ಪ್ರತಿಲಿಪಿ ಒಳಗೆ ನನ್ನ ವೈಯಕ್ತಿಕ ಮಾಹಿತಿಯನ್ನು ಹೇಗೆ ಕಾಪಾಡುವುದು?

ಇಂಟರ್ನೆಟ್ ಸುರಕ್ಷತೆಯು ಒಂದು ಪ್ರಮುಖ ಆದ್ಯತೆಯಾಗಿದೆ ಮತ್ತು ಪ್ರತಿಯೊಬ್ಬರೂ ಪ್ರತಿಲಿಪಿಯನ್ನು ಬಳಸುವಾಗ ಸುರಕ್ಷಿತ ಭಾವನೆಯನ್ನು ಅನುಭವಿಸಬೇಕೆಂದು ನಾವು ಬಯಸುತ್ತೇವೆ. ಅಂತರ್ಜಾಲದಲ್ಲಿ ಅನಾಮಧೇಯರಾಗಿ ಉಳಿಯಲು ಬಯಸುವವರಿಗೆ ಗೌಪ್ಯತೆ ಮುಖ್ಯವಾಗಿದೆ ಮತ್ತು ಯಾವುದೇ ಪ್ರತಿಲಿಪಿ ಬಳಕೆದಾರರು ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯವಿಲ್ಲ. ನಿಮ್ಮ ಪ್ರೊಫೈಲ್ ಅಥವಾ ಕತೆಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಬರೆಯಬೇಡಿ.

 

ನಿಮ್ಮ ಆಧಾರ್ ಸಂಖ್ಯೆಯಂತಹ ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಪ್ರತಿಲಿಪಿ ತನ್ನ ಬಳಕೆದಾರರನ್ನು ಎಂದಿಗೂ ಕೇಳುವುದಿಲ್ಲ; ಅಥವಾ ಈ ರೀತಿಯ ಮಾಹಿತಿಯನ್ನು ವಿನಂತಿಸಿ ಪ್ರತಿಲಿಪಿ ಅಥವಾ ಯಾವುದೇ ಇತರ ಪ್ಲಾಟ್‌ಫಾರ್ಮ್‌ನಲ್ಲಿ ಖಾಸಗಿ ಸಂದೇಶಗಳನ್ನು ಕಳುಹಿಸುವುದಿಲ್ಲ. ಪ್ರತಿಲಿಪಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನ ಹೊರಗೆ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಬಳಕೆದಾರರನ್ನು ವಿನಂತಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನದಲ್ಲಿಡಿ. ಪ್ರತಿಲಿಪಿಯ ಕೆಲವು ಸೇವೆ ಅಥವಾ ಸೌಲಭ್ಯಗಳನ್ನು ಹೊಂದಲು ಬಳಕೆದಾರರು ಇಚ್ಛಿಸಿ, ವಿನಂತಿಸಿದಾಗ ಮಾತ್ರ ಅದಕ್ಕೆ ಸಂಬಂಧಿಸಿದಂತೆ ಹಣ ಪಾವತಿ ಮಾಡುವ ವಿವರಗಳನ್ನು ನಾವು ಕೇಳುತ್ತೇವೆ.

 

ಪ್ರತಿಲಿಪಿಯೊಂದಿಗೆ ಸಂಯೋಜಿತವಾಗಿದೆ ಎಂದು ಹೇಳಿಕೊಳ್ಳುವ ಸೈಟ್‌ಗಳ ಬಗ್ಗೆ ದಯವಿಟ್ಟು ತಿಳಿದಿರಲಿ. ಆ ರೀತಿಯ ಯಾವುದೇ ಸೈಟ್'ಗಳ ಜೊತೆ ಪ್ರತಿಲಿಪಿ ಸಂಯೋಜಿತವಾಗಿಲ್ಲ. ಈ ಕುರಿತು ಯಾವುದೇ ಸಂದೇಹವಿದ್ದಲ್ಲಿ ಸಹಾಯಕ್ಕಾಗಿ ನಮ್ಮ ತಂಡವನ್ನು ನೇರವಾಗಿ ಸಂಪರ್ಕಿಸಿ.

