ರಿವ್ಯೂ, ಪೋಸ್ಟ್, ಕಾಮೆಂಟ್, ಚರ್ಚೆಯ ಕಾಮೆಂಟ್ ಮೇಲೆ ದೂರು

ಪ್ರತಿಲಿಪಿ ಸಮುದಾಯವು ವಿಮರ್ಶೆಗಳು, ಕಾಮೆಂಟ್‌ಗಳು, ಸಂದೇಶಗಳು ಮತ್ತು ದೈನಂದಿನ ಚರ್ಚೆಗಳ ಮೂಲಕ ಪರಸ್ಪರ ಸಂವಹನ ನಡೆಸುವ ಮೂಲಕ ಓದುಗ  ಮತ್ತು ಬರಹಾಗಾರ/ಗಾರ್ತಿಯರು ತಮ್ಮ ಸಂಪರ್ಕದಲ್ಲಿರಲು ಪ್ರೆಪರೇಪಿಸುತ್ತದೆ. ಕಥೆಯ ಘಟನೆಗಳಿಗೆ ಪ್ರತಿಕ್ರಿಯಿಸುವುದು, ಇತರರು ತಮ್ಮ ಬರವಣಿಗೆಯನ್ನು ಸುಧಾರಿಸಲು ಸಹಾಯ ಮಾಡಲು ಪ್ರತಿಕ್ರಿಯೆ ನೀಡುವುದು ಅಥವಾ ಇತರ ಬರಹಗಾರರೊಂದಿಗೆ ಸಂವಹನ ನೆಡೆಸುವುದು ಸಮುದಾಯವನ್ನು ಬಳಸುವ ಕೆಲವು ಅತ್ಯುತ್ತಮ ವಿಧಾನಗಳಾಗಿವೆ.

 

ಕೆಳಗಿನ ವಿಷಯದ ಬಗ್ಗೆ ವಿಮರ್ಶೆಗಳು ಮತ್ತು ಕಾಮೆಂಟ್‌ಗಳನ್ನು ವರದಿ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ:

 

  • ಸೈಬರ್ ಬುಲ್ಲಿಂಗ್ ಮತ್ತು ಕಿರುಕುಳ

  • ವೈಯಕ್ತಿಕ ಸುರಕ್ಷತೆಗೆ ಬೆದರಿಕೆಗಳು

  • ದ್ವೇಷದ ಮಾತು

  • ಕಾಮಪ್ರಚೋದಕ  ವಿಷಯಗಳು 

  • ಬಳಕೆದಾರರ ಗೌಪ್ಯತೆಯ ಉಲ್ಲಂಘನೆ

 

ದೂರು ನೀಡುವ ವಿಧಾನ : (Android ಅಪ್ಲಿಕೇಶನ್‌ನಿಂದ)

  • ಕಥೆಯ ವಿಮರ್ಶೆಗಳು, ಕಾಮೆಂಟ್‌ಗಳು, ಪೋಸ್ಟ್ ಕಾಮೆಂಟ್‌ಗಳು, ಚರ್ಚಾ ಕಾಮೆಂಟ್‌ಗಳು: ಕಥೆ/ಪೋಸ್ಟ್/ಚರ್ಚೆಗಾಗಿ ಕಾಮೆಂಟ್‌ಗಳಿಗೆ ಹೋಗಿ

  • ಕಾಮೆಂಟ್‌ನ ಪಕ್ಕದಲ್ಲಿರುವ ಆಶ್ಚರ್ಯಸೂಚಕ ಚಿಹ್ನೆಯನ್ನು ಒತ್ತಿರಿ

  • ನೀವು ಈ ಕಥೆಯನ್ನು ವರದಿ ಮಾಡುತ್ತಿರುವ ಕಾರಣವನ್ನು ಆಯ್ಕೆಮಾಡಿ. ವರದಿಗಾಗಿ ಹೆಚ್ಚಿನ ವಿವರಗಳನ್ನು ನೀಡುವುದನ್ನು ಮುಂದುವರಿಸಿ.

  • ಸಲ್ಲಿಸಿ ಕ್ಲಿಕ್ ಮಾಡಿ

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?