ಪ್ರತಿ ಕಥೆಯೊಳಗೆ ನಾನು ಚಿತ್ರಗಳನ್ನು ಸೇರಿಸಬಹುದೇ?

ಪ್ರತಿಲಿಪಿಯಲ್ಲಿ ನೀವು ಬರಹದ ಮಧ್ಯದಲ್ಲಿಯೂ ಚಿತ್ರಗಳನ್ನು ಸೇರಿಸಬಹುದು.

 

ಚಿತ್ರಗಳನ್ನು ಸೇರಿಸುವಾಗ ಅವು png, jpg ಅಥವಾ jpeg ರೂಪದಲ್ಲಿ ಇರಬೇಕು ಮತ್ತು 10MB ವರೆಗಿನ ಗಾತ್ರ ಹೊಂದಿರಬಹುದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಇಲ್ಲವಾದಲ್ಲಿ ಚಿತ್ರಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ.

 

ಆಂಡ್ರಾಯ್ಡ್ ಮೂಲಕ:

  1. ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ನಿಮ್ಮ ಕತೆಯನ್ನು ಆಯ್ಕೆ ಮಾಡಿ

  3. ಬರಹದ ಪುಟದ ಕೆಳಗೆ ಕಾಣುವ ಎಡಿಟಿಂಗ್ ಆಯ್ಕೆಗಳಲ್ಲಿ ಚಿತ್ರವನ್ನು ಸೇರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  4. ನಿಮ್ಮ ಕ್ಯಾಮೆರಾ ಅಥವಾ ಗ್ಯಾಲರಿ ಮೂಲಕ ಚಿತ್ರವನ್ನು ಆಯ್ಕೆ ಮಾಡಿ

 

ವೆಬ್ಸೈಟ್ ಮೂಲಕ:

 

  1. ಡ್ರಾಫ್ಟ್'ಗಳಿಗೆ ಚಿತ್ರವನ್ನು ಸೇರಿಸುವಾಗ

  2. ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  3. ನಿಮ್ಮ ಕತೆಯನ್ನು ಆಯ್ಕೆ ಮಾಡಿ

  4. ಚಿತ್ರವನ್ನು ಸೇರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

ಪ್ರಕಟಿತ ಕತೆಗಳಿಗೆ ಚಿತ್ರವನ್ನು ಸೇರಿಸುವಾಗ

  1. ಪ್ರಕಟಿತ ಕತೆಯನ್ನು ಆಯ್ಕೆ ಮಾಡಿ

  2. ಎಡಿಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  3. ಚಿತ್ರವನ್ನು ಸೇರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

ನಿಮ್ಮ ಮೊಬೈಲ್, ಕಂಪ್ಯೂಟರ್'ನಲ್ಲಿರುವ ಚಿತ್ರವನ್ನು ಸೇರಿಸಲು ಇಚ್ಛಿಸಿದಲ್ಲಿ ಪ್ರತಿಲಿಪಿ ನಿಮ್ಮ ಫೈಲ್ಸ್, ಫೋಲ್ಡರ್, ಗ್ಯಾಲರಿಗೆ ಪ್ರವೇಶವನ್ನು ಕೇಳುತ್ತದೆ. ನಿಮ್ಮ ಫೋನ್ ಸೆಟ್ಟಿಂಗ್'ಗೆ ಹೋಗಿ ಪ್ರವೇಶಕ್ಕೆ ಅನುಮತಿ ನೀಡಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?