ಬಳಕೆಯ ನಿಯಮಗಳು

ನಾವು ಪ್ರತಿಲಿಪಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ ಮತ್ತು ಪ್ರತಿಲಿಪಿಯನ್ನು ಪ್ರಮುಖ ಕಥೆ ಹೇಳುವ ಪ್ಲಾಟ್‌ಫಾರಂ ಆಗಿಸುವಲ್ಲಿ ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ.

ಪ್ರತಿಲಿಪಿಯನ್ನು ಸಾಧ್ಯವಾದಷ್ಟೂ ಬಳಕೆದಾರರ ಸ್ನೇಹಿಯನ್ನಾಗಿಸುವುದು ನಮ್ಮ ಧ್ಯೇಯವಾಗಿದ್ದರೂ, ಇತರರ ಹಕ್ಕುಗಳನ್ನು ಉಲ್ಲಂಘಿಸುವ, ಆಕ್ಷೇಪಾರ್ಹ ಅಥವಾ ಅಕ್ರಮ ಕಂಟೆಂಟ್‌ನಿಂದ ಪ್ಲಾಟ್‌ಫಾರಂ ಅನ್ನು ಮುಕ್ತವಾಗಿಸಲು ಮತ್ತು ನಮ್ಮ ಬಳಕೆದಾರರು ಕಾನೂನಾತ್ಮಕವಾಗಿ ಮಾಲೀಕತ್ವ ಹೊಂದಿರುವ ಕಂಟೆಂಟ್‌ನ ಅನಧಿಕೃತ ಬಳಕೆ ತಡೆಯುವಲ್ಲಿ ಪ್ರತಿ ಬಳಕೆದಾರರ ಸಹಾಯವನ್ನು ನಾವು ಅವಲಂಬಿಸಿರುತ್ತೇವೆ. ಪ್ಲಾಟ್‌ಫಾರಂ ಅನ್ನು ಬಳಸುವಾಗ ಮಾಡಬೇಕಿರುವುದು ಮತ್ತು ಮಾಡಬಾರದ್ದನ್ನು ಅರ್ಥ ಮಾಡಿಕೊಳ್ಳಲು ಈ ಕೆಳಗಿನ ಬಳಕೆದಾರರ ನೀತಿಯನ್ನು ಓದುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಯಾವುದೇ ವಿಚಾರಣೆಗಳಿಗೆ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.

 

ಬಳಕೆಯ ನೀತಿ

ನಸದಿಯಾ ಟೆಕ್ನಾಲಜೀಸ್‌ ಪ್ರೈ ಲಿ (“ಕಂಪನಿ”), ಪ್ರತಿಲಿಪಿ ವೆಬ್‌ಸೈಟ್‌ (www.pratilipi.com) (“ವೆಬ್‌ಸೈಟ್‌”) ಮತ್ತು ಆಂಡ್ರಾಯ್ಡ್‌ ಮತ್ತು ಐ ಸ್ಟೋರ್ನಲ್ಲಿರುವ ಪ್ರತಿಲಿಪಿ ಅಪ್ಲಿಕೇಶನ್‌ (“ಅಪ್ಲಿಕೇಶನ್”) ಅನ್ನು ಯಾವುದೇ ವ್ಯಕ್ತಿಯು (“ಬಳಕೆದಾರರು”/”ನೀವು”/”ನಿಮ್ಮ”) ಬಳಸುವುದು ಬಳಕೆ ನೀತಿಗೆ ಒಳಪಡುತ್ತದೆ.  ವಿವಿಧ ಭಾಷೆಗಳಲ್ಲಿ ಪುಸ್ತಕಗಳು, ಕವನಗಳು, ಲೇಖನಗಳು ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನು ಓದಲು ಮತ್ತು/ಅಥವಾ ಚಿತ್ರಗಳು ಮತ್ತು ಆಡಿಯೋವನ್ನು ಅಪ್‌ಲೋಡ್‌ ಮಾಡಲು (“ಪ್ರಕಟಿತ ಕೆಲಸ”) ಮತ್ತು ಅಂತಹ ಸಾಹಿತ್ಯಿಕ ಕೆಲಸಗಳ ಬಗ್ಗೆ ಕಾಮೆಂಟ್‌ಗಳು, ವಿಮರ್ಶೆಗಳನ್ನು ಅಪ್‌ಲೋಡ್‌ ಮಾಡಲು ಅಥವಾ ಕಂಪನಿ ಮತ್ತು/ಅಥವಾ ಇತರ ಬಳಕೆದಾರರೊಂದಿಗೆ ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ (“ಸೇವೆಗಳು”) ಚಾಟ್‌ಗಳ ಮೂಲಕ (“ಇನ್‌ಪುಟ್‌ಗಳು”) ಸಂವಹನ ನಡೆಸಲು ಕಂಪನಿಯು ಅನುಕೂಲ ಒದಗಿಸುತ್ತದೆ.

ವೆಬ್‌ಸೈಟ್‌/ಅಪ್ಲಿಕೇಶನ್‌ ಮೂಲಕ ಬ್ರೌಸ್‌ ಮಾಡುವುದು ಮತ್ತು ಸೇವೆಯನ್ನು ಪಡೆಯುವ ಮೂಲಕ ಗೌಪ್ಯತೆ ನೀತಿಯೊಂದಿಗೆ ಓದಲಾಗುವ ಬಳಕೆ ನೀತಿಗೆ ಬದ್ಧವಾಗಲು ನೀವು ಸಮ್ಮತಿಸುತ್ತೀರಿ ಮತ್ತು ನೀವು 18 ವರ್ಷ ಪೂರೈಸಿದ್ದೀರಿ ಮತ್ತು/ಅಥವಾ ಕಂಪನಿಯೊಂದಿಗೆ ಒಪ್ಪಂದಕ್ಕೆ ಒಳಪಡಲು ಅಧಿಕಾರ ಹೊಂದಿದ್ದೀರಿ ಎಂದು ಪ್ರತಿನಿಧಿಸುತ್ತೀರಿ. ನೀವು 18 ವರ್ಷಕ್ಕಿಂತ ಕಡಿಮೆಯವರಾಗಿದ್ದರೆ, ಈ ಬಳಕೆಯ ನೀತಿಗೆ ನಿಮ್ಮ ಸಮ್ಮತಿ ಮತ್ತು ಬದ್ಧತೆಗೆ ಜವಾಬ್ದಾರರಾಗಿರುವ ನಿಮ್ಮ ಪಾಲಕ(ರು) ಅಥವಾ ಕಾನೂನಾತ್ಮಕ ಪೋಷಕ(ರು) ಇಂದ ಸಮ್ಮತಿಯನ್ನು ನೀವು ಪಡೆಯಬೇಕು.  ನಿಮ್ಮ ಪಾಲಕ(ರು) ಅಥವಾ ಕಾನೂನಾತ್ಮಕ ಪೋಷಕ(ರು) ಇಂದ ನೀವು ಸಮ್ಮತಿಯನ್ನು ಹೊಂದಿಲ್ಲದಿದ್ದರೆ, ವೆಬ್‌ಸೈಟ್‌/ಅಪ್ಲಿಕೇಶನ್ ಅನ್ನು ಬಳಸುವುದು/ಪ್ರವೇಶಿಸುವುದನ್ನು ನಿಲ್ಲಿಸಬೇಕು.

ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ಅಡಿಯಲ್ಲಿನ ನಿಯಮಗಳ ಅಡಿಯಲ್ಲಿ ಎಲೆಕ್ಟ್ರಾನಿಕ್‌ ದಾಖಲೆಯಾಗಿದೆ. ಹೀಗಾಗಿ, ಬಳಕೆದಾರರು ಬದ್ಧವಾಗಬೇಕಿರುವ ಬಳಕೆಯ ನೀತಿಗೆ ಸಹಿ ಅಗತ್ಯವಿರುವುದಿಲ್ಲ. ಈ ಬಳಕೆ ನೀತಿ ಮತ್ತು ಗೌಪ್ಯತೆ ನೀತಿಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು) ಕಾಯ್ದೆ 2011 ನಿಯಮ 3 (1) ಅಡಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ.

 

ಬಳಕೆದಾರರ ಬಾಧ್ಯತೆಗಳು

ಸೇವೆಗಳನ್ನು ಬಳಸುವ ಮೂಲಕ, ಈ ಕೆಳಗಿನ ಬಾಧ್ಯತೆಗಳಿಗೆ ಬದ್ಧವಾಗಲು ಬಳಕೆದಾರರು ಸಮ್ಮತಿಸುತ್ತಾರೆ:

 

  1. ನಿಖರತೆ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ನೋಂದಣಿ ಮಾಡುವಾಗ ಸಂಪೂರ್ಣ ಮತ್ತು ನಿಖರ ಮಾಹಿತಿಯನ್ನು ಒದಗಿಸುವುದು ಮತ್ತು ಇ ಮಾಹಿತಿಯಲ್ಲಿ ಬದಲಾವಣೆ ಇದ್ದಾಗ ಕಂಪನಿಯನ್ನು ಸಂಪರ್ಕಿಸುವುದು.  ಮುಂದುವರಿದು, ಬಳಕೆದಾರರು ಇನ್ನೊಬ್ಬ ವ್ಯಕ್ತಿಯ ಸುಳ್ಳು ಪ್ರತಿನಿಧಿತ್ವವನ್ನು ಮಾಡಬಾರದು.

