ಪ್ರತಿಲಿಪಿಯಲ್ಲಿ ನನ್ನ ಖಾತೆಯನ್ನು ಹೇಗೆ ತೆರೆಯಬೇಕು?

ಪ್ರತಿಲಿಪಿ ಕುಟುಂಬಕ್ಕೆ ಸೇರಲು ಸಿದ್ಧರಿದ್ದೀರಾ?

 

ಪ್ರತಿಲಿಪಿಯಲ್ಲಿ ನಿಮ್ಮ ಖಾತೆಯನ್ನು ತೆರೆಯಲು ಎರಡು ಮಾರ್ಗಗಳಿವೆ:

 

ಮೊಬೈಲ್'ನಲ್ಲಿ ಆಂಡ್ರಾಯ್ಡ್ ಅಥವಾ ಐಓಎಸ್ ಮೂಲಕ ಖಾತೆ ತೆರೆಯಲು ಇಚ್ಛಿಸಿದಲ್ಲಿ, ಗೂಗಲ್ ಪ್ಲೇ ಸ್ಟೋರ್‌ ಅಥವಾ ಆಪಲ್ ಸ್ಟೋರ್'ನ ಮೂಲಕ ಪ್ರತಿಲಿಪಿ ಅಪ್ಲಿಕೇಶನ್'ಅನ್ನು ಡೌನ್ಲೋಡ್ ಮಾಡಿಕೊಂಡು ಸೈನ್ ಇನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಯನ್ನು ತೆರೆಯಿರಿ.

 

ಕಂಪ್ಯೂಟರ್ ಬಳಕೆದಾರರಾಗಿದ್ದರೆ, www.pratilipi.comಗೆ ಹೋಗಿ, ನಿಮ್ಮಿಷ್ಟದ ಭಾಷೆಯನ್ನು ಆಯ್ಕೆ ಮಾಡಿ, ಬಲ ಮೇಲ್ಭಾಗದಲ್ಲಿ ಕಾಣಿಸುವ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ತೆರೆಯಿರಿ.(www.kannada.pratilipi.com ವೆಬ್ಸೈಟ್'ಗೆ ಹೋಗಿ ಬಲ ಮೇಲ್ಭಾಗದಲ್ಲಿ ಕಾಣಿಸುವ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ತೆರೆಯಿರಿ)

 

ಖಾತೆಯನ್ನು ತೆರೆಯಲು ನೀವು ನಿಮ್ಮ ಫೇಸ್ಬುಕ್ ಅಥವಾ ಗೂಗಲ್ ಖಾತೆಯನ್ನು ಬಳಸಬಹುದು. ನಿಮ್ಮ ವ್ಯವಹಾರ ಸಂಬಂಧಿತ ಈಮೇಲ್ ಮೂಲಕ ಖಾತೆ ತೆರೆದರೆ ನೀವು ಆ ಈಮೇಲ್ ಖಾತೆಯಿಂದ ಲಾಗೌಟ್ ಆದರೆ ಪ್ರತಿಲಿಪಿಯ ಖಾತೆಯೂ ತೆರೆಯಲಾರದು. ಅದಕ್ಕಾಗಿ ನಿಮ್ಮದೇ ಸ್ವಂತ ಈಮೇಲ್ ಮುಖಾಂತರ ಖಾತೆಯನ್ನು ತೆರೆಯಲು ನಾವು ಸಲಹೆ ನೀಡುತ್ತೇವೆ.

 

ನೀವು ಬರಹಗಾರ/ಓದುಗ ಯಾವುದೇ ಉದ್ದೇಶಕ್ಕಾಗಿ ಪ್ರತಿಲಿಪಿ ಖಾತೆಯನ್ನು ತೆರೆಯುವಾಗಲೂ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಒಮ್ಮೆ ಖಾತೆ ತೆರೆದ ಮೇಲೆ ಓದುಗ ಅಥವಾ ಬರಹಗಾರ ಅಥವಾ ಎರಡೂ ಉದ್ದೇಶಕ್ಕಾಗಿ ಪ್ರತಿಲಿಪಿಯ ಹಲವು ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಖಾತೆ ತೆರೆಯುವಾಗ ನೀವು ನೀಡುವ ನಿಮ್ಮಿಷ್ಟದ ಪ್ರಭೇದಗಳ ಮೇಲೆ ನಾವು ನಿಮಗೆ ಹೆಚ್ಚು ಕಥೆಗಳನ್ನು ತಲುಪಿಸುತ್ತೇವೆ. ಹೋಂ ಪೇಜ್'ನ ಶಿಫಾರಸ್ಸುಗಳು ನೀವು ಓದುವ ಪ್ರಭೇದಗಳ ಮೇಲೆ ಅವಲಂಬಿತವಾಗಿರುತ್ತವೆ. ಒಟ್ಟಾರೆ ನೀವು ಇಷ್ಟಪಡುವ ಪ್ರಭೇದಗಳ ಮೇಲೆ ಹೆಚ್ಚೆಚ್ಚು ಕಥೆಗಳನ್ನು ತಲುಪಿಸಲಾಗುತ್ತದೆ.

