ನನ್ನ ಪ್ರತಿಲಿಪಿ ಖಾತೆಯಿಂದ ಯಾವ ಎಲ್ಲಾ ಮಾಹಿತಿಯು ಇತರ ಬಳಕೆದಾರರಿಗೆ ಗೋಚರಿಸುತ್ತದೆ?

ಪ್ರತಿಲಿಪಿಯಲ್ಲಿ ನಿಮ್ಮ ಖಾತೆಯ ಯಾವ ವಿಭಾಗಗಳು ಇತರರಿಗೆ ಕಾಣಿಸುತ್ತವೆ ಮತ್ತು ಯಾವ ವಿಭಾಗಳನ್ನು ನೀವು ಮಾತ್ರ ನೋಡಬಹುದು ಎಂದು ನಿಮಗೆ ತಿಳಿದಿದೆಯೇ?

 

ಈ ಕೆಳಗಿನ ವಿಭಾಗಗಳಲ್ಲಿ ಯಾವುದು ಸಾರ್ವಜನಿಕವಾಗಿ ಕಾಣಲ್ಪಡುತ್ತದೆ ಎಂದು ತಿಳಿದುಕೊಳ್ಳಿ:

 

ಪ್ರೊಫೈಲ್:

 

ನಿಮ್ಮ ಪ್ರೊಫೈಲ್ ನಿಮ್ಮ ಕುರಿತು ಹಲವು ವಿಷಯಗಳನ್ನು ಒಳಗೊಂಡಿರುತ್ತದೆ.

 

ನಿಮ್ಮ ಪ್ರೊಫೈಲ್ ಚಿತ್ರ, ಹೆಸರು, ಕಾವ್ಯನಾಮ, ಸಾರಾಂಶ ಇವು ಸ್ವಯಂಚಾಲಿತವಾಗಿ ಸಾರ್ವಜನಿಕವಾಗಿ ಕಾಣಿಸುತ್ತವೆ.

 

ನಿಮ್ಮ ಖಾತೆಯ ಸೆಟ್ಟಿಂಗ್'ನಲ್ಲಿ ನಿಮ್ಮ ಜನ್ಮ ದಿನಾಂಕ ನೀಡುವ ಆಯ್ಕೆ ಕೂಡ ಇರುತ್ತದೆ. ಅದು ಸಾರ್ವಜನಿಕವಾಗಿ ಕಾಣಿಸುವುದಿಲ್ಲ.

 

ಗ್ರಂಥಾಲಯ:

 

ನಿಮ್ಮ ಗ್ರಂಥಾಲಯದಲ್ಲಿ ಶೇಖರಿಸಿಟ್ಟುಕೊಂಡಿರುವ ಬರಹಗಳು ಇತರರಿಗೆ ಕಾಣಿಸುವುದಿಲ್ಲ. ಆದರೆ ಗ್ರಂಥಾಲಯದಲ್ಲಿನ ಕತೆಗಳು ಹೋಂ ಪೇಜ್'ನ ರೆಕಮಂಡೇಷನ್ ವಿಭಾಗದಲ್ಲಿ ಕಾಣಿಸಿಕೊಳ್ಳಬಹುದು.

 

ಹಾಗೆ ರೆಕಮಂಡೇಷನ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಕತೆಗಳನ್ನು ನೀವು ಅಳಿಸಲು ಸಾಧ್ಯವಾಗುವುದಿಲ್ಲ.

 

ಕಲೆಕ್ಷನ್:

 

ನಿಮ್ಮ ಕಲೆಕ್ಷನ್'ಗಳು ಸಾರ್ವಜನಿಕವಾಗಿ ಕಾಣಿಸುತ್ತವೆ, ಅವುಗಳನ್ನು ಕಾಣಿಸದಂತೆ ಮಾಡಲು ಸಾಧ್ಯವಿಲ್ಲ.

 

ಅವು ಇತರರಿಗೆ ರೆಕಮಂಡೇಷನ್'ಗಳಾಗಿ ಕಾಣಿಸಿಕೊಳ್ಳಬಹುದು. ಮತ್ತು ಕಲೆಕ್ಷನ್'ಗಳು ನಿಮ್ಮ ಪ್ರೊಫೈಲ್ ಅಡಿಯಲ್ಲಿ ಕಾಣಿಸುತ್ತವೆ.

 

ಪ್ರಕಟವಾಗುವ ಬರಹಗಳು:

 

ನೀವು ಪ್ರಕಟಿಸುವ ಬರಹಗಳು ಸ್ವಯಂಚಾಲಿತವಾಗಿ ಸಾರ್ವಜನಿಕವಾಗಿ ಕಾಣಿಸುತ್ತವೆ. ಪ್ರತಿಲಿಪಿಯ ಯಾವುದೇ ಬಳಕೆದಾರರು ನಿಮ್ಮ ಬರಹಗಳನ್ನು ಓದಬಹುದು.

 

ಆದರೆ ಡ್ರಾಫ್ಟ್'ಗಳು ಇತರರಿಗೆ ಕಾಣಿಸುವುದಿಲ್ಲ.

 

ಹುಡುಕಿ(ಸರ್ಚ್):

 

ನೀವು ಹುಡುಕುವ ಕತೆಗಳು ಇತರರಿಗೆ ಕಾಣಿಸುವುದಿಲ್ಲ. ಹಾಗೂ ನೀವು ಹುಡುಕಿದ ಕತೆಯ ಫಲಿತಾಂಶವನ್ನು ಅಳಿಸಬಹುದು. ಆದರೆ ಒಮ್ಮೆಲೇ ಎಲ್ಲಾ ಫಲಿತಾಂಶಗಳ ಪಟ್ಟಿಯನ್ನು ಅಳಿಸಲು ಸಾಧ್ಯವಿಲ್ಲ.

 

ಆಂಡ್ರಾಯ್ಡ್'ನಲ್ಲಿ: ಫಲಿತಾಂಶದ ಕೊನೆಯಲ್ಲಿ ಕಾಣಿಸುವ X ಚಿಹ್ನೆಯನ್ನು ಒತ್ತಿ.

 

iOSನಲ್ಲಿ: ನೀವು ರೆಕಮೆಂಡೆಡ್ ಫಲಿತಾಂಶವನ್ನು ಅಳಿಸಲು ಸಾಧ್ಯವಿಲ್ಲ.






ಈ ಲೇಖನ ನಿಮಗೆ ಸಹಾಯಕವಾಗಿದೆಯೇ?