ನಿಮ್ಮ ಖಾತೆಯನ್ನು ಹೊಂದಿಸಿ
ನಿಮ್ಮ ಖಾತೆಯನ್ನು ತೆರೆದು, ಈಮೇಲ್ ಪರಿಶೀಲನೆ ಆದನಂತರ ನೀವು ನಿಮ್ಮ ಖಾತೆಯ ಸಾರಾಂಶ ಮತ್ತು ಪ್ರೊಫೈಲ್ ಚಿತ್ರವನ್ನು ಕಸ್ಟಮೈಸ್ ಮಾಡಬಹುದು. ಸಾರಾಂಶದಲ್ಲಿ ನೀವು ಇಷ್ಟಪಡುವ ಪ್ರಕಾರಗಳು, ನಿಮ್ಮ ಹವ್ಯಾಸಗಳು, ನೀವು ಎಷ್ಟು ಸಮಯದಿಂದ ಬರೆಯುತ್ತಿದ್ದೀರಿ ಅಥವಾ ಇನ್ನೂ ಏನಾದರೂ ವಿವರಗಳನ್ನು ನೀಡಬಹುದು. ಸಾರಾಂಶ 5000 ಅಕ್ಷರಗಳನ್ನು ಮೀರಬಾರದು.
ಸಾರಾಂಶದಲ್ಲಿ ಯಾವುದೇ ಲಿಂಕ್'ಗಳನ್ನು ಹಾಕಬೇಡಿ. ಸುರಕ್ಷತೆಯ ಕಾರಣದಿಂದ ನಿಮ್ಮ ಸಾರಾಂಶದಲ್ಲಿ ಬಳಸಲ್ಪಟ್ಟ ಲಿಂಕ್'ಗಳು ಸ್ಪಾಮ್ ಎಂದು ಪರಿಗಣಿತವಾಗಿ, ಲಿಂಕ್ ಬದಲು ಕೇವಲ ಅಕ್ಷರಗಳಾಗಿ ಕಾಣಿಸುತ್ತವೆ.
ನಿಮ್ಮ ಖಾತೆ ಡೀಫಾಲ್ಟ್ ಪ್ರೋಫೈಲ್ ಚಿತ್ರವನ್ನು ಹೊಂದಿರುತ್ತದೆ. ನೀವು ಯಾವುದೇ ಸಮಯದಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಬಹುದು.
ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವ ಮೊದಲು ಈ ಕೆಳಗಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ:
೧. ನೀವು ಪ್ರತಿಲಿಪಿ ಅಪ್ಲಿಕೇಶನ್'ಅನ್ನು ಬಳಸುತ್ತಿದ್ದರೆ ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಪ್ರತಿಲಿಪಿ ಆಕ್ಸೆಸ್ ಹೊಂದಿರುತ್ತದೆ.
೨. ನೀವು ಅಪ್‌ಲೋಡ್ ಮಾಡುವ ಚಿತ್ರ .jpg ಅಥವಾ gif ಫೈಲ್ ಆಗಿರಬೇಕು ಮತ್ತು 1 MB ಯನ್ನು ಮೀರುವಂತಿಲ್ಲ.
೩. ಆಯ್ಕೆ ಮಾಡಿದ ಚಿತ್ರವು ನಮ್ಮ ಯಾವುದೇ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
ನಮ್ಮ ವಿಷಯ ಮಾರ್ಗಸೂಚಿಗಳಲ್ಲಿ ನಿರ್ಬಂಧಿತ ವಿಚಾರ/ಸಂಗತಿಗಳ ಕುರಿತು ನೀವು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.