ಪ್ರತಿಲಿಪಿಯಲ್ಲಿ ನಾಣ್ಯಗಳನ್ನು ಏನು ಮಾಡಬೇಕು?

ನಾಣ್ಯಗಳ ಮೂಲಕ ನೀವು ನಿಮ್ಮಿಷ್ಟದ ಸಾಹಿತಿ ಅಥವಾ ಬರಹವನ್ನು ಪ್ರೋತ್ಸಾಹಿಸಬಹುದು.ಸ್ಟಿಕರನ್ನು ಆಯ್ಕೆ ಮಾಡಿ ಬರಹ ಅಥವಾ ಸಾಹಿತಿಗೆ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬಹುದು. ನೀವು ಆಯ್ಕೆ ಮಾಡುವ ಸ್ಟಿಕರ್ ನ ಮುಖಬೆಲೆಯಷ್ಟು ನಾಣ್ಯಗಳು ಆ ಸಾಹಿತಿಯ ಪ್ರತಿಲಿಪಿ ಖಾತೆಗೆ ಜಮೆಯಾಗುತ್ತದೆ. ಮತ್ತು ಈ ನಾಣ್ಯಗಳ ಮೂಲಕ ಸಾಹಿತಿ ಅದನ್ನು ನಗದಾಗಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಬರಹದ ಮುಖಪುಟದಲ್ಲಿರುವ ‘ಬರಹವನ್ನು ಪ್ರೋತ್ಸಾಹಿಸಿ’ ಮೇಲೆ ಕ್ಲಿಕ್ ಮಾಡುವ ಮೂಲಕ ಆ ಬರಹಕ್ಕೆ ಸ್ಟಿಕರ್ ನೀಡಬಹುದು. ನಿಮ್ಮ ಮೆಚ್ಚಿನ ಸಾಹಿತಿಯ ಪ್ರೊಫೈಲ್ ಗೆ ಹೋದಲ್ಲಿ ‘ಸಾಹಿತಿಯನ್ನು ಪ್ರೋತ್ಸಾಹಿಸಿ’ ಆಯ್ಕೆ ದೊರಕುತ್ತದೆ.ಅಲ್ಲಿ ಸ್ಟಿಕರ್ ನೀಡುವ ಮೂಲಕ ಸಾಹಿತಿಯನ್ನು ಪ್ರೋತ್ಸಾಹಿಸಬಹುದು. ನಾಣ್ಯಗಳನ್ನು ‘ನನ್ನ ನಾಣ್ಯಗಳು’ ವಿಭಾಗದಲ್ಲಿ ಕೊಂಡುಕೊಳ್ಳಬಹುದು. ‘ನನ್ನ ನಾಣ್ಯಗಳು’ ಆಯ್ಕೆ ಪ್ರತಿಲಿಪಿ ಹೋಂ ಸ್ಕ್ರೀನ್ ನ ಬಲ ಮೇಲ್ಭಾಗದಲ್ಲಿ ಲಭ್ಯವಿರುತ್ತದೆ. ಒಂದು ನಾಣ್ಯದ ಬೆಲೆ ೫೦ ಪೈಸೆಗಳು. ಸಾಹಿತಿಗಳು ಕೃತಿಗಳನ್ನು ರಚಿಸಲು ತಮ್ಮ ಸಮಯ ಮತ್ತು ಬುದ್ದಿಯನ್ನು ವಿನಿಯೋಗಿಸಿರುತ್ತಾರೆ. ಓದುಗರು ಸ್ಟಿಕರ್ ಗಳನ್ನು ಅವರಿಗೆ ನೀಡುವುದು ಸಾಹಿತಿಗಳು ವ್ಯಯಿಸಿದ ಸಮಯ ಮತ್ತು ಕಲ್ಪನೆಗೆ ನೀಡುವ ಒಂದು ಗೌರವ. ಓದುಗರು ಬರಹಗಳಿಗೆ ಮತ್ತು ಸಾಹಿತಿಗಳಿಗೆ ಸ್ಟಿಕರ್ ಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರೆ ಬರಹದ ಮುಖಪುಟ ಮತ್ತು ಸಾಹಿತಿಗಳ ಪ್ರೊಫೈಲ್ ನಲ್ಲಿ ಹೀಗೆ ಪ್ರೋತ್ಸಾಹಿಸಿದ  ಓದುಗರ ಪಟ್ಟಿ ಲಭ್ಯವಾಗುತ್ತದೆ.

 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?