ಪ್ರತಿಲಿಪಿ ಈಗ ಗೂಗಲ್ ಸ್ಮಾರ್ಟ್ ಲಾಕ್ ಸೌಲಭ್ಯವನ್ನು ಬಳಸಲು ಸಹಕರಿಸುತ್ತದೆ. ಹಲವು ಸಾಧನಗಳಲ್ಲಿ ನಿಮ್ಮ ಪಾಸ್‌ವರ್ಡ್ ಮಾಹಿತಿಯನ್ನು ಉಳಿಸಲು ಗೂಗಲ್ ಸ್ಮಾರ್ಟ್ ಲಾಕ್ ಅಪ್ಲಿಕೇಶನ್‌ಗಳೊಂದಿಗೆ ಸಂಯೋಜಿತಗೊಂಡಿದೆ.
ನಿಮ್ಮ ಮೊಬೈಲ್/ಸಾಧನದಲ್ಲಿ ನೀವು ಈಗಾಗಲೇ ಸ್ಮಾರ್ಟ್ ಲಾಕ್'ಅನ್ನು ಸಕ್ರಿಯಗೊಳಿಸಿದ್ದರೆ, ಅಪ್ಲಿಕೇಶನ್, ವೆಬ್ ಮೂಲಕ ಪ್ರತಿಲಿಪಿಗೆ ಲಾಗ್ ಇನ್ ಮಾಡುವಾಗ ನಿಮ್ಮ ಲಾಗಿನ್ ಮಾಹಿತಿಯನ್ನು ಉಳಿಸಲು ನೀವು ಬಯಸುತ್ತೀರಾ? ಎಂದು ನಿಮ್ಮನ್ನು ಕೇಳಲಾಗುತ್ತದೆ.
ನೀವು ಆಕಸ್ಮಿಕವಾಗಿ ನಿಮ್ಮ ಪಾಸ್‌ವರ್ಡ್'ಅನ್ನು ಉಳಿಸಿದ್ದರೆ ಮತ್ತು ಅದನ್ನು ತೆಗೆದುಹಾಕಲು ಬಯಸಿದರೆ, ನಿಮ್ಮ ಗೂಗಲ್ ಪಾಸ್‌ವರ್ಡ್'ಗಳ ಪಟ್ಟಿಯಿಂದ ನೀವು ತೆಗೆದುಹಾಕಬೇಕಾಗುತ್ತದೆ.
ನೀವು ಈ ಮೊದಲು ಸ್ಮಾರ್ಟ್ ಲಾಕ್'ಅನ್ನು ಸಕ್ರಿಯಗೊಳಿಸಿಲ್ಲ ಆದರೆ ಈಗ ಬಳಸಲು ಬಯಸಿದರೆ, ನೀವು ಗೂಗಲ್ ಹೆಲ್ಪ್ ಸೆಂಟರ್'ನಲ್ಲಿ ವಿವರಿಸಿರುವ ಹಂತಗಳನ್ನು ಅನುಸರಿಸಬಹುದು.