ಸೂಪರ್‌ಫ್ಯಾನ್ ಚಾಟ್‌ರೂಮ್‌ನಲ್ಲಿರುವ ಪ್ರಯೋಜನಗಳೇನು?

ಸೂಪರ್ ಫ್ಯಾನ್ ಚಾಟ್ ರೂಮ್ ನ ಬಹುಮುಖ್ಯ ಆಕರ್ಷಣೆ ಮತ್ತು ಉಪಯೋಗವೆಂದರೆ - ನಿಮ್ಮಿಷ್ಟದ ಸಾಹಿತಿಯನ್ನು ನೀವು ಸಬ್ಸ್ಕ್ರೈಬ್ ಮಾಡಿದ ಬಳಿಕ ನೀವು ಅವರೊಂದಿಗೆ ಮತ್ತು ನಿಮ್ಮಂತೆಯೇ ಆ ಸಾಹಿತಿಯನ್ನು ಸಬ್ಸ್ಕ್ರೈಬ್ ಮಾಡಿದ ಇತರೆ ಸೂಪರ್ ಫ್ಯಾನ್ ಗಳೊಂದಿಗೆ ಮುಕ್ತವಾಗಿ ಚರ್ಚಿಸಬಹುದು. ಅದು ಕಥೆಯ ಕುರಿತು, ಪಾತ್ರಗಳ ಕುರಿತು, ಸಾಹಿತ್ಯದ ಕುರಿತು ಅಥವಾ ಇನ್ಯಾವುದೇ ವಿಚಾರದ ಕುರಿತು ಸಮಾನಮನಸ್ಕರು ಸೇರಿ ಚರ್ಚಿಸುವ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಲೇಖಕರು ತಮ್ಮ ಧಾರಾವಾಹಿಗಳ ಮುಂದಿನ ಅಧ್ಯಾಯ, ಮುಂದಿನ ಕಥೆ ಕಾದಂಬರಿಗಳ ಕುರಿತೂ ಮಾಹಿತಿ ನೀಡಬಹುದು ಮತ್ತು ಚರ್ಚಿಸಬಹುದು. ಅಲ್ಲದೇ ಅಲ್ಲಿ ನೆಡೆಯುವ ಚರ್ಚೆಯ ಕಾಮೆಂಟ್ ಗಳಿಗೆ ತಮ್ಮ ಮೆಚ್ಚುಗೆಯನ್ನು ಹಾರ್ಟ್ ಎಮೋಜಿ ಮೂಲಕ ತೋರಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?