  2. ಗೌಪ್ಯತೆ: ಬಳಕೆದಾರರ ಖಾತೆ ವಿವರಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಮತ್ತು ಬಳಕೆದಾರರ ಖಾತೆಯ ಮೂಲಕ ಯಾವುದೇ ಸೇವೆಗಳ ಬಳಕೆಗೆ ಜವಾಬ್ದಾರರಾಗಿರುವುದು.

  3. ಮಾಲೀಕತ್ವ: ಅಪ್‌ಲೋಡ್‌ ಮಾಡಿದ ಪ್ರಕಟಿತ ಕೆಲಸಗಳ ಹಕ್ಕುಸ್ವಾಮ್ಯವನ್ನು ಬಳಕೆದಾರರು ಸಂಪೂರ್ಣವಾಗಿ ಹೊಂದಿದ್ದಾರೆ ಮತ್ತು ಇದು ಯಾವುದೇ ಪೇಟೆಂಟ್‌, ಟ್ರೇಡ್‌ಮಾರ್ಕ್‌, ಕೃತಿಸ್ವಾಮ್ಯ ಅಥವಾ ಯಾವುದೇ ತೃತೀಯ ಪಕ್ಷದ ಇತರ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸುವುದು.

  4. ಕಂಟೆಂಟ್‌ ಮಾರ್ಗಸೂಚಿಗಳು: ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳು ಈ ಕೆಳಗಿನ “ಕಂಟೆಂಟ್‌ ಮಾರ್ಗಸೂಚಿಗಳು” ಎಂಬುದರಲ್ಲಿ ನಮೂದಿಸಿದ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸುವುದು.

  5. ಮರು ಉತ್ಪತ್ತಿ: ವೆಬ್‌ಸೈಟ್‌/ಅಪ್ಲಿಕೇಶನ್‌ನಿಂದ ಇತರ ಬಳಕೆದಾರರ ಯಾವುದೇ ಪ್ರಕಟಿತ ಕೆಲಸಗಳನ್ನು ಮರು ಉತ್ಪತ್ತಿ ಮಾಡದಿರುವುದು ಮತ್ತು ಅಧಿಕಾರವಿಲ್ಲದೇ ಯಾವುದೇ ಇತರ ಪ್ಲಾಟ್‌ಫಾರಂ/ಮಾದ್ಯಮದಲ್ಲಿ ಪ್ರಕಟಿಸದೇ ಇರುವುದು.

  6. ಲೈಸೆನ್ಸ್‌:
        a.ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಿದ ಪ್ರಕಟಿತ ಕೆಲಸಗಳಿಗೆ ಅವರ ಹೆಸರು/ಬಳಕೆದಾರರ ಹೆಸರನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಕಂಪನಿಗೆ ಲೈಸೆನ್ಸ್‌ ಅನ್ನು ನೀಡುವುದು;
        b.ಯಾವುದೇ ಮಾಧ್ಯಮ ಅಥವಾ ಯಾವುದೇ ವಿತರಣೆ ವಿಧಾನದ ಮೂಲಕ ಪ್ರಕಟಿತ ಕೆಲಸಗಳು ಮತ್ತು ಅದರ ಡಿರೈವೇಟಿವ್‌ಗಳ ವಿತರಣೆ, ಪ್ರಸರಣ, ಸಾಗಣೆಯ ಅಳವಡಿಕೆ, ಪ್ರಕಟಣೆ, ಮರುಉತ್ಪತ್ತಿ, ರಚನೆಗಾಗಿ ಕಂಪನಿಗೆ ವಿಶ್ವಾದ್ಯಂತದ, ರಾಯಲ್ಟಿ ಮುಕ್ತ, ವಿಶೇಷವಲ್ಲದ ಹಕ್ಕು ಮತ್ತು ಲೈಸೆನ್ಸ್‌ ಅನ್ನು ಒದಗಿಸುವುದು; ಮತ್ತು
        c.ಬಳಕೆದಾರರಿಗೆ ಪೂರ್ವ ಸೂಚನೆ ಇಲ್ಲದೇ ಯಾವುದೇ ಸಂಭಾವ್ಯ ಸಹಭಾಗಿತ್ವದ ಉದ್ದೇಶಕ್ಕೆ ತೃತೀಯ ಪಕ್ಷಕ್ಕೆ ಯಾವುದೇ ಪ್ರಕಟಿತ ಕೆಲಸವನ್ನು ಪ್ರದರ್ಶಿಸಲು ಕಂಪನಿಗೆ ಹಕ್ಕು ಒದಗಿಸುವುದು

  7. ಅಕ್ರಮ ಚಟುವಟಿಕೆಗಳು: ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಲು ಅಥವಾ ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಮಿಷ ಒಡ್ಡುವುದು ಅಥವಾ ತೃತೀಯ ಪಕ್ಷಗಳ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಯಾವುದೇ ಚಟುವಟಿಕೆಯನ್ನು ನಡೆಸಲು ಸೇವೆಯನ್ನು ಬಳಸದೇ ಇರುವುದು.

  8. ವೈರಸ್: ಸಾಫ್ಟ್‌ವೇರ್ ವೈರಸ್‌ಗಳು ಅಥವಾ ಸೇವೆಗಳನ್ನು ಒದಗಿಸಲು ಬಳಸುವ ಯಾವುದೇ ಕಂಪ್ಯೂಟರ್‌ ಸಂಪನ್ಮೂಲದ ಕಾರ್ಯನಿರ್ವಹಣೆಯ ಮಧ್ಯಪ್ರವೇಶಿಸುವ, ನಾಶಪಡಿಸುವ ಅಥವಾ ಮಿತಿಗೊಳಿಸಲು ವಿನ್ಯಾಸ ಮಾಡಿರುವ ಯಾವುದೇ ಇತರ ಕಂಪ್ಯೂಟರ್‌ ಕೋಡ್‌, ಫೈಲ್‌ಗಳು ಅಥವಾ ಪ್ರೋಗ್ರಾಮ್‌ಗಳನ್ನು ಅಪ್‌ಲೋಡ್‌ ಮಾಡದೇ ಇರುವುದು

  9. ಜಾಹೀರಾತು: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತು ಅಥವಾ ಆಮಿಷ ಒಡ್ಡದೇ ಇರುವುದು

  10. ಭದ್ರತೆ:  ಎ) ಬೇಧ್ಯತೆಗಳನ್ನು ಶೋಧ, ಸ್ಕ್ಯಾನ್‌ ಅಥವಾ ಪರೀಕ್ಷೆ ಮಾಡದಿರುವುದು ಬಿ) ಭದ್ರತೆ ಅಥವಾ ದೃಢೀಕರಣ ಕ್ರಮಗಳನ್ನು ಉಲ್ಲಂಘಿಸದಿರುವುದು ಅಥವಾ ವ್ಯತ್ಯಯಗೊಳಿಸದೇ ಇರುವುದು ಅಥವಾ ವೆಬ್‌ಸೈಟ್/ಅಪ್ಲಿಕೇಶನ್ ಅಥವಾ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ನ್ಯಾವಿಗೇಶನಲ್‌ ರಚನೆಯನ್ನು ಸುತ್ತುಗಟ್ಟದಿರುವುದು ಸಿ) ವೆಬ್‌ಸೈಟ್‌/ಅಪ್ಲಿಕೇಶನ್‌ನ ಯಾವುದೇ ಭಾಗವನ್ನು “ಕ್ರಾವ್ಲ್‌” ಅಥವಾ “ಸ್ಪೈಡರ್” ಮಾಡಲು ಯಾವುದೇ ಮ್ಯಾನ್ಯುಅಲ್‌ ಅಥವಾ ಸ್ವಯಂಚಾಲಿತ ಸಾಫ್ಟ್‌ವೇರ್‌, ಸಾಧನಗಳು ಅಥವಾ ಇತರ ಪ್ರಕ್ರಿಯೆಗಳನ್ನು ಬಳಸದೇ ಇರುವುದು ಡಿ) ಕಂಪನಿಯ ಮೂಲಸೌಕರ್ಯಕ್ಕೆ ಅಕಾರಣ ಹೊರೆಯಾಗದಂತೆ - ಅಂದರೆ ಮೋಸ,  ವಂಚನೆ ಮಾಡದಿರುವುದು, ಅಟೋಮೇಷನ್, ಸಾಫ್ಟ್ವೇರ್ ಗಳು , ಬೋಟ್ ಗಳನ್ನು  ಅಥವಾ ಯಾವುದೇ ಅನಧಿಕೃತ ಥರ್ಡ್ ಪಾರ್ಟಿ ಸಾಫ್ಟ್ವೇರ್ ಗಳನ್ನು ಬಳಸದಿರುವುದುದ್.ಅಥವಾ ಸರಿಯಾದ ಕಾರ್ಯಸ್ಥಳ ಅಥವಾ ಸ್ಥಳದಲ್ಲಿ ಹಸ್ತಕ್ಷೇಪ ಮಾಡದೇ ಇರುವುದು. ಇ) ಅನ್ಯಾಯದ ನಡವಳಿಕೆ: ಯಾವುದೇ ರೀತಿಯ ಅನ್ಯಾಯಗಳನ್ನು ಮಾಡದಿರುವುದು ಅಂದರೆ ಬಹುಮಾನಗಳಿಗೋಸ್ಕರ ಅಥವಾ ನಾಣ್ಯಗಳಿಗೋಸ್ಕರ ಅಥವಾ ಪ್ರತಿಲಿಪಿ ಅಪ್ಲಿಕೇಶನ್/ವೆಬ್ಸೈಟ್  ನೀಡುವ ಯಾವುದೇ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು. 

