ಪ್ರತಿಲಿಪಿಯಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಪ್ರತಿಲಿಪಿಯಲ್ಲಿ ನೀವು ಎರಡು ರೀತಿಯಲ್ಲಿ ಭಾಷೆಯನ್ನು ಹೊಂದಿಸಿಕೊಳ್ಳಬಹುದು.

 

ಭಾಷೆ: ಇಲ್ಲಿ ನೀವು ಯಾವ ಭಾಷೆಯಲ್ಲಿ ಕತೆಗಳನ್ನು ಓದಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬಹುದು.

 

ಅಪ್ಲಿಕೇಶನ್ ಭಾಷೆ: ಇಲ್ಲಿ ಪ್ರತಿಲಿಪಿಯ ಆಯ್ಕೆ ಮತ್ತು ಸೌಲಭ್ಯಗಳು ಯಾವ ಭಾಷೆಯಲ್ಲಿ ಕಾಣಿಸಬೇಕು ಎಂಬುದನ್ನು ಆರಿಸಿಕೊಳ್ಳಬಹುದು. ಇದು ನೀವು ಓದಲಿಚ್ಛಿಸುವ ಕಥೆಗಳ ಭಾಷೆಯನ್ನು ಬದಲಾಯಿಸುವುದಿಲ್ಲ.

 

 ಆಂಡ್ರಾಯ್ಡ್'ನಲ್ಲಿ:

 

ಭಾಷೆಯನ್ನು ಬದಲಾಯಿಸಲು:

 

1. ಅಪ್ಲಿಕೇಶನ್ ಹೋಂ ಪೇಜ್'ನಲ್ಲಿ ಎಡ ಮೇಲ್ಭಾಗದಲ್ಲಿರುವ ಭಾಷೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

2. ಭಾಷೆಗಳ ಪಟ್ಟಿಯಿಂದ ನೀವು ಕತೆಗಳನ್ನು ಓದಲು ಇಚ್ಛಿಸುವ ಭಾಷೆಯನ್ನು ಆಯ್ಕೆಮಾಡಿ

 

ಅಪ್ಲಿಕೇಶನ್ ಭಾಷೆಯನ್ನು ಬದಲಾಯಿಸಲು:

1. ಅಪ್ಲಿಕೇಶನ್ ಹೋಂ ಪೇಜ್'ನಲ್ಲಿ ಎಡ ಮೇಲ್ಭಾಗದಲ್ಲಿರುವ ಭಾಷೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

2. ಭಾಷೆಗಳ ಪಟ್ಟಿಯಿಂದ ನೀವು ಪ್ರತಿಲಿಪಿ ಅಪ್ಲಿಕೇಶನ್'ಅನ್ನು ಯಾವ ಭಾಷೆಯಲ್ಲಿ ನೋಡಲು ಇಚ್ಛಿಸುತ್ತೀರಿ ಎಂಬುದನ್ನು ಆಯ್ಕೆಮಾಡಿ

 

ಭಾಷೆಯನ್ನು  ಸೆಟ್ಟಿಂಗ್‌ ಮೆನುವಿನ ಮೂಲಕವೂ ಬದಲಾಯಿಸಬಹುದು. ಅದಕ್ಕಾಗಿ

ಪ್ರೊಫೈಲ್ > ಸೆಟ್ಟಿಂಗ್‌ > ಭಾಷೆಯನ್ನು ಬದಲಿಸಿ ಎಂಬಲ್ಲಿಗೆ ಹೋಗಿ ಭಾಷೆಯನ್ನು ಬದಲಿಸಿ.

 

ವೆಬ್ಸೈಟ್'ನಲ್ಲಿ:

 

ವೆಬ್‌ಸೈಟ್‌ನಲ್ಲಿ ನೀವು ಕತೆಗಳನ್ನು ಓದಲು ಇಚ್ಛಿಸುವ ಭಾಷೆಯು ಅಪ್ಲಿಕೇಶನ್ ಭಾಷೆಯಂತೆಯೇ ಇರುತ್ತದೆ. ಭಾಷೆಯನ್ನು ಬದಲಾಯಿಸಲು:

1. www.pratilipi.com ವೆಬ್‌ಸೈಟ್ ತೆರೆಯಿರಿ

2. ನಿಮ್ಮಿಷ್ಟದ ಭಾಷೆಯನ್ನು ಆಯ್ಕೆಮಾಡಿ.

3. ಎಡ ಮೇಲ್ಭಾಗದಲ್ಲಿರುವ ಪ್ರತಿಲಿಪಿ ಐಕಾನ್'ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಭಾಷೆಯನ್ನು ಬದಲಾಯಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?