ಓದುಗರು ಒಬ್ಬ ಸಾಹಿತಿಗೆ ಏಕೆ ಚಂದಾದಾರರಾಗುತ್ತಾರೆ ಅಥವಾ ಅವರು ಚಂದಾದಾರರಾದರೆ ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ?

ನಿಮ್ಮ ಮೆಚ್ಚಿನ ಸಾಹಿತಿ ತನ್ನ ಬುದ್ಧಿಶಕ್ತಿ ಮತ್ತು ಸಮಯಗಳನ್ನು ವ್ಯಯಿಸಿ ಕೃತಿ ರಚಿಸಿರುತ್ತಾರೆ. ಅವರನ್ನು ಒಂದು ಚಿಕ್ಕ ಗೌರವಧನದ ಮೂಲಕ ಪ್ರೋತ್ಸಾಹಿಸಲು ಪ್ರತಿಲಿಪಿ ಅವಕಾಶ ನೀಡುತ್ತಿದೆ. 

 

ಇದರಿಂದ ನಿಮಗೆ ದೊರಕುವ ವಿಶೇಷ ಸೌಲಭ್ಯಗಳು :

  •  ನೀವು ಸಬ್ಸ್ಕ್ರೈಬ್ ಮಾಡಿದ ಸಾಹಿತಿ ಬರೆಯುತ್ತಿರುವ ಧಾರಾವಾಹಿಯ ಹೊಸ ಅಧ್ಯಾಯಗಳು ಪ್ರಕಟವಾದ ಶೀಘ್ರ ಓದಿನ ಆಯ್ಕೆ ದೊರಕುತ್ತವೆ. ಸಬ್ಸ್ಕ್ರೈಬ್ ಮಾಡದ ಓದುಗರು ಉಚಿತವಾಗಿ ಓದುವ ಅವಕಾಶವನ್ನು  5 ದಿನಗಳ ಬಳಿಕ ಪಡೆಯುತ್ತಾರೆ.

  • ಓದುಗರನ್ನು ಸೂಪರ್ ಫ್ಯಾನ್ ಎಂಬ ಬ್ಯಾಡ್ಜ್ ಮೂಲಕ ಗುರುತಿಸಲಾಗುವುದರಿಂದ ಅವರು  ಬರಹಗಳಿಗೆ ನೀಡುವ ವಿಮರ್ಶೆಗಳು ಹೆಚ್ಚು ಮೌಲ್ಯಯುತವಾಗಿರುತ್ತವೆ. 

  • ನಿಮ್ಮ ಪ್ರೊಫೈಲ್ ನೀವು ಸಬ್ಸ್ಕ್ರೈಬ್ ಮಾಡಿದ ಸಾಹಿತಿಗಳ ಪ್ರೊಫೈಲ್ ನಲ್ಲಿ ‘ಸೂಪರ್ ಫ್ಯಾನ್’  ಪಟ್ಟಿಯಡಿಯಲ್ಲಿ ಕಾಣಸಿಗುತ್ತದೆ.

  • ನೀವು ಸೂಪರ್ ಫ್ಯಾನ್ ಚಾಟ್ ರೂಮ್ ಸೌಲಭ್ಯಕ್ಕೆ ಅರ್ಹರಾಗುತ್ತೀರಿ. ಇದರ ಪ್ರಕಾರ ಆಯಾ ಅರ್ಹ ಬರಹಗಾರರು/ ಬರಹಗಾರ್ತಿಯರ ಗ್ರೂಪ್ ನಲ್ಲಿ ಸೂಪರ್ ಫ್ಯಾನ್ ಸಬ್ಸ್ಕ್ರೈಬರ್ ಗಳನ್ನು ಮಾತ್ರ ಒಳಗೊಂಡ ಒಂದು ಚಾಟ್ ಗ್ರೂಪ್ ಇರುತ್ತದೆ. ಇಲ್ಲಿ ಕೇವಲ ಆ ಲೇಖಕರು ಮತ್ತು ಅವರನ್ನು ಸಬ್ಸ್ಕ್ರೈಬ್ ಮಾಡಿದ ಹಿಂಬಾಲಕರು ಮಾತ್ರ ಇರುವರು. ಮತ್ತು ಇಲ್ಲಿ ನೆಡೆಯುವ ಚರ್ಚೆಗಳು ಇತರರಿಗೆ ಕಾಣಿಸುವುದಿಲ್ಲ. 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?