  11. ಪ್ರವೇಶಾವಕಾಶ: ಅನುಮತಿಸಿದ್ದಕ್ಕಿಂತ ಹೊರತಾದ ಯಾವುದೇ ರೀತಿಯ ಮೂಲಕ ಪ್ರಕಟಿತ ಕೆಲಸಗಳನ್ನು ಪಡೆಯದಿರುವುದು ಅಥವಾ ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಪ್ರವೇಶಾವಕಾಶ ಪಡೆಯದೇ ಇರುವುದು.

  12. ಬಳಕೆದಾರ ಡೇಟಾ: ಇನ್ನೊಬ್ಬ ಬಳಕೆದಾರರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬೆನ್ನಟ್ಟದಿರುವುದು ಅಥವಾ ಸಂಗ್ರಹ ಮತ್ತು ಶೇಖರಣೆ ಸೇರಿದಂತೆ ಅಂತಹ ಮಾಹಿತಿಯ ದುರ್ಬಳಕೆ ಮಾಡದಿರುವುದು.

  13. ಟ್ರೇಡ್‌ಮಾರ್ಕ್‌ ಮತ್ತು ವಿನ್ಯಾಸ: ಕಂಪನಿ ಮಾಲೀಕತ್ವ ಹೊಂದಿರುವ ಪ್ರತಿಲಿಪಿ ಮತ್ತು ಪ್ರತಿಲಿಪಿ ಎಫ್ ಎಂ ನ ಟ್ರೇಡ್‌ಮಾರ್ಕ್‌ ಅನ್ನು ಅಥವಾ ವೆಬ್‌ಸೈಟ್‌/ಅಪ್ಲಿಕೇಶನ್‌ನ ಯಾವುದೇ ವಿನ್ಯಾಸವನ್ನು ಬಳಕೆ, ದುರ್ಬಳಕೆ ಅಥವಾ ಸೂಕ್ತವಲ್ಲದಂತೆ ಯಾವುದೇ ಅಧಿಕೃತ ಉದ್ದೇಶಕ್ಕೆ ಬಳಸುವುದನ್ನು ಮಾಡಬಾರದು.

 

ಕಂಪನಿಯ ಹಕ್ಕುಗಳು

ಕಂಪನಿಯ ಈ ಕೆಳಗಿನ ಹಕ್ಕುಗಳನ್ನು ಬಳಕೆದಾರರು ಸಮ್ಮತಿಸುತ್ತಾರೆ:

 

  1. ಕಂಟೆಂಟ್‌ ತೆಗೆದುಹಾಕುವಿಕೆ: ಏಕಪಕ್ಷೀಯ ನಿರ್ಧಾರದಲ್ಲಿ ಅಥವಾ ಕಾನೂನು ಅಡಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಷೇಪಾರ್ಹ ಅಥವಾ ಉಲ್ಲಂಘನೆ ಎಂದು ಭಾವಿಸಿದ ಯಾವುದೇ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ತೆಗೆಯುವ ಹಕ್ಕನ್ನು ಕಂಪನಿ ಹೊಂದಿದೆ.

  2. ಅಮಾನತು: ಈ ಬಳಕೆಯ ನೀತಿಯನ್ನು ಬಳಕೆದಾರರು ಉಲ್ಲಂಘನೆ ನಡೆಸಿರುವುದೂ ಸೇರಿದಂತೆ ಏಕಪಕ್ಷೀಯ ನಿರ್ಧಾರದಲ್ಲಿ ಎಲ್ಲ ಸೇವೆಗಳ ಅಥವಾ ಭಾಗಶಃ ಪ್ರವೇಶಾವಕಾಶಕ್ಕೆ ಯಾವುದೇ ಬಳಕೆದಾರರ ಖಾತೆಯನ್ನು ನಿರ್ಬಂಧಿಸುವ/ಅಮಾನತುಗೊಳಿಸುವ/ ವಜಾಗೊಳಿಸುವ ಹಕ್ಕನ್ನು ಕಂಪನಿ ಹೊಂದಿದೆ. 

  3. ಬೌದ್ಧಿಕ ಹಕ್ಕುಗಳು : 

  4. ಗುರುತುಗಳು, ವಿನ್ಯಾಸಗಳ ಮೇಲೆ ಮಾಲೀಕತ್ವ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಕಂಪನಿ ರಚಿಸಿದ ಮತ್ತು ಅಭಿವೃದ್ಧಿಪಡಿಸಿದ ಎಲ್ಲ ಲೋಗೋಗಳು, ಟ್ರೇಡ್‌ಮಾರ್ಕ್‌ಗಳು, ಬ್ರಾಂಡ್‌ ಹೆಸರುಗಳು, ಸೇವೆ ಗುರುತುಗಳು, ಡೊಮೇನ್‌ ನೇಮ್‌ಗಳು, ವಿನ್ಯಾಸಗಳು ಮತ್ತು ಗ್ರಾಫಿಕ್‌ಗಳು ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನ ಇತರ ವಿಶಿಷ್ಟ ಬ್ರಾಂಡ್‌ ಸೌಲಭ್ಯಗಳನ್ನು ವಿಶೇಷವಾಗಿ ಕಂಪನಿಯು ಮಾಲೀಕತ್ವ ಹೊಂದಿದೆ.

  5. ವೈಯಕ್ತಿಕ ಡೇಟಾ: ಗೌಪ್ಯತೆ ನೀತಿಗೆ ಅನುಗುಣವಾಗಿ ಬಳಕೆದಾರರು ಸಲ್ಲಿಸಿದ ವೈಯಕ್ತಿಕ ಡೇಟಾವನ್ನು ಕಂಪನಿಯು ಪ್ರಕ್ರಿಯೆಗೊಳಿಸಬಹುದಾಗಿದೆ.

  6. ಪಾವತಿ : ಸೇವೆಗಳ ಬಳಕೆಗೆ ಶುಲ್ಕವನ್ನು ವಿಧಿಸಲು ಕಂಪನಿಯು ನಿರ್ಧರಿಸಬಹುದಾಗಿದ್ದು, ಇದನ್ನು ಬಳಕೆದಾರರಿಗೆ ಮುಂಗಡವಾಗಿ ಸೂಚಿಸಬಹುದಾಗಿದೆ. ವರ್ಚುಯಲ್ ಕರೆನ್ಸಿ, ಅಥವಾ ಇನ್ಯಾವುದೇ ಶುಲ್ಕದ ಕುರಿತು ಕಂಪನಿ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಅಥವಾ ಇವೆರೆಡೂ ಕಡೆ ಮಾಹಿತಿ ನೀಡುತ್ತದೆ. 

  7. ಕಾನೂನು ಹೇಳಿಕೆ: ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳಿಗೆ ಸಂಬಂಧಿಸಿದ ಯಾವುದೇ ಇತರ ವಿವರಗಳು ಅಥವಾ ಯಾವುದೇ ಬಳಕೆದಾರರ ವಿವರಗಳನ್ನು ಕಂಪನಿಯು ಬಹಿರಂಗಗೊಳಿಸಬಹುದು ಅಥವಾ ಕಾನೂನು ಅಡಿಯಲ್ಲಿ ಅಗತ್ಯವಿರುವ ಅಥವಾ ಯಾವುದೇ ಸೈಬರ್‌ ಸೆಕ್ಯುರಿಟಿ ಘಟನೆಗಳ ತನಿಖೆಗೆ ಅದಿಕಾರ ಹೊಂದಿರುವ ಸರ್ಕಾರಿ ಏಜೆನ್ಸಿಗಳ ಕಾನೂನಾತ್ಮಕ ಆದೇಶಕ್ಕೆ ಅನುಗುಣವಾಗಿ ಯಾವುದೇ ಇತರ ಕ್ರಮವನ್ನು ತೆಗೆದುಕೊಳ್ಳಬಹುದು.

  8. ಭದ್ರತಾ ಕ್ರಮಗಳ ವೃದ್ಧಿ: ಬಳಕೆದಾರರು ಅಥವಾ ತೃತೀಯ ಪಕ್ಷಗಳ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ನಿರ್ವಹಿಸಲು ಮತ್ತು ತಡೆಯಲು ಕಂಪನಿಯು ವರ್ಧಿತ ಭದ್ರತೆ ಮತ್ತು ತಾಂತ್ರಿಕ ಕ್ರಮಗಳನ್ನು ಕಾಲಕಾಲಕ್ಕೆ ಜಾರಿಗೊಳಿಸಬಹುದಾಗಿದೆ.

 

ಕಂಟೆಂಟ್‌ ಮಾರ್ಗಸೂಚಿಗಳು

ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳು ಇದನ್ನು ಒಳಗೊಂಡಿರಬೇಕು:

  1. ಆಕ್ಷೇಪಾರ್ಹವಾಗಿರಬಾರದು ಅಥವಾ ಅಕ್ರಮವಾಗಿರಬಾರದು: ಅಪಾಯಕಾರಿ, ಉಲ್ಲಂಘಿಸುವ, ದೌರ್ಜನ್ಯಕಾರಿ, ದೇಶದ್ರೋಹದ, ಮಾನಹಾನಿಕರ, ಅಶ್ಲೀಲ, ಪಾರ್ನೋಗ್ರಾಫಿಕ್‌, ಪೀಡೋಫಿಲಿಕ್‌, ಅಪಕೀರ್ತಿಯ, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ, ದ್ವೇಷಯುತ ಅಥವಾ ಜನಾಂಗೀಯ, ಸಮುದಾಯದ ಆಕ್ಷೇಪಾರ್ಹ, ಅಗೌರವದ, ಹಣ ದುರ್ಬಳಕೆ ಅಥವಾ ಗ್ಯಾಂಬ್ಲಿಂಗ್‌ಗೆ ಸಂಬಂಧಿಸಿದ ಅಥವಾ ಪ್ರೋತ್ಸಾಹಿಸುವ ಅಥವಾ ಯಾವುದೇ ರೀತಿಯಲ್ಲಿ ಅಕ್ರಮವಾಗಿರುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸಬೇಡಿ.

