ನಾನು ಪ್ರತಿಲಿಪಿಯಲ್ಲಿ ಈವೆಂಟ್‌ಗಳ ವಿಭಾಗದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ.

ನಗದು ಬಹುಮಾನಗಳಿಂದ ಹಿಡಿದು ಪ್ರತ್ಯೇಕವಾಗಿ ಕೃತಿಗಳನ್ನು ಪ್ರಮೋಟ್ ಮಾಡುವ ಅವಕಾಶ ಪಡೆಯುವವರೆಗೆ, ಪ್ರತಿ ಸ್ಪರ್ಧೆಯಲ್ಲಿ ನಾವು ಬಹುಮಾನಗಳು ಮತ್ತು ಸೌಲಭ್ಯಗಳನ್ನು ಒದಗಿಸುತ್ತೇವೆ. 

 

ಆದರೆ ಸ್ಪರ್ಧೆಗಳು ಕೇವಲ ಬಹುಮಾನಗಳ ಗೆಲುವಿಗಾಗಿ ಅಲ್ಲ, ಸಾಧ್ಯವಾದಷ್ಟು ಲೇಖಕರನ್ನು ಗುರುತಿಸುವ, ಉತ್ತಮ ಬರಹಗಳನ್ನು ಬರೆಯಲು ಪ್ರೇರೇಪಿಸುವ  ಗುರಿಯನ್ನು ನಾವು ಹೊಂದಿದ್ದೇವೆ. ನೀವು ಗೆದ್ದರೆ ಮಾತ್ರ ವೇದಿಕೆಯಲ್ಲಿ ಮನ್ನಣೆ ಸಿಗುತ್ತದೆ ಎಂದು ನೀವು ಭಾವಿಸಬೇಡಿ. 

 

ನೀವು ಪ್ರತಿಲಿಪಿ ವೇದಿಕೆಯಲ್ಲಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಗೋಚರತೆಯನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ನೀವು ಸಾವಿರಾರು ಓದುಗರನ್ನು ಪಡೆಯಬಹುದು!

 

ಪ್ರತಿಲಿಪಿಯಲ್ಲಿ ಓದುಗರ ದೊಡ್ಡ ಸಮೂಹಕ್ಕೆ ನಿಮ್ಮ ಕೆಲಸವನ್ನು ತಲುಪುವಂತೆ ಮಾಡಲು ನೀವು ಅವಕಾಶವನ್ನು ಪಡೆಯಬಹುದು. ನಾವು ಪ್ರತಿಲಿಪಿಯ ಸಾಮಾಜಿಕ ಜಾಲಾತಾಣಗಳ ಹ್ಯಾಂಡಲ್‌ಗಳಲ್ಲಿ ವಿಜೇತರ ಸಂದರ್ಶನಗಳನ್ನು ಸಹ ತೋರಿಸುತ್ತೇವೆ. ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಲೇಖಕರೊಂದಿಗೆ ತೊಡಗಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

 

ಸಾವಿರಾರು ಓದುಗರೊಂದಿಗೆ ನಿಮ್ಮ ಕೃತಿಗಳನ್ನು ಹಂಚಿಕೊಳ್ಳುವುದರೊಂದಿಗೆ ತೊಡಗಿಸಿಕೊಳ್ಳುವುದರೊಂದಿಗೆ, ನಿಮ್ಮ ಬಹು ಅಧ್ಯಾಯದ ಕಾದಂಬರಿಗಳು, ಕಥೆಗಳು ಅಥವಾ ನೀಳ್ಗತೆಗಳನ್ನು, ನಮ್ಮ ಮಾರ್ಕೆಟಿಂಗ್ ಮತ್ತು ಸಂಶೋಧನಾ ತಂಡಗಳು ಗಮನಿಸುತ್ತವೆ. ಈ ತಂಡಗಳು ಪ್ಲಾಟ್‌ಫಾರ್ಮ್‌ನಿಂದ ಉತ್ತಮ ಕೃತಿಗಳನ್ನು ಎತ್ತಿಕೊಳ್ಳುತ್ತದೆ ಮತ್ತು ನಿಮ್ಮ ಬರಹಗಳನ್ನು ಮುದ್ರಣ ಪುಸ್ತಕಗಳು, ಕಾಮಿಕ್ಸ್, ಆಡಿಯೊಬುಕ್‌ಗಳು, ವೆಬ್ ಸರಣಿಗಳು, ಕಿರುಚಿತ್ರಗಳು ಇತ್ಯಾದಿಗಳಾಗಿ ಪರಿವರ್ತಿಸಲು ಒಪ್ಪಂದಗಳನ್ನು ಮಾಡಿಕೊಳ್ಳಬಯಸುತ್ತದೆ. 

ಗಮನಿಸಬೇಕಾದ ವಿಚಾರ  : ಅಂತಹ IP ಡೀಲ್‌ಗಳಿಗಾಗಿ ಸ್ಪರ್ಧೆಗಳಲ್ಲಿ ಪ್ರಕಟವಾದ ಕೃತಿಗಳಿಗೆ ತಂಡವು ಆದ್ಯತೆ ನೀಡುತ್ತದೆ ಆದ್ದರಿಂದ ನೀವು ನಮ್ಮ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರೆ (ನೀವು ಗೆಲ್ಲುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ!) ನಮ್ಮ IP ತಂಡದಿಂದ ನಿಮ್ಮ ಗಮನಕ್ಕೆ ಬರುವ ಸಾಧ್ಯತೆಗಳು ನಿಜವಾಗಿಯೂ ಇರಬಹುದು.

 

ಪ್ರತಿಲಿಪಿಯು ನಿಮ್ಮ ಸರಣಿ/ಕಾದಂಬರಿಗಳನ್ನು ಮುದ್ರಣದಲ್ಲಿ ಅಥವಾ ಕಾಮಿಕ್ಸ್‌ನಲ್ಲಿ, ಆಡಿಯೊಬುಕ್‌ಗಳು, ವೆಬ್ ಸರಣಿಗಳು ಇತ್ಯಾದಿಗಳಲ್ಲಿ ಉತ್ಪಾದಿಸಬಹುದು. ಲೇಖಕರು ಕೃತಿಯ ಹಕ್ಕುಸ್ವಾಮ್ಯವನ್ನು ಹೊಂದಿರುವುದರಿಂದ, ನಮ್ಮ IP ತಂಡವು ಲೇಖಕರನ್ನು ಸಂಪರ್ಕಿಸುತ್ತದೆ ಮತ್ತು ಲೇಖಕರ ಕೃತಿಯನ್ನು ಮೇಲ್ಕಂಡ ಯಾವುದೇ ರೂಪದಲ್ಲಿ ಪರಿವರ್ತಿಸುವ ಕುರಿತು ಮೊದಲು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?