ಖಾಸಗಿತನ

ಯಾವುದೇ ವ್ಯಕ್ತಿಯ ಸಮ್ಮತಿಯಿಲ್ಲದೆ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವ ಕೃತಿಗಳು/ ಬರಹಗಳಲ್ಲಿನ ಯಾವುದೇ ವಿಷಯವನ್ನು ನಾವು ಸಹಿಸುವುದಿಲ್ಲ. 

ನಿರ್ದಿಷ್ಟವಾಗಿ:

  1. ಒಬ್ಬ ವ್ಯಕ್ತಿಯ ಅನುಮತಿಯಿಲ್ಲದೆ ಆ ವ್ಯಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವ ಮಾಹಿತಿಯನ್ನು ಪ್ರಕಟಿಸುವಂತಿಲ್ಲ. 

  2. ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡುವಾಗ ಉಚಿತವಾಗಿ ಲಭ್ಯವಿರುವ ಮಾಹಿತಿ ಅಥವಾ ಕಾನೂನುಬದ್ಧವಾಗಿರುವ ಮಾಹಿತಿಗೆ ಮಾತ್ರ ಸೀಮಿತವಾಗಿರಬೇಕು.

  3. ಪೂರ್ವಾನುಮತಿಯಿಲ್ಲದೆ ಯಾರೊಬ್ಬರ ವೈಯಕ್ತಿಕ ಮಾಹಿತಿ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಪ್ರಕಟಿಸುವಂತಿಲ್ಲ. ವೈಯಕ್ತಿಕ ಮಾಹಿತಿ ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿ ಅಥವಾ ಡೇಟಾವು ಛಾಯಾಚಿತ್ರಗಳು, ಇಮೇಲ್ ಮೂಲಕ ವೈಯಕ್ತಿಕ ಸಂವಹನ, ಚಾಟ್ ಅಥವಾ ಯಾವುದೇ ಇತರ ರೂಪ, ವಸತಿ ವಿಳಾಸ, ಬ್ಯಾಂಕ್ ಖಾತೆ ವಿವರಗಳು, ಲೈಂಗಿಕ ದೃಷ್ಟಿಕೋನ, ಲಿಂಗ ಗುರುತಿಸುವಿಕೆ, ಸರ್ಕಾರ ನೀಡಿದ ಗುರುತಿನ ಅಥವಾ ಇತರ ದಾಖಲೆಗಳನ್ನು, IP ವಿಳಾಸಗಳು, ಅಥವಾ ಸಾರ್ವಜನಿಕರಿಗೆ ತಿಳಿದಿಲ್ಲದ ಯಾವುದೇ ವಿವರಗಳನ್ನು ಪ್ರಕಟಿಸುವಂತಿಲ್ಲ.

  4. ಕಾನೂನುಬಾಹಿರ ಕೃತ್ಯಗಳ(ಹ್ಯಾಕಿಂಗ್ ಸೇರಿದಂತೆ ಆದರೆ ಅದರ ಹೊರತಾಗಿಯೂ) ಪರಿಣಾಮವಾಗಿ ಸ್ವೀಕರಿಸಿದ/ಪಡೆದ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.

  5. ಯಾರೊಬ್ಬರ ಆಫ್‌ಲೈನ್ ಗುರುತನ್ನು ಬಹಿರಂಗಪಡಿಸುವ ಅಥವಾ ವ್ಯಕ್ತಿಯ ಆಫ್‌ಲೈನ್ ಗುರುತನ್ನು ಅವರ ಆನ್‌ಲೈನ್ ಗುರುತಿಗೆ ಹೊಂದಿಸುವ ಅಥವಾ ಡಾಕ್ಸಿಂಗ್ ಎಂದು ವರ್ಗೀಕರಿಸಬಹುದಾದ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.

