆ. ಕನ್ನಡ ಕಿಂಕರ ಬಿರುದನ್ನು ದೋಟಹಾಳದ ಸಂಘಟನೆಯವರು ನೀಡಿದ್ದಾರೆ. ಶ್ರೀ ಜಗದ್ಗುರು ರಂಭಾಪುರಿ ಶ್ರೀಗಳು ಬಾಳೆ ಹೊನ್ನೊರು ಸಮಾಜದ ದೇವೆಯನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಿದ್ದಾರೆ. “ಕನ್ನಡ ಬಂದು” ಪ್ರಶಸ್ತಿಯನ್ನು ನೀಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಹಾಗೂ ರಾಯಚೂರಿನಲ್ಲಿ ನಡೆದ ೮೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ್. ಪ್ರೋ ಬರುಗೂರ ರಾಮಚಂದ್ರಪ್ಪನವರಿಂದ ಸನ್ಮಾನಕ್ಕೆ ಬಾಜನನಾಗಿದ್ದೇನೆ. ಗಂಗಾವತಿ ಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸಿದ್ದೆನೆ , ಮೇರವಣಿಗೆ ಸಮಿತಿಯ ಪದಾಧಿಕಾರಿಯಾಗಿ , ಮತ್ತು ಮುಖ್ಯ ವೇದಿಕೆಯ ಕಾರ್ಯಕ್ರಮದ ನಿರೂಪಕನಾಗಿ ಕಾರ್ಯನಿರ್ವಹಿಸಿದ್ದೆನೆ , ಆನೆಗೊಂದಿ ಉತ್ಸವದಲ್ಲಿ ಕವಿ ಗೋಷ್ಟಿ ಯಲ್ಲಿ ಭಾಗವಹಿಸಿ ಕವನ ವಾಚನ ,ಅನೇಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕಾರ್ಯನಿರ್ವಹಣೆ ಮಾಡಿದ್ದೇನೆ, ಹಿರಿಯ ಪತ್ರಕರ್ತರು ಸಾಹಿತಿ ರಮೇಶ ಸುರ್ವೆ ಅವರ “ಮಂದಾಕಿನಿ” ಚಲನ ಚಿತ್ರ ವಿಮರ್ಶೆ ಮಾಡಿ ಪ್ರಶಸ್ತಿ ಪಡೆದಿದ್ದೇನೆ ಕನ್ನಡಪರ ಸಂಘಟನೆಗಳು ನನ್ನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ್ದಾರೆ ರಂಗಭೂಮಿ, ಬೀದಿನಾಟಕ, ಕಲಾವಿದರಾಗಿ ಸೇವೆ ಸಲ್ಲಿಸಿದ್ದೇನೆ. ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಹಾಗೂ ಪರಿಸರ ನೈರ್ಮಲ್ಯ ಕುರಿತು ವಿಶ್ವ ಬ್ಯಾಂಕ್‌ನ ನೆರವಿನೊಂದಿಗೆ ಕೊಪ್ಪಳ ಜಿಲ್ಲೆಯ 128 ಗ್ರಾಮಗಳಲ್ಲಿ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಬೀದಿನಾಟಕ ತಂಡವನ್ನು ಕಟ್ಟಿಕೊಂಡು ಅನೇಕ ಗ್ರಾಮಗಳಲ್ಲಿ ತಿರುಗಾಡಿ ಜಾಗೃತಿ ಮೂಡಿಸಿದ್ದೇನೆ “ಬಾಡಿದ ಕುಸುಮಗಳು” ಎಂಬ ಬಾಲಕಾರ್ಮಿಕರ ವಿರೋಧಿ ಅಂದೋಲನದ ಪ್ರಮುಖವಾಗಿಟ್ಟುಕೊಂಡು ನೂರಾರು ಪ್ರದರ್ಶನಗಳನ್ನು ನೀಡಿದ್ದೇವೆ. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ & ವಾರ್ತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯಕ್ರಮವನ್ನು ಮಾಡಿದ್ದೇನೆ. ಅನೆಗೊಂದಿ ಉತ್ಸವದಲ್ಲಿ “ಸುಗಮ ಸಂಗೀತ” ಕಾರ್ಯಕ್ರಮ, ಬೀದಿ ನಾಟಕ ಮಾಡಿದ್ದೇನೆ. ಕಲಾವಿದನಾಗಿ ಬರಹಗಾರನಾಗಿ ಗುರುತಿಸಿಕೊಂಡಿದ್ದೇನೆ ತಾಲೂಕಾ ಗೃಹರಕ್ಷಕದಳದಲ್ಲಿ ಸುಮಾರು 18 ವರ್ಷಗಳ ಕಾಲ ಘಟಕಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದು, ಪ್ರಸ್ತುತ ಸೀನಿಯರ್ ಪ್ಲಟೂನ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಅವಧಿಯಲ್ಲಿ ರೈಫಲ್ ಶೂಟಿಂಗ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದೇನೆ. ಬೆಂಗಳೂರಿನಲ್ಲಿ ನಡೆದ ಅಖಿಲಭಾರತ ಮಟ್ಟದ ಗೃಹರಕ್ಷಕದಳದ ಕ್ರೀಡಾಕೂಟದಲ್ಲಿ ಭಾಗವಹಿಸಿ"ಅಗ್ನಿಶಮನ” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ. "ನಿಕ್ಷಾಮ್" ಸ್ಮರಣಾ ಸಂಚಿಕೆಯನ್ನು ಹೊರತರುವ ಮೂಲಕ ಗೃಹರಕ್ಷಕರಿಗೆ ಇರಬೇಕಾದ ಮಾಹಿತಿ ಮತ್ತು ಕವನಗಳನ್ನು ಲೇಖನಗಳಲ್ಲಿ ಬಳಸಿಕೊಂಡಿದ್ದೇನೆ . *ಸಂಘಟನೆಯ* : ಸಾಂಸ್ಕೃತಿಕ ಕಲಾ ಕೂಟದ ಸಂಗೀತ ಶಾಲೆಯ ವ್ಯವಸ್ಥಾಪಕನಾಗಿ 15 ವರ್ಷದ ಸೇವೆ ಜನ ಜಾಗೃತಿ, ಕಲಾರಂಗದ ಸಂಸ್ಥಾಪನಾ ಅಧ್ಯಕ್ಷನಾಗಿ ಜನಪರ ಹೋರಾಟಗಳನ್ನು ಹಮ್ಮಿಕೊಂಡಿದ್ದು, ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷನಾಗಿ 371 ಜೆ ಕಲಂ ಜಾರಿಗಾಗಿ ನಿರಂತರ ಹೋರಾಟ, ಚುಟುಕು ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಸಮೀಕ್ಷಕನಾಗಿ ಕಾರ್ಯನಿರ್ವಹಿಸಿದ್ದು ಆ ಸಂದರ್ಭದಲ್ಲಿ ಹಳೆಯ ತಾಳೆ ಗರಿಯನ್ನು ತಾಡೋಲೆ ತಾವು ಪತ್ರಗಳನ್ನು ಸಂಗ್ರಹಿಸಿ ವಿಶ್ವವಿದ್ಯಾಲಯಕ್ಕೆ ನೀಡಿರುತ್ತೇನೆ. ಬಾಲವಿಕಾಸ ಅಕಾಡೆಮಿ ಸದಸ್ಯನಾಗಿ ಸೇವೆಯನ್ನು ಸಲ್ಲಿಸಿದ್ದೇನೆ, ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯನಾಗಿ ಪುರಸಭೆ ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡಿದ್ದೇನೆ ಹೀಗೆ ಅನೇಕ ಸಾಮಾಜಿಕವಾಗಿ, ಧಾರ್ಮಿಕವಾಗಿ, ಕನ್ನಡನಾ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಚನ್ನಪ್ಪ ಬದಾಮಿ "ಸುಖಜೀವಿ"
    12 ನವೆಂಬರ್ 2023
    ಸುಂದರ ಭಾವದ ಸಾಲುಗಳು. ಸೂಪರ್ 👌👌👌💐🌷🌷🌹🙏
  • author
    Vinay Adi
    13 ನವೆಂಬರ್ 2023
    👌
  • author
    Vidya Bhavani "ವಿದ್ಯಾ ಉದಯ್"
    12 ನವೆಂಬರ್ 2023
    👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಚನ್ನಪ್ಪ ಬದಾಮಿ "ಸುಖಜೀವಿ"
    12 ನವೆಂಬರ್ 2023
    ಸುಂದರ ಭಾವದ ಸಾಲುಗಳು. ಸೂಪರ್ 👌👌👌💐🌷🌷🌹🙏
  • author
    Vinay Adi
    13 ನವೆಂಬರ್ 2023
    👌
  • author
    Vidya Bhavani "ವಿದ್ಯಾ ಉದಯ್"
    12 ನವೆಂಬರ್ 2023
    👌👌👌👌👌👌