ಕಥೆಯನ್ನು ಓದುವ ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ಅಭಿರುಚಿಯನ್ನು ಹೊಂದಿರುತ್ತಾರೆ. ಬಳಕೆದಾರರು ಯಾವುದೇ ಕೃತಿಗೆ ರೇಟಿಂಗ್ ನೀಡುವಲ್ಲಿ ಇದು ಮುಖ್ಯ ಅಂಶವಾಗಿದೆ. ಇತರ ಬಳಕೆದಾರರು ಒಂದು ನಿರ್ದಿಷ್ಟ ಕಥೆಯನ್ನು ಇಷ್ಟಪಟ್ಟ ಮಾತ್ರಕ್ಕೆ, ಎಲ್ಲರೂ ಅದೇ ರೀತಿ ಭಾವಿಸುತ್ತಾರೆ ಎಂದರ್ಥವಲ್ಲ. ಪ್ರತಿಯಾಗಿ, ಅಷ್ಟು ಉತ್ತಮವಲ್ಲದ ಕೃತಿಗಳೂ ಒಳ್ಳೆಯ ರೇಟಿಂಗ್‌ಗಳನ್ನು ಪಡೆಯಬಹುದು, ಒಳ್ಳೆಯ ಕೃತಿಗಳು ಕಡಿಮೆ ರೇಟಿಂಗ್ ಗಳಿಸಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯಗಳು ಭಿನ್ನವಾಗಿರುತ್ತವೆ.
ಜನಸಮೂಹದ ಬುದ್ಧಿವಂತಿಕೆಯ ಪರಿಕಲ್ಪನೆ (ಅಂದರೆ ಹೆಚ್ಚು ವ್ಯಕ್ತಿಗಳ ಒಟ್ಟಾರೆ ಅಭಿಪ್ರಾಯಕ್ಕಿಂತ ಒಬ್ಬ ಪರಿಣಿತನ ಅಭಿಪ್ರಾಯ) ಇಲ್ಲಿ ಕಾರ್ಯರೂಪಕ್ಕೆ ಬರುತ್ತದೆ. ಅದಕ್ಕಾಗಿಯೇ ಪ್ರತಿಲಿಪಿಯ ಎಲ್ಲಾ ಬಳಕೆದಾರರು 1-5 ರವರೆಗೆ ಅವರಿಷ್ಟದಂತೆ ರೇಟಿಂಗ್ ನೀಡಲು ಅವಕಾಶವಿದೆ.