ಸೂಚನೆ: ವಿನಂತಿಯ ಪ್ರಮಾಣಗಳ ಆಧಾರದ ಮೇಲೆ ನಿಮ್ಮ ಪಾಸ್‌ವರ್ಡ್ ಮರುಹೊಂದಿಸುವ ಲಿಂಕ್'ಅನ್ನು ಪಡೆಯಲು 24 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. 24 ಗಂಟೆಗಳ ನಂತರವೂ ನಿಮ್ಮ ಪಾಸ್‌ವರ್ಡ್ ಮರುಹೊಂದಿಸುವ ಲಿಂಕ್'ಅನ್ನು ಸ್ವೀಕರಿಸದಿದ್ದರೆ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ.
ನಿಮ್ಮ ಖಾತೆಗೆ ಲಾಗ್ ಇನ್ ಆಗಲು ಪಾಸ್‌ವರ್ಡ್ ಕೀಲಿ ಎಂದು ಹೇಳಬಹುದು. ನೀವು ಅದನ್ನು ಯಾವುದೇ ಸಂದರ್ಭದಲ್ಲಿ ಬದಲಾಯಿಸಬಹುದು ಅಥವಾ ನೀವು ಅದನ್ನು ಮರೆತಿದ್ದರೆ ಅದನ್ನು ಮರುಹೊಂದಿಸಬಹುದು.
ನಿಮ್ಮ ಪಾಸ್‌ವರ್ಡ್ ಕುರಿತು ಕೆಲವು ಪ್ರಮುಖ ಮಾಹಿತಿ ಇಲ್ಲಿದೆ:
· ಇದು 6 ರಿಂದ 20 ಅಕ್ಷರಗಳವರೆಗೆ ಇರಬಹುದು.
· ನೀವು ದೊಡ್ಡ ಮತ್ತು ಸಣ್ಣ ಅಕ್ಷರಗಳನ್ನು [A-Z, a-z], ಸಂಖ್ಯೆಗಳು [0-9] ಅಥವಾ ^%$& ನಂತಹ ಚಿಹ್ನೆಗಳನ್ನು ಬಳಸಬಹುದು
· ನೀವು ಲಾಗ್ ಇನ್ ಆದಾಗ ಅಥವಾ ಲಾಗ್ ಔಟ್ ಆದಾಗಲೂ ನಿಮ್ಮ ಪಾಸ್ವರ್ಡ್'ಅನ್ನು ಮರುಹೊಂದಿಸಬಹುದು
· ನಿಮ್ಮ ಪಾಸ್ವರ್ಡ್ ಅನ್ನು ನೀವು ಮರುಹೊಂದಿಸಿದರೆ, ಇದು ನಿಮ್ಮನ್ನು ಲಾಗ್ ಇನ್ ಆಗಿರುವ ಎಲ್ಲಾ ಸಾಧನಗಳಿಂದ ಲಾಗ್ ಔಟ್ ಮಾಡುತ್ತದೆ
· ನಿಮ್ಮ ಪಾಸ್ವರ್ಡ್'ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ!
ದಯವಿಟ್ಟು ಗಮನಿಸಿ: ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸದೊಂದಿಗೆ ಮಾತ್ರ ನಿಮ್ಮ ಪಾಸ್ವರ್ಡ್ ಅನ್ನು ಮರುಹೊಂದಿಸಬಹುದು. ಪಾಸ್ವರ್ಡ್ ಮರುಹೊಂದಿಸುವ ಲಿಂಕ್'ಅನ್ನು ಬೇರೆ ಯಾವುದೇ ಇಮೇಲ್'ಗೆ ಕಳುಹಿಸಲಾಗುವುದಿಲ್ಲ. ಇದರರ್ಥ ನೀವು ತಪ್ಪು ಇಮೇಲ್ ವಿಳಾಸದೊಂದಿಗೆ ನಿಮ್ಮ ಖಾತೆಯನ್ನು ರಚಿಸಿದರೆ, ನಿಮ್ಮ ಪಾಸ್ವರ್ಡ್'ಅನ್ನು ಮರುಹೊಂದಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ನಿಮ್ಮ ಪಾಸ್ವರ್ಡ್'ಅನ್ನು ಮರುಹೊಂದಿಸುವಿಕೆ
ನಿಮ್ಮ ಪಾಸ್‌ವರ್ಡ್ ನಿಮಗೆ ತಿಳಿದಿಲ್ಲದಿದ್ದರೆ ಅಥವಾ ನೆನಪಿಲ್ಲದಿದ್ದರೆ, ನೀವು ಅದನ್ನು ಮರುಹೊಂದಿಸಬಹುದು. ಪಾಸ್‌ವರ್ಡ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ ಮತ್ತು ನಿಮ್ಮ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಪಾಸ್ವರ್ಡ್'ಅನ್ನು ವೀಕ್ಷಿಸಲು ಯಾವುದೇ ಮಾರ್ಗವಿಲ್ಲ.