  2. ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧವಲ್ಲದ: ಸಮಗ್ರತೆ, ಏಕತೆ, ರಕ್ಷಣೆ, ಭದ್ರತೆ ಅಥವಾ ಭಾರತದ ಸಮಗ್ರತೆ, ವಿದೇಶಗಳೊಂದಿಗೆ ಭಾರತದ ಸ್ನೇಹಯುತ ಸಂಬಂಧ ಅಥವಾ ಸಾರ್ವಜನಿಕ ಅನುಕ್ರಮ ಅಥವಾ ಕಾರಣಗಳನ್ನು ಹಾಳುಗೆಡವಿ ಯಾವುದೇ ಅಪರಾಧವಾಗುವ ಅಥವಾ ಯಾವುದೇ ಅಪರಾಧದ ತನಿಖೆಯನ್ನು ತಡೆಯುವ ಅಥವಾ ಯಾವುದೇ ಇತರ ದೇಶವನ್ನು ಅವಮಾನಗೊಳಿಸುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

  3. ಅಪ್ರಾಪ್ತರನ್ನು ರಕ್ಷಿಸುವುದು – ಯಾವುದೇ ರೀತಿಯಲ್ಲಿ ಅಪ್ರಾಪ್ತರಿಗೆ ಹಾನಿ ಉಂಟು ಮಾಡುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

  4. ತಪ್ಪುದಾರಿಗೆಳೆಯುವ/ದುರುದ್ದೇಶಪೂರಿತವಲ್ಲದ: ಕಂಟೆಂಟ್‌ನ ಮೂಲದ ಬಗ್ಗೆ ಓದುಗರನ್ನು ತಪ್ಪುದಾರಿಗೆಳೆಯುವ ಅಥವಾ ದ್ವೇಷಯುತ ಅಥವಾ ಬೆದರಿಕೆ ಒಡ್ಡುವ ಯಾವುದೇ ಮಾಹಿತಿಯನ್ನು ಸಂವಹನಗೊಳಿಸುವ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಪ್ರಕಟಿಸದಿರುವುದು.

 

ಅಮಾನತು/ವಜಾ

  1. ಬಳಕೆದಾರರಿಂದ ಉಲ್ಲಂಘನೆ: ಈ ಬಳಕೆಯ ನೀತಿ ಮತ್ತು/ಅಥವಾ ಗೌಪ್ಯತೆ ನೀತಿಯೊಂದಿಗೆ ಯಾವುದೇ ಬದ್ಧತೆಯಿಲ್ಲದಿದ್ದರೆ ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಬಳಕೆದಾರರ ಹಕ್ಕುಗಳ ಪ್ರವೇಶಾವಕಾಶ ಮತ್ತು ಬಳಕೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಅಮಾನತು ಅಥವಾ ವಜಾಗೊಳಿಸುವ ಹಕ್ಕನ್ನು ಕಂಪನಿ ಹೊಂದಿದೆ.

ನನ್ನ ನಾಣ್ಯಗಳು ಮತ್ತು ಬಹುಮಾನಗಳು:

  1. ನನ್ನ ನಾಣ್ಯಗಳು : ಬಳಕೆದಾರರು ಖರೀದಿಸಿದ ಮತ್ತು / ಅಥವಾ ಬಳಕೆದಾರರಿಂದ ಗಳಿಸಬಹುದಾದ (“ನನ್ನ ನಾಣ್ಯಗಳು”) ವರ್ಚುವಲ್ ಕರೆನ್ಸಿಯನ್ನು ಪುನಃ ಪಡೆದುಕೊಳ್ಳುವ ಮೂಲಕ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಕೆಲವು ಸೌಲಭ್ಯಗಳನ್ನು ಅವನ / ಅವಳ ಹೊಂದಬಹುದು. ಲಭ್ಯವಿರುವ ನಾಣ್ಯಗಳ ಸಂಖ್ಯೆ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿನ ಬಳಕೆದಾರರ ಖಾತೆಯಲ್ಲಿ ಲಭ್ಯವಾಗುತ್ತದೆ. ಪ್ರತಿ ನಾಣ್ಯದ ಮುಖಬೆಲೆ ೫೦ ಪೈಸೆ ಭಾರತೀಯ ರೂಪಾಯಿಗಳು. ನಾಣ್ಯಗಳ ಖರೀದಿ ಬೆಲೆ, ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಸೌಲಭ್ಯಗಳನ್ನು ಹೊಂದಲು ಅಗತ್ಯವಿರುವ  ನಾಣ್ಯಗಳ ಸಂಖ್ಯೆ ಅಥವಾ ನಾಣ್ಯಗಳನ್ನು ಬಳಸಬಹುದಾದ ವಿವಿಧ ಉದ್ದೇಶಗಳನ್ನು ಕಂಪನಿಯು ಕಾಲಕಾಲಕ್ಕೆ ನಿರ್ಧರಿಸುತ್ತದೆ. ನಾಣ್ಯಗಳು ಯಾವುದೇ ನೈಜ-ಪ್ರಪಂಚದ ಮೌಲ್ಯವನ್ನು ಹೊಂದಿಲ್ಲ ಮತ್ತು ಅದನ್ನು ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಅನುಮತಿಸಿದಂತೆ ಬಳಕೆದಾರರು ಬಳಸಿಕೊಳ್ಳಬಹುದು.

  2. ನನ್ನ ನಾಣ್ಯಗಳ ಬಳಕೆ: ಬಳಕೆದಾರರು  (i) ಲೇಖಕರಿಗೆ ಚಂದಾದಾರರಾಗಲು ನಾಣ್ಯಗಳನ್ನು ಬಳಸಬಹುದು ಮತ್ತು / ಅಥವಾ (ii) ವರ್ಚುವಲ್ ಉಡುಗೊರೆಗಳ ಮೂಲಕ ಮತ್ತು / ಅಥವಾ (iii) ಕಾಲಕಾಲಕ್ಕೆ ಕಂಪನಿಯು ನಿರ್ಧರಿಸಿದ ಯಾವುದೇ ಉದ್ದೇಶಕ್ಕಾಗಿ, ಕಂಪನಿಯು ಅನುಮತಿಸಿದ ಯಾವುದೇ ಉದ್ದೇಶಕ್ಕಾಗಿ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ನಾಣ್ಯಗಳನ್ನು ಬಳಸಿದ ನಂತರ, ಬಳಕೆದಾರರು ಅವನ / ಅವಳ ವೆಬ್‌ಸೈಟ್ / ಅಪ್ಲಿಕೇಶನ್‌ನ ಬಳಕೆಗೆ ಸಂಬಂಧಿಸಿದಂತೆ ಕೆಲವು ಪ್ರಯೋಜನಗಳನ್ನು ಆನಂದಿಸಬಹುದು , ಉದಾಹರಣೆಗೆ ಆರಂಭಿಕ ಪ್ರವೇಶ ಚಂದಾದಾರರ ಲೇಖಕರ ಪ್ರಕಟಿತ ವಿಷಯ. ಅಂತಹ ಪ್ರಯೋಜನಗಳನ್ನು ಹೊರತುಪಡಿಸಿ, ಸೀಮಿತ ಪರವಾನಗಿ: ಲೇಖಕರಿಗೆ ಚಂದಾದಾರರಾಗಲು ನನ್ನ ನಾಣ್ಯಗಳನ್ನು ಬಳಸಿದರೆ, ಅಂತಹ ಬಳಕೆದಾರರು ಅಂತಹ ಲೇಖಕರ ಪ್ರಕಟಿತ ವಿಷಯವನ್ನು ವೀಕ್ಷಿಸಲು ಸೀಮಿತ ಪರವಾನಗಿಯನ್ನು ಹೊಂದಿರುತ್ತಾರೆ ಮತ್ತು ವರ್ಗಾವಣೆ, ಮರುಮಾರಾಟ ಅಥವಾ ಯಾವುದೇ ಮಾಲೀಕತ್ವದ ಹಕ್ಕುಗಳಂತಹ ಯಾವುದೇ ಹಕ್ಕುಗಳಿಲ್ಲ ಯಾವುದೇ ಪ್ರಕಟಿತ ವಿಷಯವು ಬಳಕೆದಾರರಲ್ಲಿ ಇರುತ್ತದೆ.

  3. ನಾಣ್ಯಗಳನ್ನು ಹಿಂತೆಗೆದುಕೊಳ್ಳುವುದು: ನಾಣ್ಯಗಳನ್ನು ಖರೀದಿಸುವಾಗ ಮಾಡಿದ  ಪಾವತಿಯನ್ನು ಬಳಕೆದಾರರು ಯಾವುದೇ ಸಮಯದಲ್ಲಿ ಹಿಂಪಡೆಯಲಾಗುವುದಿಲ್ಲ.  ನಾಣ್ಯಗಳು ಯಾವುದೇ ವಾಲೆಟ್ ಅಲ್ಲ ಮತ್ತು ನಿಜವಾದ ಹಣದ ವಿರುದ್ಧ ಪುನಃ ಪಡೆದುಕೊಳ್ಳಲಾಗುವುದಿಲ್ಲ.

