ನೀವು ಪ್ರತಿಲಿಪಿಯಲ್ಲಿ ನೋಟಿಫಿಕೇಶನ್'ಗಳನ್ನು ಪಡೆಯಲು ಹಲವು ವಿಧಾನಗಳಿವೆ. ಪುಶ್ ನೋಟಿಫಿಕೇಶನ್ ಹಾಗೂ ಈಮೇಲ್ ನೋಟಿಫಿಕೇಶನ್'ಗಳನ್ನು ಪಡೆಯುವುದಕ್ಕಾಗಿ ಅಥವಾ ಬ್ಲಾಕ್ ಮಾಡುವುದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು:
ಪ್ರತಿಲಿಪಿಯಲ್ಲಿ ಮೂರು ವಿಧವಾದ ನೋಟಿಫಿಕೇಶನ್ ಸೌಲಭ್ಯಗಳಿವೆ:
ಈಮೇಲ್ ನೋಟಿಫಿಕೇಶನ್
ಪ್ರತಿಲಿಪಿ ಕಳುಹಿಸುವ ಸಂದೇಶ, ಈಮೇಲ್ ಫ್ರೀಕ್ವೆನ್ಸಿ
ಸಂದೇಶಗಳು
ನೇರ ಸಂದೇಶಗಳು
ನಿಮ್ಮ ನೋಟಿಫಿಕೇಶನ್ ಫೀಡ್'ನಲ್ಲಿನ ಸಂದೇಶಗಳು(ಅಪ್ಲಿಕೇಶನ್'ನಲ್ಲಿ)
ಹೊಸ ರೇಟಿಂಗ್, ವಿಮರ್ಶೆ, ಲೈಕ್'ಗಳ ನೋಟಿಫಿಕೇಶನ್
ನೆಟ್ವರ್ಕ್ ನೋಟಿಫಿಕೇಶನ್
ಹೊಸ ಹಿಂಬಾಲಕರು, ನೀವು ಹಿಂಬಾಲಿಸುವ ವ್ಯಕ್ತಿಗಳ ಬರಹಗಳು, ಪೋಸ್ಟ್, ಕಾಮೆಂಟ್, ಪ್ರತಿಲಿಪಿಯ ಆಫರ್ ಮತ್ತು ಅಪ್ಡೇಟ್'ಗಳ ನೋಟಿಫಿಕೇಶನ್
ವಿಮರ್ಶೆಗಳಿಗೆ ನೀಡುವ ಉತ್ತರಗಳ ನೋಟಿಫಿಕೇಶನ್'ಗಳನ್ನು ಕೇವಲ ಸಾಹಿತಿಗಳು ಮಾತ್ರ ಪಡೆಯುತ್ತಾರೆ. ಅದೇ ವಿಮರ್ಶೆಗೆ ಬೇರೆ ಓದುಗರು ನೀಡುವ ಉತ್ತರಗಳ ನೋಟಿಫಿಕೇಶನ್'ಗಳನ್ನು ಓದುಗರು ಪಡೆಯುವುದಿಲ್ಲ.
ನಿಮ್ಮ ಆಂಡ್ರಾಯ್ಡ್ ಅಪ್ಲಿಕೇಶನ್'ನಲ್ಲಿ:
ನಿಮ್ಮ ಪ್ರೊಫೈಲ್'ಗೆ ಭೇಟಿ ನೀಡಿ (ಪ್ರತಿಲಿಪಿ ಹೋಂ ಪೇಜ್'ನ ಬಲ ಮೇಲ್ಭಾಗದಲ್ಲಿ ಕಾಣಿಸುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ)
ಬಲ ಮೇಲ್ಭಾಗದಲ್ಲಿ ಕಾಣಿಸುವ ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನೋಟಿಫಿಕೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನೀವು ಪಡೆಯಲಿಚ್ಛಿಸುವ ನೋಟಿಫಿಕೇಶನ್'ಗಳನ್ನು ಆಯ್ಕೆ ಮಾಡಿ