  6. ನಮ್ಮ ಯಾವುದೇ ಸೇವೆಗಳು ಅಥವಾ ಸೌಲಭ್ಯಗಳನ್ನು ವ್ಯಕ್ತಿಗಳ/ಗುಂಪಿನ ಗೌಪ್ಯತೆಯನ್ನು ಬಹಿರಂಗ ಪಡಿಸಲು; ಅಥವಾ ಅಂಥವುಗಳಿಗೆ ಪ್ರೋತ್ಸಾಹ ಅಥವಾ ಪ್ರಚೋದನೆ ನೀಡಲು ಅಥವಾ ಗೌಪ್ಯತೆಯ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಕಾರಣಕ್ಕೆ ಬಳಸಿಕೊಳ್ಳುವಂತಿಲ್ಲ. 

  7. ಯಾವುದೇ ಸಂಸ್ಥೆಯ ಕಾರ್ಪೊರೇಟ್, ವ್ಯಾಪಾರ ರಹಸ್ಯಗಳು, ತಾಂತ್ರಿಕ ಮಾಹಿತಿ ಅಥವಾ ಯಾವುದೇ ಹಣಕಾಸಿನ ಮಾಹಿತಿಯನ್ನು ಒಳಗೊಂಡಂತೆ ಯಾವುದೇ ಗೌಪ್ಯ ಅಥವಾ ಸ್ವಾಮ್ಯದ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.

  8. ಗೌಪ್ಯತೆಯ ಬಗೆಗಿನ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಬರಹವನ್ನು ಪ್ರಕಟಿಸುವಂತಿಲ್ಲ.



ಯಾವುದೇ ವ್ಯಕ್ತಿಯಿಂದ ಬಳಕೆ ಮಾಡಲ್ಪಟ್ಟ ಚಿತ್ರದ ಬಗ್ಗೆ ದೂರು ಸ್ವೀಕರಿಸಿದರೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.

 

  1. ಯಾವುದೇ ವ್ಯಕ್ತಿಯ ಖಾಸಗಿ ಅಂಗಾಂಗಗಳನ್ನು ಬಹಿರಂಗಪಡಿಸುವಂತಹ ಚಿತ್ರಗಳನ್ನು ಬಳಸುವಂತಿಲ್ಲ.

  2. ಯಾವುದೇ ವ್ಯಕ್ತಿಯನ್ನು ಪೂರ್ಣ ಅಥವಾ ಭಾಗಶಃ ನಗ್ನತೆಯಲ್ಲಿ ತೋರಿಸುವಂತಹ ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯಲ್ಲಿ ತೋರಿಸುವಂತಹ ಚಿತ್ರಗಳನ್ನು ಬಳಸುವಂತಿಲ್ಲ.

  3. ಕೃತಕವಾಗಿ ಮಾರ್ಫ್ ಮಾಡಿದ ಚಿತ್ರಗಳನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ರೂಪದಲ್ಲಿ ಯಾವುದೇ ವ್ಯಕ್ತಿಯನ್ನು ಅನುಕರಿಸುವಂತಿದ್ದರೆ ಅಂತಹ ಚಿತ್ರಗಳನ್ನು ಬಳಸುವಂತಿಲ್ಲ.

 

ಇವುಗಳ ಜೊತೆಗೆ, ಒಬ್ಬ ಬಳಕೆದಾರ ತನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕಂಪನಿಯನ್ನು ವಿನಂತಿಸಬಹುದು. ಮತ್ತು ಕಂಪನಿಯು ನಿಷ್ಕ್ರಿಯಗೊಳಿಸಲು ಮುಂದಾಗುತ್ತದೆ. ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ, ಆ ಬಳಕೆದಾರ ಪ್ರಕಟಿಸಿದ ಕೃತಿಗಳನ್ನು ಮುಂದೆ ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ಇತರ ಬಳಕೆದಾರರಿಗೆ ಪ್ರದರ್ಶಿಸಲಾಗುವುದಿಲ್ಲ. ಆದರೆ, ಬಳಕೆದಾರರು ಹೊಸದಾಗಿ ವೆಬ್‌ಸೈಟ್/ಅಪ್ಲಿಕೇಶನ್‌ಗೆ ಲಾಗ್ ಆನ್ ಆದರೆ, ಅಂತಹ ಪ್ರಕಟಿತ ಕೃತಿಗಳು ಮತ್ತೆ ಗೋಚರಿಸುತ್ತವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?