ಪ್ರತಿಲಿಪಿಯಲ್ಲಿ ಕತೆಗೆಳನ್ನು ಬರೆಯುವುದು ಹೇಗೆ?

ಒಮ್ಮೆ ನೀವು ಪ್ರತಿಲಿಪಿಗೆ ಸೈನ್ ಇನ್ ಆದರೆ ನೀವು ಕಥೆಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಪ್ರತಿಲಿಪಿಯಲ್ಲಿ ಕಥೆಗಳನ್ನು ಬರೆದು ಪ್ರಕಟಿಸುವುದು ಬಹಳ ಸುಲಭ. ನಿಮ್ಮಿಷ್ಟದ ಪ್ರಭೇದದಡಿಯಲ್ಲಿ ಮತ್ತು ನೀವು ಬಯಸುವಷ್ಟು ವಿಸ್ತಾರವಾದ ಕತೆಯನ್ನು ರಚಿಸಿ ಪ್ರಕಟಿಸಬಹುದು. ಒಂದು ಕತೆಯನ್ನು ಅಧ್ಯಾಯದ ರೂಪದಲ್ಲಿ ಕೂಡಾ ಪ್ರಕಟಿಸಬಹುದು ಮತ್ತು ಕವರ್ (ಚಿತ್ರ)ಇಮೇಜ್'ಅನ್ನೂ ಹಾಕಬಹುದು, ಬರಹಗಳ ನಡುವೆ ಚಿತ್ರಗಳನ್ನು ಬಳಸಬಹುದು, ಓದುಗರು ಹುಡುಕಲು ಸಹಾಯಕವಾಗುವಂತೆ ಸರಿಯಾದ ಪ್ರಭೇದಗಳ ಅಡಿಯಲ್ಲಿ ಕತೆಯನ್ನು ಬರೆದು ಪ್ರಕಟಿಸಬಹುದು.

 

ಪ್ರತಿಲಿಪಿಯ ಲೇಖಕರು ಶ್ರದ್ಧೆಯಿಂದ ಕೃತಿಗಳನ್ನು ರಚಿಸಿರುತ್ತಾರೆ ಎಂದು ನಮಗೆ ತಿಳಿದಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗೆ ಕೆಲವು ಸಲಹೆಗಳನ್ನು ನೀಡಿದ್ದೇವೆ:

 

1. ನಿಮ್ಮ ಬರಹಗಳು ನಮ್ಮ ವಿಷಯ ಮಾರ್ಗಸೂಚಿಗಳಲ್ಲಿನ ಎಲ್ಲಾ ಅಂಶಗಳನ್ನು ಪಾಲಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

2. ನಿಮ್ಮ ಕೃತಿಗಳ ಒಂದು ಪ್ರತಿಯನ್ನು ಪ್ರತಿಲಿಪಿಯ ಹೊರತಾಗಿಯೂ ಇಟ್ಟುಕೊಳ್ಳಿ.

3. ನೀವು ಕವರ್ ಇಮೇಜ್, ಬರಹಗಳ ಮಧ್ಯದಲ್ಲಿ

 ಬಳಸುವ ಚಿತ್ರಗಳು ನಮ್ಮ ವಿಷಯ ಮಾರ್ಗಸೂಚಿಗಳಲ್ಲಿನ ಎಲ್ಲಾ ಅಂಶಗಳನ್ನು ಪಾಲಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎಲ್ಲಾ ಚಿತ್ರಗಳು ನಮ್ಮ ಇಮೇಜ್ ಮಾಡರೇಷನ್ ಪ್ರೊಸೆಸ್'ಗೆ ಒಳಪಟ್ಟ ನಂತರವೇ ಅಪ್ಲೋಡ್ ಆಗುತ್ತವೆ.

4. ನಿಮ್ಮ ಈಮೇಲ್ ವಿಳಾಸ ಪರಿಶೀಲನೆಯಾಗಿದೆ ಮತ್ತು ಅಪ್ಡೇಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಬಳಸಿರುವ ಈಮೇಲ್ ವಿಳಾಸಕ್ಕೆ ನಿಮಗೆ ಆಕ್ಸೆಸ್ ಇರದಿದ್ದರೆ ನೀವು ನಿಮ್ಮ ಡ್ರಾಫ್ಟ್ ಮತ್ತು ಕತೆಗಳನ್ನು ಕಳೆದುಕೊಳ್ಳಬಹುದು.

 

ನೀವು ಕತೆಗಳನ್ನು ರಚಿಸಿ ಪ್ರಕಟಿಸಿದ ನಂತರ ಅವುಗಳನ್ನು ಓದುಗರಿಗೆ ತಲುಪಿಸಬಹುದು. ಪ್ರತಿಲಿಪಿಯ ಒಳಗೆ ಮತ್ತು ಅದರಾಚೆಗೂ ನೀವು ನಿಮ್ಮ ಕತೆಗಳನ್ನು ಇತರರಿಗೆ ಹಂಚಬಹುದು. ಅದಕ್ಕಾಗಿ ನೀವು ನಮ್ಮ ಪ್ರತಿಲಿಪಿ ಕನ್ನಡ ಅಫೀಷಿಯಲ್ ಖಾತೆಯ ಮೂಲಕ ಪ್ರಕಟಿಸಿರುವ ಕೆಲವು ಸಲಹೆ, ಸೂಚನೆಗಳನ್ನು ಓದಿ ಅದರಂತೆ ಮುಂದುವರೆಯಬಹುದು.

ಪ್ರತಿಲಿಪಿಯಲ್ಲಿ ನಿಮ್ಮ ಕತೆಗಳಿಗೆ ಓದುಗರ ಸಂಖ್ಯೆಯನ್ನು ತಿಳಿಯಲು ಕೆಲವು ಮಾರ್ಗಗಳಿವೆ. ನಿಮ್ಮ ಕೃತಿಯ ಪ್ರತಿ ಅಧ್ಯಾಯಗಳಿಗೂ ಎಷ್ಟು ಓದುಗರ ಸಂಖ್ಯೆ, ರೇಟಿಂಗ್ ಮತ್ತು ವಿಮರ್ಶೆಗಳನ್ನು ನೀಡಲಾಗಿದೆ ಎಂಬುದನ್ನು ನೋಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಂಕಿಅಂಶಗಳು ವಿಭಾಗಕ್ಕೆ ಭೇಟಿ ನೀಡಬಹುದು. ಅಲ್ಲಿ ನಿಮ್ಮ ಓದುಗರ ಸಂಖ್ಯೆ, ವಿಮರ್ಶೆಗಳ ಸಂಖ್ಯೆ, ಹೆಚ್ಚು ಓದಲ್ಪಟ್ಟ ಕೃತಿಗಳ ಮಾಹಿತಿ ದೊರೆಯುತ್ತದೆ. ಓದುಗರ ಮೂಲಕವೂ ಬರಹಗಾರರು ಕಲಿಯುವುದು ಬಹಳಷ್ಟಿರಬಹುದು. ನಿಮ್ಮ ಕತೆಗಳನ್ನು ಬರೆಯುವ ಮೊದಲು ಪ್ರತಿಲಿಪಿಯಲ್ಲಿ ಇತರ ಕತೆಗಳನ್ನೂ ಓದಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?