  4. ಬೋನಸ್  ನಾಣ್ಯಗಳು: ವೆಬ್‌ಸೈಟ್ / ಅಪ್ಲಿಕೇಶನ್‌ ಬಳಸುವಾಗ ನಿರ್ದಿಷ್ಟಪಡಿಸಿದ ಓದುವ ಸವಾಲುಗಳನ್ನು ಪೂರ್ಣಗೊಳಿಸುವುದು ಅಥವಾ ಕಾಲಕಾಲಕ್ಕೆ ಕಂಪನಿಯು ಸೂಚಿಸಿದಂತೆ ಯಾವುದೇ ಪ್ರಚಾರ ಚಟುವಟಿಕೆಯ ಭಾಗವಾಗಿ ಬಳಕೆದಾರರು ವೆಬ್‌ಸೈಟ್ / ಅಪ್ಲಿಕೇಶನ್‌ನ ಬಳಕೆಯ ಆಧಾರದ ಮೇಲೆ ಬಳಕೆದಾರ ಬೋನಸ್ ನನ್ನ ನಾಣ್ಯಗಳನ್ನು ನೀಡಬಹುದು. ವೆಬ್‌ಸೈಟ್ / ಅಪ್ಲಿಕೇಶನ್ ಬಳಕೆದಾರರು ಖರೀದಿಸಿದ ನಾಣ್ಯಗಳನ್ನು ಮೊದಲು ಅನ್ವಯಿಸಲಾಗುತ್ತದೆ.

  5. ಚಂದಾದಾರಿಕೆ: ಚಂದಾದಾರಿಕೆ ಮೊತ್ತವನ್ನು (“ಚಂದಾದಾರಿಕೆ ಮೊತ್ತಗಳು”) ಪಾವತಿಸುವ ಮೂಲಕ ಕಂಪನಿಯು ಕಾಲಕಾಲಕ್ಕೆ ನಿರ್ಧರಿಸುವಂತೆ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಕೆಲವು ಲೇಖಕರನ್ನು ಸಬ್ಸ್ಕ್ರೈಬ್ ಮಾಡಲು ಬಳಕೆದಾರರಿಗೆ ಅವಕಾಶವಿದೆ. ಚಂದಾದಾರಿಕೆ ಮಾದರಿಯ ಮೂಲಕ ಪ್ರತಿ ಲೇಖಕರಿಗೆ ತಿಂಗಳಿಗೆ ಪಾವತಿಸಬೇಕಾದ ಚಂದಾದಾರಿಕೆ ಮೊತ್ತವನ್ನು ಕಂಪನಿಯು ನಿರ್ಧರಿಸುತ್ತದೆ. ಯಾವುದೇ ಲೇಖಕರಿಗೆ ಚಂದಾದಾರರಾಗಲು ಆಯ್ಕೆ ಮಾಡಿದ ನಂತರ, ನಿಗದಿತ ಅವಧಿಗೆ ಚಂದಾದಾರಿಕೆ ಮೊತ್ತದ ಸ್ವಯಂ-ಪಾವತಿಯನ್ನು ಸಕ್ರಿಯಗೊಳಿಸಲು ಬಳಕೆದಾರರು ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಅವರ / ಅವಳ ಖಾತೆಗೆ ಸೂಕ್ತವಾದ ಪಾವತಿ ಮೂಲವನ್ನು ಲಿಂಕ್ ಮಾಡಬೇಕಾಗುತ್ತದೆ. ತಮ್ಮ ಖಾತೆಯಲ್ಲಿ ನಲವತ್ತು (40) ಕ್ಕಿಂತ ಹೆಚ್ಚು ಸಂಖ್ಯೆಯ ನನ್ನ ನಾಣ್ಯಗಳನ್ನು ಹೊಂದಿರುವ ಬಳಕೆದಾರರಿಗೆ ಲಭ್ಯವಿರುವ ನಾಣ್ಯಗಳ ಮೂಲಕ ಯಾವುದೇ ಲೇಖಕರಿಗೆ ಚಂದಾದಾರಿಕೆ ಮೊತ್ತದ ಮೊದಲ ಕಂತನ್ನು ಪಾವತಿಸುವ ಆಯ್ಕೆಯನ್ನು ನೀಡಲಾಗುತ್ತದೆ ಮತ್ತು ನಂತರ ಅವನ / ಅವಳ ಲಿಂಕ್‌ನಿಂದ ಸ್ವಯಂ-ಪಾವತಿ ಸಂಭವಿಸುತ್ತದೆ.

  6. ಬಳಕೆದಾರರ ಖಾತರಿ:ನನ್ನ ನಾಣ್ಯಗಳನ್ನು ಖರೀದಿಸಲು ಅಥವಾ ಚಂದಾದಾರಿಕೆ ಮೊತ್ತವನ್ನು ಪಾವತಿಸಲು ಬಳಕೆದಾರರು ಆರಿಸಿದರೆ, 
    (i) ಅವನು / ಅವಳು ಕಾನೂನು ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಖಾತರಿಪಡಿಸಬೇಕು (ಬಳಕೆದಾರನು ಚಿಕ್ಕವನಾಗಿದ್ದರೆ, ಬಳಕೆದಾರರ ಕಾನೂನು ಪಾಲಕರು ತಮ್ಮ ಒಪ್ಪಿಗೆಯನ್ನುನೀಡಬೇಕು) ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಅದೇ ನನ್ನ ನಾಣ್ಯಗಳನ್ನು ಖರೀದಿಸಲು ಮತ್ತು ಬಳಸಲು ಮತ್ತು / ಅಥವಾ ಚಂದಾದಾರಿಕೆ ಮೊತ್ತವನ್ನು ಪಾವತಿಸಲು (ii) ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಇತರ ಪಾವತಿ ಸೇವೆಯ ಅವನ / ಅವಳ ಬಳಕೆಯನ್ನು ಅಧಿಕೃತಗೊಳಿಸಬೇಕು, ಮತ್ತು (iii) ಸರಿಯಾದ ಮಾಹಿತಿಯನ್ನು ಎಲ್ಲ ವ್ಯವಹಾರಗಳಿಗೆ ಸಲ್ಲಿಸಬೇಕು.

  7. ಪಾವತಿ ವಿಧಾನ: ಬಳಕೆದಾರರು ನನ್ನ ನಾಣ್ಯಗಳನ್ನು ಖರೀದಿಸಲು ಮತ್ತು ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಯಾವುದೇ ಆಯ್ಕೆಗಳನ್ನು ಬಳಸಿಕೊಂಡು ಚಂದಾದಾರಿಕೆ ಮೊತ್ತವನ್ನು ಪಾವತಿಸಲು ಹಣವನ್ನು ರವಾನಿಸಬಹುದು (ಎ) ವೆಬ್‌ಸೈಟ್ / ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ವ್ಯಾಲೆಟ್‌ಗಳ ಮೂಲಕ; (ಬಿ) ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳು; (ಸಿ) ಏಕೀಕೃತ ಪಾವತಿ ಇಂಟರ್ಫೇಸ್; (ಡಿ) ನೆಟ್ಬ್ಯಾಂಕಿಂಗ್; ಮತ್ತು (ಇ) ಕಾಲಕಾಲಕ್ಕೆ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಇತರ ಪಾವತಿ ಆಯ್ಕೆಗಳು. ಈ ಪಾವತಿ ಗೇಟ್‌ವೇಗಳನ್ನು ಕೇವಲ ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ನಿರ್ವಹಿಸುತ್ತಾರೆ ಮತ್ತು ಆದ್ದರಿಂದ ಅಂತಹ ಪಾವತಿ ಗೇಟ್‌ವೇಗಳ ಬಳಕೆಯನ್ನು ಅಂತಹ ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ. ಮೂರನೇ ವ್ಯಕ್ತಿಯ ಪಾವತಿ ಗೇಟ್‌ವೇಯನ್ನು ಅವನ / ಅವಳ ಬಳಕೆಯು ಅವರ ಏಕೈಕ ಆಯ್ಕೆ ಮತ್ತು ಮತ್ತು ಅದರ ತೊಂದರೆಗಳನ್ನು ಬಳಕೆದಾರರು ಒಪ್ಪಿಕೊಳ್ಳಬೇಕು.

