ಪರಿಚಯ

ನಸದಿಯಾ ಟೆಕ್ನಾಲಜೀಸ್‌ ಪ್ರೈ ಲಿ (“ಕಂಪನಿ”), ಪ್ರತಿಲಿಪಿ ವೆಬ್‌ಸೈಟ್‌ (www.pratilipi.com) (“ವೆಬ್‌ಸೈಟ್‌”) ಮತ್ತು ಆಂಡ್ರಾಯ್ಡ್‌ ಮತ್ತು ಐ ಸ್ಟೋರ್ನಲ್ಲಿರುವ ಪ್ರತಿಲಿಪಿ ಅಪ್ಲಿಕೇಶನ್‌ (“ಅಪ್ಲಿಕೇಶನ್”) ಅನ್ನು ಯಾವುದೇ ವ್ಯಕ್ತಿಯು (“ಬಳಕೆದಾರರು”/”ನೀವು”/”ನಿಮ್ಮ”) ಬಳಸುವುದು ಬಳಕೆ ನೀತಿಗೆ ಒಳಪಡುತ್ತದೆ.  ವಿವಿಧ ಭಾಷೆಗಳಲ್ಲಿ ಪುಸ್ತಕಗಳು, ಕವನಗಳು, ಲೇಖನಗಳು ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನು ಓದಲು ಮತ್ತು/ಅಥವಾ ಚಿತ್ರಗಳು ಮತ್ತು ಆಡಿಯೋವನ್ನು ಅಪ್‌ಲೋಡ್‌ ಮಾಡಲು (“ಪ್ರಕಟಿತ ಕೆಲಸ”) ಮತ್ತು ಅಂತಹ ಸಾಹಿತ್ಯಿಕ ಕೆಲಸಗಳ ಬಗ್ಗೆ ಕಾಮೆಂಟ್‌ಗಳು, ವಿಮರ್ಶೆಗಳನ್ನು ಅಪ್‌ಲೋಡ್‌ ಮಾಡಲು ಅಥವಾ ಕಂಪನಿ ಮತ್ತು/ಅಥವಾ ಇತರ ಬಳಕೆದಾರರೊಂದಿಗೆ ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ (“ಸೇವೆಗಳು”) ಚಾಟ್‌ಗಳ ಮೂಲಕ (“ಇನ್‌ಪುಟ್‌ಗಳು”) ಸಂವಹನ ನಡೆಸಲು ಕಂಪನಿಯು ಅನುಕೂಲ ಒದಗಿಸುತ್ತದೆ.

ವೆಬ್‌ಸೈಟ್‌/ಅಪ್ಲಿಕೇಶನ್‌ ಮೂಲಕ ಬ್ರೌಸ್‌ ಮಾಡುವುದು ಮತ್ತು ಸೇವೆಯನ್ನು ಪಡೆಯುವ ಮೂಲಕ ಗೌಪ್ಯತೆ ನೀತಿಯೊಂದಿಗೆ ಓದಲಾಗುವ ಬಳಕೆ ನೀತಿಗೆ ಬದ್ಧವಾಗಲು ನೀವು ಸಮ್ಮತಿಸುತ್ತೀರಿ ಮತ್ತು ನೀವು 18 ವರ್ಷ ಪೂರೈಸಿದ್ದೀರಿ ಮತ್ತು/ಅಥವಾ ಕಂಪನಿಯೊಂದಿಗೆ ಒಪ್ಪಂದಕ್ಕೆ ಒಳಪಡಲು ಅಧಿಕಾರ ಹೊಂದಿದ್ದೀರಿ ಎಂದು ಪ್ರತಿನಿಧಿಸುತ್ತೀರಿ. ನೀವು 18 ವರ್ಷಕ್ಕಿಂತ ಕಡಿಮೆಯವರಾಗಿದ್ದರೆ, ಈ ಬಳಕೆಯ ನೀತಿಗೆ ನಿಮ್ಮ ಸಮ್ಮತಿ ಮತ್ತು ಬದ್ಧತೆಗೆ ಜವಾಬ್ದಾರರಾಗಿರುವ ನಿಮ್ಮ ಪಾಲಕ(ರು) ಅಥವಾ ಕಾನೂನಾತ್ಮಕ ಪೋಷಕ(ರು) ಇಂದ ಸಮ್ಮತಿಯನ್ನು ನೀವು ಪಡೆಯಬೇಕು.  ನಿಮ್ಮ ಪಾಲಕ(ರು) ಅಥವಾ ಕಾನೂನಾತ್ಮಕ ಪೋಷಕ(ರು) ಇಂದ ನೀವು ಸಮ್ಮತಿಯನ್ನು ಹೊಂದಿಲ್ಲದಿದ್ದರೆ, ವೆಬ್‌ಸೈಟ್‌/ಅಪ್ಲಿಕೇಶನ್ ಅನ್ನು ಬಳಸುವುದು/ಪ್ರವೇಶಿಸುವುದನ್ನು ನಿಲ್ಲಿಸಬೇಕು.

ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ಅಡಿಯಲ್ಲಿನ ನಿಯಮಗಳ ಅಡಿಯಲ್ಲಿ ಎಲೆಕ್ಟ್ರಾನಿಕ್‌ ದಾಖಲೆಯಾಗಿದೆ. ಹೀಗಾಗಿ, ಬಳಕೆದಾರರು ಬದ್ಧವಾಗಬೇಕಿರುವ ಬಳಕೆಯ ನೀತಿಗೆ ಸಹಿ ಅಗತ್ಯವಿರುವುದಿಲ್ಲ. ಈ ಬಳಕೆ ನೀತಿ ಮತ್ತು ಗೌಪ್ಯತೆ ನೀತಿಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು) ಕಾಯ್ದೆ 2011 ನಿಯಮ 3 (1) ಅಡಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ.

ಬಳಕೆಯ ನಿಯಮಗಳು 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?