ಪ್ರತಿಲಿಪಿಯಲ್ಲಿ ಇತರ ಬಳಕೆದಾರರೊಂದಿಗೆ ಸಂಪರ್ಕದಲ್ಲಿರುವುದು ಹೇಗೆ?

ಕಂಟೆಂಟ್‌ ಮಾರ್ಗಸೂಚಿಗಳು

ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳು ಇದನ್ನು ಒಳಗೊಂಡಿರಬೇಕು:

  1. ಆಕ್ಷೇಪಾರ್ಹವಾಗಿರಬಾರದು ಅಥವಾ ಅಕ್ರಮವಾಗಿರಬಾರದು: ಅಪಾಯಕಾರಿ, ಉಲ್ಲಂಘಿಸುವ, ದೌರ್ಜನ್ಯಕಾರಿ, ದೇಶದ್ರೋಹದ, ಮಾನಹಾನಿಕರ, ಅಶ್ಲೀಲ, ಪಾರ್ನೋಗ್ರಾಫಿಕ್‌, ಪೀಡೋಫಿಲಿಕ್‌, ಅಪಕೀರ್ತಿಯ, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ, ದ್ವೇಷಯುತ ಅಥವಾ ಜನಾಂಗೀಯ, ಸಮುದಾಯದ ಆಕ್ಷೇಪಾರ್ಹ, ಅಗೌರವದ, ಹಣ ದುರ್ಬಳಕೆ ಅಥವಾ ಗ್ಯಾಂಬ್ಲಿಂಗ್‌ಗೆ ಸಂಬಂಧಿಸಿದ ಅಥವಾ ಪ್ರೋತ್ಸಾಹಿಸುವ ಅಥವಾ ಯಾವುದೇ ರೀತಿಯಲ್ಲಿ ಅಕ್ರಮವಾಗಿರುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸಬೇಡಿ.

  2. ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧವಾಗಿರಬಾರದು: ಸಮಗ್ರತೆ, ಏಕತೆ, ರಕ್ಷಣೆ, ಭದ್ರತೆ ಅಥವಾ ಭಾರತದ ಸಮಗ್ರತೆ, ವಿದೇಶಗಳೊಂದಿಗೆ ಭಾರತದ ಸ್ನೇಹಯುತ ಸಂಬಂಧ ಅಥವಾ ಸಾರ್ವಜನಿಕ ಅನುಕ್ರಮ ಅಥವಾ ಕಾರಣಗಳನ್ನು ಹಾಳುಗೆಡವಿ ಯಾವುದೇ ಅಪರಾಧವಾಗುವ ಅಥವಾ ಯಾವುದೇ ಅಪರಾಧದ ತನಿಖೆಯನ್ನು ತಡೆಯುವ ಅಥವಾ ಯಾವುದೇ ಇತರ ದೇಶವನ್ನು ಅವಮಾನಗೊಳಿಸುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

  3. ಅಪ್ರಾಪ್ತರನ್ನು ರಕ್ಷಿಸುವುದು – ಯಾವುದೇ ರೀತಿಯಲ್ಲಿ ಅಪ್ರಾಪ್ತರಿಗೆ ಹಾನಿ ಉಂಟು ಮಾಡುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

  4. ತಪ್ಪುದಾರಿಗೆಳೆಯುವ/ದುರುದ್ದೇಶಪೂರಿತವಾಗಿರಬಾರದು : ಕಂಟೆಂಟ್‌ನ ಮೂಲದ ಬಗ್ಗೆ ಓದುಗರನ್ನು ತಪ್ಪುದಾರಿಗೆಳೆಯುವ ಅಥವಾ ದ್ವೇಷಯುತ ಅಥವಾ ಬೆದರಿಕೆ ಒಡ್ಡುವ ಯಾವುದೇ ಮಾಹಿತಿಯನ್ನು ಸಂವಹನಗೊಳಿಸುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

  5. ನಿಖರತೆ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ನೋಂದಣಿ ಮಾಡುವಾಗ ಸಂಪೂರ್ಣ ಮತ್ತು ನಿಖರ ಮಾಹಿತಿಯನ್ನು ಒದಗಿಸುವುದು ಮತ್ತು ಇ ಮಾಹಿತಿಯಲ್ಲಿ ಬದಲಾವಣೆ ಇದ್ದಾಗ ಕಂಪನಿಯನ್ನು ಸಂಪರ್ಕಿಸುವುದು.  ಮುಂದುವರಿದು, ಬಳಕೆದಾರರು ಇನ್ನೊಬ್ಬ ವ್ಯಕ್ತಿಯ ಸುಳ್ಳು ಪ್ರತಿನಿಧಿತ್ವವನ್ನು ಮಾಡಬಾರದು.