 

ಇತರ ಸಲಹೆಗಳು:

 

  1. ವೈಯಕ್ತಿಕ ಮಾಹಿತಿಯನ್ನು ವಿನಂತಿಸುವ ಯಾವುದೇ ಪ್ರತಿಲಿಪಿ ಬಳಕೆದಾರರನ್ನು ನೀವು ಬ್ಲಾಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಬಳಕೆದಾರರನ್ನು ಬ್ಲಾಕ್ ಮಾಡುವ ಮಾರ್ಗದರ್ಶಿಗೆ ಭೇಟಿ ನೀಡಿ.

 

  1. ನಿಮ್ಮ ಖಾತೆಯ ಪಾಸ್‌ವರ್ಡ್'ಅನ್ನು ಯಾರಿಗೂ ನೀಡಬೇಡಿ. ನಿಮ್ಮ ಖಾತೆಗೆ ತೊಂದರೆಯಾಗಿದೆ ಎಂದು ನೀವು ಭಾವಿಸಿದರೆ, ಸಹಾಯಕ್ಕಾಗಿ ಮನವಿ ಸಲ್ಲಿಸಿ. ದಯವಿಟ್ಟು ಸಾಧ್ಯವಾದಷ್ಟು ವಿವರಗಳೊಂದಿಗೆ ಸಮಸ್ಯೆಯನ್ನು ವಿವರಿಸಿ. ನಮ್ಮ ಸಿಬ್ಬಂದಿಯೊಬ್ಬರು ನಿಮ್ಮ ಸಮಸ್ಯೆಯನ್ನು ಪರಿಶೀಲಿಸುತ್ತಾರೆ ಮತ್ತು ನಿಮಗೆ ನೇರವಾಗಿ ಸಹಾಯ ಮಾಡುತ್ತಾರೆ.

 

  1. ನಿಮ್ಮ ಒಪ್ಪಿಗೆಯಿಲ್ಲದೆ ಯಾರಾದರೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಿಡುಗಡೆ ಮಾಡಿದರೆ, ಅದನ್ನು ತೆಗೆದುಹಾಕಲು ಅವರನ್ನು ಸಂಪರ್ಕಿಸಿ. ನಿಮಗೆ ಹೆಚ್ಚಿನ ಸಹಾಯ ಬೇಕಾದಲ್ಲಿ, ಆ ಬಳಕೆದಾರರನ್ನು ರಿಪೋರ್ಟ್ ಮಾಡಿ ಮತ್ತು ಆ ಬರಹದ ಲಿಂಕ್'ಅನ್ನು ನಮಗೆ ಕಳುಹಿಸಿ.

 

ವೈಯಕ್ತಿಕ ಮಾಹಿತಿಗೆ ಉದಾಹರಣೆಗಳು: ಮೊಬೈಲ್ ಸಂಖ್ಯೆ, ವಿಳಾಸ/ಸ್ಥಳ, ಚಿತ್ರ ಮತ್ತು ಯಾವುದೇ ಇತರ ವೈಯಕ್ತಿಕ ಗುರುತಿಸುವಿಕೆಗಳು.

 

ದಯವಿಟ್ಟು ಗಮನಿಸಿ, ಕಥೆಗಳಲ್ಲಿ ಕಾಲ್ಪನಿಕ ಸ್ವರೂಪ ಮತ್ತು ನೈಜ ಹೆಸರುಗಳು ಕಾಕತಾಳೀಯವಾಗಿ ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಭಗಳಲ್ಲಿ ಆ ಕೃತಿಗಳನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಕಥೆಗಳು ಸಾಮಾನ್ಯವಾಗಿ ನೈಜ ಘಟನೆಗಳಿಂದ ಸ್ಫೂರ್ತಿಗೊಂಡಿರಬಹುದು. ನೈಜ ಘಟನೆಗಳಿಗೆ ಹೋಲುವ ಸನ್ನಿವೇಶಗಳನ್ನು ಹೊಂದಿರುವ ಕಥೆಯನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?