ಹೋಮ್ ಸ್ಕ್ರೀನ್‌ನಲ್ಲಿ ಈ ಡೈಲಿ ಸೀರೀಸ್ ವಿಜೆಟ್ ಏನನ್ನು ತೋರಿಸುತ್ತಿದೆ?

ನೀವು ಮುಂದಿನ ಅಧ್ಯಾಯಗಳ ಡ್ರಾಫ್ಟ್ಗಳನ್ನು ರಚಿಸಿ ಮುಂದಿನ ಏಳು ದಿನಗಳ ಅವಧಿಯಲ್ಲಿ ತಾನಾಗಿಯೇ ಪ್ರಕಟವಾಗುವಂತೆ ಷೆಡ್ಯೂಲ್ ಮಾಡಬಹುದು. ಏಳು ದಿನಗಳು ನಿಮ್ಮ ಧಾರಾವಾಹಿ ಮುಖಪುಟದಲ್ಲಿ ಕಾಣಸಿಗುತ್ತದೆ. ಉದಾ: ನಾನೊಂದು ಧಾರಾವಾಹಿಯನ್ನು ಬರೆಯುತ್ತಿದ್ದೇನೆ. ಇದರ ಮುಂದಿನ ಅಧ್ಯಾಯಗಳನ್ನು ಬರುವ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಪ್ರಕಟವಾಗುವಂತೆ ಡ್ರಾಫ್ಟ್ ರಚಿಸಿ ಷೆಡ್ಯೂಲ್ ಮಾಡಿದ್ದೇನೆ. ಈ ಸಂದರ್ಭದಲ್ಲಿ ಪ್ರತಿಲಿಪಿ ಮುಖಪುಟದ ‘ಡೈಲಿ ಸೀರಿಯಲ್ಸ್’ ಅಡಿಯಲ್ಲಿ  ಸೋಮ, ಬುಧ ಮತ್ತು ಶುಕ್ರವಾರಗಳ ಅಡಿಯಲ್ಲಿ ನಿಮ್ಮ ಧಾರಾವಾಹಿ ಕಾಣಿಸಿಕೊಳ್ಳುತ್ತದೆ. 

 

ಮುಂದಿನ ಅಧ್ಯಾಯಗಳನ್ನು ಪ್ರಕಟಿಸಲು ಬರಹಗಾರರು ಯಾವುದೇ ಬದ್ಧತೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಬದಲಾಗಿ, ನೀವು ಸಂಚಿಕೆಯನ್ನು ಮುಂಚಿತವಾಗಿ ಬರೆಯಬಹುದು ಮತ್ತು ಅದನ್ನು ಯಾವುದೇ  ಸಮಯಕ್ಕೆ ಪ್ರಕಟಗೊಳ್ಳುವಂತೆ ಸಮಯ  ನಿಗದಿಪಡಿಸಬಹುದು. ನಿಮ್ಮ ಸರಣಿಯು ವಾರದ ದಿನಗಳ ಅಡಿಯಲ್ಲಿ ಮುಖಪುಟದಲ್ಲಿ 'ಡೈಲಿ ಸೀರೀಸ್' ವಿಜೆಟ್‌ನಲ್ಲಿ ಕಾಣಿಸುತ್ತದೆ. 

 

ಡೈಲಿ ಸೀರೀಸ್ ಸೌಲಭ್ಯವು ಧಾರಾವಾಹಿಗಳಿಗೆ ಮಾತ್ರ ಲಭ್ಯವಿರುತ್ತದೆ. ಮುಖಪುಟದಲ್ಲಿ ಕಾಣುವ ಡೈಲಿ ಸೀರೀಸ್  ವಿಜೆಟ್ ಮುಂಬರುವ ಏಳು ದಿನಗಳವರೆಗೆ ಯಾವೆಲ್ಲ ಧಾರಾವಾಹಿಗಳು ಷೆಡ್ಯೂಲ್ ಆಗಲ್ಪಟ್ಟಿವೆಯೋ ಅವುಗಳನ್ನು ತೋರಿಸುತ್ತವೆ. 

 

ಡೈಲಿ ಸೀರೀಸ್ ವಿಜೆಟ್‌ನಲ್ಲಿ ನಿಮ್ಮ ಯಾವುದೇ ಧಾರಾವಾಹಿ ಕಾಣಿಸುವಂತಾಗಲು :

 

ಮುಂದಿನ ಏಳು ದಿನಗಳಲ್ಲಿ ಯಾವುದಾದರೊಂದು ದಿನಕ್ಕೆ ಕನಿಷ್ಠ ಒಂದು ಭಾಗವನ್ನುಷೆಡ್ಯೂಲ್ ಮಾಡಿ ಸಮಯ  ನಿಗದಿಪಡಿಸಬೇಕು. ನಿಗದಿತ ಭಾಗವು ಕನಿಷ್ಠ 200 ಪದಗಳ ವಿಷಯವನ್ನು ಹೊಂದಿರಬೇಕು. 

 

ಯಾವುದೇ ಷೆಡ್ಯೂಲ್ ಮಾಡಿದ ಧಾರಾವಾಹಿಯ ಅಧ್ಯಾಯವು ೨ ಗಂಟೆಗಳ ಒಳಗೆ ಡೈಲಿ ಸೀರೀಸ್ ವಿಜೆಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?