  6. ಗೌಪ್ಯತೆ: ಬಳಕೆದಾರರ ಖಾತೆ ವಿವರಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಮತ್ತು ಬಳಕೆದಾರರ ಖಾತೆಯ ಮೂಲಕ ಯಾವುದೇ ಸೇವೆಗಳ ಬಳಕೆಗೆ ಜವಾಬ್ದಾರರಾಗಿರುವುದು.

  7. ಮಾಲೀಕತ್ವ: ಅಪ್‌ಲೋಡ್‌ ಮಾಡಿದ ಪ್ರಕಟಿತ ಕೆಲಸಗಳ ಹಕ್ಕುಸ್ವಾಮ್ಯವನ್ನು ಬಳಕೆದಾರರು ಸಂಪೂರ್ಣವಾಗಿ ಹೊಂದಿದ್ದಾರೆ ಮತ್ತು ಇದು ಯಾವುದೇ ಪೇಟೆಂಟ್‌, ಟ್ರೇಡ್‌ಮಾರ್ಕ್‌, ಕೃತಿಸ್ವಾಮ್ಯ ಅಥವಾ ಯಾವುದೇ ತೃತೀಯ ಪಕ್ಷದ ಇತರ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸುವುದು.

  8. ಕಂಟೆಂಟ್‌ ಮಾರ್ಗಸೂಚಿಗಳು: ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳು ಈ ಕೆಳಗಿನ “ಕಂಟೆಂಟ್‌ ಮಾರ್ಗಸೂಚಿಗಳು” ಎಂಬುದರಲ್ಲಿ ನಮೂದಿಸಿದ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸುವುದು.

  9. ಮರು ಉತ್ಪತ್ತಿ: ವೆಬ್‌ಸೈಟ್‌/ಅಪ್ಲಿಕೇಶನ್‌ನಿಂದ ಇತರ ಬಳಕೆದಾರರ ಯಾವುದೇ ಪ್ರಕಟಿತ ಕೆಲಸಗಳನ್ನು ಮರು ಉತ್ಪತ್ತಿ ಮಾಡದಿರುವುದು ಮತ್ತು ಅಧಿಕಾರವಿಲ್ಲದೇ ಯಾವುದೇ ಇತರ ಪ್ಲಾಟ್‌ಫಾರಂ/ಮಾದ್ಯಮದಲ್ಲಿ ಪ್ರಕಟಿಸದೇ ಇರುವುದು.

  10. ಲೈಸೆನ್ಸ್‌:
        a.ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಿದ ಪ್ರಕಟಿತ ಕೆಲಸಗಳಿಗೆ ಅವರ ಹೆಸರು/ಬಳಕೆದಾರರ ಹೆಸರನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಕಂಪನಿಗೆ ಲೈಸೆನ್ಸ್‌ ಅನ್ನು ನೀಡುವುದು;
        b.ಯಾವುದೇ ಮಾಧ್ಯಮ ಅಥವಾ ಯಾವುದೇ ವಿತರಣೆ ವಿಧಾನದ ಮೂಲಕ ಪ್ರಕಟಿತ ಕೆಲಸಗಳು ಮತ್ತು ಅದರ ಡಿರೈವೇಟಿವ್‌ಗಳ ವಿತರಣೆ, ಪ್ರಸರಣ, ಸಾಗಣೆಯ ಅಳವಡಿಕೆ, ಪ್ರಕಟಣೆ, ಮರುಉತ್ಪತ್ತಿ, ರಚನೆಗಾಗಿ ಕಂಪನಿಗೆ ವಿಶ್ವಾದ್ಯಂತದ, ರಾಯಲ್ಟಿ ಮುಕ್ತ, ವಿಶೇಷವಲ್ಲದ ಹಕ್ಕು ಮತ್ತು ಲೈಸೆನ್ಸ್‌ ಅನ್ನು ಒದಗಿಸುವುದು; ಮತ್ತು
        c.ಬಳಕೆದಾರರಿಗೆ ಪೂರ್ವ ಸೂಚನೆ ಇಲ್ಲದೇ ಯಾವುದೇ ಸಂಭಾವ್ಯ ಸಹಭಾಗಿತ್ವದ ಉದ್ದೇಶಕ್ಕೆ ತೃತೀಯ ಪಕ್ಷಕ್ಕೆ ಯಾವುದೇ ಪ್ರಕಟಿತ ಕೆಲಸವನ್ನು ಪ್ರದರ್ಶಿಸಲು ಕಂಪನಿಗೆ ಹಕ್ಕು ಒದಗಿಸುವುದು

