ಗೌಪ್ಯತೆಯ ನೀತಿ

ನಾವು ಪ್ರತಿಲಿಪಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ ಮತ್ತು ಪ್ರತಿಲಿಪಿಯನ್ನು ಪ್ರಮುಖ ಕಥೆ ಹೇಳುವ ಪ್ಲಾಟ್‌ಫಾರಂ ಆಗಿಸುವಲ್ಲಿ ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ.

ಪ್ಲಾಟ್‌ಫಾರಂ ಬಳಕೆದಾರರಿಗೆ ಸಂಬಂಧಿಸಿದ ಡೇಟಾವನ್ನು ಪ್ರತಿಲಿಪಿ ಹೇಗೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬ ಎಲ್ಲ ಅಂಶಗಳನ್ನು ತಿಳಿದುಕೊಳ್ಳಲು ನಮ್ಮ ಗೌಪ್ಯತೆ ನೀತಿಯನ್ನು ಓದುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ನಮ್ಮ ಅಭ್ಯಾಸಗಳ ಬಗ್ಗೆ ಪಾರದರ್ಶಕವಾಗಿರುವುದು ಮತ್ತು ನಮ್ಮ ಬಳಕೆದಾರರ ಡೇಟಾದ ಗೌಪ್ಯತೆಗೆ ಗೌರವ ನೀಡುವುದು ನಮ್ಮ ಧ್ಯೇಯವಾಗಿದೆ. ಈ ಅಭ್ಯಾಸಗಳಿಗೆ ನೀವು ಸಮ್ಮತಿ ನೀಡದಿದ್ದರೆ, ಪ್ರತಿಲಿಪಿ ಆಪ್‌ ಮತ್ತು/ಅಥವಾ ವೆಬ್‌ಸೈಟ್‌ ಬಳಸದಿರುವಂತೆ ನಾವು ಸಲಹೆ ನೀಡುತ್ತೇವೆ.

 

ಗೌಪ್ಯತೆ ನೀತಿ

 

ನಸದಿಯಾ ಟೆಕ್ನಾಲಜೀಸ್‌ ಪ್ರೈ ಲಿ (“ಕಂಪನಿ”), ಪ್ರತಿಲಿಪಿ ವೆಬ್‌ಸೈಟ್‌ (www.pratilipi.com) (“ವೆಬ್‌ಸೈಟ್‌”),ಆಂಡ್ರಾಯ್ಡ್‌ ಮತ್ತು ಐ ಸ್ಟೋರ್ನಲ್ಲಿರುವ ಪ್ರತಿಲಿಪಿ ಅಪ್ಲಿಕೇಶನ್‌ (“ಅಪ್ಲಿಕೇಶನ್”),'ಪ್ರತಿಲಿಪಿ ಎಫ್ ಎಂ' ಮತ್ತು 'ಪ್ರತಿಲಿಪಿ ಕಾಮಿಕ್ಸ್' ಅನ್ನು ಯಾವುದೇ ವ್ಯಕ್ತಿಯು (“ಬಳಕೆದಾರರು”/”ನೀವು”/”ನಿಮ್ಮ”) ಬಳಕೆಗೆ ಸಂಬಂಧಿಸಿದ ಮಾಹಿತಿ ಬಳಕೆ, ಸಂಗ್ರಹ ಮತ್ತು ಶೇಖರಣೆಯನ್ನು ಈ ಗೌಪ್ಯತೆ ನೀತಿಯು ದಾಖಲಿಸುತ್ತದೆ.  ವಿವಿಧ ಭಾಷೆಗಳಲ್ಲಿ ಪುಸ್ತಕಗಳು, ಕವನಗಳು, ಲೇಖನಗಳು ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನು ಓದಲು ಮತ್ತು/ಅಥವಾ ಚಿತ್ರಗಳು ಮತ್ತು ಆಡಿಯೋವನ್ನು ಅಪ್‌ಲೋಡ್‌ ಮಾಡಲು (“ಪ್ರಕಟಿತ ಕೆಲಸ”) ಮತ್ತು ಅಂತಹ ಸಾಹಿತ್ಯಿಕ ಕೆಲಸಗಳ ಬಗ್ಗೆ ಕಾಮೆಂಟ್‌ಗಳು, ವಿಮರ್ಶೆಗಳನ್ನು ಅಪ್‌ಲೋಡ್‌ ಮಾಡಲು ಅಥವಾ ಕಂಪನಿ ಮತ್ತು/ಅಥವಾ ಇತರ ಬಳಕೆದಾರರೊಂದಿಗೆ ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ (“ಸೇವೆಗಳು”) ಚಾಟ್‌ಗಳ ಮೂಲಕ (“ಇನ್‌ಪುಟ್‌ಗಳು”) ಸಂವಹನ ನಡೆಸಲು ಕಂಪನಿಯು ಅನುಕೂಲ ಒದಗಿಸುತ್ತದೆ.

ಗೌಪ್ಯತೆ ನೀತಿಯನ್ನು ಬಳಕೆಯ ನೀತಿಯ ಭಾಗವಾಗಿ ಮತ್ತು ಅದರೊಂದಿಗೆ ಓದಿಕೊಳ್ಳಬೇಕು. ವೆಬ್‌ಸೈಟ್‌/ಅಪ್ಲಿಕೇಶನ್‌ ಬಳಕೆಯ ಮೂಲಕ ಈ ಗೌಪ್ಯತೆ ನೀತಿಗೆ ನೀವು ಸಮ್ಮತಿಸುತ್ತೀರಿ. ಇದಕ್ಕೆ ನೀವು ಸಮ್ಮತಿಸದಿದ್ದರೆ, ವೆಬ್‌ಸೈಟ್‌/ಅಪ್ಲಿಕೇಶನ್‌ ಬಳಕೆಯನ್ನು ದಯವಿಟ್ಟು ನಿಲ್ಲಿಸಿ.

