ನಾನು ಸೂಪರ್‌ಫ್ಯಾನ್ ಚಾಟ್‌ರೂಮ್‌ಗೆ ಬಳಕೆದಾರರನ್ನು ಸೇರಿಸಬಹುದೇ ಅಥವಾ ಅದರಿಂದ ತೆಗೆದುಹಾಕಬಹುದೇ?

ನಿಮ್ಮನ್ನು ಮಾಸಿಕ ೨೫ ರೂಪಾಯಿ ನೀಡುವುದರ ಮೂಲಕ ಸಬ್ಸ್ಕ್ರೈಬ್ ಮಾಡಿದ ಎಲ್ಲ ಸೂಪರ್ ಫ್ಯಾನ್ ಗಳು ತಾವಾಗಿಯೇ ಸೂಪರ್ ಫ್ಯಾನ್ ಚಾಟ್ ರೂಮ್ ನ ಭಾಗವಾಗುತ್ತಾರೆ. ನಿಮ್ಮನ್ನು ಸಬ್ಸ್ಕ್ರೈಬ್ ಮಾಡಿದ ಸೂಪರ್ ಫ್ಯಾನ್ ಗಳಲ್ಲಿ ಯಾರಾದರೂ ಅಸಭ್ಯವಾಗಿ ವರ್ತಿಸಿದಲ್ಲಿ ಅಥವಾ ಯಾವುದಾದರೂ ಕಾರಣಕ್ಕೆ ನೀವು ಅವರನ್ನು ಸೂಪರ್ ಫ್ಯಾನ್ ಚಾಟ್ ರೂಮ್ ನಿಂದ ತೆಗೆದುಹಾಕಲು ಇಚ್ಛಿಸಿದಲ್ಲಿ, ಅವರನ್ನು ನೀವೇ ತೆಗೆದುಹಾಕಲು ಅವಕಾಶವಿದೆ. ನೀವೊಮ್ಮೆ ಅವರನ್ನು ತೆಗೆದುಹಾಕಿದಲ್ಲಿ ಪುನಃ ಅವರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. 

ದಯವಿಟ್ಟು ಗಮನಿಸಿ : ನೀವು ಯಾವುದೇ ಕಾರಣಕ್ಕೆ ಸೂಪರ್ ಫ್ಯಾನ್ ಚಾಟ್ ರೂಮ್ ನಿಂದ ಒಬ್ಬ ಸೂಪರ್ ಫ್ಯಾನ್ ಅನ್ನು ತೆಗೆದುಹಾಕಿದರೂ ಸಹ ಅವರು ನಿಮ್ಮ ಬರಹಗಳಿಗೆ ವಿಮರ್ಶೆ ಮಾಡಲು, ರೇಟಿಂಗ್ ನೀಡಲು ಸಾಧ್ಯವಾಗುತ್ತದೆ. ನೀವು ಆ ಬಳಕೆದಾರರು ನಿಮ್ಮ ಬರಹಗಳಿಗೆ ತಮ್ಮ ಅಭಿಪ್ರಾಯವನ್ನೂ ತಿಳಿಸಬಾರದೆಂದು ಬಯಸಿದಲ್ಲಿ ಅವರ ಪ್ರೊಫೈಲ್ ರಿಪೋರ್ಟ್ ಮಾಡಬಹುದು. ಸರಿಯಾದ ಮಾಹಿತಿ ಮತ್ತು ಪ್ರೊಫೈಲ್ ಲಿಂಕನ್ನು [email protected] ಗೆ ಕಳುಹಿಸಿದಲ್ಲಿ ಸೂಕ್ತ ಪರಿಶೀಲನೆ ನೆಡೆಸಿ ಬಳಿಕ ಆ ಪ್ರೊಫೈಲ್ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.   

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?