ನನ್ನ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಹೇಗೆ?

ನಿಮ್ಮ ಸಂಪಾದನೆ ೫೦ ರೂಪಾಯಿಗಳಿಗಿಂತ ಅಧಿಕವಿದ್ದಲ್ಲಿ ಆ ಸಂಪಾದನೆಯನ್ನು ಪ್ರತಿ ತಿಂಗಳೂ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಇದಕ್ಕೆ ನೀವು ಸರಿಯಾದ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕಾಗುತ್ತದೆ. 

 

ಬ್ಯಾಂಕ್ ಖಾತೆಯ ಮಾಹಿತಿ ನೀಡಲು :

 

ನಿಮ್ಮ ಆ್ಯoಡ್ರಾಯ್ಡ್  ಮೊಬೈಲ್ ನಿಂದ :

 

  • ಪ್ರತಿಲಿಪಿ ಆ್ಯಪ್ ನ ಹೋಂ ಸ್ಕ್ರೀನ ಮೇಲ್ಭಾಗದಲ್ಲಿ ಕಾಣುವ ನಾಣ್ಯದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.

  • ನನ್ನ ಸಂಪಾದನೆ ಕೆಳಭಾಗದಲ್ಲಿ ಕಾಣಿಸುತ್ತದೆ.

  • ಅಲ್ಲಿ ಸಂಪಾದನೆಯ ಮಾಹಿತಿ ಮೇಲೆ ಕ್ಲಿಕ್ ಮಾಡಿ. 

  • ಮುಂದಿನ ಸ್ಕ್ರೀನಲ್ಲಿ ‘ಗಳಿಕೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಖಾತೆಯ ವಿವರ ನೀಡಿ !’ ‘ ಮೇಲೆ ಕ್ಲಿಕ್ ಮಾಡಿ.  

 

‘ನನ್ನ ಸಂಪಾದನೆ’  - ಇದು ತೆರೆದುಕೊಳ್ಳಲು ನೀವು ಕನಿಷ್ಟ ಒಂದು ರೂಪಾಯಿಯನ್ನಾದರೂ ಗಳಿಸುವುದು ಅಗತ್ಯ. ಖಾತೆಯಲ್ಲಿ 50 ರೂಪಾಯಿಗಿಂತಲೂ ಅಧಿಕ ಮೊತ್ತ ಗಳಿಕೆಯಾದಲ್ಲಿ, ತಿಂಗಳಿನ ಕೊನೆಯ ದಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಇದು  9-10 ದಿನಗಳ ಸಮಯವನ್ನೂ ತೆಗೆದುಕೊಳ್ಳಬಹುದು. ಇದಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?