ನನ್ನ ಕಥೆಗೆ ನಾನು ಕವರ್ ಚಿತ್ರಗಳನ್ನು ಸೇರಿಸಬಹುದೇ?

ಓದುಗರು ನಿಮ್ಮ ಕತೆಯನ್ನು ಓದಲು ಹೆಚ್ಚು ಆಸಕ್ತಿ ತೋರಿಸಲು ನೀವು ನಿಮ್ಮ ಕತೆಗೆ ಹೊಂದುವಂತಹ ಉತ್ತಮ ಕವರ್ ಚಿತ್ರವನ್ನು ಸೇರಿಸಬಹುದು.

 

ನಿಮ್ಮ ಮೊಬೈಲ್, ಕಂಪ್ಯೂಟರ್'ನಲ್ಲಿರುವ ಅಥವಾ ಪ್ರತಿಲಿಪಿ ಗ್ಯಾಲರಿಯಿಂದ ನೀವು ಕವರ್ ಚಿತ್ರವನ್ನು ಆಯ್ಕೆ ಮಾಡಬಹುದು.

 

ಚಿತ್ರಗಳನ್ನು ಸೇರಿಸುವಾಗ ಅವು png, jpg ಅಥವಾ jpeg ರೂಪದಲ್ಲಿ ಇರಬೇಕು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.

 

  1. ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ನಿಮ್ಮ ಕತೆಯನ್ನು ಆಯ್ಕೆ ಮಾಡಿ

  3. ಚಿತ್ರವನ್ನು ಸೇರಿಸುವಲ್ಲಿ ಹೋಗಿ ನಿಮ್ಮ ಮೊಬೈಲ್, ಕಂಪ್ಯೂಟರ್'ನಲ್ಲಿರುವ ಅಥವಾ ಪ್ರತಿಲಿಪಿ ಗ್ಯಾಲರಿಯಿಂದ ಕವರ್ ಚಿತ್ರವನ್ನು ಆಯ್ಕೆ ಮಾಡಿ

 

ಸೂಚನೆ:

  1. ನಿಮ್ಮ ಮೊಬೈಲ್, ಕಂಪ್ಯೂಟರ್'ನಲ್ಲಿರುವ ಚಿತ್ರವನ್ನು ಸೇರಿಸಲು ಇಚ್ಛಿಸಿದಲ್ಲಿ ಪ್ರತಿಲಿಪಿ ನಿಮ್ಮ ಫೈಲ್ಸ್, ಫೋಲ್ಡರ್, ಗ್ಯಾಲರಿಗೆ ಪ್ರವೇಶವನ್ನು ಕೇಳುತ್ತದೆ. ನಿಮ್ಮ ಫೋನ್ ಸೆಟ್ಟಿಂಗ್'ಗೆ ಹೋಗಿ ಪ್ರವೇಶಕ್ಕೆ ಅನುಮತಿ ನೀಡಬಹುದು.

 

  1. ಪ್ರತಿಲಿಪಿ ಗ್ಯಾಲರಿಯಿಂದ ಹೊರತಾದ ಯಾವುದೇ ಚಿತ್ರವನ್ನು ಬಳಸುವಲ್ಲಿ ಅದು ಹಕ್ಕುಸ್ವಾಮ್ಯದಿಂದ ಹೊರತಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇತರರಿಗೆ ಸಂಬಂಧಿಸಿದ ಚಿತ್ರಗಳನ್ನು ಬಳಸಿದಲ್ಲಿ ಅದನ್ನು ಬರಹದಿಂದ ತೆಗೆಯಬೇಕಾಗುತ್ತದೆ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?