ಕಂಪನಿಯು ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ?

 

ಬಳಕೆದಾರರಿಗೆ ಸೇವೆಗಳನ್ನು ಒದಗಿಸಲು ಮತ್ತು ಬಳಕೆದಾರರ ಅನುಭವವನ್ನು ನಿರಂತರವಾಗಿ ಸುಧಾರಿಸಲು, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು (ವ್ಯಕ್ತಿಯೊಬ್ಬನ್ನು ಗುರುತಿಸಲು ಬಳಸಬಹುದಾದ ಮಾಹಿತಿ) ಮತ್ತು ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು (ವ್ಯಕ್ತಿಯನ್ನು ನೇರವಾಗಿ ಗುರುತಿಸಲಾಗದ ಮಾಹಿತಿ) (ಒಟ್ಟಾರೆಯಾಗಿ ‘ಬಳಕೆದಾರರ ಮಾಹಿತಿ’) ಈ ಕೆಳಗೆ ನಮೂದಿಸಿದಂತೆ ಕಂಪನಿಯು ಸಂಗ್ರಹಿಸುತ್ತದೆ.

 

ಮಾಹಿತಿ ವಿಧ

ಇದನ್ನು ಒಳಗೊಂಡಿದೆ

ನೋಂದಣಿ/ಲಾಗಿನ್‌ ಡೇಟಾ

ಹೆಸರು, ಇಮೇಲ್‌ ವಿಳಾಸ/ ಫೇಸ್‌ಬುಕ್‌ ಅಥವಾ ಗೂಗಲ್‌ ಅಥವಾ ಆಪಲ್ ಲಾಗ್‌ ಇನ್‌ ವಿವರಗಳು ಹಾಗೂ ಸಾರ್ವಜನಿಕವಾಗಿರುವ ಅಥವಾ ಗೌಪ್ಯತೆ ನೀತಿಯ ಸೆಟ್ಟಿಂಗ್ಸ್‌ ಪ್ರಕಾರ ಈ ಪ್ಲಾಟ್‌ಫಾರಂಗಳಲ್ಲಿ ಹಂಚಿಕೊಳ್ಳಬಹುದಾದ ಪ್ರೊಫೈಲ್ ವಿವರಗಳು.

 

ಲಿಂಗ, ವಯಸ್ಸು, ನಗರ ಇತ್ಯಾದಿ ಬಳಕೆದಾರರು ಐಚ್ಛಿಕವಾಗಿ ನೀಡಿದ ಇತರ ವಿವರಗಳು

 

ಕಂಪನಿಯು ಘೋಷಿಸಿದ ಸ್ಫರ್ಧೆಗಳ ಮೂಲಕ ಪ್ರಕಟಿತ ಕೆಲಸಗಳ ಸಲ್ಲಿಕೆಯಲ್ಲೂ ಇದು ಬಳಕೆದಾರರಿಗೆ ಅನ್ವಯಿಸುತ್ತದೆ.

ಬಳಕೆದಾರರ ಡೇಟಾ

ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಂದ ಇನ್‌ಪುಟ್‌ಗಳು 

ಪುಟಗಳು ಅಥವಾ ಭೇಟಿ ಮಾಡಿದ ಪ್ರೊಫೈಲ್‌ಗಳು, ಪುಟದಲ್ಲಿ ವೆಚ್ಚ ಮಾಡಿದ ಸಮಯ, ಪೋರ್ಟಲ್‌ ಮೂಲಕ ನ್ಯಾವಿಗೇಶನ್‌, ಸ್ಥಳ, ಭಾಷೆ ಆದ್ಯತೆ, ಹುಡುಕಾಟ ಕ್ರಮಗಳು, ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ, ಇತರ ಬಳಕೆದಾರರೊಂದಿಗೆ ಸಂವಹನ, ಇಂತಹ ಎಲ್ಲ ಕ್ರಮಗಳ ಸಮಯ ಮತ್ತು ದಿನಾಂಕಕ್ಕೆ ಸಂಬಂಧಿಸಿದ ಡೇಟಾ

ಸಾಧನ ಡೇಟಾ

ಸಾಧನ ಗುರುತುಕಾರಕ ಟೋಕನ್‌ ಅನ್ನು ಪ್ರತಿ ಆಂಡ್ರಾಯ್ಡ್‌/ಆಪಲ್ ಬಳಕೆದಾರರು, ಫೋನ್‌ ತಯಾರಕರು, ಬ್ರೌಸರ್ ಆವೃತ್ತಿ ಮತ್ತು ವಿಧ, ಐಪಿ ವಿಳಾಸಕ್ಕೆ ಜನರೇಟ್‌ ಮಾಡಲಾಗಿರುತ್ತದೆ.

ಪಾವತಿ ಮಾಹಿತಿ 

ಬಿಲ್ಲಿಂಗ್ ಮಾಹಿತಿ , ಕ್ರೆಡಿಟ್ ಕಾರ್ಡ್ ಮಾಹಿತಿ, ಪಾವತಿ ಮತ್ತು ಬ್ಯಾಂಕಿಂಗ್ ಮಾಹಿತಿ.

