ಧಾರಾವಾಹಿಯನ್ನು ರಚಿಸುವುದು ಹೇಗೆ?

ನಿಮ್ಮ ಕಥೆಯನ್ನು ನೀವು ಈಗಾಗಲೇ ರಚಿಸಿ ಪ್ರಕಟಿಸಿದ್ದರೆ, ನೀವು ಯಾವುದೇ ಸಮಯದಲ್ಲಿ ಅದಕ್ಕೆ ಮುಂದಿನ ಭಾಗವನ್ನು ಸೇರಿಸಬಹುದು ಮತ್ತು ಅದನ್ನು ಧಾರಾವಾಹಿಯಾಗಿ ಮಾಡಬಹುದು.

 

  • ಪ್ರತಿಲಿಪಿ ಆ್ಯoಡ್ರಾಯ್ಡ್ ಆ್ಯಪ್ ನ ಹೋಂ ಸ್ಕ್ರೀನ್ನಲ್ಲಿ ಕೆಳಗಿನ ನ್ಯಾವಿಗೇಶನ್ ಬಾರ್‌ನಲ್ಲಿ ಬರೆಯಿರಿ ಬಟನ್ ಮೇಲೆ ಟ್ಯಾಪ್ ಮಾಡಿ

  • ನಿಮ್ಮ ಕಥೆಗೆ ನ್ಯಾವಿಗೇಟ್ ಮಾಡಿ

  • ಕೆಳಭಾಗದಲ್ಲಿ ಹೊಸ ಭಾಗವನ್ನು ಸೇರಿಸಿ ಟ್ಯಾಪ್ ಮಾಡಿ

  • ನಿಮ್ಮ ಧಾರಾವಾಹಿಯ ಹೊಸ ಭಾಗವನ್ನು ಶೀರ್ಷಿಕೆ ನೀಡುವುದರ ಮತ್ತು ಬರೆಯಲು ಪ್ರಾರಂಭಿಸಿ

  • ನೀವು ಫೋಟೋಗಳನ್ನು ಕೂಡ ಸೇರಿಸಬಹುದು;  ಇದಕ್ಕೆ ನಮ್ಮ ಸ್ವಪ್ರಕಾಶನ ಮಾರ್ಗದರ್ಶಿಯನ್ನು ಪರಿಶೀಲಿಸಿ.



ಒಮ್ಮೆ ನೀವು ಬರವಣಿಗೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ನಿಮ್ಮ ಅಧ್ಯಾಯಕ್ಕೆ ಶೀರ್ಷಿಕೆಯನ್ನು ನೀಡಿದರೆ, ನಿಮಗೆ ಈ ಕೆಳಗಿನ ಆಯ್ಕೆಗಳಿವೆ:

 

  • ಅಧ್ಯಾಯವನ್ನು ಸಂರಕ್ಷಿಸಿ 

    • ಮೇಲಿನ ಬಲ ಮೂಲೆಯಲ್ಲಿರುವ ಸಂರಕ್ಷಿಸಿ ಐಕಾನ್ ಮೇಲೆ ಟ್ಯಾಪ್ ಮಾಡಿ

 

  • ಪ್ರೀವ್ಯೂ ಆಯ್ಕೆಗಾಗಿ

    • ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

    • ಪ್ರೀವ್ಯೂ ಆಯ್ಕೆ ಮಾಡಿ

    • ಪ್ರೀವ್ಯೂ'ನಿಂದ ಹೊರಬರಲು ಬ್ಯಾಕ್ ಬಟನ್ ಮೇಲೆ ಕ್ಲಿಕ್ ಮಾಡಿ

 

  • ಬರಹವನ್ನು ಪ್ರಕಟಿಸಲು

    • ಬಲ ಮೇಲ್ಭಾಗದಲ್ಲಿ ಕಾಣಿಸುವ ಪ್ರಕಟಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

ಹೊಸ ಅಧ್ಯಾಯವನ್ನು ಬರೆದು ಸೇರಿಸುವುದರ ಜೊತೆಗೆ ಈಗಾಗಲೇ ಪ್ರಕಟವಾಗಿರುವ ಅಧ್ಯಾಯಗಳನ್ನೂ ಕತೆಗೆ ಸೇರಿಸಬಹುದು. ಅದಕ್ಕಾಗಿ:

 

  1. ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ನಿಮ್ಮ ಕತೆಯನ್ನು ಆಯ್ಕೆ ಮಾಡಿ

  3. ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

  4. ಈಗಾಗಲೇ ಪ್ರಕಟಿಸಿರುವ ಅಧ್ಯಾಯವನ್ನು ಸೇರಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  5. ಅಧ್ಯಾಯಗಳನ್ನು ಆಯ್ಕೆ ಮಾಡಿ ಕತೆಗೆ ಸೇರಿಸಿ

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?