  8. ಗಳಿಕೆಗಳು: ಒಬ್ಬ ಲೇಖಕನಿಗೆ ಪ್ರೋತ್ಸಾಹ ನೀಡಲು ಬಳಕೆದಾರರು ನಾಣ್ಯಗಳನ್ನು ಬಳಸಿದಾಗ ಅಥವಾ ಚಂದಾದಾರಿಕೆ ಮೊತ್ತವನ್ನು ಪಾವತಿಸುವ ಮೂಲಕ ಲೇಖಕರಿಗೆ ಚಂದಾದಾರರಾಗಲುಬಯಸಿದಾಗ , ಅಂತಹ ಲೇಖಕರು (“ಗಳಿಕೆ ಸ್ವೀಕರಿಸುವವರು”)  ನಾಣ್ಯಗಳನ್ನು ಅವನ / ಅವಳ ಬಳಕೆದಾರ ಖಾತೆಯಲ್ಲಿ ಸ್ವೀಕರಿಸುತ್ತಾರೆ. ಸ್ವೀಕರಿಸಿದ ಪ್ರತಿಯೊಂದು ನನ್ನ ನಾಣ್ಯಗಳು ಐಎನ್ಆರ್ 50 ಪೈಸೆ ಮೌಲ್ಯವನ್ನು ಹೊಂದಿವೆ ಮತ್ತು ಗಳಿಸುವ ಸ್ವೀಕರಿಸುವವರಿಗೆ ನಾಣ್ಯಗಳ ಐಎನ್ಆರ್ ಮೌಲ್ಯದ 42% ಗೆ ನೀಡಲಾಗುತ್ತದೆ ಮತ್ತು 42% ರಷ್ಟು ಚಂದಾದಾರಿಕೆ ಮೊತ್ತವನ್ನು ಬಳಕೆದಾರರು ಅವನ / ಅವಳಿಗೆ ಚಂದಾದಾರರಾಗುವ ಮೂಲಕ ಪಾವತಿಸುತ್ತಾರೆ ( “ಗಳಿಕೆಗಳು”). ಗಳಿಸುವರು ಅರ್ಹರಾಗಿರುವ ಅನುಗುಣವಾದ ಐಎನ್ಆರ್ ಮೌಲ್ಯದೊಂದಿಗೆ ನಾಣ್ಯಗಳ ಸಂಖ್ಯೆಯು ಅವರ / ಅವಳ ಖಾತೆಯಲ್ಲಿ ಪ್ರತಿಫಲಿಸುತ್ತದೆ.

  9. ಗಳಿಕೆಗಳ ಎನ್‌ಕ್ಯಾಶಿಂಗ್: ಪ್ರತಿ ತಿಂಗಳ ಕೊನೆಯಲ್ಲಿ, ಗಳಿಕೆಯನ್ನು ಸ್ವೀಕರಿಸುವವರಿಗೆ ಅವನ / ಅವಳ ಬಳಕೆದಾರರ ಖಾತೆಯಲ್ಲಿ ಗಳಿಕೆಯಂತೆ ಪ್ರತಿಬಿಂಬಿಸುವ ಪೂರ್ಣ ಮೊತ್ತವನ್ನು ಅವನ / ಅವಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು, ಈ ಮೊತ್ತವು INR 50 / - ಅಥವಾ ಅದಕ್ಕಿಂತ  ಹೆಚ್ಚಿದ್ದರೆ ಕಂಪನಿಯು ನಿರ್ಧರಿಸಿದ ಮೂಲ ಮೊತ್ತ. ಈ ಮೊತ್ತವನ್ನು ಪಾವತಿಸಲು, ಗಳಿಕೆ ಸ್ವೀಕರಿಸುವವರು ತಮ್ಮ ಬ್ಯಾಂಕ್ ಖಾತೆಗಳನ್ನು ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿರುವ ತಮ್ಮ ಬಳಕೆದಾರರ ಖಾತೆಗಳಿಗೆ ಲಿಂಕ್ ಮಾಡಬೇಕಾಗುತ್ತದೆ. ಅಂತಹ ಪಾವತಿಗೆ ಸಂಬಂಧಿಸಿದ ಯಾವುದೇ ತೆರಿಗೆಗಳು ಅಥವಾ ಇತರ ಶುಲ್ಕಗಳಿಗೆ ಗಳಿಸುವ ಸ್ವೀಕರಿಸುವವರು ಜವಾಬ್ದಾರರಾಗಿರುತ್ತಾರೆ.

  10. ವರ್ಗಾಯಿಸಲಾಗದು: ನಾಣ್ಯಗಳು ಮತ್ತು / ಅಥವಾ ಬಳಕೆದಾರರ ಗಳಿಕೆಗಳು ಅಂತಹ ಬಳಕೆದಾರರ ಅನುಕೂಲಕ್ಕಾಗಿ ಮಾತ್ರ ಇರುತ್ತದೆ ಮತ್ತು ಅದನ್ನು ಬೇರೆ ಯಾವುದೇ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ. ಅಂತೆಯೇ, ನನ್ನ ನಾಣ್ಯಗಳನ್ನು ಬಳಸಿ ಅಥವಾ ಚಂದಾದಾರಿಕೆ ಮೊತ್ತವನ್ನು ಪಾವತಿಸುವ ಮೂಲಕ ಅನ್ಲಾಕ್ ಮಾಡಿದ ಯಾವುದೇ ಸೌಲಭ್ಯಗಳನ್ನು ಬೇರೆ ಯಾವುದೇ ಬಳಕೆದಾರರಿಗೆ ವರ್ಗಾಯಿಸಲಾಗುವುದಿಲ್ಲ. ಗಳಿಕೆ ಸ್ವೀಕರಿಸುವವರು ಅವನ / ಅವಳ ಬಳಕೆದಾರ ಖಾತೆಗೆ ಲಿಂಕ್ ಮಾಡಲು ಬ್ಯಾಂಕ್ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಒಬ್ಬ ಬಳಕೆದಾರನು ಅವನ / ಅವಳ ಬಳಕೆದಾರ ಖಾತೆಯ ಮೂಲಕ ಮಾಡಿದ ಎಲ್ಲಾ ಕ್ರಿಯೆಗಳಿಗೆ ಸಂಪೂರ್ಣ ಜವಾಬ್ದಾರನಾಗಿರುತ್ತಾನೆ.

ನಾಣ್ಯಗಳು ಮತ್ತು ಗಳಿಕೆಗಳ ಮುಟ್ಟುಗೋಲು:
ಎ.ಬಳಕೆಯ ನಿಯಮಗಳ ಉಲ್ಲಂಘನೆಗಾಗಿ ಅಥವಾ ನನ್ನ ನಾಣ್ಯಗಳು ಅಥವಾ ಗಳಿಕೆಗಳನ್ನು ಪಡೆಯಲು ಯಾವುದೇ ಅನ್ಯಾಯದ ಅಥವಾ ಮೋಸದ
ವಿಧಾನಗಳಲ್ಲಿ ತೊಡಗಿದ್ದಕ್ಕಾಗಿ ಬಳಕೆದಾರರ ಖಾತೆಯನ್ನು ಮುಕ್ತಾಯಗೊಳಿಸಿದ ನಂತರ ಮತ್ತು / ಅಥವಾ ಅಮಾನತುಗೊಳಿಸಿದ ನಂತರ, ಅವನ /
ಅವಳ ಬಳಕೆದಾರ ಖಾತೆಯಲ್ಲಿ ಲಭ್ಯವಿರುವ ಎಲ್ಲಾ ನಾಣ್ಯಗಳು ಮತ್ತು ಗಳಿಕೆಗಳು ಮುಟ್ಟುಗೋಲು ಹಾಕಿಕೊಳ್ಳುತ್ತವೆ.

ಬಿ. ಒಂದು (1) ವರ್ಷದ ಅವಧಿಗೆ ಬಳಕೆದಾರರು ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ನಿಷ್ಕ್ರಿಯವಾಗಿದ್ದರೆ, ಬಳಕೆದಾರ ಖಾತೆಯಲ್ಲಿನ ನನ್ನ
ನಾಣ್ಯಗಳು ಮುಟ್ಟುಗೋಲು ಹಾಕಿಕೊಳ್ಳುತ್ತವೆ; ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡದ ಕಾರಣ ಪಾವತಿಸದ ಯಾವುದೇ ಗಳಿಕೆಯ ಸಂದರ್ಭದಲ್ಲಿ,
ಹೆಚ್ಚುವರಿ ಮೂರು (3) ತಿಂಗಳುಗಳವರೆಗೆ ಲಭ್ಯವಿರುವ ಸಂವಹನ ಚಾನೆಲ್‌ಗಳ ಮೂಲಕ ಕಂಪನಿಯು ಅವರನ್ನು ಸಂಪರ್ಕಿಸಿದರೂ ಸಹ,
ಬಳಕೆದಾರರು ತಮ್ಮ ಬ್ಯಾಂಕ್ ಅನ್ನು ಲಿಂಕ್ ಮಾಡಲು ವಿಫಲವಾದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಅಂತಹ ಮೂರು (3) ತಿಂಗಳ ಅವಧಿಯ ಕೊನೆಯಲ್ಲಿ ಅವರ ಬಳಕೆದಾರರ ಖಾತೆಗಳಿಗೆ ಖಾತೆಗಳು.

  1. ಸಿ. ಹೆಚ್ಚುವರಿಯಾಗಿ, ಯಾವುದೇ ಬಳಕೆದಾರರು ಬೋನಸ್ ನನ್ನ ನಾಣ್ಯಗಳು ಅಥವಾ ಗಳಿಕೆಗಳನ್ನು ಮೋಸದಿಂದ ಅಥವಾ ತಪ್ಪಾಗಿ
    ಸ್ವೀಕರಿಸಿದ್ದಾರೆಂದು ಕಂಡುಬಂದಲ್ಲಿ, ಅವನ / ಅವಳ ಬಳಕೆದಾರ ಖಾತೆಯಲ್ಲಿ ಲಭ್ಯವಿರುವ ನನ್ನ ನಾಣ್ಯಗಳು ಅಥವಾ ಗಳಿಕೆಗಳು
    ಅನ್ವಯವಾಗುವಂತೆ ಮುಟ್ಟುಗೋಲು ಹಾಕಿಕೊಳ್ಳುತ್ತವೆ.
    ಸಿ. ಹೆಚ್ಚುವರಿಯಾಗಿ, ಯಾವುದೇ ಬಳಕೆದಾರರು ಕಂಪನಿಯು ಬೋನಸ್ ನನ್ನ ನಾಣ್ಯಗಳು ಅಥವಾ ಬಹುಮಾನಗಳನ್ನು ಮೋಸದಿಂದ
    ಅಥವಾ ತಪ್ಪಾಗಿ ಪಡೆದಿರುವುದು ಕಂಡುಬಂದರೆ, ಅವನ / ಅವಳ ಬಳಕೆದಾರ ಖಾತೆಯಲ್ಲಿ ಲಭ್ಯವಿರುವ ನಾಣ್ಯಗಳು ಅಥವಾ
    ಬಹುಮಾನಗಳು ಅನ್ವಯವಾಗುವಂತೆ ಮುಟ್ಟುಗೋಲು ಹಾಕಿಕೊಳ್ಳುತ್ತವೆ.

