ನನ್ನ ಸಂಪಾದನೆ' ಎಂದರೇನು?

ಸಂಪಾದನೆಯ ಮಾಹಿತಿ - ಈ ವಿಭಾಗದಲ್ಲಿ ನೀವು ಪ್ರತಿಲಿಪಿಯ ವಿವಿಧ ವ್ಯವಸ್ಥೆಗಳಿಂದ ಗಳಿಸಿದ ಒಟ್ಟು ಸಂಪಾದನೆಯ ಮಾಹಿತಿ ಲಭ್ಯವಾಗುತ್ತದೆ.

 

ಸ್ಟಿಕರ್ ಗಳಿಂದ ಸಂಪಾದನೆ :  

 

ನಿಮ್ಮ ಬರಹಗಳನ್ನು ಓದಿದ ಒಬ್ಬ ಓದುಗ ಆ ಬರಹವನ್ನು ಅಥವಾ ನಿಮ್ಮ ಪ್ರೊಫೈಲನ್ನು ಸ್ಟಿಕರ್ ಮೂಲಕ ಪ್ರೋತ್ಸಾಹಿಸಿದ್ದಲ್ಲಿ ಅದರ ಮಾಹಿತಿ ‘ನನ್ನ ಸಂಪಾದನೆ’ ಅಡಿಯಲ್ಲಿ ಕಾಣಿಸುತ್ತದೆ. 

 

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಮೂಲಕ ಸಂಪಾದನೆ : 

 

ಸೂಪರ್ ಫ್ಯಾನ್ ಸೌಲಭ್ಯದ ಮೂಲಕ ಗಳಿಸಿದ ಒಟ್ಟು ಸಂಪಾದನೆಯ ಮಾಹಿತಿ ‘ನನ್ನ ಸಂಪಾದನೆ’ ಅಡಿಯಲ್ಲಿ ‘ಸಂಪಾದನೆಯ ಮಾಹಿತಿ’ ಮೇಲೆ ಕ್ಲಿಕ್ ಮಾಡಿದರೆ ಲಭ್ಯವಾಗುತ್ತದೆ.   

 

ಪ್ರತಿಲಿಪಿ ಪ್ರೀಮಿಯಂ ಮೂಲಕ ಸಂಪಾದನೆ :

 

ಪ್ರತಿಲಿಪಿ ಪ್ರೀಮಿಯಂ ಅಡಿಯಲ್ಲಿರುವ ನಿಮ್ಮ ಕಾದಂಬರಿ ಅಥವಾ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ನಿಮ್ಮ ಯಾವುದೇ ಮುಂದುವರೆಯುತ್ತಿರುವ ಧಾರಾವಾಹಿಯ ಮೂಲಕ ನೀವು ಗಳಿಸಿದ ಸಂಪಾದನೆ ಇದಾಗಿದೆ.

 

ಇವುಗಳನ್ನು ನೀವು ಪ್ರತಿಲಿಪಿಯ ಹೋಂ ಸ್ಕ್ರೀನ್ ನ ಮೇಲ್ಭಾಗದಲ್ಲಿ ಕಾಣುವ ನಾಣ್ಯದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ‘ಸಂಪಾದನೆಯ ಮಾಹಿತಿ’ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?