ಸಂಪರ್ಕ ಪಟ್ಟಿ / ಸ್ನೇಹಿತರ ಪಟ್ಟಿ

ವೆಬ್‌ಸೈಟ್‌/ಅಪ್ಲಿಕೇಶನ್‌ ರೆಫರ್‌ ಮಾಡಲು ಬಳಕೆದಾರರ ಸಂಪರ್ಕಗಳ ಫೋನ್‌ ಸಂಖ್ಯೆಗಳನ್ನು ಹಂಚಿಕೊಳ್ಳಲು ಬಳಕೆದಾರರು ಸಮ್ಮತಿಸಿದಲ್ಲಿ, ಕೇವಲ ರೆಫರಲ್‌ಗೆ ಕಂಪನಿಯು ಅವುಗಳನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಮತ್ತು ಅಂತಹ ಮಾಹಿತಿ ಕುರಿತಂತೆ ಯಾವುದೇ ಇತರ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ರೆಫರ್ ಮಾಡಲ್ಪಟ್ಟ ಸಂಪರ್ಕಗಳು ತಮ್ಮ ವಿವರಗಳನ್ನು[email protected] ಗೆ ಬರೆಯುವ ಮೂಲಕ ತೆಗೆದುಹಾಕಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

 

ಬಳಕೆದಾರರು ಸಮ್ಮತಿಸಿದರೆ, ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಫೇಸ್‌ಬುಕ್‌ ಮೂಲಕ ಲಾಗ್‌ಇನ್‌ ಮಾಡುವಾಗ ಫೇಸ್‌ಬುಕ್‌ನಲ್ಲಿ ಬಳಕೆದಾರರ ಸ್ನೇಹಿತರ ಫೇಸ್‌ಬುಕ್‌ ಗುರುತುಗಳನ್ನು ಕಂಪನಿಯು ಸಂಗ್ರಹಿಸಬಹುದು. ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಮಧ್ಯೆ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಅಂತಹ ಮಾಹಿತಿಯನ್ನು ಕಂಪನಿ ಬಳಸಬಹುದು.

ಗ್ರಾಹಕರ ಬೆಂಬಲ

ಕಂಪನಿಯ ಅಧಿಕಾರಿಗಳಿಗೆ ಬಳಕೆದಾರರ ಬೆಂಬಲಕ್ಕೆ ವಿನಂತಿ ಮಾಡುವಲ್ಲಿ ಒದಗಿಸಿದ ಮಾಹಿತಿ.

 

ಸಂಗ್ರಹಿಸಿದ ಬಳಕೆದಾರರ ಮಾಹಿತಿಯನ್ನು ಕಂಪನಿ ಏನು ಮಾಡುತ್ತದೆ?

 

ಕಂಪನಿಯು ಬಳಕೆದಾರರ ಮಾಹಿತಿಯನ್ನು ಇದಕ್ಕೆ ಬಳಸುತ್ತದೆ:

-    ಕಂಪನಿಯ ಬಳಕೆಯ ನೀತಿ ಜಾರಿಗೊಳಿಸುವುದೂ ಸೇರಿದಂತೆ ವೆಬ್‌ಸೈಟ್‌/ಅಪ್ಲಿಕೇಶನ್‌ ಬಳಕೆಯನ್ನು ಅನುವುಗೊಳಿಸುವುದು ಮತ್ತು ಸೌಲಭ್ಯ ಒದಗಿಸುವುದು

-    ಬಳಕೆದಾರರಿಗೆ ಕಡ್ಡಾಯ ಮತ್ತು ಐಚ್ಛಿಕ ಅಧಿಸೂಚನೆಗಳನ್ನು ಕಳುಹಿಸುವುದು

-    ಬಳಕೆದಾರರೊಂದಿಗೆ ಸಂವಹನ ನಡೆಸುವುದು

- ಪಾವತಿ ಮತ್ತು ಬಿಲ್ಲಿಂಗ್ : ಬಳಕೆದಾರರು ವರ್ಚುವಲ್ ಕರೆನ್ಸಿ ಬಳಸಿ ಸೇವೆಗಳನ್ನು ಬಳಸಿದಾಗ ಮತ್ತು/ಅಥವಾ ಯಾವುದೇ ಪಾವತಿತ ವ್ಯವಸ್ಥೆಯನ್ನು ಕಂಪನಿ ನೀಡಿದಾಗ 

-    ವೆಬ್‌ಸೈಟ್‌/ಅಪ್ಲಿಕೇಶನ್‌ ಮತ್ತು ಸೇವೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು (ಹೊಸ ಸೌಲಭ್ಯಗಳನ್ನು ಪರಿಚಯಿಸುವುದು ಮತ್ತು ಬಳಕೆದಾರರು ಮತ್ತು ಪ್ರಕಟಿತ ಕೆಲಸಗಳಿಗೆ ಭದ್ರತಾ ಕ್ರಮಗಳ ವೃದ್ಧಿಯಂತಹ)

-    ಗ್ರಾಹಕೀಯಗೊಳಿಸುವಿಕೆ, ವೈಯಕ್ತಿಕಗೊಳಿಸುವಿಕೆ ಮತ್ತು ಆಪ್ಟಿಮೈಸ್‌ ಮಾಡುವ ಮೂಲಕ ಬಳಕೆದಾರರ ಅನುಭವವನ್ನು ಸುಧಾರಿಸುವುದು

