ನಿಮ್ಮ ಜಿಮೇಲ್ ವಿಳಾಸದಿಂದ ತೆರೆದ ಪ್ರತಿಲಿಪಿ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲವಾ?
ನಿಮ್ಮ ಖಾತೆ ಈಗಾಗಲೇ ಈಮೇಲ್ ವಿಳಾಸಕ್ಕೆ ಲಿಂಕ್ ಆಗಿದೆ ಎಂದು ತೋರಿಸುತ್ತಿದೆಯೇ? ಅಥವಾ ಪ್ರತಿಲಿಪಿಗೆ ಲಾಗ್ ಇನ್ ಆದಮೇಲೆ ನಿಮ್ಮ ಹಿಂಬಾಲಕರು, ಕತೆಗಳು ಕಾಣಿಸುತ್ತಿಲ್ಲವಾ?
ಅಂದರೆ ನೀವು ಈಗಾಗಲೇ ತೆರೆದ/ಇರುವ ಪ್ರತಿಲಿಪಿ ಖಾತೆಗೆ ಲಾಗಿನ್ ಆಗುವುದರ ಬದಲು ಹೊಸ ಖಾತೆಯನ್ನು ತೆರೆದಿರುವ ಸಾಧ್ಯತೆಗಳಿವೆ.
ದಯವಿಟ್ಟು ನೀವು ಮೊದಲ ಬಾರಿಗೆ ಪ್ರತಿಲಿಪಿ ಖಾತೆಯನ್ನು ತೆರೆಯಲು ಬಳಸಿದ ಈಮೇಲ್ ಮೂಲಕವೇ ಲಾಗಿನ್ ಆಗಲು ಪ್ರಯತ್ನಿಸಿ.
ಒಂದೊಮ್ಮೆ ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲವಾದರೆ ಸಹಾಯಕ್ಕಾಗಿ ಮನವಿ ಸಲ್ಲಿಸಿ. ನಿಮ್ಮ ಹಳೆಯ ಖಾತೆಯನ್ನು ತೆರೆಯಲು ಬಳಸಿದ ಈಮೇಲ್ ಮೂಲಕವೇ ನಮಗೆ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಈಮೇಲ್ ಬಗೆಗೆ ಗೊಂದಲವುಂಟಾದರೆ ನಿಮ್ಮ ಪ್ರತಿಲಿಪಿ ಪ್ರೊಫೈಲ್ ಲಿಂಕ್'ಅನ್ನು ನಮಗೆ ಕಳುಹಿಸಿ, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಾವು ಸಹಾಯ ಮಾಡುತ್ತೇವೆ.