ನಿಂದನಾತ್ಮಕ ಸಾಹಿತ್ಯ

ಎಲ್ಲಾ ಬಳಕೆದಾರರು ಇತರರಿಗೆ ಹಾನಿಯನ್ನುಂಟುಮಾಡುವ ಕೃತಿಗಳನ್ನು/ಬರಹಗಳನ್ನು ಪ್ರಕಟಿಸುವುದರಿಂದ/ಹಂಚುವುದರಿಂದ ದೂರವಿರಬೇಕು ಮತ್ತು ಈ ಕೆಳಗಿನ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕೆಂದು ನಾವು ನಿರೀಕ್ಷಿಸುತ್ತೇವೆ: 

 

  1. ಯಾವಾಗಲೂ ಗೌರವಾನ್ವಿತ ಭಾಷೆಯನ್ನು ಬಳಸಿ.

  2. ಜಾತಿ, ಮತ, ಧರ್ಮ, ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ, ಲಿಂಗ ಗುರುತಿಸುವಿಕೆ, ಅಂಗವೈಕಲ್ಯ, ರಾಷ್ಟ್ರೀಯತೆ, ರೋಗ, ಸಂಪ್ರದಾಯ, ಆಚರಣೆ ಅಥವಾ ಅಂತಹ ಯಾವುದೇ ಆಧಾರದ ಮೇಲೆ ಯಾರಲ್ಲಾದರೂ ದ್ವೇಷವನ್ನು ಬೆಳೆಸುವ ಅಥವಾ ತಾರತಮ್ಯವನ್ನುಂಟುಮಾಡುವ ಅಥವಾ ಅವಮಾನಿಸುವ ನಕಾರಾತ್ಮಕ ಭಾಷೆಯುನ್ನು ಬಳಸುವಂತಿಲ್ಲ.

  3. ಪ್ರಕಟವಾಗುವ ಕೃತಿಗಳು ನರಮೇಧದಂತಹ ಸಂಗತಿಗಳನ್ನು ವೈಭವೀಕರಿಸಬಾರದು ಅಥವಾ ಪ್ರಚಾರ ಮಾಡಬಾರದು.

  4. ನಿಮ್ಮ ಪ್ರೊಫೈಲ್'ನ ವಿವರಗಳಲ್ಲಿ ದ್ವೇಷಪೂರಿತ ಚಿತ್ರಗಳು, ಭಾಷೆ (ಜನಾಂಗೀಯ ಅಥವಾ ಜಾತಿವಾದಿ ನಿಂದನೆಗಳನ್ನು ಒಳಗೊಂಡಂತಹ) ಅಥವಾ ಚಿಹ್ನೆಗಳನ್ನು ಬಳಸುವಂತಿಲ್ಲ. 

  5. ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಗುಂಪನ್ನು ಗುರಿಯಾಗಿಸಲು ಅಥವಾ ಟ್ರೋಲ್ ಮಾಡಲು ಅಥವಾ ಅವಮಾನಿಸಲು, ಬೆದರಿಸಲು, ಮುಜುಗರಕ್ಕೊಳಪಡಿಸಲು, ನಿಂದಿಸಲು, ಯಾವುದೇ ರೀತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಕಿರುಕುಳ ನೀಡಲು ವೆಬ್‌ಸೈಟ್/ಅಪ್ಲಿಕೇಶನ್'ಅನ್ನು ದುರ್ಬಳಕೆ ಮಾಡುವಂತಿಲ್ಲ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?