‘ನನ್ನ ಸಂಪಾದನೆ’ ವಿಭಾಗದಲ್ಲಿ ‘ಹಿಂದಿನ ಸಂಪಾದನೆ’ ಎಂಬ ಉಪವಿಭಾಗವಿದೆ. ನೀವಿಲ್ಲಿ ಹಿಂದಿನ ತಿಂಗಳುಗಳ ವಹಿವಾಟುಗಳ ವಿವರ ನೋಡಬಹುದು. ಮತ್ತು ಹಣ ವರ್ಗಾವಣೆ ಪ್ರಕ್ರಿಯೆಯ ಈಗಿನ ಹಂತವನ್ನೂ ಗಮನಿಸಬಹುದು. ‘ಪ್ರೊಸೆಸಿಂಗ್’ ಹಂತದಲ್ಲಿದ್ದರೆ ಹಣ ಜಮಾವಣೆಯಾಗಲು ಇನ್ನೂ ಕೆಲವು ದಿನಗಳು ಅಗತ್ಯ. ಒಮ್ಮೆ ನಿಮ್ಮ ಖಾತೆಗೆ ಹಣ ಜಮೆಯಾದ ಬಳಿಕ ಈ ವಿಭಾಗದಲ್ಲಿ ‘ಕ್ರೆಡಿಟೆಡ್’ ಎಂದು ತೋರಿಸುತ್ತದೆ.