ಪ್ರತಿಲಿಪಿಯಲ್ಲಿ ನಿಮ್ಮ ಖಾತೆಯನ್ನು ತೆರೆದು, ಈಮೇಲ್ ಪರಿಶೀಲನೆ ಮಾಡಿ, ನಿಮ್ಮಿಷ್ಟದ ಪ್ರಭೇದಗಳನ್ನು ಕಂಡುಕೊಂಡಿರಾ?
ಈಗ ಪ್ರತಿಲಿಪಿಯಲ್ಲಿ ಓದನ್ನು ಮುಂದುವರೆಸುವ ಸರದಿ. ಪ್ರತಿಲಿಪಿಯಲ್ಲಿ ಕತೆಗಳನ್ನು ವಿಂಗಡಿಸಲು ಎರಡು ಮಾರ್ಗಗಳಿವೆ: ಗ್ರಂಥಾಲಯ ಮತ್ತು ಕಲೆಕ್ಷನ್.
ನಿಮ್ಮಿಷ್ಟದ ಕಥೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಮತ್ತು ಆ ಕಥೆಗಳ ಹೊಸ ಅಧ್ಯಾಯಗಳ ಪ್ರಕಟಣೆಯ ಕುರಿತು ತಿಳಿದುಕೊಳ್ಳಲು ಗ್ರಂಥಾಲಯ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಗ್ರಂಥಾಲಯವನ್ನು ಬೇರೆಯವರು ನೋಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಓದಲ್ಪಟ್ಟ ಬರಹಗಳ ಅಡಿಯಲ್ಲಿ ನೀವು ಇತ್ತೀಚೆಗೆ/ಕೊನೆಯಲ್ಲಿ ಓದಿದ ಬರಹಳಗನ್ನು ಕಾಣಬಹುದು.
ಗ್ರಂಥಾಲಯದಲ್ಲಿ ನಿಮ್ಮಿಷ್ಟದ ಕಥೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ಡೌನ್ಲೋಡ್ ಮಾಡಿಕೊಂಡ ಕಥೆಗಳನ್ನು ನೀವು ಇಂಟರ್ನೆಟ್ ಇಲ್ಲದೆಯೂ ಓದಬಹುದು.
ನೀವು ಓದಿದ, ತುಂಬಾ ಇಷ್ಟಪಟ್ಟ, ನಿಮ್ಮ ಆಸಕ್ತಿಕರ ಪ್ರಭೇದಗಳ ಕಥೆಗಳನ್ನು ಕಲೆಕ್ಷನ್'ನಲ್ಲಿ ಶೇಖರಿಸಿಡಬಹುದು. ಕಲೆಕ್ಷನ್'ಗಳು ನಿಮ್ಮ ಪ್ರೊಫೈಲ್ ಅಡಿಯಲ್ಲಿ ಪ್ರದರ್ಶಿಸಲ್ಪಡುತ್ತವೆ ಮತ್ತು ಉಳಿದ ಬಳಕೆದಾರರು ನಿಮ್ಮ ಕಲೆಕ್ಷನ್'ನಲ್ಲಿನ ಕಥೆಗಳನ್ನು ನೋಡಬಹುದು.
ನೀವು ಪ್ರತಿಲಿಪಿಯಲ್ಲಿ ಕತೆಗಳನ್ನು ಓದುವಾಗ ನಿಮ್ಮ ಅಗತ್ಯಕ್ಕೆ ತಕ್ಕಂತೆ ರೀಡಿಂಗ್ ಸೆಟ್ಟಿಂಗ್'ಗಳನ್ನು ಬದಲಾಯಿಸಿಕೊಳ್ಳಬಹುದು. ನೀವು ಪ್ರತಿಲಿಪಿ ಅಪ್ಲಿಕೇಶನ್'ಅನ್ನು ಬಳಸುತ್ತಿದ್ದರೆ ಲೈನ್ ಸ್ಪೇಸಿಂಗ್, ಅಕ್ಷರ ಗಾತ್ರ, ಬ್ರೈಟ್'ನೆಸ್, ನೈಟ್ ಮೋಡ್ ಆಯ್ಕೆಗಳನ್ನು ಬದಲಾಯಿಸಿಕೊಳ್ಳಬಹುದು.