-    ಸಮಸ್ಯೆ ಪರಿಹಾರ, ವಿಶ್ಲೇಷಣೆ, ಸಮೀಕ್ಷೆಗಳನ್ನು ನಡೆಸುವುದು, ಬಳಕೆದಾರರ ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಇತ್ಯಾದಿಯನ್ನು ಒಳಗೊಂದು ವೆಬ್‌ಸೈಟ್‌/ಅಪ್ಲಿಕೇಶನ್‌ ನಿರ್ವಹಿಸುವುದು

-    ಬಳಕೆದಾರರಲ್ಲಿ ಸಮುದಾಯಗಳನ್ನು ನಿರ್ಮಿಸುವುದು

 

ಯಾವುದೇ ತೃತೀಯ ಪಕ್ಷಗಳು ಬಳಕೆದಾರರ ಮಾಹಿತಿಯನ್ನು ಪಡೆಯಬಹುದೇ?

 

ಯಾವುದೇ ಬಳಕೆದಾರರ ಮಾಹಿತಿಯನ್ನು ಯಾವುದೇ ತೃತೀಯ ಪಕ್ಷಕ್ಕೆ ಕಂಪನಿಯು ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ಈ ಕೆಳಗೆ ವಿವರಿಸಿದಂತೆ ತೃತೀಯ ಪಕ್ಷಗಳಿಂದ ಬಳಕೆದಾರರ ಮಾಹಿತಿಯನ್ನು ಪಡೆಯಬಹುದು.

 

  1. ವಹಿವಾಟು ಪಾಲುದಾರರು: ಈ ಕೆಳಗಿನ ಟೇಬಲ್‌ನಲ್ಲಿ ನಮೂದಿಸಿದಂತೆ ಸ್ವಂತ ಗೌಪ್ಯತೆ ನಿಯಮಗಳಿಗೆ ಅನುಗುಣವಾಗಿ ಬಳಕೆದಾರರ ಮಾಹಿತಿಯನ್ನು ನಿರ್ವಹಿಸುವ ಅಧಿಕೃತ ತೃತೀಯ ಪಕ್ಷದ ವಹಿವಾಟು ಪಾಲುದಾರರು ಇದರಲ್ಲಿ ತೊಡಗಿಸಿಕೊಂಡಿರುತ್ತಾರೆ:

 

    i.    ಈ ಕೆಳಗಿನಂತೆ ವೆಬ್‌ಸೈಟ್‌/ಅಪ್ಲಿಕೇಶನ್‌ ಮತ್ತು ಸೇವೆಗಳ ಸುಧಾರಣೆಗೆ ಬಳಕೆದಾರರ ಮಾಹಿತಿಯನ್ನು ವಿಶ್ಲೇಷಿಸುವುದು:

 

ಒದಗಿಸಿದ ಸೇವೆಗಳು

ಸಂಸ್ಥೆ ಹೆಸರು

ಗೌಪ್ಯತೆ ನೀತಿಗೆ ಲಿಂಕ್‌ಗಳು

ಅನಾಲಿಟಿಕ್ಸ್‌ ಸೇವೆಗಳು

ಆಂಪ್ಲಿಟ್ಯೂಡ್ (ಸ್ಥಳ: ಯುಎಸ್‌ಎ),

https://amplitude.com/privacy

ಕ್ಲೆವರ್‌ಟ್ಯಾಪ್‌

https://clevertap.com/privacy-policy/

ಫೇಸ್‌ಬುಕ್‌ ಅನಾಲಿಟಿಕ್ಸ್‌

https://www.facebook.com/policy.php

ಗೂಗಲ್‌ ಅನಾಲಿಟಿಕ್ಸ್ (ಸ್ಥಳ ಯುಎಸ್ಎ)

https://www.google.com/policies/privacy/partners/

https://firebase.google.com/support/privacy

https://policies.google.com/privacy#infosecurity

https://support.google.com/analytics/answer/6004245

ನೊಟಿಫಿಕೇಶನ್ಸ್‌ ಸರ್ವೀಸಸ್‌

ಗೂಗಲ್‌ ಫೈರ್‌ಬೇಸ್‌ (ಸ್ಥಳ: ಯುಎಸ್‌-ಸೆಂಟ್ರಲ್‌)

ಬಳಕೆದಾರರಿಗೆ ಕಂಟೆಂಟ್‌ ಡೆಲಿವರಿ ಮಾಡಲು

ಲೈಮ್‌ಲೈಟ್‌

https://media.limelight.com/documents/Limelight+Networks+Privacy+Policy+06-2018.pdf

ಪಾವತಿಯನ್ನು ಮಾಡಲು Razorpay

https://razorpay.com/privacy/

ಕ್ಲೌಡ್‌ಫೇರ್‌

https://www.cloudflare.com/privacypolicy/

 

 

   ii.    ಸೇವೆಗಳನ್ನು ಸುಧಾರಿಸಲು ಸಹಾಯ ಮಾಡುವುದಕ್ಕಾಗಿ ಸಂಶೋಧನೆ, ಸಮೀಕ್ಷೆ ಇತ್ಯಾದಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಉತ್ತಮ ನಂಬಿಕೆಯಲ್ಲಿ ಕಂಪನಿಯಿಂದ ಗುರುತಿಸಿದಂತೆ ಕಂಪನಿಗೆ ವಿವಿಧ ಸೇವೆಗಳನ್ನು ಒದಗಿಸುವುದು.

