ಪ್ರತಿಲಿಪಿಯಲ್ಲಿ ೫೦ ರೂಪಾಯಿಗಳಿಗಿಂತಲೂ ಅಧಿಕ ಮೊತ್ತ ಗಳಿಸಿದ ಲೇಖಕರಿಗೆ ಆಯಾ ತಿಂಗಳಿನ ಹತ್ತನೆಯ ತಾರೀಕಿನ ಒಳಗೆ ಹಣ ಜಮೆಯಾಗುತ್ತದೆ.
ನಿಮ್ಮ ಹಿಂದಿನ ತಿಂಗಳಿನ ಒಟ್ಟು ಗಳಿಕೆ 50 INR ಗಿಂತಲೂ ಕಡಿಮೆ ಇದ್ದಲ್ಲಿ, ಅದು ನಿಮ್ಮ ‘ಈ ತಿಂಗಳಿನ ಸಂಪಾದನೆಯ ವಿವರ’ ದಲ್ಲಿ ಕಾಣಿಸುತ್ತದೆ
ನಿಮ್ಮ ಗಳಿಕೆ 50 INR ಗಳಿಗಿಂತಲೂ ಹೆಚ್ಚಿದ್ದಲ್ಲಿ ಮತ್ತು ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಿದಲ್ಲಿ, ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗುವ ಹಂತದಲ್ಲಿರುತ್ತದೆ ಎಂದರ್ಥ.
ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಇನ್ನೂ ನೀಡದಿದ್ದಲ್ಲಿ, ನಿಮ್ಮ ಹಿಂದಿನ ತಿಂಗಳಿನ ಸಂಪಾದನೆಯನ್ನು ಪ್ರಸ್ತುತ ತಿಂಗಳಿನ ಸಂಪಾದನೆಗೆ ವರ್ಗಾಯಿಸಲಾಗುತ್ತದೆ. ಯಾವುದೇ ಚಿಂತೆ ಅನಗತ್ಯ.
ಹಣ ಜಮೆಯಾಗಿದ್ದಲ್ಲಿ ‘ಕ್ರೆಡಿಟ್ ಆಗಿದೆ’ ಎಂದು ತೋರಿಸುತ್ತದೆ. ಜಮಾವಣೆ ಇನ್ನೂ ನೆಡೆಯುತ್ತಿದ್ದಲ್ಲಿ ‘ಪ್ರೊಸೆಸಿಂಗ್’ ಎಂದು ತೋರಿಸುತ್ತದೆ.
ನೀವು ಬ್ಯಾಂಕ್ ಖಾತೆಯ ಮಾಹಿತಿ ನಮೂದಿಸಿಯೂ ನಿಮ್ಮ ಖಾತೆಗೆ ಹಣ ಜಮಾವಣೆಯಾಗಿಲ್ಲವೆಂದರೆ -
೧. ನೀವು ತಪ್ಪು ಮಾಹಿತಿ ನೀಡಿರಬಹುದು ( ಈಗ ಹಲವಾರು ರಾಷ್ಟ್ರೀಕೃತ ಬ್ಯಾಂಕ್ ಗಳು ಮರ್ಜ್ ಆಗಿರುವುದರಿಂದ IFSC ಸಂಖ್ಯೆಗಳು ಬದಲಾಗಿರುತ್ತವೆ. ದಯವಿಟ್ಟು ಅಂತರ್ಜಾಲದಲ್ಲಿ ಅಥವಾ ಬ್ಯಾಂಕ್ ನವರೊಂದಿಗೆ ಇದನ್ನು ಪರಿಶೀಲಿಸಿ)
೨. ಎಲ್ಲವನ್ನೂ ಸರಿಯಾಗಿ ನಮೂದಿಸಿದರೂ ಪ್ರೊಸೆಸಿಂಗ್ ಎಂದೇ ತೋರಿಸುತ್ತಿದೆಯಾದರೆ, ಹಣ ಜಮೆಯಾಗಿರಬಹುದು. ಆದರೆ ತಾಂತ್ರಿಕ ಅಡಚಣೆಯ ಕಾರಣ ‘ಪ್ರೊಸೆಸಿಂಗ್’ ಎಂದು ಪ್ರತಿಲಿಪಿಯಲ್ಲಿ ತೋರಿಸುತ್ತಿರಬಹುದು. ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿ.