ಪ್ರತಿಲಿಪಿಯಲ್ಲಿ ನಾನು ಹಿಂದೆ ಓದಿದ ಕಥೆಗಳು ಎಲ್ಲಿ ಸಿಗುತ್ತವೆ?

ಇತ್ತೀಚಿನ ಓದುವಿಕೆಗಳು ಪ್ರತಿಲಿಪಿ ಅಪ್ಲಿಕೇಶನ್‌ನಲ್ಲಿ ನಿಮ್ಮ ಓದುವ ಇತಿಹಾಸವನ್ನು ತೋರಿಸುತ್ತವೆ. ಪ್ರತಿಲಿಪಿ ಅಪ್ಲಿಕೇಶನ್‌ನ ಗ್ರಂಥಾಲಯ ವಿಭಾಗದಲ್ಲಿ  ಇತ್ತೀಚಿನ ಓದುವಿಕೆಗಳನ್ನು ಕಾಣಬಹುದು.

ಓದುವ ಇತಿಹಾಸದಲ್ಲಿನ ಪ್ರತಿ ನಮೂದುಗಳಿಗೆ ನೀವು ಈ ರೀತಿಯ ಆಯ್ಕೆಗಳನ್ನು ಪಡೆಯುತ್ತೀರಿ:

  • ಗ್ರಂಥಾಲಯಕ್ಕೆ ಸೇರಿಸಿ

  • ಸಾರಾಂಶ ಪುಟಕ್ಕೆ ಹೋಗಿ

  • ಹಂಚಿ 

  • ಓದಲ್ಪಟ್ಟ ಬರಹಗಳ ಪಟ್ಟಿಯಿಂದ ಅಳಿಸಿ

ಇತ್ತೀಚಿಗೆ ಓದಲ್ಪಟ್ಟ ಬರಹಗಳು ವಿಭಾಗದಲ್ಲಿರುವ ಪ್ರತಿ ಬರಹದ ಎದುರಿನಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡುವ ಮೂಲಕ ಈ ಆಯ್ಕೆಗಳನ್ನು ಕಾಣಬಹುದು.

ಇತ್ತೀಚಿನ ಓದುವಿಕೆಗಳ ಪಟ್ಟಿಯ ಮೇಲಿನ ಬಲ ಮೂಲೆಯಲ್ಲಿರುವ ಅಳಿಸು ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಸಂಪೂರ್ಣ ಓದುವ ಇತಿಹಾಸವನ್ನು ಅಳಿಸಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಇತ್ತೀಚಿನ ಓದಿದ ಇತಿಹಾಸವನ್ನು ತೆರವುಗೊಳಿಸಿದರೆ, ಕ್ರಿಯೆಯನ್ನು ಬದಲಾಯಿಸಲಾಗುವುದಿಲ್ಲ; ಅಂದರೆ ಇಲ್ಲಿಯವರೆಗಿನ ನೀವು ಓದಿದ ಬರಹಗಳ ಮಾಹಿತಿ ಅಳಿಸಲ್ಪಡುತ್ತದೆ. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?