 

        2. ವಿಶೇಷ ಸನ್ನಿವೇಶಗಳು: ಬಳಕೆದಾರರ ಬಗ್ಗೆ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಕಂಪನಿಯು ಬಹಿರಂಗಗೊಳಿಸುವುದು

    i.    ಕಾನೂನು ಅಥವಾ ದಾವೆಯಿಂದ ಅಗತ್ಯವಿದ್ದಂತೆ

   ii.    ರಾಷ್ಟ್ರೀಯ ಭದ್ರತೆ, ಕಾನೂನು ಜಾರಿ ಅಥವಾ ಸಾರ್ವಜನಿಕ ಪ್ರಾಮುಖ್ಯತೆಯ ಇತರ ವಿಷಯಗಳಿಗೆ ಅಗತ್ಯ ಕ್ರಮಗಳನ್ನು ಕಂಪನಿ ಗುರುತಿಸಿದರೆ

   iii.    ತನ್ನ ಬಳಕೆಯ ನೀತಿ ಜಾರಿಗೆ

       iv.    ಮೋಸ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ

 

  1. ಕಾರ್ಪೊರೇಟ್‌ ಮರುರಚನೆ: ವಿಲೀನ, ಸ್ವಾಧೀನ ಅಥವಾ ಕಂಪನಿಯ ಎಲ್ಲ ಅಥವಾ ಭಾಗಶಃ ಸ್ವತ್ತನ್ನು ತೃತೀಯ ಪಕ್ಷಕ್ಕೆ ಮಾರಾಟ ಮಾಡುವುದರ ಫಲಿತಾಂಶವಾಗಿ ಇನ್ನೊಂದು ಪಕ್ಷಕ್ಕೆ ಬಳಕೆದಾರರ ಮಾಹಿತಿಯನ್ನು ವರ್ಗಾವಣೆ ಮಾಡುವ ಹಕ್ಕನ್ನು ಕಂಪನಿಯು ಕಾಯ್ದಿರಿಸಿದೆ.

  2. ಬಳಕೆದಾರರು ಪ್ರಕಟಿಸಿದ ಸಾಮಗ್ರಿ: ಲೇಖಕರು ಮತ್ತು ಓದುಗರ ಮಧ್ಯೆ ಸಮುದಾಯ ನಿರ್ಮಾಣ ಪ್ರಯತ್ನದಲ್ಲಿ ಪರಸ್ಪರ ಸಂವಹನ ನಡೆಸಲು ಬಳಕೆದಾರರಿಗೆ ಕಂಪನಿಯು ಅನುವು ಮಾಡುತ್ತದೆ. ಈ ಮೂಲಕ, ಬಳಕೆದಾರರ ಹೆಸರುಗಳು, ಕಾಮೆಂಟ್‌ಗಳು, ಇಷ್ಟಗಳು ಇತ್ಯಾದಿ ಸಾರ್ವಜನಿಕವಾಗುತ್ತವೆ ಮತ್ತು ಇತರ ಬಳಕೆದಾರರು ಇದನ್ನು ನೋಡಬಹುದಾಗಿದೆ. ಸಾರ್ವಜನಿಕವಾಗಿಸುವ ಉದ್ದೇಶವಲ್ಲದ ಇನ್‌ಪುಟ್‌ಗಳನ್ನು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಪ್ರಕಟಿಸದಿರುವುದನ್ನು ಬಳಕೆದಾರರು ಖಚಿತಪಡಿಸಿಕೊಳ್ಳಬೇಕು.

 

ಬಳಕೆದಾರರ ಮಾಹಿತಿಯನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅವುಗಳನ್ನು ಹೇಗೆ ಸುರಕ್ಷಿತಗೊಳಿಸಲಾಗುತ್ತದೆ?

ಕಂಪನಿಯು ವೆಬ್‌ಸೈಟ್‌/ಅಪ್ಲಿಕೇಶನ್‌ ಮತ್ತು ಎಲ್ಲ ಬಳಕೆದಾರರ ಮಾಹಿತಿಯನ್ನು ಭಾರತದ ಮುಂಬೈನಲ್ಲಿರುವ ಅಮೇಜಾನ್‌ ವೆಬ್‌ ಸರ್ವೀಸಸ್‌ನ ಕ್ಲೌಡ್‌ ಮೂಲಸೌಕರ್ಯದಲ್ಲಿ ಹೋಸ್ಟ್‌ ಮಾಡುತ್ತದೆ. ಸಂಗ್ರಹಿಸಿದ ಡೇಟಾವನ್ನು ರಕ್ಷಿಸಲು ಸುಸ್ಥಿರ ಸುರಕ್ಷತಾ ಅಭ್ಯಾಸಗಳನ್ನು ಅಮೇಜಾನ್‌ ವೆಬ್‌ ಸರ್ವೀಸಸ್‌ ಹೊಂದಿದ್ದು, ಇದರ ವಿವರಗಳನ್ನು ಇಲ್ಲಿ ನೋಡಬಹುದು https://aws.amazon.com/privacy/?nc1=f_pr. ಕೆಲವು ಮಾಹಿತಿಯನ್ನು ಗೂಗಲ್‌ ಫೈರ್‌ಬೇಸ್‌ ಮೂಲಸೌಕರ್ಯದಲ್ಲೂ ಸಂಗ್ರಹಿಸಲಾಗಿದೆ.

