ಪ್ರತಿಲಿಪಿಯನ್ನು ಬಳಸುವುದು ಹೇಗೆ?

ವಿಶ್ವಾದ್ಯಂತ ಇರುವ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಡಿಜಿಟಲ್ ಮಾಧ್ಯಮದಲ್ಲಿ ಕನ್ನಡ ಸಾಹಿತ್ಯವನ್ನು ಓದಲು, ಓದಿದ ಬಳಿಕ ತಮ್ಮ ಅಭಿಪ್ರಾಯ/ವಿಮರ್ಶೆಗಳನ್ನು ನೇರವಾಗಿ ಸಾಹಿತಿಗಳಿಗೆ ತಲುಪಿಸಲು ಅಷ್ಟೇ ಅಲ್ಲದೆ ಸಾಹಿತ್ಯಪ್ರಿಯರಲ್ಲಿ ಬರೆಯುವ ಆಸಕ್ತಿಯನ್ನೂ ಸಹಾ ಪ್ರೋತ್ಸಾಹಿಸಲು ಪ್ರತಿಲಿಪಿ ಸೂಕ್ತ ಮಾಧ್ಯಮ. ನೀವು ಪ್ರತಿಲಿಪಿ ವೇದಿಕೆಯಲ್ಲಿ ವಿವಿಧ ಪ್ರಕಾರದ ಸಾಹಿತ್ಯವನ್ನು ಓದುವುದು, ರಚಿಸಿ ಸ್ವತಃ ಪ್ರಕಟಿಸುವುದು ಮಾತ್ರವಲ್ಲದೇ, ನಿಮ್ಮಿಷ್ಟದ ಬರಹಗಳನ್ನು ಗ್ರಂಥಾಲಯಕ್ಕೆ ಸೇರಿಸಿ ಬೇಕಾದಾಗ ಓದಬಹುದು. ಅಥವಾ ಡೌನ್ಲೋಡ್ ಮಾಡಿಕೊಂಡು ಅಂತರ್ಜಾಲ ಸಂಪರ್ಕ ಇಲ್ಲದೆಯೂ ಓದಬಹುದು. ಅಲ್ಲದೇ ನಿಮ್ಮಿಷ್ಟದ ಪ್ರತಿಲಿಪಿ ಸಾಹಿತಿಗಳನ್ನು ಹಿಂಬಾಲಿಸುವುದರ ಮೂಲಕ ಅವರ ಬರಹಗಳು ಪ್ರಕಟವಾದ ಕೂಡಲೇ ಆ ಮಾಹಿತಿಯನ್ನು ನೋಟಿಫಿಕೇಶನ್ ಮೂಲಕ ಪಡೆಯಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?