ಆಂಡ್ರಾಯ್ಡ್ ಮೂಲಕ:
-
ನಿಮ್ಮ ಖಾತೆಯಿಂದ ಲಾಗ್ ಔಟ್ ಆಗಿ
-
ಅಪ್ಲಿಕೇಶನ್ ತೆರೆಯಿರಿ
-
ಇಮೇಲ್ ಮೂಲಕ ಸೈನ್ ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ನಿಮ್ಮ ಖಾತೆಗೆ ಲಿಂಕ್ ಮಾಡಲಾದ ಇಮೇಲ್'ಅನ್ನು ನಮೂದಿಸಿ.
-
ಪಾಸ್‌ವರ್ಡ್ ಮರೆತಿರುವಿರಾ?(ಫಾರ್ಗಾಟ್ ಪಾಸ್ವರ್ಡ್) ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ವೆಬ್ಸೈಟ್'ನಿಂದ:
-
www.pratilipi.com ಗೆ ಹೋಗಿ
-
ಬಲ ಮೇಲ್ಭಾಗದಲ್ಲಿರುವ ಸೈನ್ ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಪಾಸ್‌ವರ್ಡ್ ಮರೆತಿರುವಿರಾ?(ಫಾರ್ಗಾಟ್ ಪಾಸ್ವರ್ಡ್) ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ನಮೂದಿಸಿ
-
ಪಾಸ್ವರ್ಡ್ ಮರುಹೊಂದಿಸಿ ಮೇಲೆ ಕ್ಲಿಕ್ ಮಾಡಿ
ನಿಮ್ಮ ಪಾಸ್ವರ್ಡ್'ಅನ್ನು ಬದಲಾಯಿಸಲು
ನಿಮ್ಮ ಪಾಸ್‌ವರ್ಡ್ ನಿಮಗೆ ತಿಳಿದಿದ್ದರೆ, ನೀವು ಅದನ್ನು ನಿಮ್ಮ ಸೆಟ್ಟಿಂಗ್'ನಲ್ಲಿ ಬದಲಾಯಿಸಬಹುದು.
ಆಂಡ್ರಾಯ್ಡ್ ಮೂಲಕ:
-
ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಫೈಲ್‌ಗೆ ಹೋಗಿ
-
ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಖಾತೆ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ
-
ಪಾಸ್‌ವರ್ಡ್ ಬದಲಾಯಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಹಳೆಯ ಪಾಸ್‌ವರ್ಡ್'ಅನ್ನು ಒಮ್ಮೆ ನಮೂದಿಸಿ, ನಿಮ್ಮ ಹೊಸ ಪಾಸ್‌ವರ್ಡ್'ಅನ್ನು ಎರಡು ಬಾರಿ ನಮೂದಿಸಿ
ವೆಬ್‌ನಿಂದ:
-
ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಫೈಲ್‌ಗೆ ಹೋಗಿ
-
ಸೆಟ್ಟಿಂಗ್'ನ್ನು ಆಯ್ಕೆಮಾಡಿ
-
'ಅಪ್‌ಡೇಟ್ ಪಾಸ್‌ವರ್ಡ್' ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಹಳೆಯ ಪಾಸ್‌ವರ್ಡ್'ಅನ್ನು ಒಮ್ಮೆ ನಮೂದಿಸಿ, ನಿಮ್ಮ ಹೊಸ ಪಾಸ್‌ವರ್ಡ್'ಅನ್ನು ಎರಡು ಬಾರಿ ನಮೂದಿಸಿ
-
ಬದಲಾವಣೆಗಳನ್ನು ಉಳಿಸಿ ಮೇಲೆ ಕ್ಲಿಕ್ ಮಾಡಿ
ಸಮಸ್ಯೆ ಸರಿಹೋಗದಿದ್ದಲ್ಲಿ ಸಹಾಯಕ್ಕಾಗಿ ಮನವಿ ಸಲ್ಲಿಸಿ. ನಿಮ್ಮ ಪ್ರೊಫೈಲ್'ಗೆ ಲಿಂಕ್ ಆಗಿರುವ ಈಮೇಲ್ ಮೂಲಕವೇ ನಮಗೆ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.