ಅಗತ್ಯವಿದ್ದಲ್ಲಿ ಬಳಕೆದಾರರ ಮಾಹಿತಿಯನ್ನು ಕೆಲವೇ ಉದ್ಯೋಗಿಗಳು ವೀಕ್ಷಿಸುವುದನ್ನು ಖಚಿತಪಡಿಸುವ ಅಗತ್ಯಕ್ಕೆ ಆಧರಿತ ತಿಳಿವಳಿಕೆ ನೀತಿಯನ್ನು ಕಂಪನಿಯು ಆಂತರಿಕವಾಗಿ ಅನುಸರಿಸುತ್ತದೆ. ಪಾಸ್‌ವರ್ಡ್‌ಗಳನ್ನು sha512 ಬಳಸಿ ಎನ್‌ಕ್ರಿಪ್ಟ್‌ ಮಾಡಲಾಗಿದೆ ಮತ್ತು ಆಂತರಿಕವಾಗಿ ಸಂಗ್ರಹಿಸಲಾಗಿದೆ. ತಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿಟ್ಟುಕೊಂಡಿದ್ದೇವೆ ಮತ್ತು ಅನಧಿಕೃತ ರೀತಿಯಲ್ಲಿ ಯಾರೊಂದಿಗೂ ಹಂಚಿಕೊಳ್ಳಲಾಗಿಲ್ಲ ಎಂಬುದನ್ನು ಬಳಕೆದಾರರು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಬಳಕೆಯಿಂದ ಬಳಕೆದಾರರ ಮಾಹಿತಿಯ ಭದ್ರತೆಯಲ್ಲಿ ರಾಜಿ ಉಂಟಾಗಬಹುದು.

ಇಂಟರ್ನೆಟ್‌ನ ರೀತಿಯನ್ನು ಗಮನದಲ್ಲಿಟ್ಟುಕೊಂಡು, ತುಂಬಾ ಸುಸ್ಥಿರ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಬಳಕೆದಾರರ ಮಾಹಿತಿಯ ಸುರಕ್ಷತೆಗೆ ಗ್ಯಾರಂಟಿ ನೀಡಲಾಗದು ಎಂಬುದನ್ನು ಬಳಕೆದಾರರು ಸಮ್ಮತಿಸುತ್ತಾರೆ.

ಬಳಕೆದಾರರ ಮಾಹಿತಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಅದರಿಂದ ಹೊರಬರುವ ಆಯ್ಕೆಗಳು ಯಾವುವು?

ಬಳಕೆದಾರರ ಮಾಹಿತಿಯನ್ನು ಕಂಪನಿಯು ಈ ಮುಂದಿನ ರೀತಿಯಲ್ಲಿ ಸಂಗ್ರಹಿಸುತ್ತದೆ:

ಬಳಕೆದಾರರು ಒದಗಿಸಿದ ಮಾಹಿತಿ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಲಾಗ್‌ಇನ್‌ ಮಾಡುವಾಗ/ನೋಂದಣಿ ಮಾಡುವಾಗ ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಇನ್‌ಪುಟ್‌ಗಳನ್ನು ನೀಡುವಾಗ ಬಳಕೆದಾರರು ಒದಗಿಸಿದ ವಿವರಗಳು.

ವಿಧ

ನೀಡಿರುವುದು

ಟ್ರ್ಯಾಕಿಂಗ್‌ನ ವಿಧ

ಕಡ್ಡಾಯ

ಕಂಪನಿ

ಬಳಕೆದಾರರಿಂದ ವೆಬ್‌ಸೈಟ್‌ ಬಳಕೆಗೆ ಅನುಕೂಲ

ವಿಶ್ಲೇಷಣೆ ಉದ್ದೇಶಗಳು

ವಿಶ್ಲೇಷಣೆ

ತೃತೀಯ ಪಕ್ಷಗಳು (ಗೂಗಲ್‌, ಫೇಸ್‌ಬುಕ್‌, ಆಂಪ್ಲಿಟ್ಯೂಡ್‌)

ಬಳಕೆದಾರರ ಮ್ಯಾಪಿಂಗ್‌

ವಿಶ್ಲೇಷಣೆ ಉದ್ದೇಶಗಳು

ಕುಕೀಗಳ ಮೂಲಕ ಸಂಗ್ರಹಿಸಿರುವುದು: ವೆಬ್‌ಸೈಟ್‌ ಅನ್ನು ಪ್ರವೇಶಿಸುವ ಮೂಲಕ ಬ್ರೌಸರ್‌ನಲ್ಲಿ ಸ್ಥಳೀಯವಾಗಿ ಇಟ್ಟ ಸಣ್ಣ ಫೈಲ್‌ಗಳೇ ಕುಕೀಗಳಾಗಿವೆ. ಈ ಕೆಳಗೆ ವಿವರಿಸಿದಂತೆ ವಿವಿಧ ಉದ್ದೇಶಗಳಿಗೆ ಕಂಪನಿಯು ಕುಕೀಗಳನ್ನು ಇಡುತ್ತದೆ.

 

 

 

 

ತನ್ನ ಬ್ರೌಸರಿನಲ್ಲಿ ಬಳಕೆದಾರರು ಕುಕೀಗಳಿಂದ ಹೊರಬರಲು ಆಯ್ಕೆ ಮಾಡಿಕೊಳ್ಳಬಹುದು. ಆದಾಗ್ಯೂ, ವೆಬ್‌ಸೈಟ್‌ನ ಕಾರ್ಯಕ್ಷಮತೆಯನ್ನು ಇದು ಬಾಧಿಸಬಹುದು.

