ಕಥೆ ಅಥವಾ ಧಾರಾವಾಹಿಯನ್ನು ನಾನು ಹೇಗೆ ಅಳಿಸುವುದು?

ನೀವು ತಪ್ಪಾಗಿ ಅಥವಾ ಆಕಸ್ಮಿಕವಾಗಿ ಒಂದು ಕತೆಯನ್ನು ಪ್ರಕಟಿಸಿದ್ದರೆ ಮತ್ತು ಅದು ಪ್ರಕಟಿತ ಕೃತಿಯಾಗಿ ಇರಲು ನೀವು ಇಚ್ಛಿಸದಿದ್ದರೆ ಆ ಕೃತಿಯನ್ನು ನೀವು ಡಿಲೀಟ್ ಮಾಡಬಹುದು.

 

ಒಮ್ಮೆ ನೀವು ಬರಹವನ್ನು ಡಿಲೀಟ್ ಮಾಡಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವಾಗದು. ಆ ಬರಹಕ್ಕೆ ಸಿಕ್ಕ ಓದುಗರ ಸಂಖ್ಯೆ, ರೇಟಿಂಗ್, ವಿಮರ್ಶೆ ಎಲ್ಲವೂ ಅಳಿಸಲ್ಪಡುತ್ತವೆ. 

 

ಆಂಡ್ರಾಯ್ಡ್ ಮೂಲಕ:

 

ಬರಹವನ್ನು ಡಿಲೀಟ್ ಮಾಡಲು:

 

  1. ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ನಿಮ್ಮ ಕತೆಯನ್ನು ಆಯ್ಕೆ ಮಾಡಿ

  3. ಕತೆಯ ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

  4. ಅಪ್ರಕಟಿತಗೊಳಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

ಧಾರಾವಾಹಿಯ ಅಧ್ಯಾಯಗಳನ್ನು ಅಪ್ರಕಟಿತಗೊಳಿಸಿದಾಗ ಅವು ಅದೇ ಧಾರಾವಾಹಿಯ ಡ್ರಾಫ್ಟ್ ವಿಭಾಗದಲ್ಲಿ ಸಂಗ್ರಹಿಸಲ್ಪಡುತ್ತವೆ. ಅವುಗಳನ್ನು ನೀವು ಮಾತ್ರ ನೋಡಬಹುದು. 

 

ನೀವು ಆ ಬರಹವನ್ನು ಡಿಲೀಟ್ ಮಾಡಲು ಇಚ್ಛಿಸಿದಲ್ಲಿ

 

  1. ಅಪ್ರಕಟಿತ ಕೃತಿಯ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

  2. ತೆಗೆದುಹಾಕಿ ಮೇಲೆ ಕ್ಲಿಕ್ ಮಾಡಿ

  3. ಬರಹವನ್ನು ಡಿಲೀಟ್ ಮಾಡಲು ಅನುಮತಿ ನೀಡಿ

 

ಒಂದು ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಡಿಲೀಟ್ ಮಾಡಲು ಪ್ರತಿಯೊಂದು ಅಧ್ಯಾಯಕ್ಕೂ ಈ ಮೇಲೆ ತಿಳಿಸಿದ ವಿಧಾನವನ್ನು ಅನುಸರಿಸಿ.

 

ವೆಬ್ಸೈಟ್ ಮೂಲಕ:

 

ಬರಹವನ್ನು ಡಿಲೀಟ್ ಮಾಡಲು:

 

  1. ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

  2. ಕತೆಯನ್ನು ಆಯ್ಕೆ ಮಾಡಿ

  3. ಡ್ರಾಫ್ಟ್'ಗೆ ಸೇರಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  4. ತೆಗೆದುಹಾಕಿ ಆಯ್ಕೆ ಮೇಲೆ ಕ್ಲಿಕ್ ಮಾಡಿ 

  5. ಬರಹವನ್ನು ಡಿಲೀಟ್ ಮಾಡಲು ಅನುಮತಿ ನೀಡಿ



ಒಂದು ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಡಿಲೀಟ್ ಮಾಡಲು ಪ್ರತಿಯೊಂದು ಅಧ್ಯಾಯವಕ್ಕೂ ಈ ಮೇಲೆ ತಿಳಿಸಿದ 3-5 ರವರೆಗಿನ ವಿಧಾನವನ್ನು ಅನುಸರಿಸಿ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?