 

ಖಾತೆ ತೆರೆದ ಮೇಲೆ ನೀವು ಕೆಲವು ಮೂಲಭೂತ ವಿವರಗಳಾದ ನಿಮ್ಮ ಹೆಸರು, ಕಾವ್ಯನಾಮ, ಹುಟ್ಟಿದ ದಿನಾಂಕ, ನಿಮ್ಮ ಕುರಿತು ಹೆಚ್ಚಿನ ವಿವರ, ಲಿಂಗ ಮುಂತಾದವುಗಳನ್ನು ನೀಡಬಹುದು, ಆದರೆ ಈ ಎಲ್ಲಾ ವಿವರಗಳೂ ಬಳಕೆದಾರರಿಗೆ ತಲುಪುವುದಿಲ್ಲ. ಉಳಿದ ಬಳಕೆದಾರರು ನಿಮ್ಮ ಯಾವ ವಿವರಗಳನ್ನು ನೋಡಬಹುದು ಎಂದು ತಿಳಿದುಕೊಳ್ಳಲು ಅಕೌಂಟ್ ಪ್ರೈವೆಸಿಯನ್ನು ಪರಿಶೀಲಿಸಬಹುದು.

 

ಈ ಎಲ್ಲಾ ವಿವರಗಳನ್ನು ನೀಡಿದ ಬಳಿಕ ನಾವು ನಿಮ್ಮ ಈಮೇಲ್ ವಿಳಾಸವನ್ನು ಪರಿಶೀಲಿಸಲು ಹೇಳುತ್ತೇವೆ. ನೀವು ಲಾಗಿನ್ ಆದ ಈಮೇಲ್ ವಿಳಾಸದ ಮೂಲಕ ನಾವು ನಿಮ್ಮನ್ನು ಯಾವುದೇ ಸಂವಹನಕ್ಕಾಗಿ ಸಂಪರ್ಕಿಸುತ್ತೇವೆ. ನೀವು ಪ್ರತಿಲಿಪಿಯಲ್ಲಿ ಯಾವುದಾದರೂ ಸಮಸ್ಯೆ ಎದುರಿಸಿದರೆ, ನಿಮ್ಮ ಪಾಸ್ವರ್ಡ್ ರೀಸೆಟ್ ಮಾಡಲು ಮುಂತಾದವುಗಳಿಗೆ ಈಮೇಲ್ ಸಹಕಾರಿಯಾಗಿದೆ. ಈಮೇಲ್ ಪರಿಶೀಲನೆ ಮಾಡುವುದು ತುಂಬಾ ಸುಲಭ ಮತ್ತು ತ್ವರಿತ ಪ್ರಕ್ರಿಯೆಯಾಗಿದೆ.

 

ಒಮ್ಮೆ ನಿಮ್ಮ ಖಾತೆ ತೆರೆದರೆ ನೀವು ಪ್ರತಿಲಿಪಿಯಲ್ಲಿ:

 

ನಿಮ್ಮಿಷ್ಟದ ಸಾಹಿತಿಗಳನ್ನು ಹಿಂಬಾಲಿಸಬಹುದು

ನಿಮ್ಮಿಷ್ಟದ ಸಾಹಿತಿಗಳಿಗೆ ಸಂದೇಶ ಕಳುಹಿಸಬಹುದು

ಕತೆಯನ್ನು ಪ್ರಕಟಿಸಬಹುದು

ಯಾವುದೇ ಕತೆಗೆ ರೇಟಿಂಗ್ ಕೊಟ್ಟು ವಿಮರ್ಶೆ ಬರೆಯಬಹುದು

ಪ್ರತಿಲಿಪಿ ಕಡೆಯಿಂದ ಈಮೇಲ್ ನೋಟಿಫಿಕೇಷನ್'ಗಳನ್ನು ಪಡೆಯಬಹುದು

 

ನೀವು ಈಗ ಪ್ರತಿಲಿಪಿಯಲ್ಲಿ ಓದಲು, ಬರೆಯಲು ಮತ್ತು ಇತರ ಬಳಕೆದಾರರೊಂದಿಗೆ ಸಂಪರ್ಕ ಹೊಂದಲು ಸಿದ್ಧರಾಗಿರುವಿರಿ. ನಮ್ಮ ನಿಯಮಗಳನ್ನು ಪರಿಶೀಲಿಸಲು ಮರೆಯದಿರಿ. ಪ್ರತಿಲಿಪಿಯ ಎಲ್ಲಾ ಬಳಕೆದಾರರೂ ನಮ್ಮ ನೀತಿ ಸಂಹಿತೆ ಮತ್ತು ನಿಯಮಗಳಿಗೆ ಬದ್ಧರಾಗಿರಬೇಕೆಂದು ನಾವು ನಿರೀಕ್ಷಿಸುತ್ತೇವೆ.

 

ಪ್ರತಿಲಿಪಿ ಬಳಗಕ್ಕೆ ಸ್ವಾಗತ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?