  11. ಅಕ್ರಮ ಚಟುವಟಿಕೆಗಳು: ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಲು ಅಥವಾ ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಮಿಷ ಒಡ್ಡುವುದು ಅಥವಾ ತೃತೀಯ ಪಕ್ಷಗಳ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಯಾವುದೇ ಚಟುವಟಿಕೆಯನ್ನು ನಡೆಸಲು ಸೇವೆಯನ್ನು ಬಳಸದೇ ಇರುವುದು.

  12. ವೈರಸ್: ಸಾಫ್ಟ್‌ವೇರ್ ವೈರಸ್‌ಗಳು ಅಥವಾ ಸೇವೆಗಳನ್ನು ಒದಗಿಸಲು ಬಳಸುವ ಯಾವುದೇ ಕಂಪ್ಯೂಟರ್‌ ಸಂಪನ್ಮೂಲದ ಕಾರ್ಯನಿರ್ವಹಣೆಯ ಮಧ್ಯಪ್ರವೇಶಿಸುವ, ನಾಶಪಡಿಸುವ ಅಥವಾ ಮಿತಿಗೊಳಿಸಲು ವಿನ್ಯಾಸ ಮಾಡಿರುವ ಯಾವುದೇ ಇತರ ಕಂಪ್ಯೂಟರ್‌ ಕೋಡ್‌, ಫೈಲ್‌ಗಳು ಅಥವಾ ಪ್ರೋಗ್ರಾಮ್‌ಗಳನ್ನು ಅಪ್‌ಲೋಡ್‌ ಮಾಡದೇ ಇರುವುದು

  13. ಜಾಹೀರಾತು: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತು ಅಥವಾ ಆಮಿಷ ಒಡ್ಡದೇ ಇರುವುದು

