ಪ್ರತಿಲಿಪಿಯ ಗ್ರಂಥಾಲಯಕ್ಕೆ ಕಥೆಗಳನ್ನು ಸೇರಿಸುವ ಮತ್ತು ತೆಗೆದುಹಾಕುವ ವಿಧಾನವೇನು ?

ನಿಮ್ಮ ಗ್ರಂಥಾಲಯದಲ್ಲಿ ಕಥೆಗಳ ಪ್ರಮಾಣವು ಹೆಚ್ಚಾದಂತೆ, ಅದರಲ್ಲಿರುವ  ಎಲ್ಲಾ ಕಥೆಗಳನ್ನು ಲೋಡ್ ಮಾಡಲು ಬೇಕಾದ ಸಮಯವೂ ಹೆಚ್ಚಾಗುತ್ತದೆ.

ನಿಮ್ಮ ಗ್ರಂಥಾಲಯವನ್ನು ಉತ್ತಮವಾಗಿ ನಿರ್ವಹಿಸಲು ಕೆಲವು ಮಾರ್ಗಗಳಿವೆ; ಹೆಚ್ಚಿನ ಮಾಹಿತಿಗಾಗಿ :

ನಿಮ್ಮ ಗ್ರಂಥಾಲಯಕ್ಕೆ ಕಥೆಯನ್ನು ಸೇರಿಸುವ ವಿಧಾನ 

ನಿಮ್ಮ ಗ್ರಂಥಾಲಯಕ್ಕೆ ಕಥೆಗಳನ್ನು ಸೇರಿಸಿ, ಅವುಗಳ ಟ್ರ್ಯಾಕ್ ಅನ್ನು ಎಂದಿಗೂ ಕಳೆದುಕೊಳ್ಳಬೇಡಿ ಮತ್ತು ಅವುಗಳ ಕುರಿತು ಮಾಹಿತಿಗಳನ್ನು ಪಡೆಯಿರಿ.

ಆ್ಯoಡ್ರಾಯ್ಡ್ ಆ್ಯಪ್ ನಿಂದ 

  • ಕತೆಯ ಮುಖಪುಟಕ್ಕೆ ಹೋಗಿ 

  • ಅಲ್ಲಿರುವ ‘ಗ್ರಂಥಾಲಯ’ದ ಮೇಲೆ ಕ್ಲಿಕ್ ಮಾಡಿ  

ನೀವು ಬರಹವನ್ನು ಓದುವಾಗಲೂ ಅದನ್ನು ಗ್ರಂಥಾಲಯಕ್ಕೆ ಸೇರಿಸಬಹುದು 

  • ಓದುತ್ತಿರುವಾಗ  ಆ ಪುಟದ ಮೇಲೆ  ಸಿಂಗಲ್ ಟ್ಯಾಪ್ ಮಾಡಿರಿ 

  • ಬಲ ಮೇಲ್ಭಾಗದಲ್ಲಿ ಗ್ರಂಥಾಲಯ ಆಯ್ಕೆ ಲಭ್ಯವಾಗುತ್ತದೆ 

  • ಅದರ ಮೇಲೆ ಕ್ಲಿಕ್ ಮಾಡಿ 

 

ವೆಬ್ಸೈಟ್ ನಲ್ಲಿ : 

  • ಕಥೆಯನ್ನು ಓಪನ್ ಮಾಡಿ 

  • ಗ್ರಂಥಾಲಯಕ್ಕೆ ಸೇರಿಸಿ 

ನಿಮ್ಮ ಗ್ರಂಥಾಲಯದಿಂದ  ಬರಹವನ್ನು ತೆಗೆದುಹಾಕುವ ವಿಧಾನ 

ನೀವು ಯಾವುದೇ ಸಮಯದಲ್ಲಿ ನಿಮ್ಮ ಗ್ರಂಥಾಲಯದಿಂದ ಬರಹಗಳನ್ನು ತೆಗೆದುಹಾಕಬಹುದು.

ದಯವಿಟ್ಟು ಗಮನಿಸಿ: ನೀವು ಯಾವ ಕಥೆಗಳನ್ನು ಓದಿದ್ದೀರಿ ಅಥವಾ ನಿಮ್ಮ ಲೈಬ್ರರಿಯಲ್ಲಿ ಹಿಂದೆ ಏನಿತ್ತು ಎಂಬುದರ ಇತಿಹಾಸವನ್ನು ನಾವು ಇಟ್ಟುಕೊಳ್ಳುವುದಿಲ್ಲ. ಒಮ್ಮೆ ನೀವು ನಿಮ್ಮ ಲೈಬ್ರರಿಯಿಂದ ಕಥೆಯನ್ನು ತೆಗೆದುಹಾಕಿದರೆ, ಭವಿಷ್ಯದಲ್ಲಿ ನೀವು ಅದನ್ನು ಮತ್ತೆ ಓದಲು ಬಯಸಿದರೆ ಅದನ್ನು ನಿಮಗಾಗಿ ಮತ್ತೆ ಹುಡುಕಲು ನಮಗೆ ಸಾಧ್ಯವಾಗುವುದಿಲ್ಲ.

ಆ್ಯoಡ್ರಾಯ್ಡ್ ಆ್ಯಪ್ ನಿಂದ 

  • ಪ್ರತಿಲಿಪಿ ಆ್ಯಪ್ ನ ಹೋಂ ಪೇಜ್ ನಲ್ಲಿರುವ ಗ್ರಂಥಾಲಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

  • ಗ್ರಂಥಾಲಯಕ್ಕೆ ನೀವು ಸೇರಿಸಿರುವ ಎಲ್ಲ ಬರಹಗಳು ಅಲ್ಲಿ ಲಭ್ಯವಾಗುತ್ತವೆ. 

  • ಆಯಾ ಬರಹದ ಎದಿರಿನಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿದರೆ ಅವುಗಳನ್ನು ರಿಮೂವ್ ಮಾಡುವ ಆಯ್ಕೆ ಸಿಗುತ್ತದೆ. 

  • ರಿಮೂವ್ ಮಾಡಿ 

 

ವೆಬ್ಸೈಟ್ ನಿಂದ :

  • ಬಲ ಮೇಲ್ಭಾಗದಲ್ಲಿ ಕಾಣುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್ ಗೆ ಹೋಗಿ

  • ಅಲ್ಲಿ ಗ್ರಂಥಾಲಯ ಆಯ್ಕೆ ಲಭ್ಯವಾಗುತ್ತದೆ 

  • ಬರಹ ಮೇಲ್ಭಾಗದಲ್ಲಿರುವ ಬುಕ್ಮಾರ್ಕ್ ಬಟನ್ ಮೇಲೆ ಕ್ಲಿಕ್ ಮಾಡಿ ಗ್ರಂಥಾಲಯದಿಂದ ತೆಗೆದುಹಾಕಿ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?