ನನ್ನ ಪ್ರತಿಲಿಪಿ ಖಾತೆಯನ್ನು ನಾನು ಹೇಗೆ ರಕ್ಷಿಸಿಕೊಳ್ಳುವುದು?

ಪ್ರತಿಲಿಪಿಯಲ್ಲಿ ಖಾತೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬಳಕೆದಾರರು ತಮ್ಮ ಖಾತೆಯ ಮಾಹಿತಿಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಾವು ಪ್ರೋತ್ಸಾಹಿಸುತ್ತೇವೆ. ಪ್ರತಿಲಿಪಿಯ ಉದ್ಯೋಗಿಗಳು ಯಾವುದೇ ಸಂದರ್ಭಗಳಲ್ಲಿ ನಿಮ್ಮ ಪಾಸ್‌ವರ್ಡ್'ಅನ್ನು ಕೇಳುವುದಿಲ್ಲ.

 

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಸಲಹೆಗಳು

 

ಬಲವಾದ ಪಾಸ್ವರ್ಡ್

 

ಇತರರು ಪುನರಾವರ್ತಿಸಲು ಸುಲಭವಲ್ಲದ ಪಾಸ್‌ವರ್ಡ್'ಅನ್ನು ರಚಿಸಿ. ಉದಾಹರಣೆಗೆ, "password123," ಇಂತಹ ಪಾಸ್ವರ್ಡ್'ಗಳು ಸುರಕ್ಷಿತವಲ್ಲ. ಸಣ್ಣ ಮತ್ತು ದೊಡ್ಡ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ಸಂಯೋಜನೆಯ ಮೂಲಕ ಪಾಸ್ವರ್ಡ್ ರಚಿಸಲು ನಾವು ಸಲಹೆ ನೀಡುತ್ತೇವೆ.

 

ಪಾಸ್ವರ್ಡ ಬದಲಾವಣೆ

 

ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಪಾಸ್‌ವರ್ಡ್'ಅನ್ನು ಬದಲಾಯಿಸಲು ನಾವು ಬಳಕೆದಾರರಿಗೆ ಸಲಹೆ ನೀಡುತ್ತೇವೆ.

 

ಸುರಕ್ಷಿತವಾಗಿ ಬಳಸಿ

 

ನಿಮ್ಮ ಖಾತೆಗೆ ಲಾಗ್ ಇನ್ ಆಗುವ ಮೊದಲು ನೀವು ಸರಿಯಾದ ವೆಬ್ಸೈಟ್(www.kannada.pratilipi.com) ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಾವು ನಿಮಗೆ ಕಳುಹಿಸುವ ಯಾವುದೇ ಲಿಂಕ್‌ಗಳು ಅದೇ ವಿಳಾಸದಿಂದ ಬರುತ್ತವೆ. ದಯವಿಟ್ಟು ಯಾವುದೇ ಹೊರಗಿನ ಲಿಂಕ್'ಗಳ ಬಗ್ಗೆ ಜಾಗರೂಕರಾಗಿರಿ. ನಿಮಗೆ ಪರಿಚಯವಿಲ್ಲದ ಜನರಿಂದ ಕಳುಹಿಸಲ್ಪಡುವ ಯಾವುದೇ ಲಿಂಕ್‌ಗಳನ್ನು ತೆರೆಯಬೇಡಿ.

 

ನಿಮ್ಮ ಆಧಾರ್ ಸಂಖ್ಯೆಯಂತಹ ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಪ್ರತಿಲಿಪಿ ತನ್ನ ಬಳಕೆದಾರರನ್ನು ಎಂದಿಗೂ ಕೇಳುವುದಿಲ್ಲ; ಅಥವಾ ಈ ರೀತಿಯ ಮಾಹಿತಿಯನ್ನು ವಿನಂತಿಸಿ ಪ್ರತಿಲಿಪಿ ಅಥವಾ ಯಾವುದೇ ಇತರ ಪ್ಲಾಟ್‌ಫಾರ್ಮ್‌ನಲ್ಲಿ ಖಾಸಗಿ ಸಂದೇಶಗಳನ್ನು ಕಳುಹಿಸುವುದಿಲ್ಲ. ಪ್ರತಿಲಿಪಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನ ಹೊರಗೆ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಬಳಕೆದಾರರನ್ನು ವಿನಂತಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನದಲ್ಲಿಡಿ. ಪ್ರತಿಲಿಪಿಯ ಕೆಲವು ಸೇವೆ ಅಥವಾ ಸೌಲಭ್ಯಗಳನ್ನು ಹೊಂದಲು ಬಳಕೆದಾರರು ಇಚ್ಛಿಸಿ, ವಿನಂತಿಸಿದಾಗ ಮಾತ್ರ ಅದಕ್ಕೆ ಸಂಬಂಧಿಸಿದಂತೆ ಹಣ ಪಾವತಿ ಮಾಡುವ ವಿವರಗಳನ್ನು ನಾವು ಕೇಳುತ್ತೇವೆ.

 

ಪ್ರತಿಲಿಪಿಯೊಂದಿಗೆ ಸಂಯೋಜಿತವಾಗಿದೆ ಎಂದು ಹೇಳಿಕೊಳ್ಳುವ ಸೈಟ್‌ಗಳ ಬಗ್ಗೆ ದಯವಿಟ್ಟು ತಿಳಿದಿರಲಿ. ಆ ರೀತಿಯ ಯಾವುದೇ ಸೈಟ್'ಗಳ ಜೊತೆ ಪ್ರತಿಲಿಪಿ ಸಂಯೋಜಿತವಾಗಿಲ್ಲ. ಈ ಕುರಿತು ಯಾವುದೇ ಸಂದೇಹವಿದ್ದಲ್ಲಿ ಸಹಾಯಕ್ಕಾಗಿ ನಮ್ಮ ತಂಡವನ್ನು ನೇರವಾಗಿ ಸಂಪರ್ಕಿಸಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?