ಆಫ್ಲೈನ್ ಓದುವಿಕೆಯು ಅಂತರ್ಜಾಲದ ಸಂಪರ್ಕವಿಲ್ಲದಿದ್ದರೂ ನಿಮ್ಮ ಮೆಚ್ಚಿನ ಕಥೆಗಳನ್ನು ಓದಲು ಸಾಧ್ಯವಾಗಿಸುತ್ತದೆ. ಕ್ಷಣಕಾಲ ಅಂತರ್ಜಾಲದ ಸಂಪರ್ಕ ಹೊಂದಿ, ಕಥೆಯನ್ನು ನಿಮ್ಮ ಆಫ್ಲೈನ್ ಪಟ್ಟಿಗೆ ಸೇರಿಸಿಕೊಳ್ಳಿ ಮತ್ತು ನಂತರ ಇಂಟರ್ನೆಟ್ ಇಲ್ಲದೆಯೇ ಓದನ್ನು ಆನಂದಿಸಿ.
ಆಫ್ಲೈನ್ ಗ್ರಂಥಾಲಯ ಸೌಲಭ್ಯವು ನಿಮಗೆ ಈ ಕೆಳಗಿನ ಅವಕಾಶಗಳನ್ನು ನೀಡುತ್ತದೆ:
-
ಆಫ್ಲೈನ್ನಲ್ಲಿ ಓದಲು ಕಥೆಗಳನ್ನು ಆರಿಸಿಕೊಳ್ಳುವುದು ಮತ್ತು ಸಂರಕ್ಷಿಸಿಟ್ಟುಕೊಳ್ಳುವುದು.
-
ಗ್ರಂಥಾಲಯದಿಂದಲೇ ನೇರವಾಗಿ ನಿಮ್ಮ ಆಫ್ಲೈನ್ ಪಟ್ಟಿಗೆ ಕಥೆಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು.
ನಿಮ್ಮ ಆಫ್ಲೈನ್ ಪಟ್ಟಿಗೆ ಕಥೆಯನ್ನು ಸೇರಿಸಲು ಅಥವಾ ತೆಗೆದುಹಾಕಲು:
-
ಕಥೆಯನ್ನು ಗ್ರಂಥಾಲಯಕ್ಕೆ ಸೇರಿಸಲು: ನೀವು ಆಫ್ಲೈನ್ನಲ್ಲಿ ಓದಲು ಬಯಸುವ ಕಥೆಯನ್ನು ತೆರೆದು, ಕಥೆಯ ಸಾರಾಂಶ ಪುಟದಲ್ಲಿರುವ 'ಡೌನ್ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿ. ದಯವಿಟ್ಟು ಗಮನಿಸಿ: ಪ್ರೀಮಿಯಂ ಚಂದಾದಾರರು ಮಾತ್ರ ಪ್ರೀಮಿಯಂ ಕಥೆಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಒಂದು ಸಲಕ್ಕೆ ಗರಿಷ್ಠ 2 ಪ್ರೀಮಿಯಂ ಕಥೆಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
-
ಕಥೆಯನ್ನು ತೆಗೆದುಹಾಕಲು, ನಿಮ್ಮ ಗ್ರಂಥಾಲಯಕ್ಕೆ ಹೋಗಿ ಮತ್ತು ನೀವು ತೆಗೆದುಹಾಕಲು ಬಯಸುವ ಕಥೆಯ ಪಕ್ಕದಲ್ಲಿರುವ ಹೆಚ್ಚಿನ ಆಯ್ಕೆಗಳಿಂದ 'ಬರಹ ತೆಗೆದುಹಾಕಿ' ಎಂಬುದನ್ನು ಒತ್ತಿ, ನಂತರ 'ಹೌದು' ಎಂಬುದನ್ನು ಕ್ಲಿಕ್ ಮಾಡಿ.