ಎಪಿಐ ಕರೆಗಳು: ವಿಭಿನ್ನ ಪುಟಗಳಿಗೆ ನ್ಯಾವಿಗೇಟ್‌ ಮಾಡುವುದು, ಬಟನ್‌ಗಳ ಮೇಲೆ ಕ್ಲಿಕ್‌ ಮಾಡುವುದು, ಕಂಟೆಂಟ್‌ ಓದುವುದು ಇತ್ಯಾದಿಯಂತಹ ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಒಂದು ಚಟುವಟಿಕೆಯನ್ನು ಬಳಕೆದಾರರು ನಡೆಸಿದಾಗ ಜನರೇಟ್‌ ಆದ ಡೇಟಾವನ್ನು ಎಪಿಐ ಕರೆಗಳು ಒಳಗೊಂಡಿರುತ್ತವೆ. ಈ ಡೇಟಾವನ್ನು ಕಂಪನಿಯು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಮತ್ತು ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದಂತೆ ಅಧಿಕೃತ ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಬಳಕೆದಾರರ ಮಾಹಿತಿಯ ಕುರಿತಾಗಿ ಬಳಕೆದಾರರಿಗೆ ಯಾವ ಹಕ್ಕುಗಳಿವೆ?

ನೋಂದಣಿ: ಕಡ್ಡಾಯವಾಗಿ ವೈಯಕ್ತಿಕವಾಗಿ ಗುರುತಿಸಲ್ಪಡುವ ಮಾಹಿತಿಯನ್ನು ಹಂಚಿಕೊಳ್ಳಲು ಬಯಸದಿದ್ದರೆ ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ನೋಂದಣಿ ಮಾಡಿಕೊಳ್ಳದಿರುವ ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ. ವೆಬ್‌ಸೈಟ್‌/ಅಪ್ಲಿಕೇಶನ್‌ ಅನ್ನು ಬಳಸುವ ಅವರ ಸಾಮರ್ಥ್ಯವನ್ನು ಕಂಪನಿಯು ಸಕಾರಣವಾಗಿ ನಿರ್ಬಂಧಿಸಬಹುದು.

ಬದಲಾವಣೆ ಅಥವಾ ಅಳಿಸುವಿಕೆ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ತಮ್ಮ ಖಾತೆ ಸೆಟ್ಟಿಂಗ್‌ಗಳಿಂದ ಪ್ರೊಫೈಲ್‌ ವಿವರಗಳನ್ನು ಬಳಕೆದಾರರು ತಿದ್ದುಪಡಿ ಮಾಡಬಹುದು ಅಥವಾ ಅಳಿಸಬಹುದು. ತಮ್ಮ ಮಾಹಿತಿಯನ್ನು ನವೀಕರಿಸಿಡುವಂತೆ ಬಳಕೆದಾರರಿಗೆ ಪ್ರೋತ್ಸಾಹಿಸಲಾಗುತ್ತದೆ.

ಪ್ರೊಫೈಲ್‌ ಅಳಿಸುವಿಕೆ: ಬಳಕೆದಾರರು ತಮ್ಮ ಪ್ರೊಫೈಲ್‌ ಅಳಿಸಲು ಕೇಳಬಹುದು ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಅವರು ಪ್ರಕಟಿಸಿರಬಹುದಾದ ಯಾವುದೇ ಕಂಟೆಂಟ್‌ ಜೊತೆಗೆ ಅವರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಅಳಿಸಲಾಗುತ್ತದೆ. ಆದಾಗ್ಯೂ, ಬಳಕೆದಾರರ ಮಾಹಿತಿಯ ಕೆಲವು ಭಾಗಗಳು ಇನ್ನೂ ಇಂಟರ್ನೆಟ್‌ನಲ್ಲಿ ಇರಬಹುದು. ಮುಂದುವರಿದು, ಬಳಕೆದಾರರ ಎಲ್ಲ ಇತಿಹಾಸವು ಕಂಪನಿಯೊಂದಿಗೆ ಇರುತ್ತದೆ.

ಸೂಚನೆಗಳು: ವೆಬ್‌ಸೈಟ್‌/ಅಪ್ಲಿಕೇಶನ್‌ ಮತ್ತು ಇಮೇಲ್‌ ಮೂಲಕ ಶಿಫಾರಸು ಮಾಡಿದ ಓದುವಿಕೆಗೆ ಸೂಚನೆಗಳ ಮೂಲಕ ಬಳಕೆದಾರರೊಂದಿಗೆ ತೊಡಗಿಸಿಕೊಳ್ಳಲು ಕಂಪನಿ ಬಯಸುತ್ತದೆ. ಖಾತೆ ಸೆಟ್ಟಿಂಗ್‌ಗಳ ಮೂಲಕ ಇಂತ ಸೂಚನೆಗಳ ಆವೃತ್ತಿಯನ್ನು ಬಳಕೆದಾರರು ನಿಗದಿಸಬಹುದು ಅಥವಾ ಅವುಗಳಿಂದ ಸಂಪೂರ್ಣವಾಗಿ ಹೊರಬರಬಹುದು. ಆದರೂ, ಬಳಕೆದಾರರ ಖಾತೆ ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಸಂಬಂಧಿಸಿದ ಸೂಚನೆಗಳ ಕಳುಹಿಸುವುದನ್ನು ಮುಂದುವರಿಸಲಾಗುತ್ತದೆ.