  14. ಭದ್ರತೆ:  ಎ) ಬೇಧ್ಯತೆಗಳನ್ನು ಶೋಧ, ಸ್ಕ್ಯಾನ್‌ ಅಥವಾ ಪರೀಕ್ಷೆ ಮಾಡದಿರುವುದು ಬಿ) ಭದ್ರತೆ ಅಥವಾ ದೃಢೀಕರಣ ಕ್ರಮಗಳನ್ನು ಉಲ್ಲಂಘಿಸದಿರುವುದು ಅಥವಾ ವ್ಯತ್ಯಯಗೊಳಿಸದೇ ಇರುವುದು ಅಥವಾ ವೆಬ್‌ಸೈಟ್/ಅಪ್ಲಿಕೇಶನ್ ಅಥವಾ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ನ್ಯಾವಿಗೇಶನಲ್‌ ರಚನೆಯನ್ನು ಸುತ್ತುಗಟ್ಟದಿರುವುದು ಸಿ) ವೆಬ್‌ಸೈಟ್‌/ಅಪ್ಲಿಕೇಶನ್‌ನ ಯಾವುದೇ ಭಾಗವನ್ನು “ಕ್ರಾವ್ಲ್‌” ಅಥವಾ “ಸ್ಪೈಡರ್” ಮಾಡಲು ಯಾವುದೇ ಮ್ಯಾನ್ಯುಅಲ್‌ ಅಥವಾ ಸ್ವಯಂಚಾಲಿತ ಸಾಫ್ಟ್‌ವೇರ್‌, ಸಾಧನಗಳು ಅಥವಾ ಇತರ ಪ್ರಕ್ರಿಯೆಗಳನ್ನು ಬಳಸದೇ ಇರುವುದು ಡಿ) ಕಂಪನಿಯ ಮೂಲಸೌಕರ್ಯಕ್ಕೆ ಅಕಾರಣ ಹೊರೆಯಾಗದಂತೆ - ಅಂದರೆ ಮೋಸ,  ವಂಚನೆ ಮಾಡದಿರುವುದು, ಅಟೋಮೇಷನ್, ಸಾಫ್ಟ್ವೇರ್ ಗಳು , ಬೋಟ್ ಗಳನ್ನು  ಅಥವಾ ಯಾವುದೇ ಅನಧಿಕೃತ ಥರ್ಡ್ ಪಾರ್ಟಿ ಸಾಫ್ಟ್ವೇರ್ ಗಳನ್ನು ಬಳಸದಿರುವುದುದ್.ಅಥವಾ ಸರಿಯಾದ ಕಾರ್ಯಸ್ಥಳ ಅಥವಾ ಸ್ಥಳದಲ್ಲಿ ಹಸ್ತಕ್ಷೇಪ ಮಾಡದೇ ಇರುವುದು. ಇ) ಅನ್ಯಾಯದ ನಡವಳಿಕೆ: ಯಾವುದೇ ರೀತಿಯ ಅನ್ಯಾಯಗಳನ್ನು ಮಾಡದಿರುವುದು ಅಂದರೆ ಬಹುಮಾನಗಳಿಗೋಸ್ಕರ ಅಥವಾ ನಾಣ್ಯಗಳಿಗೋಸ್ಕರ ಅಥವಾ ಪ್ರತಿಲಿಪಿ ಅಪ್ಲಿಕೇಶನ್/ವೆಬ್ಸೈಟ್  ನೀಡುವ ಯಾವುದೇ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು. 

  15. ಪ್ರವೇಶಾವಕಾಶ: ಅನುಮತಿಸಿದ್ದಕ್ಕಿಂತ ಹೊರತಾದ ಯಾವುದೇ ರೀತಿಯ ಮೂಲಕ ಪ್ರಕಟಿತ ಕೆಲಸಗಳನ್ನು ಪಡೆಯದಿರುವುದು ಅಥವಾ ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಪ್ರವೇಶಾವಕಾಶ ಪಡೆಯದೇ ಇರುವುದು.

  16. ಬಳಕೆದಾರ ಡೇಟಾ: ಇನ್ನೊಬ್ಬ ಬಳಕೆದಾರರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬೆನ್ನಟ್ಟದಿರುವುದು ಅಥವಾ ಸಂಗ್ರಹ ಮತ್ತು ಶೇಖರಣೆ ಸೇರಿದಂತೆ ಅಂತಹ ಮಾಹಿತಿಯ ದುರ್ಬಳಕೆ ಮಾಡದಿರುವುದು.

  17. ಟ್ರೇಡ್‌ಮಾರ್ಕ್‌ ಮತ್ತು ವಿನ್ಯಾಸ: ಕಂಪನಿ ಮಾಲೀಕತ್ವ ಹೊಂದಿರುವ ಪ್ರತಿಲಿಪಿ ಮತ್ತು ಪ್ರತಿಲಿಪಿ ಎಫ್ ಎಂ ನ ಟ್ರೇಡ್‌ಮಾರ್ಕ್‌ ಅನ್ನು ಅಥವಾ ವೆಬ್‌ಸೈಟ್‌/ಅಪ್ಲಿಕೇಶನ್‌ನ ಯಾವುದೇ ವಿನ್ಯಾಸವನ್ನು ಬಳಕೆ, ದುರ್ಬಳಕೆ ಅಥವಾ ಸೂಕ್ತವಲ್ಲದಂತೆ ಯಾವುದೇ ಅಧಿಕೃತ ಉದ್ದೇಶಕ್ಕೆ ಬಳಸುವುದನ್ನು ಮಾಡಬಾರದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?