ನನ್ನ ಪ್ರತಿಲಿಪಿ ಖಾತೆಗೆ ನಾನು ಇಮೇಲ್ ಅನ್ನು ಹೇಗೆ ಸೇರಿಸುವುದು?

ನೀವು ಗೂಗಲ್ ಖಾತೆಯನ್ನು ಬಳಸಿಕೊಂಡು ಪ್ರತಿಲಿಪಿ ಖಾತೆಯನ್ನು ರಚಿಸಿದಾಗ, ನಿಮ್ಮ ಪ್ರತಿಲಿಪಿ ಖಾತೆಗೆ ಜಿಮೇಲ್ ಐಡಿಯನ್ನು ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ.

 

ಆದರೆ ನೀವು ಫೇಸ್‌ಬುಕ್ ಖಾತೆಯ ಮೂಲಕ ಸೈನ್ ಇನ್ ಮಾಡಿದ್ದಲ್ಲಿ, ನಿಮ್ಮ ಪ್ರತಿಲಿಪಿ ಖಾತೆಗೆ ಯಾವುದೇ ಇಮೇಲ್ ಐಡಿಗಳನ್ನು ಸೇರಿಸಲಾಗುವುದಿಲ್ಲ.

 

ನಿಮ್ಮ ಪ್ರತಿಲಿಪಿ ಖಾತೆಯನ್ನು ತೆರೆಯಲು ಈಮೇಲ್ ವಿಳಾಸ ಬಳಸಲು ನಾವು ಸಲಹೆ ನೀಡುತ್ತೇವೆ. ಇದರಿಂದ ನಿಮಗೆ ಕೆಳಗಿನ ವಿಷಯಗಳಿಗೆ ಸಹಕಾರಿಯಾಗಿದೆ:

 

  • ಪ್ರತಿಲಿಪಿಯಿಂದ ನಿಯಮಿತ ಈಮೇಲ್ ಪಡೆಯುವುದು

  • ಪ್ರತಿಲಿಪಿಯೊಂದಿಗೆ ಉತ್ತಮ ಸಂವಹನ

  • ಪ್ರತಿಲಿಪಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು

  • ಕಳೆದುಹೋದ ಖಾತೆಗಳು/ಬರಹಗಳನ್ನು ಹಿಂಪಡೆಯಬಹುದು

 

ಇಮೇಲ್ ಸೇರಿಸುವುದು ಹೇಗೆ?

  1. ನಿಮ್ಮ ಪ್ರೊಫೈಲ್‌ಗೆ ಹೋಗಿ

  2. ನಿಮ್ಮ ಪ್ರೊಫೈಲ್ ಎಡ ಮೇಲ್ಭಾಗದಲ್ಲಿರುವ ಸೆಟ್ಟಿಂಗ್‌ ಮೇಲೆ ಕ್ಲಿಕ್ ಮಾಡಿ

  3. ಖಾತೆಯನ್ನು ಆಯ್ಕೆಮಾಡಿ

  4. ಇಮೇಲ್ ಸೇರಿಸಿ ಮೇಲೆ ಕ್ಲಿಕ್ ಮಾಡಿ

 

ಹೊಸದಾಗಿ ಸೇರಿಸಲಾಗುವ ಇಮೇಲ್‌'ಅನ್ನು ಪರಿಶೀಲಿಸಲು ಲಿಂಕ್'ಅನ್ನು ಕಳುಹಿಸಲಾಗುತ್ತದೆ. ಪರಿಶೀಲನೆಯ ನಂತರ, ಈಮೇಲ್ ಐಡಿಯನ್ನು ನಿಮ್ಮ ಪ್ರತಿಲಿಪಿ ಖಾತೆಗೆ ಲಗತ್ತಿಸಲಾಗುತ್ತದೆ. ಕೆಲವೊಮ್ಮೆ, ಸರ್ವರ್‌ಗಳು ಕಾರ್ಯನಿರತವಾಗಿರುವುದರಿಂದ ಅಥವಾ ನೆಟ್‌ವರ್ಕ್ ಸಮಸ್ಯೆಗಳಿಂದ ಪರಿಶೀಲನಾ ಲಿಂಕ್‌ ತಲುಪಲು 24 ಗಂಟೆ ತೆಗೆದುಕೊಳ್ಳಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?