  2. ಮರುಪಾವತಿ: ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ವೆಬ್‌ಸೈಟ್ / ಅಪ್ಲಿಕೇಶನ್‌ನಲ್ಲಿ ನನ್ನ ನಾಣ್ಯಗಳನ್ನು ಬಳಸುವ
    ಆಯ್ಕೆಯನ್ನು ಕಂಪನಿ ನಿಲ್ಲಿಸಿದರೆ, ಖರೀದಿಸಿದ /ಗಳಿಸಿದ ನಾಣ್ಯಗಳನ್ನು ಕಂಪನಿಯ ವಿವೇಚನೆಯಿಂದ ಮರುಪಾವತಿಸಬಹುದು,
    ಗೂಗಲ್ ಪಾವತಿ ಸೇವಾ ಶುಲ್ಕ ಮತ್ತು / ಅಥವಾ ಯಾವುದೇ ಅನ್ವಯವಾಗುವ ಕಡಿತಗಳಿಗೆ ಒಳಪಟ್ಟಿರುತ್ತದೆ. ಕಾನೂನುಗಳು ಅನ್ವಯವಾಗುತ್ತವೆ.

  3. ಬದಲಾವಣೆಗಳು: ಅನ್ವಯವಾಗುವ ಕಾನೂನಿನ ಬದಲಾವಣೆಯಿಂದಾಗಿ  ನಾಣ್ಯಗಳು ಮತ್ತು / ಅಥವಾ ಬಹುಮಾನ ಸೌಲಭ್ಯಗಳಿಗೆ
    ಸಂಬಂಧಿಸಿದಂತೆ ಕಂಪನಿಯು ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಕಂಪನಿಯು ಎಲ್ಲ ಬಳಕೆದಾರರಿಗೆ ಮುಂಚಿತವಾಗಿ ತಿಳಿಸುತ್ತದೆ. 

  4. ಹೊಂದಾಣಿಕೆ: ವೆಬ್‌ಸೈಟ್‌ನಲ್ಲಿ ನಾಣ್ಯಗಳು ಮತ್ತು / ಅಥವಾ ಗಳಿಕೆಯ ಸೌಲಭ್ಯಗಳು ಲಭ್ಯವಾಗಬೇಕೆ ಅಥವಾ ಕೆಲವು
    ಅಪ್ಲಿಕೇಶನ್‌ನ ಲಭ್ಯವಿರುವ ಸಾಧನ ಪ್ರಕಾರಗಳಲ್ಲಿ  ಲಭ್ಯವಾಗಬೇಕೆ ಎಂದು ಕಂಪನಿಯು ಕಾಲಕಾಲಕ್ಕೆ ನಿರ್ಧರಿಸುತ್ತದೆ.
    ಒಬ್ಬ ಬಳಕೆದಾರನು ತನ್ನ ಸ್ವಂತ ಖಾತೆಯ ಮೂಲಕ ಲಾಗ್ ಇನ್ ಆಗಿದ್ದರೂ ಸಹ ಹೊಂದಾಣಿಕೆಯಾಗದ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ
    ಈ ಸೌಲಭ್ಯಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ.

ಕಂಪನಿ ಒಂದು ಮಧ್ಯವರ್ತಿ

  1. ಕಂಟೆಂಟ್‌ನ ನಿಯಂತ್ರಣವನ್ನು ಬಳಕೆದಾರರ ಹೊಂದಿದ್ದಾರೆ: ಕಂಪನಿಯು ತನ್ನ ವೆಬ್‌ಸೈಟ್‌/ಅಪ್ಲಿಕೇಶನ್‌ ಮೂಲಕ ಬಳಕೆದಾರರ ಪರವಾಗಿ ಮಾತ್ರವೇ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ಸ್ವೀಕರಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ವರ್ಗಾವಣೆ ಮಾಡುತ್ತದೆ. ಬಳಕೆದಾರರು ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳಿಗೆ ಲೇಖಕರು ಮತ್ತು ಮಾಲೀಕರಾಗಿ ಬಳಕೆದಾರರೇ ಇರುತ್ತಾರೆ. ಮುಂದುವರಿದು, ಕಂಪನಿಯು ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳನ್ನು ವೆಬ್‌ಸೈಟ್‌/ಅಪ್ಲಿಕೇಶನ್‌ಗೆ ಅಪ್‌ಲೋಡ್‌ ಮಾಡುವುದಕ್ಕೂ ಮೊದಲು ಪ್ರಕಟಣೆ ಅಥವಾ ಓದುವಿಕೆಯನ್ನು ನಿಯಂತ್ರಿಸುವುದಿಲ್ಲ ಅಥವಾ ನಿರ್ಬಂಧಿಸುವುದಿಲ್ಲ ಅಥವಾ ತಿದ್ದುಪಡಿ ಮಾಡುವುದಿಲ್ಲ.

  2. ಕಂಪನಿಯು ಒಂದು ‘ಮಧ್ಯವರ್ತಿ’ಯಾಗಿದೆ, ಬಾಧ್ಯತೆ ಹೊಂದಿರುವುದಿಲ್ಲ: ಕಂಪನಿಯುಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ನಿಯಮಗಳ ಅಡಿಯಲ್ಲಿ ಕಂಪನಿಯು ‘ಮಧ್ಯವರ್ತಿ’ ಆಗಿದೆ ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಿದ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳಿಗೆ ಜವಾಬ್ದಾರನಾಗಿರುವುದಿಲ್ಲ.

  3. ಕಾನೂನು ಅಡಿಯಲ್ಲಿ ಕೆಲಸ ಮಾಡಲು ಬದ್ಧತೆ: ಮಧ್ಯವರ್ತಿಯಾಗಿರುವ ಕಂಪನಿಯು, ಗಮನಕ್ಕೆ ತರಲಾಗಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಕರ್ತವ್ಯವನ್ನು ಹೊಂದಿದೆ ಮತ್ತು ಕಂಪನಿ ತೆಗೆದುಕೊಂಡ ಈ ಕ್ರಮಗಳಿಗೆ ಬಳಕೆದಾರರು ಬದ್ಧವಾಗಬೇಕು.

 

ಬಾಧ್ಯತೆ

  1. ಯಾವುದೇ ರೀತಿಯ ವಾರಂಟಿ ಇಲ್ಲ: ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಒದಗಿಸಿದ ಎಲ್ಲ ಸೇವೆಗಳು ಮತ್ತು ಪ್ರಕಟಿತ ಕೆಲಸಗಳನ್ನು ಅಭಿವ್ಯಕ್ತಿಪೂರ್ವಕ ಅಥವಾ ಭಾವಿಸಲ್ಪಟ್ಟಂತೆ ಯಾವುದೇ ವಾರಂಟಿ ಇಲ್ಲದೇ “ಹೇಗಿದೆಯೋ ಹಾಗೆ” ಒದಗಿಸಲಾಗಿದೆ. ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಯಾವುದೇ ಪ್ರಕಟಿತ ಕೆಲಸಗಳು, ಕಂಟೆಂಟ್ ಅಥವಾ ಸೇವೆಯನ್ನು ಕಂಪನಿ/ವೆಬ್‌ಸೈಟ್/ಅಪ್ಲಿಕೇಶನ್‌ ಅಭಿವ್ಯಕ್ತಿಪೂರ್ವಕವಾಗಿ ಅಥವಾ ಭಾವಿಸಲ್ಪಟ್ಟಂತೆ ಬೆಂಬಲಿಸುವುದಿಲ್ಲ ಅಥವಾ ಶಿಫಾರಸು ಮಾಡುವುದಿಲ್ಲ. ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿರುವ ಕಾರ್ಯಗಳು ಮತ್ತು ಸೇವೆಗಳು ಅಡ್ಡಿಯಿಲ್ಲದ ಅಥವಾ ದೋಷ ರಹಿತವಾಗಿರುತ್ತದೆ ಅಥವಾ ವೆಬ್‌ಸೈಟ್‌/ಅಪ್ಲಿಕೇಶನ್‌ ಅಥವಾ ಅದರ ಸರ್ವರ್‌ ವೈರಸ್‌ಗಳು ಅತವಾ ಅಪಾಯಕಾರಿ ಅಂಶಗಳಿಂದ ಮುಕ್ತವಾಗಿರುತ್ತದೆ ಎಂದು ಕಂಪನಿ/ವೆಬ್‌ಸೈಟ್‌/ಅಪ್ಲಿಕೇಶನ್‌ ಖಚಿತತೆ ನೀಡುವುದಿಲ್ಲ ಮತ್ತು ವೆಬ್‌ಸೈಟ್/ಅಪ್ಲಿಕೇಶನ್‌ ಅನ್ನು ಬಳಕೆದಾರರು ಬಳಸುವುದರೊಂದಿಗೆ ತೊಡಗಿಸಿಕೊಂಡಿರುವ ಎಲ್ಲ ಮತ್ತು ಯಾವುದೇ ಸಂಬಂಧಿತ ರಿಸ್ಕ್‌ಗಳನ್ನು ಬಳಕೆದಾರರು ಈ ಮೂಲಕ ಅಭಿವ್ಯಕ್ತಿಪೂರ್ವಕವಾಗಿ ಸಮ್ಮತಿಸುತ್ತಾರೆ.