ಹೊರಹೋಗುವುದು: ಇಲ್ಲಿ ನಮೂದಿಸಿದ ಯಾವುದೇ ಉದ್ದೇಶಕ್ಕೆ ವೆಬ್‌ಸೈಟ್/‌ಅಪ್ಲಿಕೇಶನ್‌ನಲ್ಲಿರುವ ತನ್ನ ಬಳಕೆದಾರರ ಮಾಹಿತಿಯ ಬಳಕೆಯನ್ನು ಕಂಪನಿಯು ನಿರ್ಬಂಧಿಸಬೇಕು ಎಂದು ಬಳಕೆದಾರರು ಬಯಸಿದರೆ, ಅವರು ಈ ವಿಳಾಸಕ್ಕೆ ತಿಳಿಸಬಹುದು [email protected]. ವಿನಂತಿಗಳಿಗೆ ಅನುಗುಣವಾಗಿ ಬಳಕೆದಾರರಿಗೆ ನೆರವಾಗಲು ಮತ್ತು ಅವರ ವಿನಂತಿಗಳನ್ನು ಪೂರೈಸಲು ಕಂಪನಿಯು ಬದ್ಧವಾಗಿದೆ. ಆದರೆ, ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಅನುಭವದಲ್ಲಿ ಇಂತಹ ಯಾವುದೇ ಕ್ರಮಗಳು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.

ಈ ಗೌಪ್ಯತೆ ನೀತಿಗೆ ಬದಲಾವಣೆಗಳು

ಕಾಲಕಾಲಕ್ಕೆ ಈ ಗೌಪ್ಯತೆ ನೀತಿಯನ್ನು ಕಂಪನಿಯು ನವೀಕರಿಸಬಹುದು ಮತ್ತು ಪರಿಷ್ಕರಿಸಬಹುದು. ಪರಿಷ್ಕರಿಸಿದ ಗೌಪ್ಯತೆ ನೀತಿಯನ್ನು ಇಲ್ಲಿ ಸೂಚನೆಯಂತೆ ಪ್ರಕಟಿಸಲಾಗುತ್ತದೆ: http://www.pratilipi.com/privacy

ಈ ಗೌಪ್ಯತೆ ನೀತಿಗೆ ಬದಲಾವಣೆಗಳ ಕುರಿತು ಮಾಹಿತಿಯುಕ್ತವಾಗಿರಲು ಈ ಪುಟವನ್ನು ಆಗಾಗ್ಗೆ ಪರಿಶೀಲಿಸುವಂತೆ ಬಳಕೆದಾರರಿಗೆ ಸಲಹೆ ಮಾಡಲಾಗಿದೆ.

ಗೌಪ್ಯತೆ ನೀತಿಯ ಯಾವುದೇ ಬದಲಾವಣೆಗೆ ಬಳಕೆದಾರರು ಅಸಮ್ಮತಿ ಹೊಂದಿದರೆ, ವೆಬ್‌ಸೈಟ್‌/ಅಪ್ಲಿಕೇಶನ್‌/ಸೇವೆಗಳ ಪ್ರವೇಶ ಅಥವಾ ಬಳಕೆಯಿಂದ ಬಳಕೆದಾರರು ದೂರವಿರಬೇಕು. ಪರಿಷ್ಕರಿಸಿದ ನೀತಿಯನ್ನು ಪ್ರಕಟಿಸಿದ ನಂತರವೂ ಬಳಕೆದಾರರು ಬಳಕೆಯನ್ನು ಮುಂದುವರಿಸಿದರೆ, ಬದಲಾವಣೆಗೆ ಅವರ ಸಮ್ಮತಿ ಮತ್ತು ಸ್ವೀಕೃತಿಯನ್ನು ಸೂಚಿಸುತ್ತದೆ ಮತ್ತು ಬಳಕೆದಾರರು ಇದಕ್ಕೆ ಬದ್ಧವಾಗಿರುತ್ತಾರೆ.

ಸಂಪರ್ಕ

ಈ ಗೌಪ್ಯತೆ ನೀತಿಯ ಬಗ್ಗೆ ಯಾವುದೇ ಪ್ರಶ್ನೆಗಳು / ಅನುಮಾನಗಳು / ಕಾನೂನು ವಿಚಾರಣೆ ಇದ್ದಲ್ಲಿ, ಬಳಕೆದಾರರು ನಮ್ಮನ್ನು ಸಂಪರ್ಕಿಸಬಹುದು:[email protected]

ಸಂಘರ್ಷ

ಇಂಗ್ಲಿಷ್‌ನಲ್ಲಿರುವ ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಲಭ್ಯವಾಗಿಸಿರಬಹುದಾದ ಯಾವುದೇ ಭಾಷೆಯಲ್ಲಿನ ಗೌಪ್ಯತೆ ನೀತಿಯ ವ್ಯಾಖ್ಯಾನದಲ್ಲಿ ಯಾವುದೇ ಸಂಘರ್ಷ ಉಂಟಾದಲ್ಲಿ, ಇಂಗ್ಲಿಷ್‌ ಆವೃತ್ತಿಯು ಮೇಲುಗೈಯಾಗಿರುತ್ತದೆ.

 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?