ನಾನು ಸೈನ್ ಇನ್ ಮಾಡಲು ಬಳಸಿದ ಇಮೇಲ್ ವಿಳಾಸವನ್ನು ನಾನು ಮರೆತಿದ್ದೇನೆ, ನಾನುಈಗೇನು ಮಾಡಬೇಕು?

ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ನೀವು ಮರೆತಿದ್ದರೆ ಅಥವಾ ನೀವು ಅದರ ಆಕ್ಸೆಸ್ ಕಳೆದುಕೊಂಡಿದ್ದರೆ, ಲಿಂಕ್ ಆಗಿರುವ ಇಮೇಲ್'ಅನ್ನು ಕಂಡುಹಿಡಿಯಲು ನೀವು ಹಲವು ವಿಧಾನಗಳನ್ನು ಪ್ರಯತ್ನಿಸಬಹುದು.

 

ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸದಿಂದ ನೀವು ನಮ್ಮನ್ನು ಸಂಪರ್ಕಿಸದಿದ್ದರೆ, ನಾವು ಖಾತೆಯ ಮಾಹಿತಿಯನ್ನು ತಿಳಿಸಲು ಸಾಧ್ಯವಾಗುವುದಿಲ್ಲ. 

 

ನಿಮ್ಮ ಇಮೇಲ್ ಮರೆತುಹೋಗಿದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು:

 

ಸೆಟ್ಟಿಂಗ್‌'ಅನ್ನು ಪರಿಶೀಲಿಸಿ

 

ನೀವು ನಿಮ್ಮ ಖಾತೆಗೆ ಲಾಗ್ ಇನ್ ಆಗಿಯೇ ಇದ್ದರೆ ಅಥವಾ ನಿಮ್ಮ ಪಾಸ್‌ವರ್ಡ್ ನಿಮಗೆ ತಿಳಿದಿದ್ದರೆ, ನೀವು ನಿಮ್ಮ ಸೆಟ್ಟಿಂಗ್‌'ನಲ್ಲಿ ಕಾಣಿಸುವ ಇಮೇಲ್ ವಿಳಾಸವನ್ನು ನೋಡಬಹುದು.

 

ನಿಮ್ಮ ಪಾಸ್ವರ್ಡ್'ಅನ್ನು ಮರುಹೊಂದಿಸಿ

 

ಪಾಸ್‌ವರ್ಡ್ ಮರುಹೊಂದಿಸುವ ಇಮೇಲ್'ಅನ್ನು ನೀವು ಯಶಸ್ವಿಯಾಗಿ ಕಳುಹಿಸಬಹುದಾದರೆ, ನೀವು ಲಿಂಕ್ ಮಾಡಿದ ಇಮೇಲ್ ವಿಳಾಸವನ್ನು ಕಂಡುಕೊಳ್ಳಬಹುದು. ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸಕ್ಕೆ ಮಾತ್ರ ಈಮೇಲ್ ಕಳುಹಿಸಲಾಗುತ್ತದೆ.

 

ಪಾಸ್ವರ್ಡ್ ಮರುಹೊಂದಿಸುವ ಇಮೇಲ್'ಅನ್ನು ಕಳುಹಿಸಲು ಪ್ರಯತ್ನಿಸುವ ಮೂಲಕ ಖಾತೆಗೆ ಇಮೇಲ್ ವಿಳಾಸ ಲಿಂಕ್ ಆಗಿದೆಯೇ ಎಂದು ನೀವು ಪರೀಕ್ಷಿಸಬಹುದು.

 

  1. Kannada.pratilipi.com ಗೆ ಹೋಗಿ ಬಲ ಮೇಲ್ಭಾಗದಲ್ಲಿರುವ ಸೈನ್ ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ಪಾಸ್ವರ್ಡ್ ಮರೆತಿರುವಿರಾ? ಆಯ್ಕೆ ಮೇಲೆ ಕ್ಲಿಕ್ ಮಾಡಿ

  3. ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ನಮೂದಿಸಿ

  4. ಪಾಸ್ವರ್ಡ್ ಮರುಹೊಂದಿಸಿ ಮೇಲೆ ಕ್ಲಿಕ್ ಮಾಡಿ

  5. ನೀವು 'ಬಳಕೆದಾರರು ಕಂಡುಬಂದಿಲ್ಲ' ಎಂಬ ಸಂದೇಶವನ್ನು ಸ್ವೀಕರಿಸಿದರೆ ಆ ಇಮೇಲ್ ವಿಳಾಸಕ್ಕೆ ಯಾವುದೇ ಖಾತೆ ಲಿಂಕ್ ಆಗಿಲ್ಲ ಎಂದರ್ಥ. 24 ಗಂಟೆಗಳಲ್ಲಿ ನಿಮ್ಮ ಪಾಸ್‌ವರ್ಡ್ ಮರುಹೊಂದಿಸುವ ಲಿಂಕ್’ಅನ್ನು ನೀವು ಸ್ವೀಕರಿಸದಿದ್ದರೆ, ದಯವಿಟ್ಟು ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ.

 

ಇಮೇಲ್ ಖಾತೆ ಪ್ರವೇಶವನ್ನು ಕಳೆದುಕೊಂಡಿದೆ

 

ನಿಮ್ಮ ಪ್ರತಿಲಿಪಿ ಖಾತೆಯಿಂದ ನೀವು ಲಾಗ್ ಔಟ್ ಆಗಿದ್ದು, ನಿಮ್ಮ ಹಳೆಯ ಇಮೇಲ್  ನೆನಪಿದ್ದರೆ, ದಯವಿಟ್ಟು ಸಹಾಯಕ್ಕಾಗಿ ಮನವಿ ಸಲ್ಲಿಸಿ. ಖಾತೆಗೆ ಲಾಗಿನ್ ಆಗಲು ನಮ್ಮ ತಂಡವು ನಿಮಗೆ ಮಾರ್ಗದರ್ಶನ ನೀಡುತ್ತದೆ. ದಯವಿಟ್ಟು ಗಮನಿಸಿ, ನಮ್ಮ ತಂಡವು ನಿಮಗೆ ಮಾತ್ರ ತಿಳಿದಿರುವ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ, ಅವುಗಳಿಗೆ ಸರಿಯಾದ ಉತ್ತರಗಳನ್ನು ನೀಡಲು ವಿಫಲವಾದರೆ ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ನಮಗೆ ಸಾಧ್ಯವಾಗುವುದಿಲ್ಲ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?