  2. ಉಲ್ಲಂಘನೆಗೆ ಬಳಕೆದಾರರು ಬಾಧ್ಯ: ಬಳಕೆಯ ನೀತಿ ಮತ್ತು ಅದರ ಪರಿಣಾಮಗಳ ಅಡಿಯಲ್ಲಿ ನಿಮ್ಮ ಬಾಧ್ಯತೆಗಳ ಯಾವುದೇ ಉಲ್ಲಂಘನೆಗೆ ಕಂಪನಿ ಮತ್ತು ಯಾವುದೇ ತೃತೀಯ ಪಕ್ಷಕ್ಕೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ (ಕಂಪನಿ ಅಥವಾ ಅದರ ಅಫಿಲಿಯೇಟ್‌ಗಳು ಅಥವಾ ಅದರ ಬಳಕೆದಾರರು ಯಾವುದೇ ಈ ರೀತಿಯ ಉಲ್ಲಂಘನೆಗೆ ಎದುರಿಸುವ ಯಾವುದೇ ನಷ್ಟ ಅಥವಾ ಹಾನಿ ಸೇರಿದಂತೆ).

  3. ವೆಚ್ಚರಕ್ಷಣೆ: ಬಳಕೆದಾರರು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಪ್ರಕಟಿಸಿದ ಅಥವಾ ಒದಗಿಸಿದ ಯಾವುದೇ ಪ್ರಕಟಿತ ಕೆಲಸಗಳು/ಇನ್‌ಪುಟ್‌ಗಳ ಬಳಕೆಗೆ ಕಂಪನಿ/ವೆಬ್‌ಸೈಟ್‌/ಅಪ್ಲಿಕೇಶನ್ ಅನ್ನು ವೆಚ್ಚ ರಕ್ಷಣೆಗೆ ಒಳಪಡಿಸುವುದು ಮತ್ತು ಹಾನಿಗೊಳ್ಳದಂತೆ ಮಾಡುವುದಕ್ಕೆ ಬಳಕೆದಾರರು ಅಭಿವ್ಯಕ್ತಿಪೂರ್ವಕವಾಗಿ ಸಮ್ಮತಿಸುತ್ತಾರೆ. ಕಾಣಿಸಿಕೊಳ್ಳಬಹುದಾದ ಯಾವುದೇ ಕಾನೂನಾತ್ಮಕ ವಿವಾದಗಳಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಮತ್ತು ಇಂತಹ ಕ್ರಮಗಳಲ್ಲಿ ಉಂಟಾದ ವೆಚ್ಚವನ್ನು ಬಳಕೆದಾರರಿಂದ ವಸೂಲಿ ಮಾಡುವ ಹಕ್ಕನ್ನು ಕಂಪನಿ ಕಾಯ್ದಿರಿಸುತ್ತದೆ.

  4. ಪರೋಕ್ಷ ಬಾಧ್ಯತೆ ಇಲ್ಲ: ಇತರರು ವೆಬ್‌ಸೈಟ್‌/ಅಪ್ಲಿಕೇಶನ್‌ ಅನ್ನು ಬಳಸುವುದು ಅಥವಾ ಸರ್ವೀಸ್‌ ಮಾಡುವುದರಿಂದ ಬಳಕೆದಾರರಿಗೆ ಅಥವಾ ತೃತೀಯ ಪಕ್ಷದವರಿಗೆ ಉಂಟಾಗುವ ಯಾವುದೇ ಮತ್ತು ಎಲ್ಲ ವಿಶೇಷ, ಘಟನಾತ್ಮಕ, ಪರೋಕ್ಷ, ಸನ್ನಿವೇಶಾತ್ಮಕ ಅಥವಾ ದಂಡನಾರ್ಹ ಹಾನಿ, ವೆಚ್ಚ ನಷ್ಟವನ್ನು ಕಂಪನಿಯ ವರ್ಜ್ಯಗೊಳಿಸುತ್ತದೆ.

 

ದೂರು ಪರಿಹಾರ ಅಧಿಕಾರಿ

ಕಂಟೆಂಟ್‌ ಮಾರ್ಗಸೂಚಿಗಳು ಸೇರಿದಂತೆ ಈ ಬಳಕೆಯ ನೀತಿಯನ್ನು ಉಲ್ಲಂಘಿಸುವ ಯಾವುದೇ ಪ್ರಕಟಿತ ಕೆಲಸಗಳಿಂದ ಯಾವುದೇ ಬಳಕೆದಾರರು ಬಾಧಿತರಾದರೆ, ಬಳಕೆದಾರರು ತಮ್ಮ ಕಾಳಜಿಗಳನ್ನು[email protected] ಇಲ್ಲಿಗೆ ಬರೆದು ತಿಳಿಸಬಹುದು. ಮೂವತ್ತು (30) ದಿನಗಳೊಳಗೆ ಕಾಳಜಿಗಳನ್ನು ಪರಿಹರಿಸಲು ನಾವು ಶ್ರಮಿಸುತ್ತೇವೆ.

 

ಇತರೆ

  1. ತಿದ್ದುಪಡಿ: ಈ ಬಳಕೆಯ ನೀತಿ ಮತ್ತು ತಕ್ಷಣ ಜಾರಿಗೆ ಬರುವ ತಿದ್ದುಪಡಿಗಳು ಅಥವಾ ಬದಲಾವಣೆಗಳನ್ನು ಏಕಪಕ್ಷೀಯವಾಗಿ ತಿದ್ದುಪಡಿ ಮಾಡುವ ಅಥವಾ ಬದಲಾವಣೆ ಮಾಡುವ ಏಕಪಕ್ಷೀಯ ಮತ್ತು ವಿಶೇಷ ಹಕ್ಕನ್ನು ಕಂಪನಿ ಕಾಯ್ದಿರಿಸಿದೆ. ನಿಯಮಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅಪ್‌ಡೇಟ್‌ ಆಗಿರುವ ಕರ್ತವ್ಯವನ್ನು ಬಳಕೆದಾರರು ಹೊಂದಿದ್ದಾರೆ. ಅಂತಹ ಬದಲಾವಣೆಯ ನಂತರವೂ ವೆಬ್‌ಸೈಟ್/ಅಪ್ಲಿಕೇಶನ್‌ ಅನ್ನು ಬಳಕೆದಾರರು ಬಳಸುವುದನ್ನು ಮುಂದುವರಿಸಿದರೆ, ಬಳಕೆಯ ನೀತಿಗೆ ಮಾಡಿದ ಎಲ್ಲ ಮತ್ತು ಯಾವುದೇ ತಿದ್ದುಪಡಿಗಳು/ಬದಲಾವಣೆಗಳಿಗೆ ಬಳಕೆದಾರರು ಸಮ್ಮತಿಸಿದ್ದಾರೆ ಎಂದು ಭಾವಿಸಲಾಗುತ್ತದೆ.

  2. ವಿವಾದಗಳು: ಕಂಪನಿ ಮತ್ತು ಬಳಕೆದಾರರ ಮಧ್ಯದ ಬಳಕೆಯ ನೀತಿ, ಗೌಪ್ಯತೆ ನೀತಿ ಮತ್ತು ಯಾವುದೇ ಇತರ ಕರಾರುಗಳು ಭಾರತದ ಕಾನೂನುಗಳು, ನೀತಿಗಳು ಮತ್ತು ನಿಯಮಾವಳಿಗೆ ಒಳಪಟ್ಟಿವೆ ಮತ್ತು ಪಕ್ಷಗಳ ಮಧ್ಯೆ ಉಂಟಾದ ಯಾವುದೇ ವಿವಾದಗಳಿಗೆ ಬೆಂಗಳೂರು ನ್ಯಾಯಾಲಯಗಳು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿವೆ ಎಂದು ಬಳಕೆದಾರರು ಅಭಿವ್ಯಕ್ತಿಪೂರ್ವಕವಾಗಿ ಸಮ್ಮತಿಸುತ್ತಾರೆ.

  3. ಸಂಘರ್ಷ: ಇಂಗ್ಲಿಷ್‌ನಲ್ಲಿರುವ ಮತ್ತು ವೆಬ್‌ಸೈಟ್‌/ಅಪ್ಲಿಕೇಶನ್‌ನಲ್ಲಿ ಲಭ್ಯವಾಗಿಸಿರಬಹುದಾದ ಯಾವುದೇ ಭಾಷೆಯಲ್ಲಿನ ಬಳಕೆಯ ನೀತಿಯ ವ್ಯಾಖ್ಯಾನದಲ್ಲಿ ಯಾವುದೇ ಸಂಘರ್ಷ ಉಂಟಾದಲ್ಲಿ, ಇಂಗ್ಲಿಷ್‌ ಆವೃತ್ತಿಯು ಮೇಲುಗೈಯಾಗಿರುತ್ತದೆ.

 

 



ಈ ಲೇಖನ ನಿಮಗೆ ಸಹಾಯಕವಾಗಿದೆಯೇ?