ಮೂಲ ಸಾಹಿತ್ಯ

ವೆಬ್‌ಸೈಟ್/ಅಪ್ಲಿಕೇಶನ್ ಮೂಲಕ ವಿವಿಧ ಪ್ರದೇಶಗಳ ಮತ್ತು ಭಾಷೆಗಳ ಬಳಕೆದಾರರಿಂದ ಬರವಣಿಗೆಯನ್ನು ಉತ್ತೇಜಿಸುವುದು ಕಂಪನಿಯ ವಿಷನ್ ಆಗಿದೆ. ಪ್ರತಿ ಲೇಖಕರ ಕೃತಿಗಳು ಸ್ವಂತ ರಚನೆಯಾಗಿರುವುದು ಅತ್ಯಗತ್ಯ. ಮತ್ತು ಲೇಖಕರು ಅದನ್ನು ಪ್ರಕಟಿಸಲು ಕಾನೂನಿನ ಅಡಿಯಲ್ಲಿ ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾರೆ. ಕೃತಿಸ್ವಾಮ್ಯ ನೀತಿಗೆ ಅನುಸಾರವಾಗಿ ಮತ್ತು ಕಾನೂನಿನ ಅಡಿಯಲ್ಲಿ ಅಗತ್ಯವಿರುವಂತೆ ಸ್ವರಚಿತವಲ್ಲದ ಅಥವಾ ಪ್ರಕಟಿಸಲು ಅಗತ್ಯವಾದ ಹಕ್ಕುಗಳನ್ನು ಹೊಂದಿರದಂತಹ ಕೃತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ. 

ಅದಕ್ಕಾಗಿ ಕೃತಿಗಳನ್ನು ಪ್ರಕಟಿಸುವಾಗ ಈ ಕೆಳಗೆ ತಿಳಿಸಿದಂತೆ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿ:

 

  1. ಲೇಖಕರಾಗಿ ನೀವು ಸ್ವರಚಿತ ಕೃತಿಗಳನ್ನು ಮಾತ್ರ ಪ್ರಕಟಿಸಿ.

  2. ಲೇಖಕರು ತಿಳಿದಿಲ್ಲದ ಅಥವಾ ಸಾರ್ವಜನಿಕ ಡೊಮೇನ್‌ನಲ್ಲಿರುವ (ಉದಾ: ವಿಕಿಪೀಡಿಯ/ ವಾಟ್ಸಾಪ್ ಸಂದೇಶಗಳು) ಮೂಲಗಳಿಂದ ನಕಲಿಸಲಾದ ಅಥವಾ ಪಡೆದ ಯಾವುದೇ ಕೃತಿಯನ್ನು ಪ್ರಕಟಿಸಬೇಡಿ. 

  3. ನೀವು ಇತರರಿಗೆ ಸೇರಿದ ಕೃತಿಗಳನ್ನು ಪ್ರಕಟಿಸಿದರೆ, ಹಾಗೆ ಮಾಡಲು ಮತ್ತು ಅದನ್ನು ನಿರ್ವಹಿಸಲು ನೀವು ಕಾನೂನಿನ ಪ್ರಕಾರ ಲಿಖಿತ ಅನುಮತಿಗಳನ್ನು ಪಡೆದಿರಬೇಕು.

  4. ಯಾವುದೇ ರೂಪದಲ್ಲಿ ಅಥವಾ ಭಾಷೆಯಲ್ಲಿ (ಉದಾ: ಚಲನಚಿತ್ರಗಳು, ದೂರದರ್ಶನ ಧಾರಾವಾಹಿಗಳು) ಈಗಾಗಲೇ ಪ್ರಕಟವಾಗಿರುವ ಯಾವುದೇ ಕೃತಿಯಿಂದ ಭಾಗಶಃ ಅಥವಾ ಸಂಪೂರ್ಣವಾಗಿ ನಕಲು ಮಾಡಿದ ಯಾವುದೇ ಕೃತಿಯನ್ನು ಪ್ರಕಟಿಸಬೇಡಿ.

  5. ಬೇರೊಬ್ಬ ವ್ಯಕ್ತಿಯ ಕೃತಿಯನ್ನು ಬೇರೆ ಭಾಷೆಗೆ ಭಾಷಾಂತರಿಸುವುದು ಮತ್ತು ಅದನ್ನು ಪ್ರಕಟಿಸುವುದು ಕಾನೂನಿನ ಪ್ರಕಾರ ಪೂರ್ವ ಲಿಖಿತ ಅನುಮತಿಗಳ ನಂತರ ಮತ್ತು ಯಾವುದೇ ಆದಾಯ ಹಂಚಿಕೆ ವ್ಯವಸ್ಥೆಗಳನ್ನು ಪರಸ್ಪರ ಒಪ್ಪಿದ ನಂತರ ಮಾತ್ರ ಮಾಡಬೇಕು.

  6. ಕ್ರೆಡಿಟ್‌ಗಳನ್ನು ನೀಡಲು ನೀವು ಮೂಲ ಲೇಖಕರ ಹೆಸರನ್ನು ನಮೂದಿಸಲು ಉದ್ದೇಶಿಸಿದ್ದರೂ ಸಹ ಬೇರೊಬ್ಬರ ಕೆಲಸ ಅಥವಾ ವಸ್ತುಗಳನ್ನು ಮರು-ಹಂಚಿಕೊಳ್ಳುವುದನ್ನು ತಪ್ಪಿಸಿ. ನೀವು ಹಾಗೆ ಮಾಡಲು ನಿರ್ಧರಿಸಿದರೆ, ಅಂತಹ ಕೃತಿಗಳಿಗೆ ಲೇಖಕರು ಕಡ್ಡಾಯಗೊಳಿಸಿದ ಯಾವುದೇ ಹಕ್ಕುಸ್ವಾಮ್ಯ ಷರತ್ತುಗಳನ್ನು ನೀವು ಅನುಸರಿಸುತ್ತಿರುವಿರಿ ಅಥವಾ ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಲಿಖಿತ ಅನುಮತಿಯನ್ನು ತೆಗೆದುಕೊಳ್ಳುವ ಮೂಲಕ ಖಾತ್ರಿಪಡಿಸಿಕೊಳ್ಳಬೇಕು.

  7. ಇನ್ನೊಬ್ಬ ಲೇಖಕರೊಂದಿಗೆ ಸಹ-ಲೇಖಕರಾಗಿದ್ದರೆ, ನೀವು ಅಂತಹ ಸಹ-ಲೇಖಕರಿಂದ ಸೂಕ್ತವಾದ ಹಕ್ಕುಗಳು ಮತ್ತು ಅನುಮತಿಗಳನ್ನು ಪಡೆಯುತ್ತೀರಿ ಮತ್ತು ಪ್ರಕಟಿತ ಕೃತಿಯಲ್ಲಿ ಅಂತಹ ವ್ಯಕ್ತಿಗೆ ಸೂಕ್ತವಾದ ಕ್ರೆಡಿಟ್‌ಗಳನ್ನು ನೀಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?